ಇರುವುದೊಂದೇ ಭೂಮಿ

‍ಲೇಖಕರು avadhi

June 5, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

6 ಪ್ರತಿಕ್ರಿಯೆಗಳು

 1. ಜೈಕುಮಾರ್

  ಸಕಾಲಿಕ ಚಿತ್ರಕ್ಕೊಂದು ಪೂರಕ ಟಿಪ್ಪಣಿ!
  ಹವಾಮಾನ ಬದಲಾವಣೆಯಿಂದ ರೈತರ ಆತ್ಮಹತ್ಯೆ?
  ಹವಾಮಾನ ಬದಲಾವಣೆಯ ಘೋರ ಪರಿಣಾಮಗಳ ಕುರಿತು ಮೊದಲ ಬಾರಿ ಕೇಳುವವರಿಗೆ ‘ಗೋಕುಲಾಷ್ಟಮಿಗೂ ಇಮಾಮ್ಸಾಬಿಗೂ ಏನು ಸಂಬಂಧ?’ ಎಂಬಂತಿದೆ ಈ ಪ್ರಶ್ನೆ. ಆದರೆ, ಹವಾಮಾನ ಬದಲಾವಣೆಯಿಂದ ಉಂಟಾಗುವ ಪ್ರವಾಹಗಳು, ಕ್ಷಾಮ ಮತ್ತು ಇತರೆ ನೈಸರ್ಗಿಕ ವಿಕೋಪಗಳು ಜನರಲ್ಲಿ ಮಾನಸಿಕ ರೋಗಗಳನ್ನು ಉಂಟು ಮಾಡುತ್ತವೆಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಮಾನಸಿಕ ರೋಗಗಳಿಗೂ ಹವಾಮಾನ ಬದಲಾವಣೆಗೂ ಇರುವ ಸಂಬಂಧ ಕುರಿತ ವರದಿಯಲ್ಲಿ ಈ ಅಂಶವನ್ನು ತಿಳಿಸಲಾಗಿದೆ. ಚಂಡ ಮಾರುತದಿಂದ ನಲುಗಿದ ಒರಿಸ್ಸಾ ಮತ್ತು ಪ್ರವಾಹಗಳಿಂದ ಮುಳುಗಿದ ಇಂಗ್ಲೆಂಡ್ಗಳಲ್ಲಿ ವಿಕೋಪ-ನಂತರದ ವೈಪರೀತ್ಯಗಳು ಜನರನ್ನು ತೀವ್ರವಾಗಿ ಕಾಡಿವೆ. ಬರಪೀಡಿತ ಪ್ರದೇಶಗಳಲ್ಲಿನ ರೈತರು ತೀವ್ರ ಹಣಕಾಸು ಮುಗ್ಗಟ್ಟು ಮತ್ತು ಸಾಲದ ಹೊರೆಯಿಂದ ಹೆಚ್ಚು ಮಾನಸಿಕ ವ್ಯಾಧಿ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಅಂಥಹ ಪರಿಸ್ಥಿತಿಯಲ್ಲಿ ಸೂಕ್ತ ಯೋಜನೆಯಂತೆ ಬೆಳೆ ಬೆಳೆಯಲು ಆಗದಿರುವುದು, ಬೆಳೆ ನಾಶ, ಫಸಲು ಸಂಗ್ರಹಣೆ, ಪಶುಪಾಲನೆ ಅಭಿವೃದ್ಧಿ, ಇವೆಲ್ಲವೂ ತೊಂದರೆಗೆ ಸಿಲುಕಿ ಇದು ಇತರೆ ವ್ಯಾಪಾರ-ವ್ಯವಹಾರಗಳಿಗೆ ಪೆಟ್ಟು ನೀಡುತ್ತದೆ. ಈಗಾಗಲೇ ಸರ್ಕಾರದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳು ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ತಳ್ಳುತ್ತಿರುವ ಜೊತೆಗೆ ಹವಾಮಾನ ಬದಲಾವಣೆಯ ಪೆಡಂಭೂತವು ಸೇರಿಕೊಂಡಲ್ಲಿ ರೈತರ ಬದುಕು ಇನ್ನು ಸಮಾಧಿಯೇ ಸರಿ.
  ಇಂಥಹ ನೈಸರ್ಗಿಕ ವಿಕೋಪ-ನಂತರದ ವೈಪರೀತ್ಯಗಳಿಂದ ಉಂಟಾಗುವ ಮಾನಸಿಕ ವ್ಯಾಧಿಗಳು ಹೀಗಾಗಲೆ ಪ್ರಪಂಚದಾದ್ಯಂತ ಶೇ. 10ರಷ್ಟು ದರದಲ್ಲಿ ವ್ಯಾಪಿಸುತ್ತಿವೆ. ಇದು ಸಂತ್ರಸ್ತರಲ್ಲಿ ತೀವ್ರತರದ ಒತ್ತಡ ನಿರ್ಮಾಣ ಮತ್ತು ಸಂಪನ್ಮೂಲ ನಷ್ಟಗಳಿಂದ ಶೀಘ್ರದಲ್ಲೇ ಶೇ. 20ರಷ್ಟು ದರವನ್ನು ಮುಟ್ಟುತ್ತದೆ.
  ಇದಕ್ಕೆ ಇನ್ನಷ್ಟು ಉದಾಹರಣೆಗಳೆಂದರೆ, ಏಷ್ಯಾದಲ್ಲಿ ಸುನಾಮಿ ಅಪ್ಪಳಿಸಿದಾಗ, ಮತ್ತು ಅಮೇರಿಕಾದ ನ್ಯೂ ಆಲರ್ಾನ್ಸ್ ನಗರದಲ್ಲಿ ‘ಕತ್ರಿನಾ’ ಬಿರುಗಾಳಿ ಸಂಭವಿಸಿದಾಗ ಶೇ. 70ರಷ್ಟು ಮಂದಿ ವಿಕೋಪ-ನಂತರದ ವೈಪರೀತ್ಯಗಳಿಂದ ಉಂಟಾಗುವ ಮಾನಸಿಕ ವ್ಯಾಧಿಯಿಂದ ನರಳಿದ್ದಾರೆ. ಜಗತ್ತಿನಾದ್ಯಂತ ವರ್ಷವೊಂದಕ್ಕೆ ವಿವಿಧ ರೋಗಗಳಿಂದ 1 ಕೋಟಿ ಹಸುಳೆಗಳು ಸಾಯುತ್ತಿರುವುದಕ್ಕೂ ಕೂಡ ಹವಾಮಾನದ ಬದಲಾವಣೆಯೇ ಕಾರಣ ಎನ್ನಲಾಗಿದೆ.
  ಜಾಗತಿಕ ತಾಪಮಾನ:
  ಪ್ರಪಂಚದಾದ್ಯಂತ ಭೂಮಿಯ ತಾಪಮಾನದ ಹೆಚ್ಚಾಗುತ್ತಿರುವುದರಿಂದ ಹವಾಮಾನ ಬದಲಾಗುತ್ತಿದೆ. ಹವಾಮಾನದ ಬದಲಾವಣೆಯ ದುಷ್ಪರಿಣಾಮಗಳ ಹಲವಾರು ಮುಖಗಳು ತೀವ್ರಗತಿಯಲ್ಲಿ ನಮಗೆ ಗೋಚರವಾಗುತ್ತಿವೆ. ಭೂಮಿಯ ತಾಪಮಾನ ಇದೇ ಮಟ್ಟದಲ್ಲಿ ಏರಿಕೆಯಾದಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ 4 ಡಿಗ್ರಿಯಷ್ಟು ಹೆಚ್ಚಾಗುತ್ತದೆಂದು ವಿಜ್ಞಾನಿಗಳು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತಾದ ಅಂತರ ಸಕರ್ಾರಿ ಸಂಸ್ಥೆಯು ತಿಳಿಸಿದೆ. ಆದರೆ, ಉಷ್ಣಾಂಶ ಇನ್ನೆರಡು ಡಿಗ್ರಿಯಷ್ಟು ಹೆಚ್ಚಾದರೂ ಮನುಷ್ಯರು ಬದುಕುವುದೂ ಕೂಡ ದುಸ್ತರ.
  ಭೂಮಿಯ ತಾಪಮಾನದ ಏರಿಕೆಗೆ ಕಾರಣವಾಗಿರುವ ಕೈಗಾರಿಕೆಗಳು ಬಿಡುಗಡೆ ಮಾಡುತ್ತಿರುವ ವಿಷಾನಿಲಗಳನ್ನು ಕಡಿತ ಮಾಡಬೇಕೆಂದು ವಿಶ್ವಾದ್ಯಂತ ಸಂಘ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಂದ ಒಕ್ಕೊರಲ ದನಿ ಮೂಡಿಬರುತ್ತಿದ್ದರೂ, ಅಮೇರಿಕಾವು ಒಳಗೊಂಡಂತೆ ಜಗತ್ತಿನ ಅತಿ ಹೆಚ್ಚು ಮಲಿನಕಾರಿ ರಾಷ್ಟ್ರಗಳು ವಿಷಾನಿಲ ವಿಸರ್ಜನೆ ಕಡಿತಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ.
  ಕಣ್ಮರೆಯಾಗುತ್ತಿರುವ ‘ಪ್ರೇಮ’ ಕಾಶ್ಮೀರದ ಹಿಮಗಡ್ಡೆಗಳು:
  ಜಮ್ಮು ಮತ್ತು ಕಾಶ್ಮೀರದ ಲೆಹ್ ಎಂಬ ಕಣಿವೆ ಪ್ರದೇಶವು ಭೂಮಟ್ಟದಿಂದ ಸುಮಾರು 18,000 ಅಡಿ ಎತ್ತರದಲ್ಲಿದೆ. ಆ ಲೆಕ್ಕಕ್ಕೆ ಬೆಂಗಳೂರು ನಗರ ಸಮುದ್ರಮಟ್ಟದಿಂದ ಸುಮಾರು 3000 ಅಡಿಗಳಷ್ಟು ಮೇಲಿದೆ. 30 ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಲೆಹ್ ಪ್ರದೇಶದಲ್ಲಿ ಭಾರತೀಯ ಸೇನೆಯ ಟ್ರಕ್ಕುಗಳು ಮತ್ತು ಲಾರಿಗಳು ರಸ್ತೆಯಲ್ಲಿ ಚಲಿಸಬೇಕಾದರೆ, ಸೇನೆಯು ಮೊದಲಿಗೆ ರಸ್ತೆಯಲ್ಲಿ ಬಿದ್ದ ಹಿಮಗಡ್ಡೆಯನ್ನು ತೆರವುಗೊಳಿಸುವುದಕ್ಕೇ ಯುದ್ದ ಮಾಡಬೇಕಾಗಿತ್ತು! ಹಿಮಪರ್ವತಗಳಲ್ಲಿ ಸಾಹಸ ಕಾರ್ಯಗಳಲ್ಲಿ ತೊಡಗುವ ಬೆಟ್ಟ ಏರುವವರು ಕೆಲವುಕಡೆ ವಿಶೇಷ ವಾಹನಗಳನ್ನು ಬಳಸಿ ಮುಂದೆ ಚಲಿಸಬೇಕಾಗಿತ್ತು. ಆದರೀಗ ಅದೇನೂ ಕಷ್ಟಕರವಾಗಿಲ್ಲ. ಏಕೆಂದರೆ, ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದಲ್ಲಿ ಹಿಮಪರ್ವತಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಆ ಪ್ರದೇಶದ ಜನರಿಗೆ ನೀರ್ಗಲ್ಲುಗಳ ದೊಡ್ಡ ದೊಡ್ಡ ಕಾಲುವೆಗಳು ನೀರಿನ ಮೂಲಗಳಾಗಿದ್ದವು. ನಮ್ಮ ಬೆಂಗಳೂರಿನಲ್ಲಿ ವರ್ಷಂಪ್ರತಿ ಸುಮಾರು 1200 ಮಿಲಿ ಮೀಟರ್ ಮಳೆಬಿದ್ದರೆ, ಲಡಾಕ್ನಂಥಹ ಹಿಮಚ್ಛಾದಿತ ಪ್ರದೇಶಗಳಲ್ಲಿ ಕೇವಲ 50ಮಿಲಿ ಮೀಟರ್ ಮಳೆ ಬೀಳುತ್ತಿದ್ದರಿಂದ ಹಿಮಗಡ್ಡೆಯ ಕಾಲುವೆಗಳೇ ಜನರಿಗೆ ನೀರುಣಿಸುತ್ತಿದ್ದವು. ಆದರೀಗ ಅಂಥಹ ನೀರಿನ ಆಕರಗಳೇ ಕಣ್ಮರೆಯಾಗುತ್ತಿರುವುದು ಅಲ್ಲಿನ ಸಾಮಾನ್ಯ ಜನರ ಆತಂಕಕ್ಕೆ ಕಾರಣವಾಗಿದೆ.
  ಜಾಗತಿಕ ತಾಪಮಾನದ ತಿರುಗೇಟು:
  ಹಿಮಗಡ್ಡೆಗಳು ಕಣ್ಮರೆಯಾಗುತ್ತಿರುವುದಕ್ಕೂ ಪ್ರಪಂಚದಾದ್ಯಂತ ಭೂಮಿಯ ತಾಪಮಾನ ಏರುತ್ತಿರುವುದಕ್ಕೂ ಒಂದಕ್ಕೊಂದು ನಂಟಿದೆ. ಭೂಮಿಯ ತಾಪಮಾನ ಏರಿದಂತೆಲ್ಲ ಹಿಮಗಡ್ಡೆಗಳು ಆ ಶಾಖಕ್ಕೆ ಕರಗಿ ನೀರಾಗಿ ಹರಿಯತೊಡಗುತ್ತವೆ. ಹೀಗೆ ಹಿಮಗಡ್ಡೆಗಳು ಒಮ್ಮೆಲೆ ಕರಗಿ ಹರಿಯತೊಡಗುವುದರಿಂದ ಹಠಾತ್ತನೆ ನದಿಗಳಲ್ಲಿ ಪ್ರವಾಹ ತುಂಬಿ ಹರಿಯುತ್ತವೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ, ಲಡಾಕ್ ಪ್ರದೇಶದ ಹಿಮಗಡ್ಡೆಗಳೇ ಆಸರೆಯಾಗಿರುವ ತಮ್ಮ ನದಿಗಳು ನೀರಿಲ್ಲದೆ ಬತ್ತಿಹೋಗಿ ಭಾರತ ಮತ್ತು ಪಾಕಿಸ್ತಾನದ ಭೀಕರ ಬರಗಾಲ ಎದುರಿಸಬಹುದೆಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಲೆಹ್ ಮತ್ತು ನೋಬ್ರಾ ಕಣಿವೆಗಳಲ್ಲಿ ಕಳೆದ ಬೇಸಿಗೆಯಲ್ಲಿ ಪ್ರಥಮ ಬಾರಿಗೆ ನದಿಗಳಲ್ಲಿ ನೆರೆ ಬಂದಿದೆ.
  ಕಣ್ಮರೆಯಾಗುತ್ತಿರುವ ಹಿಮಗಡ್ಡೆಗಳು:
  ಲಡಾಕ್ ಕಣಿವೆಯಲ್ಲಿನ ಸುಮಾರು 466 ನೀರ್ಗಲ್ಲುಗಳ ಕಾಲುವೆಗಳನ್ನು ಸಂಶೋಧನೆ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ತ್ರೋ) ಯ ವರದಿಯು ಈ ಅಂಶಗಳನ್ನು ತಿಳಿಸಿದೆ. ಹಾಗೆಯೇ 1962ರಲ್ಲಿ ಸುಮಾರು 2,077 ಚದುರ ಕಿಲೋಮೀಟರ್ಗಳಷ್ಟು ವಿಸ್ತೀರ್ಣ ಹೊಂದಿದ್ದ ಹಿಮಗಡ್ಡೆಯು 2007ರ ಹೊತ್ತಿಗೆ, 1682 ಚದುರ ಕಿಲೋಮೀಟರ್ಗಳಿಗೆ ಇಳಿದಿದೆಯಂತೆ. ಅಂದರೆ ಸುಮಾರು ಬೆಂಗಳೂರಿನ ಮೂರರಷ್ಟು ವಿಸ್ತೀರ್ಣವಿದ್ದದ್ದು, ಬಹುತೇಕ ಎರಡರಷ್ಟಕ್ಕೆ ಇಳಿದಿದೆ.
  ನೀರಿನ ಮೂಲಗಳು ಕ್ಷೀಣಿಸಿದಂತೆಲ್ಲ, ತಿಕ್ಕಾಟಗಳು ಹೆಚ್ಚುತ್ತವೆ. ಸದ್ಯದ ಭವಿಷ್ಯದಲ್ಲಿ, ಭೂಮಿ ಅಥವಾ ತೈಲಕ್ಕೆ ಬದಲು ನೀರಿಗಾಗಿ ಭೀಕರ ಸಂಘರ್ಷಗಳು ನಡೆಯುತ್ತವೆಂದು ವಿಶ್ವ ಸಂಸ್ಥೆಯ ಪರಿಸರ ಸಂಸ್ಥೆ ತಿಳಿಸಿದೆ. ಉದಾಹರಣೆಗೆ ಜಮ್ಮು ಮತ್ತು ಕಾಶ್ಮೀರದಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರಿನ ಬಳಕೆ ಕುರಿತಂತೆ ಭಾರತ-ಪಾಕಿಸ್ತಾನ ‘ಇಂಡಸ್ ನೀರಿನ ಒಪ್ಪಂದ’ ಕ್ಕೆ ಸಹಿ ಹಾಕಿವೆ. ಭಾರತ ಆಗಾಗ್ಗೆ ಈ ಒಪ್ಪಂದವನ್ನು ಉಲ್ಲಂಘಿಸುತ್ತಿದೆಯೆಂದು ಪಾಕಿಸ್ತಾನ ದೂರುತ್ತಲಿದೆ. ಅಲ್ಲದೆ, ಈ ಒಪ್ಪಂದದ ಭಾಗವಾಗಿ ಕಾಶ್ಮೀರವು ತನ್ನ ಒಟ್ಟಾರೆ ವ್ಯವಸಾಯ-ಯೋಗ್ಯ ಭೂಮಿಯಲ್ಲಿ ಕೇವಲ ಶೇ. 10ರಷ್ಟು ಭೂಮಿಗೆ ಮಾತ್ರವೇ ನೀರನ್ನು ಬಳಸಿಕೊಳ್ಳುವ ನಿರ್ಬಂಧದಲ್ಲಿದೆ. ಕಾಶ್ಮೀರದ ಹಿಮಪರ್ವತಗಳು ಮತ್ತು ನೀರ್ಗಲ್ಲ ಕಾಲುವೆಗಳು ಬತ್ತಿಹೋದಂತೆಲ್ಲ ನದಿಗಳು ಸಹ ಹಿಂಗತೊಡಗಿ ನೀರಿಗಾಗಿ ಎರಡೂ ದೇಶಗಳ ನಡುವೆ ನಡೆಯುವ ಸಂಘರ್ಷದಿಂದ ಶಾಂತಿ ಪ್ರಕ್ರಿಯೆಗೆ ಮತ್ತಷ್ಟು ಪೆಟ್ಟು ಬೀಳುತ್ತದೆ.
  ತಲಾ ನೀರಿನ ಪ್ರಮಾಣದ ಕುಸಿತ:
  ತನ್ನ ಶೇ. 90ರಷ್ಟು ನೀರಾವರಿ ಪೂರೈಕೆಗಾಗಿ ಇದೇ ನದಿಗಳ ಮೇಲೆ ಅವಲಂಬಿತಾಗಿರುವ ಪಾಕಿಸ್ತಾನದ ತಲಾ ನೀರು ಲಭ್ಯ ಪ್ರಮಾಣವು 1947ರಲ್ಲಿ 56 ಲಕ್ಷ ಲೀಟರ್ ಇದ್ದದ್ದು, 2005ರ ಹೊತ್ತಿಗೆ ಕೇವಲ 12 ಲಕ್ಷ ಲೀಟರ್ಗೆ ಇಳಿದಿದೆ. ಹಾಗೆಯೇ, 1950ರಲ್ಲಿ 50ಲಕ್ಷ ಲೀಟರ್ ಇದ್ದ ಭಾರತದ ತಲಾ ನೀರು ಲಭ್ಯ ಪ್ರಮಾಣವು 2007ಕ್ಕೆ 10ಲಕ್ಷ ಲೀಟರ್ ಆಗಿದೆ. ಇದರಿಂದಾಗಿ ನದಿಗಳಲ್ಲಿ ಒಮ್ಮೊಮ್ಮೆ ಹೆಚ್ಚು ನೀರು ಹರಿಯುವುದು, ಮತ್ತೆ ಕೆಲವೊಮ್ಮೆ ತಿಂಗಳುಗಳ ಕಾಲ ನೀರೇ ಇಲ್ಲದಿರುವುದು ಮುಂದುವರೆದಂತೆಲ್ಲ ಅವಶ್ಯವಿರುವ ತಿಂಗಳುಗಳಲ್ಲಿ ನೀರನ್ನು ಅಣೆಕಟ್ಟುಗಳಲ್ಲಿ ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ.
  ಜಾಗತಿಕ ತಾಪಮಾನದ ದುಷ್ಪರಿಣಾಮಗಳು ಕಾಶ್ಮೀರದತ್ತ ಮಾತ್ರವೇ ಕೆಂಗಣ್ಣು ಬೀರುತ್ತಿಲ್ಲ. ಜಗತ್ತಿನ ಎಲ್ಲೆಡೆ ಇದು ಭೀಕರತೆಗಳ ಮುನ್ಸೂಚನೆಗಳನ್ನು ಬಿತ್ತರಿಸುತ್ತಿದೆ. ಜಾಗತಿಕ ತಾಪಮಾನ ಕಡಿಮೆಗೊಳಿಸಲು ಕ್ಷಿಪ್ರ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಕೆಲಸವೆಂದು ವಿಜ್ಞಾನಿಗಳ ಅಂಬೋಣ.
  ***

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: