ಇಲಿ ಮರಿಯ ಜೊತೆ ಮಾಲತಿ ಮೇಡ೦ ಕಥೆ!

ಇಲಿ ಕತೆ ಅಥವ all’s well that ends well!!!

ಮಾಲತಿ ಶೆಣೈ

ನೆನಪಿನ ಸ೦ಚಿಯಿ೦ದ

ನಾಲ್ಕು ವರ್ಷಗಳ ಹಿಂದಿನ ಕತೆ . ಆಗ ನಾವು ಬಸವೇಶ್ವರನಗರದಲ್ಲಿದ್ದದ್ದು. ನಗರ ಸ್ತ್ರೀ ಶಕ್ತಿ (NSS) ಎನ್ನುವ ಸರಕಾರಿ ಪ್ರೋಜೆಕ್ಟ್ (concurrent monitoring and Evaluation of the NSS scheme)* ಸಿಕ್ಕಿತ್ತು. ಅದರಲ್ಲಿ ಮೊದಲಿಗೆ ಡೇಟಾ ಫೀಡಿಂಗ್ ತುಂಬ ಇತ್ತು. ಆಫಿಸ್ ನ ಐದು ಜನ ಅದನ್ನೇ ಎಟೆಂಡ್ ಮಾಡ್ತಿದ್ದರೂ ಯಾಕೋ ಅದು ಆಮೆ ಗತಿಯಲ್ಲಿ ಸಾಗ್ತಿದೆ ಅನ್ನಿಸಿ, ಹೇಗೂ ನನಗೆ ನಿದ್ದೆ ಕಡಿಮೆ, ಪುಸ್ತಕ ಓದುವುದನ್ನು ಬಿಟ್ಟು ನಾನೂ ಡೇಟಾ ಫೀಡ್ ಮಾಡುವಾ ಅಂತ ಆಫಿಸ್ ನಿಂದ ಬರುತ್ತ (Survey Questionnaire)ಪ್ರಶ್ನಾವಳಿ-ಉತ್ತರ ಗಳನ್ನು ಹೊತ್ತು ತರುತ್ತಿದ್ದೆ. ರಾತ್ರಿ ಮನೆಯ ಇತರ ಎಲ್ಲ ಕೆಲಸ ಮುಗಿದ ನಂತರ ಈ ಕೆಲಸ ಮಾಡ್ತಿದ್ದೆ. ಹೆಚ್ಚಿನಂಶ ಶ್ರೀವತ್ಸ ಜೋಶಿ chat ನಲ್ಲಿ ಸಿಗುತ್ತಿದ್ದರು. ಅವರ ಜತೆ ಹರಟೆ ಹೊಡೆಯುತ್ತ (ಅವರ ತಲೆ ತಿನ್ನುತ್ತ)ನನ್ನ ಕೆಲಸಗಳನ್ನು ಮಾಡುತ್ತಿದ್ದೆ.(ಸಾಕಷ್ಟು ಕನ್ನಡ especially pun ಗಳನ್ನು ನಾನು ಅವರ ಬಳಿ ತಿಳಿದುಕೊಂಡಿದ್ದೇನೆ) ಅಷ್ಟೆ ಅಲ್ಲ ಹಲವಾರು ಕುರುಕುಲು ತಿಂಡಿಗಳನ್ನು ಪಕ್ಕಕ್ಕಿಟ್ಟು ತಿನ್ನುತ್ತಿದ್ದೆ. (ನಮ್ಮ ಮನೆಯಲ್ಲಿ ಯಾವತ್ತೂ ಕುರುಕುಲು ತಿಂಡಿಯ ಸ್ಟಾಕ್ ಇರುತ್ತೆ. ಕೆಲವು ನಾನು ಮಾಡಿದ್ದು, ಕೆಲವು ಅಮ್ಮ ತಯಾರಿಸಿ, ತಮ್ಮನ ಕೈಯಲ್ಲಿ ಕಳುಹಿಸಿಕೊಟ್ಟಿರೋದು ಅಥವಾ ಮಲ್ಲೇಶ್ವರಂ ನಲ್ಲಿರುವ ಮಂಗಳೂರು ಸ್ಟೋರ್ಸ್ ನದು.) ನಮ್ಮ ಮನೆಯ ಕಂಪ್ಯೂಟರ್ ರೂಮ್ ಗೆ ಎರಡು ಕಡೆಯಲ್ಲಿ ದೊಡ್ಡ ದೊಡ್ಡ ಕಿಟಕಿಗಳು. ನನಗೆ ಕಿಟಕಿಗಳಿಗೆ ಪರದೆ ಅಥವಾ ಕಿಟಕಿ ಬಾಗಿಲು ಹಾಕುವುದು ಅಂದರೆ ಆಗಲ್ಲ. ಎದುರುಗಡೆಯ ಗಾರ್ಡನ್ ನೋಡ್ತಾ, ಗಾಳಿ, ಮಳೆ, ಧೂಳು ಅಥವಾ ಹುಣ್ಣಿಮೆ ದಿನ ಎದುರಿಗೇ ಇರುವ ಬೃಹತ್ ಗಾತ್ರದ ಆಲದ ಮರದ ಮೇಲೆ ಕಣ್ಣು ಮುಚ್ಚಾಲೆ ಆಡುವ ಚಂದ್ರ ಕಿರಣಗಳನ್ನು ನೋಡುತ್ತ enjoy ಮಾಡ್ತಾ ನನ್ನ ಕೆಲಸ ಮಾಡುವುದಂದ್ರೆ ಖುಶಿ. ಕೆಲಸ ಇಲ್ಲದಿದ್ದರೆ, ಫಿಲ್ಮ್ ಅಂತೂ ತುಂಬ ನೋಡ್ತೀನಿ.ನನ್ನ ತಮ್ಮ ಮುಂಬೈನಿಂದ ಬರುವಾಗಲೆಲ್ಲ ಒಂದು ರಾಶಿ ಸಿಡಿ, ಡಿವಿಡಿ ಗಳನ್ನು ನನಗೋಸ್ಕರ ತಂದಿರುತ್ತಾನೆ. ಅದನ್ನೆಲ್ಲ ನಾನು ಕಂಪ್ಯೂಟರ್ ನಲ್ಲೇ ನೋಡುವುದು.

ಹೀಗೆ ಒಂದು ದಿನ ಒಂದು ಪುಟ್ಟ ಇಲಿ ಮರಿ ಕಿಟಕಿ ಮೂಲಕ ಒಳಗೆ ಬಂತು. ಬಹುಶ: ಅದಕ್ಕೆ ನಾನಲ್ಲಿಟ್ಟ ಕುರುಕುಲು ತಿಂಡಿಯ ಪರಿಮಳ ಮೂಗಿಗೆ ಬಡಿದಿದ್ದರಬೇಕು. ಹೆದರಿ ಹೆದರಿ ಮುಂದೆ ಬಂದಾಗ ನಾನು ಅದಕ್ಕೆ ಒಂದೆರಡು ಬಾಳೆಕಾಯಿ ಚಿಪ್ಸ್ ಕೊಟ್ಟೆ.ಆಮೇಲೆ ಅದಕ್ಕೆ ಅದೇ ಅಭ್ಯಾಸ ಆಯಿತು. ರಾತ್ರಿ ಹನ್ನೆರಡಾದ ಮೇಲೆ ದಿನ ನನ್ನ ಜತೆ ತಿಂಡಿ ತಿಂದು ಹೋಗುತ್ತಿದ್ದ ಇಲಿಗೆ ಎಷ್ಟು ಸಲಿಗೆಯಾಯಿತೆಂದರೆ ಕಂಪ್ಯೂಟರ್ ಮೇಲಿಟ್ಟ ಪ್ರಿಂಟರ್ ಮೇಲೆಲ್ಲ ಕೂತು ಅದರ ಆಟಗಳನ್ನು ಶುರು ಮಾಡಿತು. ನಾನು ಅದರ ಜತೆ ಮಾತುಕತೆ ಆಡ್ತಿದ್ದೆ. ಕೇಳಿದವರು ಯಾರಾದ್ರೂ ’ಈಯಮ್ಮಂಗೆ ಹುಚ್ಚು ಹಿಡಿದುಬಿಟ್ಟೈತೆ’ ಅನ್ನುವಷ್ಟು :-)ಮನೆಯಲ್ಲಿ ನಾನು ಯಾರಿಗೂ ಇದನ್ನು ಹೇಳಿರಲಿಲ್ಲ. ಒಂದು ದಿನ ಏನಾಯ್ತು ಅಂದರೆ ಶ್ರೀಕಾಂತ್ ಗೆ ನನ್ನ ತಂಗಿ ಗಂಡ ,US ನಲ್ಲಿರುವ ಸಂದೀಪ್ ಜತೆ ಸ್ಕೈಪ್ (skype) ನಲ್ಲಿ ಮಾತಾಡಲಿಕ್ಕಿತ್ತು. ಅವನು ತುಂಬ ಲೇಟ್ ಆಗಿ ಆನ್ ಲೈನ್ ಬಂದ. ಶ್ರೀಕಾಂತ್ ಅವನೂ ಚ್ಯಾಟ್ ಮಾಡಬೇಕಾದ್ರೆ ರಾತ್ರಿ 12 ದಾಟಿದ್ದು, ಇಲಿ ಬಂದೇ ಬಿಟ್ಟಿರಬೇಕು ಶ್ರೀಕಾಂತ್ ಕಿರುಚಿದಕ್ಕೆ ಅದು ಹೆದರಿ ಪ್ರಿಂಟರ್ ಒಳಗೆ ಹೋಯ್ತು. ಗಲಾಟೆ ಕೇಳಿ ನಾನು ಓದುತ್ತಿದ ಪುಸ್ತಕ ಬಿಟ್ಟು ಅಲ್ಲಿಗೆ ಓಡಿ ಹೋದೆ, ಶ್ರೀಕಾಂತ್ ಗೆ electric shock ಏನಾದ್ರೂ ತಗುಲಿತಾ ಅಂತ. ಮನೆಯ ಕೆಲವು ಕಡೆ earthing ಸರೀ ಇಲ್ಲದೇ, ಶಾಕ್ ತಗಲುತ್ತಿತ್ತು, ಬಂದು ನೋಡಿದ್ರೆ ಶ್ರೀಕಾಂತ್ ಗೂ ಇಲಿಗೂ ಕಾಳಗ.ಶ್ರೀಕಾಂತ್, ಪ್ರಿಂಟರ್ ನ್ನು ಅಲ್ಲೇ ಹತ್ತಿರ ಇದ್ದ ಮ್ಯಾಗಜಿನ್ ನಿಂದ ಜೋರಾಗಿ ಬಡಿದರು. ಇಲಿ ಹೆದರಿ, ಅಲ್ಲಿಂದ ಹಾರಿ ಮನೆಯೆಲ್ಲ ಓಡಾಡಲು ಶುರು ಮಾಡಿತು. ಇಲಿ ಮುಂದೆ, ಶ್ರೀಕಾಂತ್ ಅದರ ಹಿಂದೆ. ನಾನು ಅವರ ಹಿಂದೆ.ಮೂಲೆಯಲ್ಲಿರುವ ಮಕ್ಕಳ ರೂಮ್ ಗೆ ಹೊಕ್ಕಿತು. ಮಕ್ಕಳು ಮಲಗಿದ್ದರು. ಶ್ರೀಕಾಂತ್ ಕೋಣೆಯಲ್ಲಿ ಲೈಟ್ ಹಾಕಿದಾಗ ಇಲಿ ಮಕ್ಕಳ ರೂಮ್ ನ ಕಿಟಕಿಗೆ ಹಾರಿತು. ಕಿಟಕಿ ಬಾಗಿಲು ಹಾಕಿದ್ದರಿಂದ ಅದು ಪುನ: ಮಂಚದ ಕಡೆಗೆ ಹಾರಿತು. ಅದು ಹಾರಲಿಕ್ಕೂ ಮಾಲವಿಕ ಮಂಚದ ಮೇಲಿಂದ ಏಳಲಿಕ್ಕೂ, ಇಲಿ ಮಾಲವಿಕ ಗಲ್ಲದ ಮೇಲೆ ಹಾರಿ, grip ಗೋಸ್ಕರ ಅವಳ ಗಲ್ಲಕ್ಕೆ ಹಿಡ್ಕೊಂಡಿದ್ದು ಜಾರುತ್ತ ಇತ್ತು. ಅಷ್ಟರಲ್ಲಿ ನಾನು ಕಿಟಕಿ ಬಾಗಿಲು ತೆಗೆದಿದ್ದರಿಂದ ಅದು ಕೂಡಲೆ ಅಲ್ಲಿಂದ ಹೊರಗೆ ಹೋಯ್ತು. ಒಂದು ಕ್ಷಣದಲ್ಲಿ ಇಷ್ಟೆಲ್ಲ ನಡೆಯಿತು.ಮಾಲವಿಕ ಳ ಗಲ್ಲಕ್ಕೆ ಗೀರು ಗಾಯ ಆಗಿ ರಕ್ತ ಒಸರುತ್ತಿತ್ತು. ಮೊದಲು ಸಾವ್ ಲೋನ್ ನಿಂದ ಗಾಯ ಕ್ಲೀನ್ ಮಾಡ್ದೆ. ಮತ್ತೆ ಮನೆಯ ಹಿಂಬದಿಯಿದ್ದ ಬಾಗಿಲು ತೆಗೆದು ನಮ್ಮ ಒವ್ನರ್ ರಾಮಮೂರ್ತಿ ಮನೆ ಕಡೆ ನೋಡಿದೆ. ಅಲ್ಲಿ ಲೈಟ್ ಹಾಕಿತ್ತು. ರಾಮಮೂರ್ತಿ ಹೆಂಡತಿ ಪಾರ್ವತಿ ಡಾಕ್ಟರ್. (ನಮ್ಮಿಬ್ಬರ ಮಾತೆಲ್ಲ eಮೈಲ್/ಚ್ಯಾಟ್ ಮೂಲಕ.) ಅವರ ಹೆಸರು ಹಿಡಿದು ಕೂಗಿದೆ. ಅವರು ಹೊರಗೆ ಬಂದು ಏನಾಯಿತು ಅಂತ ಕೇಳಿದರು. ಮಾಲವಿಕ ಗೆ ಗಾಯ ಆಗಿದ್ದ ವಿಷಯ ಕೇಳಿ, ಕೂಡಲೆ tetanus ಇಂಜೆಕ್ಷನ್ ಹಾಕಬೇಕು. ನನ್ನ ಹತ್ತಿರ ಅದು ಮುಗಿದಿದೆ. ಸಿರಿಂಜ್ -ಸೂಜಿ ಮುಂತಾದವು ಇದೆ ಅಂದರು. ಶ್ರೀಕಾಂತ್ ಹೊರಡಬೇಕಾದ್ರೆ, ರಾಮ್ ,ಬೇಡ, ನಾನೇ ಹೋಗಿ ತರ್ತೇನೆ. ಇಲ್ಲೇ ಒಂದು apollo 24 hours ಮೆಡಿಕಲ್ ಸ್ಟೋರ್ಸ್ ನಿಂದ ತರ್ತೇನೆ ಅಂತ ಹೋದರು. ಐದೇ ನಿಮಿಷದಲ್ಲಿ ಬಂದು, ಡಾ. ಪಾರ್ವತಿ ಮಾಲವಿಕಳಿಗೆ ಇಂಜೆಕ್ಷನ್ ಕೊಟ್ಟು ಅವರ ಬಳಿಯಿದ್ದ ಮುಲಾಮು ಹಚ್ಚಲಿಕ್ಕೆ ಕೊಟ್ಟರು. ಇಷ್ಟೆಲ್ಲ ಆದ ಮೇಲೆ ಶ್ರೀಕಾಂತ್ ಗೆ ನನ್ನ ಮತ್ತು ಇಲಿಯ ದೋಸ್ತಿ ಬಗ್ಗೆ ಹೇಳಿ, ರಾತ್ರಿ ಬಹಳ ಹೊತ್ತು ಬೈಯಿಸಿಕೊಂಡೆ- ನಿಂದೆಲ್ಲ ಸ್ವಲ್ಪ ವಿಪರೀತ ಆಯ್ತು, ಅವಳ ಗಲ್ಲದ ಮೇಲೆ ಕಲೆ ಉಳಿದು ಬಿಟ್ಟರೆ ಏನು ಮಾಡ್ತೀಯಾ ಅಂದಾಗ ನನಗೂ ಛೆ!! ಹೌದಲ್ಲ ಅಂತ ತುಂಬ ಕೆಟ್ಟದನಿಸಿತು…. ಬೆಳಿಗ್ಗೆ ಬೆಳಿಗ್ಗೆ ರಾಮಮೂರ್ತಿ ನನ್ನ ಅಡಿಗೆ ಮನೆಯ ಕಿಟಕಿ ಬಳಿ ಬಂದು malathi, come out fast ಅಂದ (ರಾಮಮೂರ್ತಿ ತಮಿಳಿನವರು. ಬೆಂಗಳೂರಿನಲ್ಲೇ ಹುಟ್ಟಿದ್ದರೂ ಕನ್ನಡ ಮಾತಾಡ್ತಿರಲಿಲ್ಲ. ಅವರನ್ನು ನಾನು ಒಂದು ಸಲ ತಮಾಷೆ ಮಾಡಿದ್ದೆ ’what da!! you are from Bangalore, how come you do not know kannada? you studied here, so you must have the state language in your syllabi’ -ಅಂತ ‘Oh no!! i studied all the while in army school’ so i do not know kannada ‘ ಅಂತ ಅಂದುಬಿಟ್ಟ. ಮತ್ತೆ ಡಾ. ಪಾರ್ವತಿ ಕೂಡ ತಮಿಳ್ ನವರಾದರೂ ಅವರು ಹುಟ್ಟಿ ಬೆಳೆದದ್ದು ಎಲ್ಲ ಗುಜರಾತ್ ನಲ್ಲಿ. ಅವರಿಗೂ ಕನ್ನಡ ಬರಲ್ಲ. ಆದರೆ ಡಾಕ್ಟರ್ ಆದ್ದರಿಂದ ಅಲ್ಪ ಸ್ವಲ್ಪ ಕನ್ನಡ ಮಾತನಾಡುವ ಪ್ರಯತ್ನ ಮಾಡ್ತಿದ್ದರು) ಸೊ malathi come out fast ಅಂದಾಗ, ನಾನು ವ್ಹೈ?? ವ್ಹಾಟ್ ಹ್ಯಾಪನ್ಡ್? ಅಂತ ಹೊರಗೆ ಹೋದೆ. ಅವರ ಮನೆ ಮುಂದೆ ಒಂದು ಇಲಿ ಸತ್ತು ಬಿದ್ದಿತ್ತು. See that dead rat there?? thats the same one that scratched malavika ಅಂದು ಬಿಟ್ಟು, because it bit malavika it is now dead ಅಂದ. ನನಗಂತು ನಗು ಬಂದು Oliver Goldsmith ಬರೆದ an elegy on the death of a mad dog ಪದ್ಯ ನೆನಪಿಗೆ ಬಂತು. ಆ ಪದ್ಯದಲ್ಲಿ ಐಲಿಂಗ್ ಟನ್ ನಲ್ಲಿರುವ ಒಬ್ಬನಿಗೆ ನಾಯಿ ಗೆಳೆತನ ಆಗುತ್ತೆ ಆದರೆ ಒಂದು ದಿನ ನಾಯಿಗೆ ಹುಚ್ಚು ಹಿಡಿದು ಅವನನ್ನ್ನು ಕಚ್ಚುತ್ತೆ. ಜನರೆಲ್ಲ ಅವನ ಸಾವಿನ ದಾರಿಕಾಯುತ್ತಿರುವಾಗ ಅಶ್ಚರ್ಯಕರವಾಗಿ ಅವನು ಬದುಕುಳಿದು, ನಾಯಿ ಸತ್ತು ಹೋಗುತ್ತದೆ. ಅದರ ಕೊನೆ ಎರಡು ಸಾಲು ಹೀಗಿವೆ… the man recovered of the bite the dog it was that died……..

ಮರುದಿನ ಅಮ್ಮ ಫೋನ್ ಮಾಡಿದಾಗ, ಅಮ್ಮ, ಹೀಗೀಗೆ ಅಂತ ಹೇಳಿ ಅವರಿಂದಲೂ ನನಗೆ ಸಹಸ್ರನಾಮಾರ್ಚನೆ ಆಯ್ತು. ಮುಖಕ್ಕೆ ಕಲೆ ಗಿಲೆ ಉಳಿದುಬಿಟ್ರೆ ಯಾರು ಆಕೇನ್ನ ಮದುವೆಯಾಗ್ತಾರೆ ಅಂತ..’ಈ ಅಮ್ಮಂಗೆ ಅದೊಂದೆ tension ಅಂದುಕೊಂಡು ಸುಮ್ಮನಾದೆ. ಸದ್ಯ all’s well that ends well… ಮಾಲವಿಕನ ಗಲ್ಲದ ಮೇಲೆ ಗೀರು ಗಾಯದ ಕಲೆ ಉಳಿದಿಲ್ಲ ಮತ್ತು ಸತ್ತದ್ದು ನನ್ನ ಇಲಿಯಲ್ಲ. ಯಾಕೆ ಅಂದ್ರೆ ಮರುದಿನ ನಾನು ಮಾಮೂಲಿನಂತೆ ರಾತ್ರಿ ಕಂಪ್ಯೂಟರ್ ಬಳಿ ಕೆಲಸಕ್ಕೆ ಕೂತಾಗ ಅದು ಪುನ: ಬಂದು ನಮ್ಮ ತಿಂಡಿ ತಿನ್ನುವ ಆಟ ಪುನ: ಶುರು……..(ಯಾರಿಗೂ ಹೇಳ್ಬೇಡಿ ಮತ್ತೆ)

]]>

‍ಲೇಖಕರು G

May 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

9 ಪ್ರತಿಕ್ರಿಯೆಗಳು

 1. malathi S

  oho idu haLeya post..Suguna, chitra avadhiyavaraddu…
  thanks for reading again..naanoo odide nim jate!!
  thank u avadhi!
  🙂
  ms

  ಪ್ರತಿಕ್ರಿಯೆ
 2. veda

  Malthi
  Nanu idannu nimma bloginalle odi enjoy madidde. Mathomme nimma mattu mousiya!! bittiralarada saMbanda odi enjoyicide. Nice write up

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: