ಇಲ್ಲೊಬ್ಬ ಮಹಾನ್ ಕಲಾವಿದನಿದ್ದಾನೆ

ಪ್ರವರ ಕೊಟ್ಟೂರು 

sheಇಲ್ಲೊಬ್ಬ ಮಹಾನ್ ಕಲಾವಿದನಿದ್ದಾನೆ
ಚೂಪು ಮೂಗು, ಮಂಪರು ಹತ್ತಿಕೊಂಡ ಕಣ್ಣು,
ಜೋಲು ಮುಖ,ಕೆದರು ಕೂದಲು
ಅಷ್ಟೇನು ಚೆಂದವಿಲ್ಲದ ಅಂಗಿ
ಯಾವುದೋ ಹಾಳು ಸಂಜೆಯಲ್ಲಿ
ಸರೀಸೃಪದ ಉಸುರು ತಾಕಿ ಬಾಡಿದ ಹೂವಿನ ಹಾಗೆ…

ಅಸ್ತವ್ಯಸ್ಥ ಕೋಣೆಯಲ್ಲಿ
ಭರಪೂರ ಕತ್ತಲು,
ಬಣ್ಣಗಳನ್ನು ಗುರುತಿಸಲಿಕ್ಕೆಂದೇ ಮಬ್ಬು ಕಿಟಕಿ ದಾಟಿ
ಕೋಣೆಯ ನಟ್ಟ ನಡುವೆ ಇಳಿವ
ವಿಕ್ಷಿಪ್ತ ಮೈ ಮಾಟದ ಬೆಳಕು

ಗಾಜಿನ ಲೋಟಕ್ಕೆ ಸುರುವಿದ
ವಿಸ್ಕಿಯ ತೆಳುಗೆಂಪಿನ ಒಂದು ಪದರ
ತುಟಿಗೆ ಅಂಟುವಾಗೆಲ್ಲಾ ಅರ್ಧ ಗ್ಲಾಸು ಖಾಲಿ,
ಜೋಡು ಬಿಳಿಯ ಹೆಬ್ಬಾವುಗಳು
ಮೈಥುನಕ್ಕೆ ಹಾತೊರೆಯುತ್ತಿರುವಂತೆ
ವಿಲಕ್ಷಣ ಚಿತ್ರ
ಸಿಗರೇಟಿನ ಹೊಗೆಯ ಕಿಬ್ಬೊಟ್ಟೆಯಿಂದ ಜಾರುತ್ತದೆ.

ಜೇಡ ಕಸೂತಿ ಹಾಕಿದ ಫ್ಯಾನಿನಲ್ಲಿ
ಗಾಢ ಕಪ್ಪು ಹೂವು,
ಆಕೆ ಹಲ್ಲಿನ ತುದಿಯಲ್ಲಿ ಗುಲಾಬಿ ಕಚ್ಚಿಕೊಂಡು
ಕಣ್ಣ ಸನ್ನೆಯಲ್ಲೆ ಇರಿದುಬಿಟ್ಟಳು
ಕಣ್ಣಿನಲ್ಲೇ ಬೆತ್ತಲಾದಳು,
ಹೊಳೆಯುತ್ತಿರುವ ಸಿಲ್ಕಿನ ಹಾಸಿಗೆ
ಇಬ್ಬರನ್ನೂ ತೆಕ್ಕೆಗೆ ಎಳೆದುಕೊಂಡು ಬಿಸಿಯ ಹಬೆಯಲ್ಲಿ ಬೇಯಿಸಿತು,
ಬೆವರಿನ ನದಿ ಗಂಟೆಗಟ್ಟಲೇ ಆವಿಯಾಗಲಿಲ್ಲ

ಮೊಲೆ ತೊಟ್ಟಿನಲ್ಲಿ ಹಚ್ಚೆ ಹೊಯ್ದ ಹಲ್ಲು
ಕುತ್ತಿಗೆಯಲ್ಲಿ ಕಪ್ಪುಗಟ್ಟಿದ ಗುರುತು,
ಕುಲುಮೆಯಲ್ಲಿ ಕಾಯಿಸಿದಂಥಾ ತುಟಿ,
ಮೆತ್ತನೆಯ ಎದೆ ತುಂಬಾ ಬೆರಳ ಮುದ್ರೆ
ಮಳೆಗೆ ಕುಣಿದ ನವಿಲ ಅಂಗಾಲಿನ ತುಂಬಾ ನೋವ ಸುಖ,
ಹಸಿ ನೆಲದ ತುಂಬೆಲ್ಲಾ ಜಾರಿದ ಗರಿ,
ಕಲಾವಿದ ಒಂದಷ್ಟು ಕಳೆದು, ಮತ್ತಷ್ಟನ್ನು ಪಡೆದಿದ್ದಾನೆ
ಯಾಗದ ಬೆಂಕಿಯೊಳ ಸುರಿದ ತುಪ್ಪ
ಮತ್ತೆ ಮೇಲಕ್ಕೆ ಜಿಗಿದ ಮಿಂಚಂಥಾ ಜ್ವಾಲೆ

heಎಂಥಾ ರಾತ್ರಿಗಳವು
ನಡುಕಿನ ಮೈಯಲ್ಲಿ ಥಟ್ಟನೇ ಎದ್ದವನೇ
ಬಣ್ಣಗಳ ಅದ್ದಿಕೊಂಡು ಕ್ಯಾನ್ವಾಸನ್ನು
ಮೈಥುನದ ಮಂಚದಂತೆ ಸಿಂಗರಿಸುತ್ತಾನೆ,
ಗೆಳತಿಗೆ ಎದುರುಗೊಂಡವನಂತೆ ಸಿದ್ಧನಾಗುತ್ತಾನೆ
ಬೆತ್ತಲನ್ನು ತಡಕಾಡುವಂತೆ, ಆಕೆಯ ಮೈ ಮಾಟವನ್ನು
ಹೆಕ್ಕುವಂತೆ
ಅಬ್ಬಾ ಕ್ಯಾನ್ವಾಸಿನ ತುಂಬಾ ಹೆಣ್ಣು, ಗಾಢ ಕಾಮ, ಕಂಠಮಟ್ಟ ಕತ್ತಲು,
ನಿದ್ರೆ ದಾಟದ ಮುಲುಕಾಟ, ಒದ್ದೆ ಹಾಸಿಗೆ, ಸುಕ್ಕು

ಕ್ಯಾನ್ವಾಸಿನಲ್ಲಿ ಅರ್ಥವಾಗದ್ದೂ ಇದೆ
ಒಂದಷ್ಟು ಜಾಗ ಖಾಲಿಯಾಗೆ ಉಳಿದಿದೆ
ಆಕೆಯ ಬಟ್ಟೆ ಮುದ್ದೆಯಾಗಿ ಅಲ್ಲೇ ಬಿದ್ದಿದೆ
ಮೂಲೆಯಲ್ಲಿ ನೆಲಕ್ಕೆ ಮುಖಕ್ಕೆ ಮಾಡಿದ
ಅಪರಿಚಿತ,

ಪಾಪಗಳ ತುಂಬಿಕೊಂಡ ಜೋಳಿಗೆಯಂಥಾ ಮೈ
ವಿಸ್ತಾರವನ್ನು ಆವರಿಸಿದ ಒಂಟಿತನ, ಏಕಾಂತ,
ವಿಷಾದ, ನೋವು
ಎಲ್ಲದರ ಸಬೂಬಿಗೆ ಬಿಟ್ಟು ಹೋದ ಖಾಲಿತನ

ವಿಸ್ಕಿ ಆವಿಯಾಗುತ್ತಲೇ ಹೋಗುತ್ತದೆ
ಸಿಗರೇಟು ಸುಡುತ್ತಲೇ ಹೋಗುತ್ತದೆ
ಕ್ಯಾನ್ವಾಸಿನಲ್ಲಿ ತನ್ನ ಆತ್ಮವನ್ನು ಅಂಟಿಸಿ
ಗೋಡೆಗೆ ಆನಿಕೊಂಡ ಆ ಕಲಾವಿದ ಬರ್ಫಿನ ಚಾದರ ಹೊದ್ದಂತೆ ನಿರಾಳವಾಗಿದ್ದಾನೆ

ಆ ಚಿತ್ರ
ನೋಡಲು ಜನ ಮುಗಿಬೀಳುತ್ತಿದ್ದಾರೆ
ಬಜಾರಿನಲ್ಲಿ ಕೋಟಿಗೆ ಹರಾಜಾಗುತ್ತಿದೆ

‍ಲೇಖಕರು Admin

October 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

ಮಗಳು ಪೃಥೆ

ಮಗಳು ಪೃಥೆ

ಸುನೀತಾ ಬೆಟ್ಕೇರೂರ್ ಇವಳು ನಮ್ಮ ಮಗಳು,ಪೃಥೆ.ಕಂಕುಳಲ್ಲಿದ್ದಳು,ನೆಲಕಿಳಿದಳುಬೆರಳನ್ಹಿಡಿದು ಹೆಜ್ಜೆಯಿಟ್ಟಳುಈಗೋ------ ಈಗೋಅನ್ನುವಲ್ಲಿ...

ಕುರ್ಚಿ

ಕುರ್ಚಿ

ಮುರುಳಿ ಹತ್ವಾರ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  ಒಂದಿಷ್ಟೂ ಬಿಸಿಯಾಗಲಿಲ್ಲ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This