ಇವರು ಭವಾನಿ ಲಕ್ಷ್ಮಿನಾರಾಯಣ..

ಭವಾನಿ ಲಕ್ಷ್ಮಿನಾರಾಯಣ ಸರ್

ಮತ್ತು ಸ್ವಾರಸ್ಯಕರ ಸಂಗತಿಗಳು..

rahul-belagali

ರಾಹುಲ್ ಬೆಳಗಲಿ 

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಬಳ್ಳಾಪುರದ ಭವಾನಿ ಲಕ್ಷ್ಮಿನಾರಾಯಣ ಅವರು ಬಹುತೇಕ ಮಂದಿಗೆ ಹಿರಿಯ ಛಾಯಾಗ್ರಹಕರಾಗಿ ಗೊತ್ತು. ಅತ್ಯುತ್ತಮ ಛಾಯಾಚಿತ್ರಗಳನ್ನು ತೆಗೆಯುತ್ತಾರೆಂದು ಗೊತ್ತು. ಚಿಕ್ಕಬಳ್ಳಾಪುರದಲ್ಲಿ ಹಳೆಯ ಕಟ್ಟಡವೊಂದರ ಮಹಡಿಯಲ್ಲಿ ಅಚ್ಚುಕಟ್ಟಾದ ಫೋಟೋ ಸ್ಟುಡಿಯೋ ಹೊಂದಿದ್ದಾರೆ ಎಂಬುದು ಗೊತ್ತು. ಇವೆಲ್ಲವೂ ಹೊರತುಪಡಿಸಿ ಅವರ ಬಗೆಗಿನ ಕೆಲ ಮಹತ್ವದ ಮತ್ತು ಸ್ವಾರಸ್ಯಕರ ಸಂಗತಿಗಳು ಇವೆ. ಅವು ನಿಶ್ಚಿತವಾಗಿ ಕೆಲವರಿಗೆ ಗೊತ್ತಿರಲಿಕ್ಕಿಲ್ಲ. ಅಂತಹ ಕೆಲವು‌ ಇಲ್ಲಿವೆ.

bhavani-lakshminarayan41) ಛಾಯಾಗ್ರಹಕರೆಲ್ಲ ಡಾ. ರಾಜ್ ಕುಮಾರ್ ಅವರ ಚಿತ್ರಗಳನ್ನು ಕ್ಲಿಕ್ಕಿಸಲು ಮುಗಿಬೀಳುತ್ತಿದ್ದ ದಿನಗಳಲ್ಲಿ ಡಾ. ರಾಜ್ ಕುಮಾರ್ ಸ್ವತಃ ಭವಾನಿ ಲಕ್ಷ್ಮಿನಾರಾಯಣ ಅವರ ಕ್ಯಾಮೆರಾ ತೆಗೆದುಕೊಂಡು ಭವಾನಿಯವರ ಚಿತ್ರ ಕ್ಲಿಕ್ಕಿಸಿದ್ದರು. ಇದು ಅವರ ಪಾಲಿಗೆ ಈಗಲೂ ಅತ್ಯಮೂಲ್ಯ ಮತ್ತು ಅಪರೂಪದ ಕ್ಷಣ.

2) ನಂದಿ ಗಿರಿಧಾಮ, ಚಿಕ್ಕಬಳ್ಳಾಪುರ, ದೇವನಹಳ್ಳಿ ಅಥವಾ ಬೆಂಗಳೂರು ಹೊರವಲಯದಲ್ಲಿ ಎಲ್ಲಿಯಾದರೂ ಚಲನಚಿತ್ರದ ಚಿತ್ರೀಕರಣ ನಡೆದರೆ, ನಟಿಯರಾದ ಮಂಜುಳಾ, ಕಲ್ಪನಾ ಮತ್ತು ಚಿತ್ರರಂಗದ ಇತರ ಸದಸ್ಯರು ಹೋಟೆಲ್ ಲಾಡ್ಜ್ ಬದಲು ಭವಾನಿ ಲಕ್ಷ್ಮಿನಾರಾಯಣ ಅವರ ಮನೆಯಲ್ಲಿ ತಂಗುತ್ತಿದ್ದರು. ಕುಟುಂಬ ಸದಸ್ಯರಂತೆ ಇರುತ್ತಿದ್ದರು.

3) ಚಿತ್ರರಂಗದ ನಟ, ನಟಿಯರು, ನಿದರ್ೇಶಕರು, ತಂತ್ರಜ್ಞರು ಸೇರಿದಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡ ಬಹುತೇಕ ಮಹನೀಯರ ಬರಹಗಳು, ಹಸ್ತಾರಕ್ಷರಗಳು ಅವರ ಬಳಿಯಿವೆ. ಅವುಗಳನ್ನು ಜೋಪಾನವಾಗಿ ಕೂಡಿಟ್ಟಿರುವ ಅವರು ಒಂದೊಂದು ಹಸ್ತಾಕ್ಷರದ ಹಿಂದಿನ ಕತೆಗಳು ಹೇಳುತ್ತಾರೆ. ಆಫ್ ಮತ್ತು ಆನ್ ದಿ ರಿಕಾರ್ಡ್!

4) ಅಪರೂಪ ಮತ್ತು ಅತ್ಯಮೂಲ್ಯ ಚಿತ್ರಗಳನ್ನು ಸೆರೆ ಹಿಡಿದ ಕ್ಯಾಮೆರಾ ರೋಲಗಳನ್ನು ಜತನದಿಂದ ಕಾಪಾಡಿಕೊಂಡಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ವಿಶಿಷ್ಟ ರೀತಿಯ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿರುವುದು ಅವರ ಹೆಗ್ಗಳಿಕೆ ಮತ್ತು ಹೆಮ್ಮೆ. ಹಳೆಯ ಕ್ಯಾಮೆರಾದಿಂದ ಆರಂಭಿಸಿ ಈಗಿನವರೆಗಿನ ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿದ್ದಾರೆ.

5) ದೀರ್ಘಕಾಲದವರೆಗೆ ಚಿತ್ರರಂಗದ ಏಕೈಕ ಛಾಯಾಗ್ರಹಕರಾಗಿ ಗುರುತಿಸಿಕೊಂಡಿದ್ದು ಅವರ ಮತ್ತೊಂದು ವಿಶೇಷ. ರಾಜ್ಯಮಟ್ಟದ ಬಹುತೇಕ ದಿನಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆ, ಸಿನಿ ಪತ್ರಿಕೆಯಲ್ಲದೇ ಇತರೆ ಪತ್ರಿಕೆಗಳಲ್ಲಿ ಅವರ ಛಾಯಾಚಿತ್ರಗಳು ಪ್ರಕಟಗೊಂಡಿವೆ.

6) ಮದ್ರಾಸ್, ಬೆಂಗಳೂರು, ಹೈದರಾಬಾದ ಸೇರಿದಂತೆ ಎಲ್ಲಿಯಾದರೂ ಕನ್ನಡದ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದರೂ ಅಲ್ಲಿ ಅವರು ಹಾಜರ್. ನಟ, ನಟಿಯರು ಶೂಟಿಂಗ್ ಸಂದರ್ಭದಲ್ಲಿ ಅಲ್ಲದೇ ಇನ್ನಿತರ ವೇಳೆಯಲ್ಲಿ ಅವರಿಂದ ಚಿತ್ರ ಕ್ಲಿಕ್ಕಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಿದ್ದರು.

7) “ಒಂದು ಚಿತ್ರ ನೂರು ಪದಗಳಿಗೆ ಸಮ” ಎಂಬಂತೆ ಅವರು ಒಂದೊಂದು ಚಿತ್ರದ ಸಂದರ್ಭ ಮತ್ತು ಘಟನಾವಳಿ ವಿವರಿಸುತ್ತಾರೆ. ಅವರಲ್ಲಿ ಅಗಾಧ ನೆನಪಿನ ಶಕ್ತಿಯಿದ್ದು, ಯಾವುದನ್ನೂ ಮರೆತಿಲ್ಲ. ಸ್ಟುಡಿಯೋದಲ್ಲಿ ಅವರು ಕೆಲ ಅಪರೂಪದ ಚಿತ್ರಗಳನ್ನು ಪ್ರದಶರ್ಿಸಿದ್ದಾರೆ.

bhavani-lakshminarayan28) ಅವರ ಸ್ಟುಡಿಯೋಗೆ ಆತ್ಮೀಯರು ಅಥವಾ ಸ್ನೇಹಿತರು ಯಾರಾದರೂ ಹೋದರೆ, 5 ರಿಂದ 10 ನಿಮಿಷಗಳಲ್ಲಿ ಮಾತುಕತೆ ಮುಗಿಸಿಕೊಂಡು ಬರುವ ಜಯಮಾನವೇ ಇಲ್ಲ. ಕನಿಷ್ಠ ಒಂದೆರಡು ಗಂಟೆ ಮತ್ತು ಮೂರು ಸುತ್ತಿನ ಚಹಾ ಬಳಿಕವೇ ಸ್ಟುಡಿಯೋದಿಂದ ನಿರ್ಗಮಿಸಬೇಕು. ಇದು ಅವರು ವಿಧಿಸಿರುವ ಪ್ರೀತಿಯ ಷರತ್ತು.

9) ವ್ಯಕ್ತಿ ಹಿರಿಯರು ಅಥವಾ ಕಿರಿಯರಲ್ಲಿ ಅವರನ್ನು ಅವರು ಅಷ್ಟೇ ಗೌರವ ಮತ್ತು ಪ್ರೀತಿಯಿಂದ ಕಾಣುತ್ತಾರೆ. ಸ್ಟುಡಿಯೋಗೆ ಬರುವ ಗ್ರಾಹಕರನ್ನು ದೀರ್ಘಕಾಲದವರೆಗೆ ಕಾಯಿಸುವುದಿಲ್ಲ. ಚಿತ್ರಗಳ ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಅವುಗಳನ್ನು ನಿಗದಿತ ಅವಧಿಯೊಳಗೆ ಗ್ರಾಹಕರಿಗೆ ನೀಡುತ್ತಾರೆ.

10) ಇಳಿವಯಸ್ಸಿನಲ್ಲೂ ಅವರ ಉತ್ಸಾಹ ಕುಂದಿಲ್ಲ. ಈಗಲೂ ಪ್ರತಿ ವರ್ಷ ಅವರು ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಆಯಾ ದೇಶ-ವಿದೇಶದ ಚಿತ್ರಗಳನ್ನು ಸೆರೆ ಹಿಡಿಯುವ ಅವರು ಪತ್ರಕರ್ತರಾಗಿ ಹಲವಾರು ಮಾಹಿತಿ ಕೂಡ ಸಂಗ್ರಹಿಸುತ್ತಾರೆ. ಪ್ರಚಲಿತ ವಿದ್ಯಮಾನವನ್ನೂ ಸಹ ಸೂಕ್ಷ್ಮವಾಗಿ ಗಮನಿಸುತ್ತಾರೆ.

11) ಪತ್ರಕರ್ತ ಶಶಿಧರ ಚಿತ್ರದುರ್ಗ ಅವರ ನಿರೂಪಣೆಯಲ್ಲಿ ಅವರು “ಕ್ಯಾಮೆರಾ ಕಣ್ಣಲ್ಲಿ ರಾಜ್” ಎಂಬ ಪುಸ್ತಕ ಹೊರತಂದಿದ್ದಾರೆ. ಅವರಿಗೆ ಈಗಲೂ ಚಿತ್ರರಂಗದೊಂದಿಗೆ ನಿಕಟ ಸಂಪರ್ಕವಿದೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಅಪರೂಪದ ಚಿತ್ರ ಅಥವಾ ಮಾಹಿತಿ ಬೇಕಿದ್ದರೆ, ಪತ್ರಿಕಾ ಕಚೇರಿಗಳು ಮೊದಲು ನೆನಪಿಸಿಕೊಳ್ಳುವುದೇ ಭವಾನಿ ಲಕ್ಷ್ಮಿನಾರಾಯಣ ಅವರನ್ನು.

bhavani-lakshminarayan312) ಚಿಕ್ಕಬಳ್ಳಾಪುರದಲ್ಲಿದ್ದಾಗ, ಅವರಿಂದ ಹಲವಾರು ವಿಷಯಗಳನ್ನು ಅರಿತುಕೊಂಡೆ. ಜ್ಷಾನ ವೃದ್ಧಿಸಿಕೊಂಡೆ. ಅವರ ನಯ, ವಿನಯ ಮತ್ತು ಸರಳತೆ ರೂಢಿಸಿಕೊಳ್ಳಲು ಯತ್ನಿಸಿದೆ. ಅಲ್ಲಿಂದ ನಿರ್ಗಮಿಸುವಾಗ, ಅವರು ಕೊಡುಗೆಯಾಗಿ ನೀಡಿದ ಬೃಹದಾಕಾದ ಫೋಟೋ ಆಲ್ಬಂ ಜೋಪಾನವಾಗಿ ಇಟ್ಟುಕೊಂಡಿದ್ದೇನೆ.

13) ಚಿಕ್ಕಬಳ್ಳಾಪುರದಲ್ಲಿ ಮೊದಲ ಬಾರಿ ಅವರನ್ನು ಸ್ಟುಡಿಯೋದಲ್ಲಿ ಭೇಟಿಯಾದಾಗ ನನ್ನ ಭಾವಚಿತ್ರವನ್ನು ಕ್ಲಿಕ್ಕಿಸಿ, ಅದಕ್ಕೊಂದು ಚೆಂದನೆಯ ಫ್ರೇಮು ಹಾಕಿ ಕೊಡುಗೆಯಾಗಿ ನೀಡಿದರು. ಅದನ್ನೂ ಸಹ ಜೋಪಾನವಾಗಿ ಇಟ್ಟಿದ್ದೇನೆ.

ಸಂಗತಿಗಳು ಇನ್ನೂ ಹಲವು ಇವೆ. ಮುಂದೆ ಎಂದಾದರೂ ಬರೆಯುತ್ತೇನೆ….

‍ಲೇಖಕರು Admin

November 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪುರುಷೋತ್ತಮ ತಲವಾಟ ಅವರಿಗೆ ‘ಕರ್ನಾಟಕ ಕಲಾನಿಧಿ ಪ್ರಶಸ್ತಿ’

ಪುರುಷೋತ್ತಮ ತಲವಾಟ ಅವರಿಗೆ ‘ಕರ್ನಾಟಕ ಕಲಾನಿಧಿ ಪ್ರಶಸ್ತಿ’

ರಂಗ ಕುಸುಮ ಪ್ರಕಾಶನವು ಪ್ರತಿ ವರ್ಷದಂತೆ ಈ ಸಲವು ತನ್ನ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರತಿಸಲದಂತೆ ಕರ್ನಾಟಕದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This