ಅಗ್ನಿ ಶ್ರೀಧರ್ ಅಲ್ಲ., ಹಶ್ಮಿ ಅಲ್ಲ..ಕಡಿದಾಳ್ ಶಾಮಣ್ಣ,
ಇವರು ಅಗ್ನಿ ಶ್ರೀಧರ್  ಅಲ್ಲ  . ಹಶ್ಮಿಸಹಾ ಅಲ್ಲ. ಇವರು ಕಡಿದಾಳ್ ಶಾಮಣ್ಣ. ಎರಡನೇ ರೌಂಡ್ ನಲ್ಲಿಯೂ ಸುಮಾರು ಮಂದಿ ಮುಗ್ಗರಿಸಿದ್ದಾರೆ.
ಈಗ ನೋಡಿ-

‍ಲೇಖಕರು avadhi

December 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

 1. basavaraju

  ನಮ್ಮ ನೆಚ್ಚಿನ ನಾಗರಿಕ, ಮನುಷ್ಯ ಕಡಿದಾಳು ಶಾಮಣ್ಣ

  ಪ್ರತಿಕ್ರಿಯೆ
 2. akshatha.k

  ಶಾಮಣ್ಣ ಅವರ ಈ ಫೋಟೋ ನೋಡುತಿದ್ದಂತೆ ನಂಗೆ ನೆನಪಾದದ್ದು ಮೊನ್ನೆ ಮೊನ್ನೆ `ಆ ದಶಕ ‘ಪುಸ್ತಕದ ಮುಖಪುಟಕ್ಕೆ ಬಳಸಿಕೊಳ್ಳಲು ಅವರದೊಂದು ಫೋಟೋ ಗಾಗಿ ನಾನು ವಾರಗಟ್ಟಲೆ ಹುಡುಕಾಟ ನಡೆಸಿದರೂ ಕೊನೆಗೂ ಅವರ ಮನೆಯಲ್ಲಿ ನಂಗೆ ಅವರೊಬ್ಬರೇ ಇರುವ ಒಂದು ಫೋಟೋ ಕೂಡ ಸಿಕ್ಕಲಿಲ್ಲ ಎಂಬುದು . ಅವರ ಮನೆಯ ಒಂದು ಕೋಣೆಯ ತುಂಬಾ ಜಮಾನದ ವಿವಿದ ಮಾದರಿಯ ಕ್ಯಾಮರಾಗಳು ಮತ್ತು ಶಾಮಣ್ಣ ಕ್ಯಾಮರ ಹಿಡಿದ ದಿನದಿಂದ ಇಂದಿನ ವರೆಗೂ ತೆಗೆದ ಫೋಟೋಗಳು ಶ್ರೀದೇವಿಯವರ ಶ್ರಮದಿಂದ ನೀಟಾಗಿ ಜೋಡಿಸಿಟ್ಟಿರುವ ಸ್ತಿತಿಯಲ್ಲಿ ಕಾಣ ಸಿಗುತ್ತದೆ . ಆ ಫೋಟೋಗಳ ಆಲ್ಬಮ್ ಅನ್ನು ಒಂದೊಂದಾಗಿ ಬಿಡಿಸಿ ನೋಡುತ್ತಾ ಹೋದರೆ ಅವೇ ಒಂದೊಂದು ಕಥೆ ಹೇಳುತ್ತವೆ. ರೈತಸಂಘ ದ ವಿವಿದ ಹೋರಾಟಗಳು , ನೀನಾಸಂ ಶಿಬಿರಗಳು , ಮಂತ್ರ ಮಾಂಗಲ್ಯ ಸರಳ ಮದುವೆಗಳು , ಕುವೆಂಪು, ತೇಜಸ್ವಿ, ನಂಜುಂಡಸ್ವಾಮಿ ತೀರಿಹೋದಾಗಿನ ನೋವಿನ ಗಳಿಗೆಗಳು, ನೆರೆ, ಬರ, ಹಕ್ಕಿ , ಹೂವು , ಕವಿ , ಹೋರಾಟಗಾರರು ಮತ್ತು ಜನಸಾಮಾನ್ಯರು ಎಲ್ಲರ ಭಾವಚಿತ್ರಗಳ ದೃಶ್ಯ ಕಾವ್ಯ ಗಳು ಅಲ್ಲಿ ನಮಗೆ ಲಬ್ಯವಿದೆ . ನಾನು ತಮಾಷೆ ಮಾಡೋದಿದೆ ಶಾಮಣ್ಣ ಅವ್ರೆ, ಒಂದು ವೇಳೆ ನಿಮ್ಮ ಕಣ್ಣಿಗೆ ಬೀಳದೆ ಇದ್ರೂ ನಿಮ್ಮ ಕ್ಯಾಮರದ ಕಣ್ಣಿಂದ ಮಾತ್ರ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ .ಅಂತ . ಆದರೆ ಅಸ್ಟೆಲ್ಲ ಫೋಟೋಗಳ ಮದ್ಯೆ ಶಾಮಣ್ಣ ಹುಡುಕಿದರೂ ಸಿಗುವುದಿಲ್ಲ . ಎಲ್ಲೋ ಅವರಿವರು ಒತ್ತಾಯ ಮಾಡಿ ಪಕ್ಕದಲ್ಲಿ ನಿಲ್ಲಿಸಿಕೊಂಡಾಗಿನ ಕೆಲವೊಂದು ಫೋಟೋ ಬಿಟ್ಟರೆ ಮತ್ತೆಲ್ಲೂ ಅವರು ಇಲ್ಲ. ನಿಮ್ಮದೊಂದು ಫೋಟೋ ಇಲ್ಲವಲ್ಲ ಶಾಮಣ್ಣ ಅವ್ರೆ ಎಂದು ನಾನು ಲೊಚಗುಟ್ಟಿದರೆ ಅವ್ರು ಅಯ್ಯೋ ಮಾರಾಯ್ರೆ ನಾನೇ ಫೋಟೋಗೆ ಫೋಸ್ ಕೊಡಕ್ಕೆ ಹೋಗಿದ್ರೆ ಇವೆಲ್ಲ ಫೋಟೋನೇ ಇರ್ತಿರಲಿಲ್ಲವಲ್ರಿ ಎನ್ನುವರು . ಅಂತು ಕೊನೆಗೂ ಅವರ ಬಳಿ ಅವರದ್ದು ಒಂದು ಸಿಂಗಲ್ ಫೋಟೋ ಸಿಗದೇ ಹೋದಾಗ ( ಅವ್ರು ಈ ಬಗ್ಗೆ ಬಹಳ ನಿರುಮ್ಮಳವಾಗಿ ಇದ್ದರು. ಫೋಟೋ ಸಿಗದೇ ಹೋದ್ರೆ ಇವ್ರು ಮುಖಪುಟಕ್ಕೆ ಒಂದು ಹಕ್ಕಿಯದೋ , ಹಸಿರಿನದೋ ಚಿತ್ರ ಬಳಸಿಕೊಳುತಾರೆ ಅಂತ ) ಪತ್ರಿಕಾ ಛಾಯಾಗ್ರಾಹಕ ನಂದನ್ ನಮ್ಮ ನೆರವಿಗೆ ಬಂದು ತಮ್ಮ ಸಂಗ್ರಹದಲ್ಲಿರುವ ಶಾಮಣ್ಣ ಅವ್ರ ಭಾವಚಿತ್ರವನ್ನು ಒದಗಿಸಿದರು .
  ಈಗ ನೋಡಿದ್ರೆ ಅವಧಿ ಬಳಿಯಲ್ಲೂ ಶಾಮಣ್ಣ ಅವ್ರ ಒಳ್ಳೆಯ ಫೋಟೋ ಇದ್ಯಲ್ಲ . ಮುಂದೆ ಅಸ್ಟು ತಲೆಕೆಡಿಸಿಕೊಳ್ಳುವ ಪ್ರಮೇಯ ಇಲ್ಲ . ಆದರೆ ಈ ಫೋಟೋನಲ್ಲಿ ಶಾಮಣ್ಣ ಅವ್ರ ಹೆಗಲ ಮೇಲೆ ಹಸಿರು ಶಾಲು ಇದ್ಯಲ್ವ ? ಇದ್ದೆ ಇರ್ತದೆ . ಆದರೂ ಕೇಳಿದೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: