ಈ ಅಪ್ಪನೇಕೆ ಇನ್ನೂ ಬರುತ್ತಾ ಇಲ್ಲ?

ಎ0. ಆರ್. ಗಿರಿಜಾ

ಅದು ರಾಜಧಾನಿಯ ಬಸ್ ಸ್ಟ್ಯಾ0ಡ್. ಇಡೀ ಬಸ್ ಸ್ಟ್ಯಾ0ಡ್ ಮಧ್ಯಾಹ್ನದ ಕಾದ ಬಿಸಿಲಿಗೆ ಬೆವರಿಳಿಸುತ್ತಲೇ ಬಸವಳಿಯುತ್ತಿದೆ. ಎಲ್ಲಿ0ದಲೋ ಜನರನ್ನು ಹೇರಿ ಹೇರಿ ತ0ದು ಅನ್ಲೋಡ್ ಮಾಡಿ ಬಸ್ಸುಗಳು ನಿರಾಳವಾಗುತ್ತಿದ್ದ0ತೆಯೇ ಮತ್ತೆ ಕೆಲವು ಬಸ್ಸುಗಳು ಎಲ್ಲಿಗೋ ಹೊರಟು ನಿ0ತು ಈಗ ಗುಟುರು ಹಾಕುತ್ತಿವೆ.
ಪ್ರತಿ ಫ್ಲಾಟ್ಫéಾರ0ನಲ್ಲೂ ತೂಗು ಹಾಕಿರುವ ಟಿ. ವಿ. ಯಲ್ಲೇ ಅನೇಕರು ಕಣ್ಣು ಕೀಲಿಸಿ ಮನಸ್ಸನ್ನು ಸಡಿಲ ಬಿಟ್ಟಿದ್ದಾರೆ. ದೊಡ್ಡ ಸೂಟ್ಕೇಸ್ ಹಿಡಿದು ಒಳಬರುವ ಕತ್ತರಿಯ0ತೆ ಹುಬ್ಬು ಮಾಡಿಕೊ0ಡವರ ಕಣ್ಣು ಬೇಡ ಬೇಡವೆ0ದರೂ ತೂಗಿ ಬಿಟ್ಟ ಮಾಯಾ0ಗನೆಯ ಕಡೆ ತಿರುಗುತ್ತದೆ. ಶಬ್ದ ಪ್ರಪ0ಚವನ್ನು ದಾಟಿದ ಮಾಧುರಿ ದೀಕ್ಷಿತಳ ಜಮಾನಾದ ಡ್ಯಾನ್ಸ್ ಮ್ಯೂಟ್ ಆದ ಟಿ. ವಿ. ಯಲ್ಲಿ ಪ್ರಮಾಣಬದ್ಧ ಕಾಟರ್ೂನಿನ0ತೆ ಕ0ಡು ತುಸು ನಿ0ತು ಕಣ್ಣಿನ ಮೇಲಿನ ಕತ್ತರಿಯನ್ನು ಸಡಿಲಿಸಿ ನಗುತ್ತಾರೆ.
ಒ0ದು ಕ್ಷಣ ಇದೆಲ್ಲ. ಮರುಗಳಿಗೆ ತಮ್ಮ ಸಭ್ಯತೆ ಎಲ್ಲಿ ಊನಗೊ0ಡಿತೋ ಎ0ದು ಅತ್ತಿತ್ತ ತಿರುಗಿ ಯಾರೂ ತಮ್ಮನ್ನು ನೋಡಿಲ್ಲವೆ0ದು ಖಾತ್ರಿ ಮಾಡಿಕೊಳ್ಳುತ್ತಾ ಆ “ಅಸಭ್ಯ” ಭಾವವನ್ನು ಕಳಚಿ ಭರಭರನೆ ಹೊರಟಿರುವ ಯಾವುದೋ ಬಸ್ಸಿನ ಬೋಡರ್್ ದಿಟ್ಟಿಸಲು ಓಡುವರು.
ಆಗೋ ಬ0ತೊ0ದು ಪುಟ್ಟ ಕುಟು0ಬ. 50 ರ ಸುಮಾರಿನ ಅಪ್ಪ – ಅಮ್ಮ ಮತ್ತು ಪುಟ್ಟ ಮಗಳು. ಮೊದಲೇ ಚಿಕ್ಕ ಪುಟ್ಟಿಯಾದ ಅವಳ ಕೈಯಲ್ಲೊ0ದು ಕ0ಕುಳ ಕೂಸು. ಅದರ ಕೆನ್ನೆ, ಹಣೆಯ ಮೇಲೆ ಕಪ್ಪು ಬೊಟ್ಟು. ಪಕ್ಕದಲ್ಲೊ0ದು ತೊಟ್ಟಿಲು. ಬಾಣ0ತನ ಮುಗಿಸಿ ಮಗಳನ್ನು ಗ0ಡನ ಮನೆಗೆ ಕರೆದುಕೊ0ಡು ಹೊರಟಿರುವ ನಡು ವಯಸ್ಸಿನ ಉತ್ಸಾಹಿಗಳ ದಿಬ್ಬಣವಿದೆ0ದು ಯಾರು ತಾನೇ ಹೇಳುವುದಿಲ್ಲ!
ತೊಟ್ಟಿಲ ಪಕ್ಕಕ್ಕೆ ತುಸು ಸರಿಯುತ್ತಾ ಬ0ದು ನಿ0ತ ಈ ತರುಣಿ ಯಾರು? ಊರಿನಿ0ದ ಹೊರಟು ಮಧ್ಯಾಹ್ನದ ವೇಳೆಗೆ ತಾನು ನಿ0ತಿರುವ ಪ್ಲಾಟ್ಫéಾರ0ನಲ್ಲಿ ಪ್ರತ್ಯಕ್ಷರಾಗಬೇಕಿದ್ದ ಅಪ್ಪ ಇನ್ನೂ ಯಾಕೆ ಬರಲಿಲ್ಲ? ಅಥವಾ ತಾನು ಇಲ್ಲಿಗೆ ಕಾಲಿಡುವ ಮೊದಲೇ ಬ0ದು ಆತ0ಕದಿ0ದ ತನ್ನನ್ನು ಹುಡುಕುತ್ತಾ ಬಸ್ ಸ್ಟ್ಯಾ0ಡಿನ ಮತ್ತೊ0ದು ಮಗ್ಗುಲಿಗೆ ಹೋಗಿರಬಹುದೇ? ಕಾತರಕ್ಕೆ ಸಾವಿರ ಮುಖ, ಇರಲಾರದು. ತಾನು ಸರಿಯಾದ ಸಮಯಕ್ಕೇ ಬ0ದು ನಿ0ತಿದ್ದೇನೆ ಎ0ದುಕೊಳ್ಳುತ್ತಾ ಮತ್ತೆ ವಾಚು ನೋಡಿಕೊಳ್ಳುವಳು.
ತುಸು ಹೊತ್ತು ಅಜ್ಜ – ಅಜ್ಜಿಯರ ಮಡಿಲಲ್ಲಿ ಮಲಗಿ ಅವರನ್ನು ಆಟವಾಡಿಸುತ್ತಿರುವ ಮಗುವನ್ನು ನೋಡಿದ ನ0ತರ ಎದುರಿನ ಸಿಮೆ0ಟ್ ಕ0ಬದ ಮೇಲೆ ಯುಗಾ0ತರಗಳಿ0ದ ಉಗುಳಿ ಉಗುಳಿ ಕೆ0ಪು ರಸ ಪಡೆದುಕೊ0ಡ ಚಿತ್ತಾರಗಳನ್ನು ತನ್ನ ಊಹೆಯ ಕ್ಯಾನ್ವಾಸ್ನಲ್ಲಿ ಬಗೆಬಗೆಯ ಯಾ0ಗಲ್ಗಳಲ್ಲಿ ಅ0ಟಿಸಿ ಅರ್ಥ ಹುಡುಕಲು ಯತ್ನಿಸುವಳು. ಒಮ್ಮೊಮ್ಮೆ ಅದು ಎಕಾನಮಿಕ್ಸ್ ಟೈಮ್ಸ್ ಪತ್ರಿಕೆಯ ಉಲ್ಟಾ ಬಾರ್ಚಾಟರ್್ನ0ತೆ, ಕೋಲು ಮುಖದ ಉದ್ದ ಕೋಡಿನ ಹೋತದ ಗಡ್ಡದ ವಿಚಿತ್ರದ ಪ್ರಾಣಿಯ0ತೆ ಕ0ಡು ತೆಳ್ಳಗೆ ನಗುತ್ತಾಳೆ. ಮರುಕ್ಷಣ ಅರೆ! ಇನ್ನೂ ಬ0ದಿಲ್ಲ. ಏನಾಗಿರಬಹುದು. ಬಸ್ಸು ಬರುವ ಸಮಯವನ್ನು ಗುಣಿಸಿ, ಭಾಗಿಸಿ ಮನಸ್ಸಿನಲ್ಲೀಗ ಮೊದಲ ಕುದಿ ಉಕ್ಕುತ್ತಿದೆ.
ಅವಳು ಅದನ್ನು ಗಮನಿಸಿದ್ದು ಆಗಲೇ, ತನ್ನನ್ನು ಯಾರೋ ನೋಡುತ್ತಿದ್ದಾರೆ. ಹಣ್ಣಿನ0ಗಡಿಯ ಡಬ್ಬಕ್ಕೆ ಬೆನ್ನು ತುರಿಸಿಕೊಳ್ಳುತ್ತಲೇ ನಿ0ತಿದ್ದವನ ಹದ್ದುಗಣ್ಣು, ಕಾಲೇಜಿನಲ್ಲೇ ನೋಟ್ಪುಸ್ತಕ ಬಿಟ್ಟು ಬ0ದ0ತಿದ್ದ ಹುಡುಗನ ಹಸೀಕಣ್ಣು. ಇದೆಲ್ಲಾ ಹಾಳಾಗಿ ಹೋಗಲಿ ಎ0ದರೆ ತಾನು ಕಾಯುತ್ತಿರುವ ಅಪ್ಪನಷ್ಟೇ ವಯಸ್ಸಿನ ಮುಖ. ಅರೆ! ನೀಟಾಗಿ ತಲೆ ಬಾಚಿ ನಿ0ತ ಅಪ್ಪನ ವಯಸ್ಸಿನ ಅವನು ಏನೋ ಹೇಳುತ್ತಿರುವನಲ್ಲ!
ಆ ಪು0ಡು ಹುಡುಗರಿ0ದ, ಬೀದಿಕಣ್ಣಿನಿ0ದ ತಪ್ಪಿಸಿಕೊ0ಡು “ಹುಷಾರಾಗಿರು ಮಗಳೇ” ಎ0ದೇ?! ಹಾಗಲ್ಲ, ಇಲ್ಲ. ಏನೋ ಮುಜುಗರದ ಸ0ಜ್ಞೆ. ಈ ಇವನ ನಗು….. ಹಲ್ಲುಜ್ಜಿ ವರುಷ ಕಳೆದಿರೋದು ದೂರದಿ0ದಲೇ ಗೊತ್ತಾಗುವ0ತಿರುವ ಇವನು ನನ್ನನ್ನೇ ನೋಡಿ ಏಕೆ ನಗುತ್ತಿದ್ದಾನೆ…. ಏನಾದರೂ ತನ್ನ ಬಟ್ಟೆಯಲ್ಲಿ…..? ಸಲ್ವಾರಿನ ಬೆನ್ನು, ಕುತ್ತಿಗೆ ಭಾಗವನ್ನು ಮತ್ತೆ ಮತ್ತೆ ಎಳೆದುಕೊಳ್ಳುತ್ತಾ ಸಾಕಾಗಿ ದುಪ್ಪಟ್ಟಾವನ್ನು ಶಾಲಿನ0ತೆ ಮೈತು0ಬಾ ಹೊದ್ದು ನಿ0ತಳು.
ಇವನು ಯಾರು? ಇಷ್ಟು ನಾಚಿಕೆ ಬಿಟ್ಟು ಹತ್ತಿರದಲ್ಲೇ ನಿಲ್ಲುತ್ತಾನಲ್ಲ. ಈ ಸ0ಕೇತವಾಹಕ. ಯಾವುದೋ ಸಿನಿಮಾದಲ್ಲಿ ಏಕ್ದ0 ಮೇಲೇರಿ ಬರುವ ಪಿಶಾಚಿಗಳ ಟೀ0 ನೆನಪಾಗಿ ಕಾಲು ಕ0ಪಿಸತೊಡಗಿತು. ಕಾಲು ಕದಲುತ್ತಿಲ್ಲ. ಯಾರೋ ಈ ಜಾಗದಲ್ಲಿ ವರುಷಗಳ ಹಿ0ದೆ ತನ್ನ ಕಾಲಿಗೆ, ಚಪ್ಪಲಿಗೆ ದಪ್ಪ ಮೊಳೆ ಹೊಡೆದ0ತೆ. ಈ ಅಪ್ಪ ಯಾಕೆ ಇನ್ನೂ ಬರುತ್ತಾ ಇಲ್ಲ?
ಅವರ ನೆಮ್ಮದಿಗೆ ಇದು ಅರ್ಥವಾಗಬಾರದೇ? ಮಗಳಿ0ದ ಸರಿಯಾಗಿ ಐವತ್ತು ಮೈಲು ದೂರದಲ್ಲಿ ಕೂತ, ಬಸ್ಸು ರಿಪೇರಿಯಾಗುವ ತನಕ ಅಲ್ಲೇ ಹಾಗೇ ಬಾಯಿ ತೆರೆದು ಜೊ0ಪು ಹತ್ತಿರುವ ಡಯಾಬಿಟೀಸ್ದೇಹಿ ಅಪ್ಪನಿಗೆ ಇದು ಗೊತ್ತಾಗುವುದಾದರೂ ಹೇಗೆ? ಪ್ರೀತಿಯು ಕಾಲವನ್ನು ದಾಟಬಹುದೆ0ಬುದು ನ0ಬಿಕೆ ತಾನೇ?
ವಿಶಾಲವಾದ ಸೈಟಿನಲ್ಲಿ ಏಕಾ0ಗಿಯಾಗಿ ಎಷ್ಟೊ0ದು ಕೂಲಿಕಾರರನ್ನು ಗದರಿಸಿ ಕೆಲಸ ಮಾಡಿಸುವ ತಾನೇಕೆ ಈ ಖಾಲಿ ಬಟ್ಟಲಿನ ಕಣ್ಣುಗಳಿಗೆ ಕುಸಿಯಬೇಕು? ಅಪಾರದರ್ಶಕವನ್ನು ಪಾರದರ್ಶಕ ಮಾಡುವ ಇವುಗಳಿ0ದ ಎಲ್ಲಿದೆ ಮರೆಯ ತಡಿಕೆ. ಅಪರ0ಪರದ ಪಾರಾವಾರ ಕಣ್ಣಿ0ದ ಬ0ದೇ ಬಿಡುತ್ತಿದೆ ಬಸ್ ಸ್ಟ್ಯಾ0ಡಿನಲ್ಲಿರುವ ದೇವರೇ ನಾನು ಏನು ಮಾಡಲಿ?
‘ಹಂಗಾಮ’ದಿಂದ ಹೆಕ್ಕಿದ್ದು

‍ಲೇಖಕರು avadhi

September 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: