ಇವರು ಯಾರು ಬಲ್ಲೆಯೇನು?

ನೀವು ಹೇಳಿದ್ದು ಸರಿ- ಇವರು ಜಿ ಎಸ್ ಶಿವರುದ್ರಪ್ಪ.

ಕೆ ಎಂ ಚೈತನ್ಯ ಅವರ ಫೇಸ್ ಬುಕ್ ನಿಂದ ಈ ಅಪರೂಪದ ಫೋಟೋ ತೆಗೆದು ಪ್ರಕಟಿಸಲಾಗಿದೆ.

ಸರಿ ಉತ್ತರ ತಕ್ಷಣ ನೀಡಿದವರು: ರಾಘವೇಂದ್ರ ಜೋಷಿ, ಸುಘೋಷ್ ನಿಗಳೆ, ಎಂ ಜಿ ರಾಧಿಕಾ

n741849223_2053806_8178


‍ಲೇಖಕರು avadhi

October 13, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. ಶ್ರೀವತ್ಸ ಜೋಶಿ

  ರಾಘವೇಂದ್ರ ಜೋಶಿ ಮತ್ತು ಸುಘೋಷ್ ನಿಗಳೆ ಅವರ ಉತ್ತರಗಳನ್ನು ನೀವು “ತಕ್ಷಣ ಸರಿ ಉತ್ತರ ನೀಡಿದವರು” ಎಂದು ಪರಿಗಣಿಸುವುದು ಸರಿಯಲ್ಲ. ಏಕೆಂದರೆ ಅವರು ಉತ್ತರ ಹೇಳುವುದರ ಜತೆಗೆ ಪ್ರಶ್ನಾರ್ಥಕ ಚಿಹ್ನೆಯನ್ನೂ ಸೇರಿಸಿ ತಮ್ಮ lack of confidence ವ್ಯಕ್ತಪಡಿಸಿದ್ದಾರೆ. “ಅಂದಾಜಿನಲ್ಲಿ ಹೊಡೆದ ಗುಂಡು ತಾಗಿತು” ಎಂದಷ್ಟೇ ಅವನ್ನು ಪರಿಗಣಿಸಬಹುದು.
  ===
  ಇಲ್ಲಿ ವ್ಯಕ್ತಿನಿಷ್ಠ ಟೀಕೆಯ ಉದ್ದೇಶವಲ್ಲ ನನ್ನದು. ರಾಘವೇಂದ್ರ ಜೋಶಿ ಮತ್ತು ಸುಘೋಷ್ ನಿಗಳೆ ಅವರಿಂದ ನನಗೇನೂ ಆಗಿಲ್ಲ (ಅವರೂ ನನ್ನ ಸ್ನೇಹಿತರೇ!). ಆದರೆ ಕ್ವಿಜ್ ಉತ್ತರಗಳನ್ನು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಉತ್ತರಿಸುವುದು ಒಳ್ಳೆಯ ಪರಿಪಾಠವಲ್ಲ ಎಂದು ಪ್ರತಿಪಾದಿಸಲು ನಾನಿದನ್ನು ಬರೆದಿದ್ದೇನೆ. ಉತ್ತರ ಸರಿಯಿರಲಿ, ತಪ್ಪಿರಲಿ – ಅದನ್ನು affirmative ಆಗಿ ಹೇಳಬೇಕು. ಆಗಲೇ ನಿಮ್ಮ ಆತ್ಮವಿಶ್ವಾಸ/ಆತ್ಮಾಭಿಮಾನ ಅದರಲ್ಲಿ ಸಂಪೂರ್ಣವಾಗಿ ಪ್ರತಿಬಿಂಬಿತವಾಗುವುದು.
  ===
  ಈ ಕಾಮೆಂಟನ್ನು ಓದಿ “ಇವನೊಬ್ಬ headstrong” ಎಂದು ಯಾರಿಗಾದರೂ ಅನಿಸಿದರೆ ದೇವರು ಅವರಿಗೂ ಒಳ್ಳೆಯದನ್ನೇ ಮಾಡಲಿ 🙂

  ಪ್ರತಿಕ್ರಿಯೆ
 2. ಸುಘೋಷ್ ಎಸ್. ನಿಗಳೆ

  ಆತ್ಮೀಯ ಶ್ರೀವತ್ಸ ಜೋಶಿ ಸರ್,
  ನಮಸ್ತೆ. ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ ಎಂದು ಹೇಳಲು ಕಷ್ಟವಾಗುತ್ತದೆ.
  ಮೊದಲನೆಯದಾಗಿ ಇದು ಕ್ವಿಜ್ ಎಂದು ಯಾರು ಪರಿಗಣಿಸಿದ್ದಾರೆ ಗೊತ್ತಿಲ್ಲ. ನಾನಂತೂ ಹಾಗೆ ಪರಿಗಣಿಸಿಲ್ಲ. ‘ಅವಧಿ’ಯೂ ಸಹ ಇದನ್ನು ಕ್ಜಿಜ್ ಎಂದು ಘೋಷಿಸಿಕೊಂಡಿಲ್ಲ. ಗೆದ್ದವರಿಗೆ ಬಹುಮಾನ ನೀಡುವುದಿಲ್ಲ. ಓದುಗರ ಮಾಹಿತಿ ಹೆಚ್ಚಿಸುವ, ಜ್ಞಾನವನ್ನು ವಿಸ್ತರಿಸುವ, ಅಪರೂಪದ ವ್ಯಕ್ತಿಗಳನ್ನು ವಿಶಿಷ್ಟ ಬಗೆಯಲ್ಲಿ ಪರಿಚಯಿಸುವ ಒಂದು ಮೆಥಡ್ ಎಂದಷ್ಟೇ ನಾನು ಇದನ್ನು ಅಂದುಕೊಂಡಿರುವುದು.
  ಒಂದು ವೇಳೆ ಇದನ್ನು ಕ್ಜಿಜ್ ಎಂದು ಪರಿಗಣಿಸಿದರೂ ಸಹ ಉತ್ತರಗಳನ್ನು ಹೀಗೆಯೇ ಹೇಳಬೇಕು ಎಂಬ ನಿಯಮವೇನಿಲ್ಲ. “ಉತ್ತರ ಸರಿಯಿರಲಿ, ತಪ್ಪಿರಲಿ ಅದನ್ನು ಅಫರ್ಮೇಟಿವ್ ಆಗಿ ಹೇಳಬೇಕು. ಇದರಿಂದ ಆತ್ಮವಿಶ್ವಾಸ, ಆತ್ಮಾಭಿಮಾನ ಸಂಪೂರ್ಣವಾಗಿ ಪ್ರತಿಬಿಂಬಿತವಾಗುತ್ತದೆ” ಎಂದು ತಾವು ಹೇಳಿದ್ದೀರಿ. ಆದರೆ ನನ್ನ ಪ್ರಕಾರ ವಿಷಯ ಗೊತ್ತಿಲ್ಲದಿದ್ದರೂ ಅಥವಾ ಆ ಬಗ್ಗೆ ನಿಖರತೆ ಇಲ್ಲದಿದ್ದರೂ ಅಫರ್ಮೇಟಿವ್ ಆಗಿ ಹೇಳುವುದು ಓವರ್ ಕಾನ್ಫಿಡೆನ್ಸ್ ತೋರಿಸುತ್ತದೆ. ಆತ್ಮವಿಶ್ವಾಸವನ್ನಲ್ಲ. ಶಾಲಾ ಕ್ವಿಜ್ ಗಳಿಂದ ಹಿಡಿದು ಯಾವುದೇ ಉನ್ನತ ಮಟ್ಟದ ಕ್ವಿಜ್ ಗಳಲ್ಲಿ ಕೂಡ ಸ್ಪರ್ಧಿಗಳು ಹಲವು ಬಾರಿ ಉತ್ತರ ನೀಡಿ, ಇದು ತಮ್ಮ ಗೆಸ್ ಅಷ್ಟೇ ಎಂದೂ ಸೇರಿಸುತ್ತಾರೆ. ಹೀಗೆ ಮಾಡುವುದು ವಿನಯತೆಯನ್ನು ತೋರಿಸುತ್ತದೆಯೆ ಹೊರತು, ಲ್ಯಾಕ್ ಆಫ್ ಕಾನ್ಫಿಡೆನ್ಸ್ ಅಲ್ಲ. ‘ನನಗೆ ಈ ಉತ್ತರ ಗೊತ್ತಿಲ್ಲ. ಆದರೂ ಪ್ರಯತ್ನಿಸಿದ್ದೇನೆ. ದಯವಿಟ್ಟು ಸರಿ ಉತ್ತರ ನೀಡಿ. ಸರಿಯಿದ್ದರೆ ಸಂತೋಷ. ಇಲ್ಲದಿದ್ದರೆ ನನ್ನ ಮಾಹಿತಿಯನ್ನು ಅಪ್ ಗ್ರೇಡ್ ಮಾಡಿಕೊಳ್ಳುವೆ’ ಎಂಬುದಷ್ಟೇ ಈ ಪ್ರಶ್ನಾರ್ಥಕ ಚಿಹ್ನೆಯ ಸಂದೇಶ.
  ಇನ್ನು ತಾವು ಕೂಡ ಕಾಮೆಂಟ್ ಏನೋ ಹಾಕಿದ್ದೀರಿ. ಆದರೆ ಕೊನೆಯಲ್ಲಿ “ಇವನೊಬ್ಬ ಹೆಡ್ ಸ್ಟ್ರಾಂಗ್ ಎನಿಸಿದರೆ ದೇವರು ಅವರಿಗೂ ಒಳ್ಳೆಯದನ್ನೇ ಮಾಡಲಿ” ಎಂದು ಸೇರಿಸಿದ್ದೀರಿ. ಸರ್, ನಿಮಗೆ ನಿಮ್ಮ ಅಭಿಪ್ರಾಯದ ಮೇಲೆ ಕಾನ್ಫಿಡೆನ್ಸ್ ಇದ್ದಿದ್ದರೆ ಈ ಸಾಲು ಅನಗತ್ಯವಾಗಿತ್ತು ಅಲ್ಲವೆ?
  ಏನೀ ವೇ…ಅವಧಿ ಏನಾದರೂ ಇಂತಹ ಪ್ರಶ್ನೆಗಳಿಗೆ ಕ್ಯಾಶ್ ಪ್ರೈಜ್ ಘೋಷಿಸಿದಾಗ ನೋಡೋಣ.
  ವಿಶ್ವಾಸಿ,
  ಸುಘೋಷ್ ಎಸ್. ನಿಗಳೆ.

  ಪ್ರತಿಕ್ರಿಯೆ
  • ಶ್ರೀವತ್ಸ ಜೋಶಿ

   🙂
   ಪ್ರೀತಿಯ ಸುಘೋಷ್ ನಿಗಳೆ,
   ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ. ಅದಕ್ಕೆ ಕಷ್ಟಪಡಬೇಕಾಗಿರಲಿಲ್ಲ. ಚೆನ್ನಾಗಿ ಮನದಟ್ಟಾಗುವಂತೆಯೇ ತಿಳಿಸಿದ್ದೀರಿ, ಸಂತೋಷ.
   🙂

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: