ಇಲ್ಲಿವೆ ಕೊಂಕಣಿ ಕವಿತೆಗಳು

ಕೊಂಕಣಿಯು ಭಾರತದ ಪಶ್ಚಿಮ ಕರಾವಳಿಯ ಮಹಾರಾಷ್ಟ್ರದ ಒಂದು ಭಾಗ, ಗೋವಾ ರಾಜ್ಯ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು, ಕಣ್ಣನ್ನೂರು, ಆಳಪುಯ, ಕೊಟ್ಟಾಯಂ, ಎರ್ನಾಕುಲಂ, ತಿರುವನಂತಪುರಂ ನ ಕೆಲವು ಭಾಗಗಳಲ್ಲಿ ಮನೆಮಾತಾಗಿದೆ. ಕೊಂಕಣಿಗರು ಇಂದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವುದರಿಂದ ಅವರು ನೆಲೆಸಿರುವೆಡೆಯೆಲ್ಲ ಕೊಂಕಣಿ ಇದೆ ಎನ್ನಬಹುದು. ಮಂಗಳೂರಿನ ವರ್ಲ್ಡ್ ಕೊಂಕಣಿ ಸೆಂಟರ್  ನಲ್ಲಿರುವ, ಕೆಲ ವರ್ಷ ದೆಹಲಿ ನಿವಾಸಿಯಾಗಿದ್ದ ಕ್ರಿಯಾಶೀಲ ಪ್ರತಿಭಾವಂತ ಗುರು ಬಾಳಿಗ ಅವರು ಕೆಲವು ಕೊಂಕಣಿ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ.  ‘ಕೆಂಪು ಕೋಟೆ’ ಬ್ಲಾಗ್ ಮೂಲಕ ಈ ಕವಿತೆಗಳು ಇಲ್ಲಿಗೆ ಬಂದಿವೆ  – ಸೆಗಣಿ ಊರೊಳಗೆ ಕಾಲಿಡಲು ಜಾಗವಿಲ್ಲ ಎಲ್ಲಿ ನೋಡಿದರಲ್ಲಿ ಸೆಗಣಿ.

ಗಲ್ಲಿಗಲ್ಲಿಯಲ್ಲಿ, ಹೆಜ್ಜೆ ಹೆಜ್ಜೆಗೂ, ಬೀದಿಯಲ್ಲಿ, ಬಾಗಿಲಲ್ಲಿ, ಚಪ್ಪಲಿ ಕೊಳೆಯಾದೀತೆಂದು ಬರಿಗಾಲಲ್ಲಿ ನಡೆಯುತ್ತಿದ್ದರು ಜನರು ನಾನೂ ಮೊದಲ ಬಾರಿಗೆ ಬರಿಗಾಲಲ್ಲಿ, ಭಿಕಾರಿಯೆಂದಲ್ಲ. ಕೊನೆಗೊಮ್ಮೆ ತುಳಿದೇ ಬಿಟ್ಟೆ! ಎಷ್ಟೆಂದು ಹಾರಿ ಎಗರಲಿ ನಾನು, ಎಷ್ಟೆಂದು ಟೊಂಕ ಹಾಕಲಿ, ಎಷ್ಟೆಂದು ಆಡಲಿ ಕುಂಟಾಬಿಲ್ಲೆ, ನೀರರಸಿ ನಡೆದಾಗ ಬಳಿಯಲ್ಲೇ ಇತ್ತು ಇಗರ್ಜಿ ಅಲ್ಲಿ, ಅಂತಿಮ ಗುರುವಾರದ ಪೂಜೆ,
ಪಾದರಿ ಆಪೋಸ್ತಲರ
ಕಾಲು ತೊಳೆಯುತ್ತಿದ್ದರು ಕಿಟಕಿಯಿಂದ ಇಣುಕುತ್ತಾ ನಿಂತೆ  ಈ ಕೊಳೆ ತೊಳೆಯಲು ಆ ’ಟೀಸ್ಪೂನ್’ ನೀರು ಎಲ್ಲಿ ಸಾಕು? ಈ ಕಾಲು ಒರಸಲು ಅವರ, ತುಣುಕು ಅಂಗೈಬಟ್ಟೆ ಎಲ್ಲಿ ಸಾಕು? ಆ ಕ್ಷಣಕ್ಕೆ, ಗುಡುಗು ಮಿಂಚು, ಮಳೆ ಸುರಿದೇ ಸುರಿಯಿತು ಸೂರಿನ ಅಂಚಿನಿಂದ ಸುರಿಯುತ್ತಿರುವ ನೀರಧಾರೆಗೆ ಕಾಲೊಡ್ಡಿದೆ. ಕೊಳೆಯೆಲ್ಲಾ ತೊಳೆದು ಹೋಯಿತು ಅಂಟಿರುವ ಕೊಳೆತೊಳೆದು ಪುನೀತನಾಗಲು ಒಳಗೆ ಹೋಗಬೇಕೆಂದೇನೂ ಇಲ್ಲ. ಹೊರಗೆ ನಿಂತರೂ ಸಾಕು ಮೈಲಿಗೆಯ ಅಂಜಿಕೆಯೂ ಇಲ್ಲ. ಕೊಂಕಣಿ ಮೂಲ: ಮೆಲ್ವಿನ್ ರೊಡ್ರಿಗಸ್ ಕನ್ನಡಕ್ಕೆ: ಗುರು ಬಾಳಿಗಾ ಕಿಟಕಿ ಕಿಟಕಿಯ ಗಾತ್ರ, ಮನೆಬಾಗಿಲಷ್ಟು ಹಿರಿದೇನೂ ಅಲ್ಲ, ಆದರೆ.. ಬಾಗಿಲಿನಿಂದ ಕಾಣದ್ದನ್ನು ಕಿಟಕಿಯಿಂದ ನೋಡಬಹುದು ಬಾಗಿಲಿನಿಂದ ಒಳಬರಲಾಗದವರು ಕಿಟಕಿಯಿಂದ ಒಳನೂರಬಹುದು
ಬಾಗಿಲು ನೆಂಟರಿಷ್ಟರಿಗೆ ಕಿಟಕಿ ಕಳ್ಳಕಾಕರಿಗೆ ಆದರೂ ಬಾಗಿಲಲ್ಲಿ ಕಚ್ಚುವ ನಾಯಿ ಕಿಟಕಿಯ ಮೇಲೆ ಮುದ್ದಾದ ಬೆಕ್ಕು ಬಾಗಿಲು ಗಂಡನದು ಕಿಟಕಿ ಪ್ರೇಮಿಯದು ಅದಕ್ಕೇ ಸ್ವಾಮೀ..  ಒಂದು ಮನೆಗೆ ಬಾಗಿಲೊಂದೇ, ಕಿಟಕಿಗಳು ಮಾತ್ರ ಹಲವಾರು ಕೊಂಕಣಿ ಮೂಲ – ಎಚ್ಚೆಮ್ ಪೆರ್ನಾಲ್ ಕನ್ನಡಕ್ಕೆ- ಗುರು ಬಾಳಿಗಾ
]]>

‍ಲೇಖಕರು G

January 25, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಭೂತಕಾಲದ ಗುಳಿಕೆನ್ನೆ

ಭೂತಕಾಲದ ಗುಳಿಕೆನ್ನೆ

ರಾಘವೇಂದ್ರ ದೇಶಪಾಂಡೆ ಹುಡುಕುವೆ ನನ್ನನು ಅವರಿವರಲ್ಲಿಸಿಗಬಹುದು ಹೂವಿನ ಗುಚ್ಛಬರುವದೋ...! ನೆನಪುಉಕ್ಕಿ ಹರಿಯುವದು ಸಾಗರ ಅಕ್ಷಿಯಂಗಳದಲಿ...

ಜೇನು ಸೈನ್ಯ ಮತ್ತು ನಾನು

ಜೇನು ಸೈನ್ಯ ಮತ್ತು ನಾನು

ಸಾವಿತ್ರಿ ಹಟ್ಟಿ ಶಾಲೆ ಮುಗಿಸಿ ಮನೆಗೆ ಬಂದೆ!ದರುಶನಾರ್ಥಿಗಳು ಕಾಯ್ದು ಸಾಲಾಗಿ ನಿಂತಿದ್ರು!ಕೆಲವರು ಕಿಟಕಿ ಸರಳುಗಳ ಮೇಲೆ!ಕೆಲವರು ಅಡುಗೆಮನೆಯ...

ನೆನಪಿನ ಹೂಜಿ ಜಾರಿ ಬೀಳಲಿ…

ನೆನಪಿನ ಹೂಜಿ ಜಾರಿ ಬೀಳಲಿ…

ಸದಾಶಿವ್ ಸೊರಟೂರು ಪ್ರತಿ ಕನಸಿನಲ್ಲೂ ಮೂಡುವಚಿತ್ರಗಳ ಮೂಲೆಯಲ್ಲಿಢಾಳಾಗಿ ಕಾಣುವವೃತ್ತಾಕಾರದ ಸೀಲುನಿನ್ನದಾ? ನಿನ್ನದೇ ಇರಬೇಕುಯಾರ-ಯಾರದೊ...

೧ ಪ್ರತಿಕ್ರಿಯೆ

 1. Veeranna manthalkar

  sir,
  Naanobba Kaviyagi Heluvvudadare konkani kavitegagalu hitavagi mana tattutave, kavi ಗುರು ಬಾಳಿಗ avaru padagalondige vastava badukina chitrana odugara mundittiddare, segani kavite naija badukige httiravaadare, kitaki-kavite Rahasyavannu bayaligeleyutade, Lekhakarige dhanyavadagalu.
  -V.H.Veeraan manthalkar, Basavakalyan
  mo: 9019991066

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: