ಇ೦ದು ಸ೦ಜೆ

ಕಿನ್ನುಡಿಯ ಬೆಳಕಲ್ಲಿ ನಾಟಕ ಪ್ರದರ್ಶನ

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಿನ್ನುಡಿಯ ಬೆಳಕಲ್ಲಿ ಎಂಬ ಹೊಸ ನಾಟಕವೊಂದನ್ನು ಸಿದ್ದಪಡಿಸಿದೆ. ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ 29ನೇ ಜೂನ್ 2012 ಶುಕ್ರವಾರ ಸಂಜೆ 7ಕ್ಕೆ ಪ್ರದರ್ಶನವಾಗುತ್ತಿದೆ. ಪತ್ರಕರ್ತೆ ಡಾ. ವಿಜಯಾ ಅತಿಥಿಗಳಾಗಿ ಪಾಲ್ಗೊಳ್ಳುವರು. ಒಡೆದು ಆಳುವ, ಮಠಮಾನ್ಯಗಳಿಗೆ ಕೋಟಿ ಕೋಟಿ ಸುರಿಯುತ್ತಿರುವ ಇಂದಿನ ರಾಜಕಾರಣದ ಸಂದರ್ಭದಲ್ಲಿ ತಳ ಸಮುದಾಯಗಳು ತಮ್ಮ ಮೂಲವನ್ನರಸುತ್ತಾ ಹೊರಟಾಗ ಅವುಗಳ ಮೂಲದ ಬೇರು ಒಂದೇ ಎಂಬ ಸುಳಿವು ಸಿಕ್ಕಿದೆ. ಕಾಲಕಾಲಕ್ಕೆ ಕಾಣಿಸಿಕೊಳ್ಳುತ್ತಿರುವ ಕಾಲಭೈರವನನ್ನು ನಾವು ನೆನೆಯದಿದ್ದರೆ ನಾನೆಂಬ ಬ್ರಹ್ಮರ ಅಹಂಕಾರದ ಬೀಜಗಳು ಮೊಳೆತು ಹೆಮ್ಮರವಾಗುತ್ತವೆ. ಈ ಅಹಂಗೆ ಕೊಡಲಿಯಾಗದಿದ್ದರೆ ತಳ ಸಮುದಾಯಗಳಿಗೆ ಉಳಿಗಾಲವಿಲ್ಲ. ಅಹಂಕಾರದ ಬೆಂಕಿಯನ್ನು ನಂದಿಸಲು ಕಾಲಭೈರವನ ಜಲಸಿಂಚನದ ಅಗತ್ಯವಿದೆ. ಈ ಕಿನ್ನುಡಿಯ ಬೆಳಕಲ್ಲಿ ಆ ಜಲಮೂಲವನ್ನು ಹುಡುಕ ಹೊರಟಿದ್ದೇವೆ ಸುಮಾರು 20 ಮಂದಿ ಕಲಾವಿದರಲ್ಲಿ 15 ಜನ ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಅನೇಕರು ಮೊತ್ತಮೊದಲಿಗೆ ರಂಗವೇರುತ್ತಿರುವುದು ವಿಶೇಷ. ಅಹಂ ಎಂಬುದು ಮನುಷ್ಯರಲ್ಲಿ ಮಾತ್ರವೇ ಇರುವಂತಹುದಲ್ಲ; ದೇವತೆಗಳನ್ನೂ ಅದು ಬಿಟ್ಟಿಲ್ಲ.. ಎಂಬ ವಿವರಗಳು ತೆರೆದುಕೊಳ್ಳುತ್ತವೆ. ಎಲ್ಲವನ್ನೂ ಸೃಷ್ಟಿಸುವ ಬ್ರಹ್ಮ ತನಗೆ ಪೂಜೆಯೇ ಇಲ್ಲವೆಂದು ಹಲವತ್ತುಕೊಂಡರೆ ಅವನ ಜ್ಞಾನವೆಂಬ ಅಹಂಕಾರದ ಐದನೇ ತಲೆಯನ್ನು ಚಿವುಟಿ ಹಾಕಲು ಹರಿಹರ ಪುತ್ರ ಅಕಾಲ ಭೈರವ ಬರಬೇಕಾಗುತ್ತದೆ. ಕೈಗಂಟಿದ ಬ್ರಹ್ಮ ಕಪಾಲದಿಂದ ಅಪಾರ ನೋವು ಅನುಭವಿಸುವ ಅಕಾಲಭೈರವ ಅದರ ಮುಕ್ತಿಗಾಗಿ ಭೋಲೋಕಕ್ಕೆ ಬಂದು ಆದಿಚುಂಚನಗಿರಿಯಲ್ಲಿ ನೆಲೆನಿಲ್ಲುವುದು ಕಥೆಯ ಸಾರ. ರಚನೆ ಡಾ. ಎಂ. ಬೈರೇಗೌಡ, ನಿರ್ದೇಶನ ರಾಮಕೃಷ್ಣ ಬೆಳ್ತೂರ್, ಸಂಗೀತ ರಾಜಗುರು ಹೊಸಕೋಟಿ, ನಿರ್ಮಾಣ ಕೆ.ಎಸ್.ಎಂ. ಟ್ರಸ್ಟ್, ನಿರ್ವಹಣೆ ಲವ ಆರ್., ಬೆಳಕು ಎಸ್. ಮಹಾದೇವಸ್ವಾಮಿ. ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ಗಳಿಗಾಗಿ 9448102158 ಸಂಖ್ಯೆಯನ್ನು ಸಂಪರ್ಕಿಸಲು ಕೆ.ಎಸ್. ಎಂ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ನಾಟಕದ ಕೆಲವು ದೃಶ್ಯಗಳು ನಿಮಗಾಗಿ.  ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery order="DESC" columns="4" orderby="ID"]    ]]>

‍ಲೇಖಕರು G

June 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. D.RAVI VARMA

    ತುಂಬಾ ಸಂತೋಷವಾಯ್ತು ಈ ತರಹದ ನಾಟಕಗಳು ಬರಿ ಬ್ಯಾಂಗಲೋರ್ ಗೆ ಸೀಮಿತವಾಗೋದು ಬೇಡ ಸ್ವಾಮಿ ನಮ್ಮೊರಿಗೂ ಬನ್ನಿ ಇಲ್ಲಿ ನಾಟಕ ಜನ ನೋಡಲಿ ಅದರ ಜವಾಬ್ದಾರಿ ನಾವು ತಗೆದುಕೊಳ್ಳುತ್ತೇವೆ. ನಿಮ್ಮ ನಾಟಕಕ್ಕೆ ಹೃದಯಪೂರ್ವಕ ಶುಭಾಶಯಗಳು ನಿಮ್ಮ ನಾಟಕ ಹಾಗು ತಂಡವನ್ನು ಹೊಸಪೇಟೆಗೆ ಅಹವನಿಸುತ್ತ.,,,,
    ರವಿ ವರ್ಮ ಹೊಸಪೇಟೆ
    .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: