ಇಲ್ಲಿನ ಬೀದಿಗಳಲ್ಲೂ ಹೈಫೈ ಬಿಕ್ಷುಕರಿದ್ದರು..

 

ಗಗನಚುಂಬಿ ಕಟ್ಟಡಗಳಡಿ ಕಳೆದುಹೋದ ಹಾಗೆ

ಅಪರಿಚಿತ ನಾಡಲ್ಲಿ ಸುತ್ತಾಟ ಹುಡುಕಾಟ

ವಾಷಿಂಗ್ಟನ್ ನಲ್ಲಿ ಕಳೆದ ನಾಲ್ಕು ದಿವಸಗಳು ಆಗಾಗ ನೆನಪಿಗೆ ಬಂದು ಕಾಡುತ್ತಲೇ ಇರುತ್ತವೆ. ತಂಗಿದ್ದ ಹೋಟೇಲು ಎದುರುಗಡೆ ಇದ್ದ ಗುಬ್ಬಚ್ಚಿಗಳು, ಅಪರಿಚಿತ ಮುಖಗಳ ಗುಡ್ ಮಾರ್ನಿಂಗ್ , ಹಾಯ್ ಹಲೋ, ಲೆಬನಾನ್ ಫುಡ್.

ರಾತ್ರಿಯಲ್ಲಿ ಆ ವಿಶಾಲ ರಸ್ತೆಗಳಲ್ಲಿ ನಾನು ನೂರುಗಲ್ ಆಡಿದ ಮಾತುಗಳು ಹೀಗೆ ನೆನಪುಗಳು ಕಾಡುತ್ತವೆ.

Jyothi column low resವಾಷಿಂಗ್ಟನ್ ನೆನಪಿಗಾಗಿ ಏನಾದರು ತೆಗೆದುಕೊಳ್ಳೋಣವೆಂದರೆ ಎಲ್ಲಾ ಕಡೆ ಚೈನಾ ವಸ್ತುಗಳದ್ದೇ ಕಾರುಬಾರು. ವೈಟ್ ಹೌಸ್ ಗಿಂದ ಈಚೆ ಒಂದೆಡೆ ಕೆಲವು ವಸ್ತುಗಳನ್ನು ಖರೀದಿಸಿದೆವು. ಬಹುತೇಕ ಚೈನ್ ಉತ್ಪಾದಿತ. ಏರ್ ಪೋರ್ಟ್ ನಲ್ಲಿ ತೆಗೆದುಕೊಂಡ ಫಾಸಿಲ್ ಬ್ರಾಂಡ್ ನ ವಾಚ್ ಮಾತ್ರ ಅಮೆರಿಕಾದಲ್ಲಿ ತಯಾರಾಗಿದ್ದು.

ಇನ್ನುಇಲ್ಲಿ ಕಂಡುಬಂದ ಒಂದು ಘಟನೆ ತುಂಬಾನೆ ಘಾಸಿಗೊಳಿಸಿತು. ವೈಟ್ ಹೌಸ್ ನಿಂದ ಸ್ವಲ್ಪ ದೂರದಲ್ಲಿದ್ದ ಉದ್ಯಾನವನದಲ್ಲಿದ್ದ ವಯೋವೃದ್ಧರನ್ನು ಮಕ್ಕಳೇ ತೊರೆದುಹೋಗಿದ್ದರು. ಹೆತ್ತವರ ಬಗ್ಗೆ ಯೋಚನೆ ಮಾಡದ ಮಕ್ಕಳ ಕುರಿತಂತೆ ಆತಂಕಕಾರಿಯಾದ ಚರ್ಚೆಯೊಂದು ಅಲ್ಲಿ ನಡೆಯಲು ಆರಂಭವಾಗಿದೆ. ಅಭಿವೃದ್ಧಿಯ ಜಪ, ತಂತ್ರಜ್ಞಾನ,  ಆಕಾಶಕ್ಕೆ ಪಯಣ, ಮಂಗಳನ ಅಂಗಳಕ್ಕೆ ಜಿಗಿದ ಸಾಧನೆ, ಹೀಗೆ ಸೌಲಭ್ಯಗಳೆಲ್ಲವು ಹೆಚ್ಚುತ್ಚಿದೆ. ಆದರೆ ಮಾನವೀಯ ಸಂಬಂಧಗಳೇ ಅರ್ಥ ಕಳೆದುಕೊಳ್ಳುತ್ತಿವೆ. ಅಮೆರಿಕಾ ಇದಕ್ಕೆ ಹೊರತಲ್ಲ.

ಮೊಬೈಲ್, ಫೇಸ್ ಬುಕ್, ವಾಟ್ಸಪ್ ಇಂದಿನ ಅಗತ್ಯತೆ ಆದ್ರೆ ಎಲ್ಲೋ ಒಂದು ಕಡೆಗೆ ನನ್ನನ್ನು ಈ ಹತ್ತಿರದ ಜಗತ್ತಿನಿಂದ ದೂರ ಕೊಂಡು ಹೋದಂತೆ ಕೆಲವೊಮ್ಮೆ ಭಾಸವಾಗುತ್ತದೆ. ಜಗತ್ತನ್ನು ಮನೆಯಾಗಿಸುವ ಈ ತಂತ್ರಜ್ಞಾನ ಕೆಲವೊಮ್ಮೆ ನಮ್ಮನ್ನು ಅದರ ದಾಸ ಮಾಡಿಬಿಟ್ಟತೇನೋ ಎಂಬ ಆತಂಕ ಕಾಡುತ್ತದೆ.

ವಾಷ್ಟಿಂಗ್ಟನ್ ನಲ್ಲಿ ನಾಲ್ಕು ದಿವಸ ಕಳೆದ ನಂತರ ನ್ಯೂಯಾರ್ಕ್ ನತ್ತ ನಮ್ಮ ಪಯಣ ರೈಲಿನ ಮೂಲಕ. ಹೊಸ ದೇಶ, ಹಾಗಾಗಿ ಪ್ರತಿಯೊಂದನ್ನು ನೋಡುವ ತವಕ, ನಿಸರ್ಗ, ಮನೆಗಳು, ಮರಗಳು ಹೀಗೆ ಎಲ್ಲವನ್ನು ಕುತೂಹಲದ ಕಣ್ಣಿಂದಲೇ ನೋಡುತ್ತಿದ್ದೆ. ಕೊನೆಗು ನ್ಯೂಯಾರ್ಕ್ ತಲುಪಿದ್ದೆವು. ಆಗ ರಾತ್ರಿಯಾಗಿತ್ತು. ಜನನಿಬಿಡ ರಸ್ತೆಗಳಲ್ಲಿ ಮೌನವು ರೋದಿಸಿದಂತೆ ಭಾಸವಾಯಿತು. ಒಂದು ರೀತಿಯಲ್ಲಿ ಫುಲ್ ಆಫ್ ಲೈಫ್ ರೀತಿಯಲ್ಲಿ ನಗರವಿತ್ತು. ನಿಜವಾದ ದಿನ ಈಗ ಆರಂಭವಾಯಿತೇನೋ ಎಂಬ ರಂಗೀನ್ ಲೋಕ ಅದಾಗಿತ್ತು. ನಮ್ಮ ತಂಡದ ಸದಸ್ಯರು ಟೈಮ್ ಸ್ಕ್ವೇರ್ ಗೆ ಹೋಗಬೇಕೆಂದು ಹೇಳುತ್ತಿದ್ರು,

ಕೊನೆಗು ನಾವು ತಂಗಬೇಕಿದ್ದ ಹೊಟೇಲ್ ನ್ನು ನಾವು ತಲುಪಿದೆವು. 14 ನೆಯ ಮಹಡಿಯಲ್ಲಿದ್ದ

ನಾನಿದ್ದ  ರೂಮ್ ನಿಂದ ಕೆಳಗೆ  ಚರ್ಚ್ ಸುಂದರವಾಗಿ ಕಾಣುತ್ತಿತ್ತು. ಹಾಗೆ  ಮನಸ್ಸು ನನ್ನೂರಿನೊಳಗೆ ಬಂಧಿಯಾಗಿತ್ತು. ಕಿಟಕಿಯಿಂದ ಕೆಳಗೆ ನೋಡುತ್ತಿದ್ದರೆ ಕಾರುಗಳು ಪುಟ್ಟ ದಾಗಿ, ಜನರು ಕುಬ್ಜರಾಗಿ ಕಾಣುತ್ತಿದ್ರು. ಈ ನಿಸರ್ಗದೆದುರು ನಾವೆಷ್ಟು ಕುಬ್ಜರಲ್ವಾ ಅನ್ನಿಸಿತು. ಸ್ಟ್ರಾಂಗ್ ಕಾಫಿ ಹೀರಿ ಸುಮ್ಮನೆ ಹಾಸಿಗೆಗೆ ಒರಗಿದೆ. ನಿದ್ದೆ ಕಣ್ಣನ್ನು  ಹಾಗೆ ಆವರಿಸಿತ್ತು.

ಮತ್ತೊಂದು ಮುಂಜಾನೆ.

ಮುಂಜಾನೆ ಒಬ್ಬಳೇ ಹೊರಗೆ ಅಡ್ಡಾಡಿದೆ.ಅಪರಿಚಿತ ಜಗತ್ತಿನಲ್ಲಿ ಎಲ್ಲೋ ಕಳೆದುಹೋದಂತೆ.ಗಗನಚುಂಬಿ ಕಟ್ಟಡಗಳ ಅಡಿಯಲ್ಲಿ ನಾನು ಇರುವೆಯಂತೆ ಕಾಣುತ್ತಿದ್ದೆ. ಅಬ್ಬಾ ಅದು ಹೇಗೆ ಈ ಸಿಮೆಂಟುಮಯ ಜಗತ್ತಿನಲ್ಲಿ ಇರುತ್ತಾರೆ ಅಂದುಕೊಂಡೆ, ನಾನು ಯೋಚನೆ ಮಾಡೋದನ್ನು ನೋಡಿದ್ರೆ ಹುಚ್ಚೇನೋ   ಅಂತ ಅಲ್ಲಿರುವವರಿಗೆ ಅನಿಸಬಹುದು. ಜೀವನ ಹೀಗೇನೇ ಎಲ್ಲೆಲ್ಲಿ ಇರುತ್ತೇವೆ ಅದೇ ಚಂದ ಸರಿ ಅನ್ನತೊಡಗುತ್ತದೆ, ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಹೀಗೆ ಕಟ್ಟಡಗಳನ್ನು ಕಟ್ಟುತ್ತಾ ಹೋದರೆ ನಿಸರ್ಗ ಮುನಿಯದೆ ಇನ್ನೇನು ಮಾಡಲು ಸಾಧ್ಯ ಅಂದುಕೊಂಡೆ.  ಕ್ಯಾಮರಾಕ್ಕೆ ಆಹಾರವಾಗಲು ಬಹಳಷ್ಚು ವಿಷಯಗಳಿದ್ದವು.   ಕ್ಯಾಮರಾ ನನಗೆ ಬೇಕೆನ್ನಿಸಿದ್ದನ್ನು ಕ್ಲಿಕ್ಕಿಸಿತು.

ಸ್ವಲ್ಪ ಹಣ್ಣು ,ಜ್ಯೂಸ್ ಕುಡಿದು ರೂಮಿನತ್ತ ಹೆಜ್ಜೆ ಹಾಕಿದೆ.

ಅದಾಗಲೆ ರೂಮ್ ಕ್ಲೀನ್ ಮಾಡಲು ಬಂದಿದ್ದಾಕೆ ಒಂದು ನಗೆ ಬೀರಿದಳು. ನಾನು ನಕ್ಕೆ. ಆಕೆಯು ನಕ್ಕಳು.

ಆಕೆ ಚೀನಾದವಳು. ನನ್ನ ಇಂಗ್ಲೀಷ್ ಗೆ ಸರ್ಟಿಫಿಕೇಟ್ ಕೊಟ್ಟಳು. ಅರೆ ಅಮೆರಿಕಾದಲ್ಲಿ ಕನ್ನಡ ಮೀಡಿಯಮ್ ನಲ್ಲಿ ಓದಿದ ನನಗೆ ಸರ್ಟಿಫಿಕೇಟ್..ಖುಷಿಯೆನಿಸಿತು. ಆಕೆ ಅರೆಬರೆ ಆಂಗ್ಲ ಭಾಷೆಯಲ್ಲಿ ಮಾತಾಡ್ತಾ ಇದ್ದದ್ದರಿಂದ ನನ್ನ ಇಂಗ್ಲೀಷ್ ಗೆ  ಸರ್ಟಿಫಿಕೇಟ್ ಕೊಟ್ಟದ್ದರಲ್ಲಿ ಏನು ಆಶ್ಚರ್ಯವಿರಲಿಲ್ಲ ಬಿಡಿ.

281371_1679263119982_94725_nನಮ್ಮ ಪ್ರೊಫೆಷನಲ್ ಪ್ರೊಗ್ರಾಂ ಮುಗಿಸಿ ವಾಪಸು ಬಂದಾಗ ಸಂಜೆಯಾಗಿತ್ತು. ವಿಶ್ವಸಂಸ್ಥೆ, ಪೆಂಟಗಾನ್ ಸೇರಿದಂತೆ  ನ್ಯೂಯಾರ್ಕ್ ನ ಪ್ರಮುಖ ಮತ್ತು ಅಲ್ಲಿನ ಡಿಪ್ಲೋಮಾಟ್ ಗಳ ಜೊತೆ  ಸಂವಾದ ಇತ್ತು.

ನಮ್ಮತಂಡದ ಸದಸ್ಯರು time suareಗೆ ಹೋಗೋಣ ಅಂದ್ರು. ಇದು ಜನನಿಬಿಡ ಪ್ರದೇಶ. ರಾತ್ರಿ ಹೆಚ್ಚು active ಆಗಿರುವ ಜಾಗವಿದು.

ನ್ಯೂಯಾರ್ಕ್ ನಲ್ಲಿ  ಕೆಲ ದಿನಗಳನ್ನು ಕಳೆದ  ನಂತರ ನಮ್ಮ ಪಯಣ ಸಾಗಿದ್ದು ಕ್ಯಾಲಿಫೋರ್ನಿಯಾದ ಕಡೆಗೆ.

ನ್ಯೂಯಾರ್ಕ್ ಗಿಂತ  ಇಲ್ಲಿ ಚಳಿ ಸ್ವಲ್ಪ ಜಾಸ್ತಿನೇ ಇತ್ತು. ಇಂಡಿಯನ್ ಹೊಟೇಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿಗೆ ಬಿದ್ದವು. ಹಾಗಾಗಿ  ಮಿಸ್ ಮಾಡಿಕೊಂಡ ಇಂಡಿಯನ್ ಫುಡ್ ಹುಡುಕುತ್ತಾ ನಾನು ಹೆಜ್ಜೆ ಹಾಕಿದ್ದೆ..

ಸಂಜೆ ವಾಕ್ ಮಾಡುವ ಕೆಲವೆಡೆ ಕಂಡ ದೃಶ್ಯ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಇಲ್ಲಿನ ಬೀದಿಗಳಲ್ಲು ಹೈಫೈ ಬಿಕ್ಷುಕರಿದ್ದರು. ಹೆಜ್ಜೆ ಹಾಕುತ್ತಾ ಸಾಗಿದಾಗ ಮೂತ್ರವಿಸರ್ಜನೆಯ ವಾಸನೆಯು ಕಿವಿಗೆ ಬಡಿಯಿತು.ಆದರೆ ಇದು ಕಡಿಮೆಪ್ರಮಾಣದಲ್ಲಿದೆ

ಮರುದಿನ ನಮ್ಮ professional programmeಮುಗಿಸಿ ವಾಪಾಸಾಗುವ ಹಾದಿಯಲಿ ಫುಲ್ ಟ್ರಾಫಿಕ್ ಜಾಮ್.

ಭಾರತದಿಂದ ನನ್ನೊಂದಿಗೆ ಬಂದಿದ್ದ ರುಕ್ಮಿಣಿ ಗುಡ್ ನಮ್ಮ ತರಾನೆ ಇಲ್ಲಿ ಅನ್ನುವಾಗ ನಕ್ಕುನಕ್ಕು ಎಲ್ಲಾರು ಸುಸ್ತಾದ್ವಿ…

ಮುಂದಿನ ವಾರ ಮತ್ತೊಂದಿಷ್ಟು ನೆನಪಿನೊಂದಿಗೆ ಬರ್ತೀನಿ..

 

‍ಲೇಖಕರು Admin

August 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: