ಈ ಕರೆ ಮೊರೆ ಕೇಳಿ ಬಾರೇ..

ನಿವೇದನೆ
ವನಿತಾ ಸತೀಶ 
ನೀ ಮುಡಿದ ಹೂಗಳೇ ಕಲ್ಲಾಗಿ
ಹೆಣೆದ ನಾಗರ ಜಡೆಯ ಎಳೆಗಳೇ
ಸುರುಳಿಯಾಗಿ
ಬೆನ್ನ ಹಿಂದೆ  ಜೀವನ ಭಾರ ಸ್ಥಿರವಾಗಿ
ಕಲ್ಲಾಗಿ ನಿಂತೆಯಾ ಗೆಳತಿ !
ಅಂಗಾಂಗ ಸಿಂಗರಿಸಿShe hair
ಆಭರಣ ತೊಡಿಸಿ
ನಲಿವು ಒಲವು ಹುಡುಕಾಟ !
ಬದುಕು ಬರೆದ ಬವಣೆ
ಕೇಳದೆ ಹೋದ ಕೆತ್ತಿ ನಿನ್ನ ಕಲೆಗಾರ
ಭಾವನೆಗಳ ಬೆಳಗಿ
ಇಲ್ಲದ ಸಲ್ಲದ ಕಾಮ ಕೆರಳಿ
ಮೈನವಿರೇಳಿಸಿ ಮದದಿಂದ
ಮುಂದೆ ಸಾಗಿದನೆ ಮುತ್ತಿಟ್ಟ ಚೋರ
ಹಿಂದೆ ನಿಂತವರೆ? !
ನೋಟದಲ್ಲೆ ನಿನ್ನ ನುಂಗಿ
ತೇಗಿದ ತೃಪ್ತಿ !
ಅಂತರ ನಂತರ !
ಅವರೆಂತು  ಕಂಡರು
ನಿನ್ನ ತಳಮಳ
ನರಳಿ ನಲುಗಿ ವಿರಹ  ತುಮುಲ
ನಾ ನಿನ್ನಂತೆ ನೊಂದ ಮನದ ಜೀವ !
ಬಾರೇ ! ಆತ್ಮಸಖಿ
ಈ ಕರೆ  ಮೊರೆ ಕೇಳಿ ಬಾರೇ
ಜೀವನವ ಜೀಕುತ್ತ ತೂಗಿ ಸಾಗೋಣ ಬಾ
ಜಗ ನಮ್ಮತ್ತ ತಿರುತಿರುಗಿ ನೋಡಲೆನ್ನುತ್ತ

ಎಸ್. ಕೃಷ್ಣಮೂರ್ತಿ

ಮುನಿಸೇಕೆ ಮನದನ್ನೆ ಮನದರಸಿ
ಕಾತುರದಿ ಬಂದಿರುವೆ ನಿನ್ನನರಸಿ

ಕಲ್ಲಾಯಿತೇಕೆ ಕೋಮಲ ಹೃದಯ ?
ಮರೆತೆಯಾ ಜೊತೆಯ ಮಧುರ ದಿನಗಳ ?
ನಕ್ಷತ್ರಗಳ ನೋಡುತ ಕಳೆದ ಕ್ಷಣಗಳ ?
ಮುಂಗಾರು ಮಳೆಯ ಕಚಗುಳಿಗಳ ?

click-kavite-shilabalikeನೀಲವೇಣಿಯೇ ನಿನ್ನ ಕೇಶದಲಿ ಬಂದಿ
ನಾನಾಗಿದ್ದೆ ನಿನ್ನೆದೆಯ ಪಂಜರದಲಿ,
ಸಂತಸದ ಆಗಸದಲಿ ಹಾರಾಡುತ
ಸಗ್ಗದ ಸೀಮೆಯಲಿ ತೇಲುತಲಿದ್ದೆ.

ತಿರುಗಿ ನೋಡೊಮ್ಮೆ ಕುಂಭನಿತಂಬೆ,
ಕಿರುಕಟಿಯ ಸಿರಿಮನದ ಚೆಲುವೆ,
ಬಿರುನುಡಿಯಾಡಿದ ತಪ್ಪು ನನ್ನದು
ಕ್ಷಮಿಸಲಾರೆಯ ನಿನ್ನೆದಯಲ್ಲಿ ನನ್ನನೊರಗಿಸಿ ?

 

ಗೋವರ್ಧನ್ ನವಿಲೇಹಾಳ್

ಅದೆಂಥಾ ಪ್ರೀತಿ ನಿನ್ನದು
ಶಿಲೆಯಾಗುವವರೆಗೂ ಅವನ
ಬರುವಿಕೆಗಾಗಿ ಕಾದು ನಿಂತಿದ್ದೀಯಲ್ಲ,
ಸರ್ವಾಂಗಗಳನೂ ಸಿಂಗರಿಸಿ.

ಶಿಲೆಯ ಮಹಲೊಳಗೆ
ಗರಡುಗಂಬಗಳ ಹೀಗೆ ದಿಟ್ಟಿಸಿ
ನೋಡುತ್ತಲೇ ಇದ್ದೀಯಲ್ಲ
ನಿನ್ನನೇ ನೀ ಮರೆತು
ಅವನು ಬಿಟ್ಟ ಏದುಸಿರ ಕುಡಿಯಲು.

ನೆರಳಲ್ಲೇನೂ ಅರಳದು
ಒಂಚೂರು ಮುಂದೆ ಬಾ
ಬಿಸಿಲಿಗೆ ಮೈಯೊಡ್ಡು
ನಿನ್ನ ಮರೆತು ಹೋದವನ ನೆನಪ
ಸ್ಮೃತಿಫಟಲದ ಕೋಣೆಯಿಂದ ಹೊರದೂಡು
ಮನಸಲ್ಲೊಂದು ಹೊಸ ಬೇರು ಚಿಗುರಿತು.

ಮೈಯನ್ನೊಮ್ಮೆ ಕೊಡವು
ಆ ದರಿದ್ರ ನೆನಪಿನ ಧೂಳು ನೆಲಕಾಣಲಿ
ಪಾದಗಳ ಮೇಲೆ ಬೀಳದಿರಲಿ,
ಬಿದ್ದರೆ ಆಗಾಗ ಕೆರೆದುಕೊಳ್ಳಬೇಕೆನಿಸೀತು
ಕೆಟ್ಟದ್ದಕ್ಕೆ ಅಂಟಿಕೊಳ್ಳುವ ಚಟ ಉಂಟು.

ಒಮ್ಮೆ ಹಿಂತಿರುಗಿ ನೋಡು; ಕಿವಿಕೊಡು
ನಿನಗೆಂದೇ ಕೈಮಾಡಿ ಕರೆದವರಿಗೆ
ಹೂ ನಗೆ ಬೀರಿದರಷ್ಟೇ ಸಾಕು
ಬದುಕು ಬದಲಿಸೀತು
ಚೈತನ್ಯದ ಹೊಳೆ ಹರಿದೀತು.

‍ಲೇಖಕರು Admin

September 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This