ಈವತ್ತೇ ಬೆಳಗ್ಗೆ ಬಂದು ತಲೆ ಮೇಲೆ ಬಿತ್ತಾ?

rajaram tallur low res profile

ರಾಜಾರಾಂ ತಲ್ಲೂರು

ಸಿಕ್ಕವರಿಗೆ ಸೀರುಂಡೆ ರಾಜಕೀಯ ಇದು. ಕಳೆದ ಐದು ವರ್ಷಗಳಿಂದೀಚೆಗೆ ನೀರಿಗಾಗಿ ಜಗಳಗಳು ನಮ್ಮ ಬದುಕನ್ನು ಆಕ್ರಮಿಸಿಕೊಳ್ಳುತ್ತಿರುವ ವೇಗ ಮತ್ತು ಪ್ರಮಾಣಗಳನ್ನು ಕಂಡರೆ, ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಪ್ಲಾನಿಂಗ್, ತಯಾರಿಗಳೆಲ್ಲ ಎಲ್ಲಿವೆ, ಅವೆಲ್ಲಾ ನಿಜಕ್ಕೂ ಇವೆಯಾ ಎಂಬ ಸಂಶಯ ಬರುತ್ತಿದೆ.

ಒಂದು ಲೆಕ್ಕಾಚಾರ ಕೇಳಿ. ಒಬ್ಬ ವ್ಯಕ್ತಿಗೆ ಒಂದು ದಿನದ ನೀರಿನ ಆವಶ್ಯಕತೆ 2-4 ಲೀಟರ್ ಗಳು. ಆದರೆ, ಅದೇ ಆ ವ್ಯಕ್ತಿಯ ಒಂದು avadhi-column-tallur-verti- low res- cropದಿನದ ಆಹಾರದ ಆವಶ್ಯಕತೆಯನ್ನು ಪೂರೈಸಲು 2000- 5000 ಲೀಟರ್ ನೀರಿನ ಆವಶ್ಯಕತೆ ಇರುತ್ತದೆ. ಒಂದು ಕೇಜಿ ಅಕ್ಕಿ ನಮ್ಮ ಅಡುಗೆ ಕೋಣೆಯೊಳಗೆ ಬರುವುದಕ್ಕೆ ಸುಮಾರು 3000 ಲೀಟರ್ ನೀರು ಆವಶ್ಯಕತೆ ಇರುತ್ತದೆ.

ವಾಸ್ತವ ಹೀಗಿರುವಾಗ, ನಾವು ಇಂತಹದೊಂದು ಕ್ರೈಸಿಸ್ ಗೆ ತಯಾರಾಗಿದ್ದೇವೆಯೆ? ನಮ್ಮ ಜನಸಂಖ್ಯೆ ಎಷ್ಟು? ನಮ್ಮಲ್ಲಿ ಲಭ್ಯ ಇರುವ ನೀರು ಎಷ್ಟು? ಇನ್ನು 20-30  ವರ್ಷಗಳಲ್ಲಿ ನಮ್ಮ ಜನಸಂಖ್ಯೆ ಎಷ್ಟು ಹೆಚ್ಚಾಗಲಿದೆ, ಆಗ ನಮಗೆ ಲಭ್ಯ ಇರುವ ನೀರು ಎಷ್ಟು? … ಈ ಎಲ್ಲ ಲೆಕ್ಕಾಚಾರಗಳು ಸರ್ಕಾರದ ಅಂಡಿನಡಿಯೇ ಲಭ್ಯವಿವೆ (ಕೋಷ್ಠಕ ನೋಡಿ).

ಹಾಗಾದರೆ ಸರ್ಕಾರ, ನಮ್ಮ ಕೇಂದ್ರ ಜಲ ಆಯೋಗ (CWC), ದೇಶದ ಉದ್ದಗಲಕ್ಕೂ ಇರುವ ರಾಶಿ ರಾಶಿ ವಿಶ್ವವಿದ್ಯಾನಿಲಯಗಳು- ಸಂಶೋಧನಾ ಕೇಂದ್ರಗಳು ಏನು ಮಾಡುತ್ತಿವೆ?

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಸಿರು ಕ್ರಾಂತಿಯೇ ಅಭಿವ್ರದ್ಧಿಗೆ ಮಂತ್ರ ಎಂದು ಅಕ್ಕಿ, ಕಬ್ಬುಗಳಂತಹ ಅತಿಯಾದ ನೀರು ಅಗತ್ಯ ಇರುವ ಬೆಳೆಗಳ ಮೇಲೆ ಅವಲಂಬಿತರಾಗುತ್ತ ಬಂದ ದೇಶ ನಮ್ಮದು. ಸಬ್ಸಿಡಿ ದರದ ವಿದ್ಯುತ್ತು, ಕಡಿಮೆ ವೆಚ್ಚದ ಪಂಪುಗಳ ಕಾರಣದಿಂದಾಗಿ ನದಿ ಪಾತ್ರದ ನೀರಾವರಿ ಭೂಮಿಯು ಹೀರಿದ ನೀರು ನಮ್ಮ ಜಲಮಟ್ಟದ ಮೇಲೆ ದುಷ್ಪರಿಣಾಮ ಬೀರಿದೆ. ಜೊತೆಗೆ ನಗರೀಕರಣ, ಅದರ ಜೊತೆಗೆ ಬರುವ ನೀರಿನ ಅತಿಬಳಕೆಗಳು  ನೀರಿನ ಲಭ್ಯತೆ-ಬಳಕೆಯ ಸಂತುಲನವನ್ನು ನಾಶಗೊಳಿಸಿವೆ.  ಇವುಗಳನ್ನೆಲ್ಲ ನಿರ್ಲಕ್ಷಿಸಿದ್ದರ ಪರಿಣಾಮ ಇಂದು ದಿನ ಬೆಳಗಾದರೆ ನೀರಿಗಾಗಿ ಯುದ್ಧದ ಮಾತುಗಳು ಕೇಳಿಬರುತ್ತಿವೆ.

cauveryಸಮಸ್ಯೆಯ ಆಳಕ್ಕಿಳಿದು ನೋಡಿದರೆ, ಆಘಾತ ನೀಡಬಲ್ಲ ಕೆಲವು ಸತ್ಯಗಳು ಅಡಗಿರುವುದು ಕೂಡಾ ಕಾಣಿಸುತ್ತದೆ. ವಿಶ್ವಬ್ಯಾಂಕಿನಂತಹ ಗ್ಲೋಬಲ್ ಹುಂಡಿ ವ್ಯವಹಾರಸ್ಥರಿಗೆ ಈ ಕುಡಿಯುವ ನೀರಿನಲ್ಲಿ, ಬಳಸುವ ವಿದ್ಯುತ್ತಿನಲ್ಲಿ “ಕಾಸು” ಕಾಣಿಸಿ ಒಂದು ದಶಕ ಕಳೆದಿದೆ. ಇವೆರಡು ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲು ಹುಲುಸಾದ ಕ್ಷೇತ್ರಗಳೆಂದು ಅವು ಪರಿಗಣಿಸಿವೆ. ಈ ಎರಡು ಕ್ಷೇತ್ರಗಳಲ್ಲಿ ಕ್ರೈಸಿಸ್ ಹುಟ್ಟದೆ ಅವು ಬದಲಾವಣೆ ಆಗಲಾರವು ಎಂಬ ಸತ್ಯ ಸರ್ಕಾರಕ್ಕೂ, ನೀತಿ ನಿರೂಪಕ ಬ್ಯುರಾಕ್ರಸಿಗೂ ಚೆನ್ನಾಗಿ ಅರಿವಿದೆ. ಹಾಗಾಗಿ “ಅನ್ನ ಹಳಸುವುದನ್ನು ಹಸಿದ ನಾಯಿಗಳು ಕಾಯುತ್ತಿವೆ!”

ದೇಶದ ಒಟ್ಟು ನೀರಿನ ಬಳಕೆಯಲ್ಲಿ 70%  ನೀರಾವರಿಯದು, 22% ಕೈಗಾರಿಕೆಗಳದು ಮತ್ತು 8%  ಮನೆವಾರ್ತೆಯ ಬಳಕೆಯದು. ನೀರಿನ ಬಗ್ಗೆ ನಾವು ಈ ತನಕ ನಂಬಿಕೊಂಡು ಬಂದದ್ದನ್ನೆಲ್ಲ ಕಳಚಿ ಹೊಸ ಕೋನದಿಂದ ನೋಡುವುದು ಈಗ ಅನಿವಾರ್ಯ. ಸರ್ಕಾರ ಸೂಕ್ತವಾದ ಕಾನೂನುಗಳ ಮೂಲಕ ಈ ಬಳಕೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸಾಧ್ಯವಾದರೆ, ಕ್ರಷಿ ಚಟುವಟಿಕೆಗಳ ಸುಸೂತ್ರ ಪ್ಲಾನಿಂಗ್ ಸಾಧ್ಯವಾದರೆ, ಪ್ರತೀ ಮನೆಯ ನೀರಿನ ಬಳಕೆಯಲ್ಲಿ ಶಿಸ್ತು ತರುವುದು ಸಾಧ್ಯವಾದರೆ ನಾಳೆ ಒಂದಕ್ಕೆ ನಾಲ್ಕು ಕಾಸುಕೊಟ್ಟು ಲೋಟೆ ನೀರು ಕೊಂಡು ಕುಡಿಯುವ ಪರಿಸ್ಥಿತಿ ಬರಲಾರದು; ನೂರು ಮನೆಗಳ ಬಳಕೆಗೆ ಸಾಕಾಗುವ ನೀರನ್ನು ತಮ್ಮ ಬಂಗಲೆಯ ಸ್ವಿಮಿಂಗ್ ಪೂಲಿನಲ್ಲಿ ಆಟವಾಡಲು ಬಳಸುವ ಸಿರಿವಂತರ, ಸಿನಿಮಾದವರ ಕೈಗೆ ನಮ್ಮ ದಿನಬಳಕೆಯ ನೀರು ಕಾಯುವ ಕೆಲಸವನ್ನು ಒಪ್ಪಿಸುವ ದೌರ್ಭಾಗ್ಯವೂ ಬಾರದು.

water-assesment

‍ಲೇಖಕರು Admin

September 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This