ಈ ‘ಪರಿ’ಯ ಸೊಬಗಾವ ದೇವರಲಿ ಕಾಣೆ..

unnamed

ಬಸವರಾಜ ಪುರಾಣಿಕ

ಲೇಖಕರು ಇಂಜಿನಿಯರಿಂಗ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲರು.

ಸೇವೆಯಲ್ಲಿದ್ದಾಗ ಹಾಗು ಬಳಿಕ ಎರಡು ಪ್ರತಿಷ್ಥಿತ ಗ್ರಾಮಾಭಿವೃದ್ಧಿ ಸಂಸ್ಥೆಗಳ ನಿಕಟ ಸಂಪರ್ಕವಿತ್ತು

ಆತ್ಮೀಯರಾದ ಜಿ.ಎನ್. ಮೋಹನ್ ನನಗೆ ಕಳಿಸಿದ ‘ಈ ಪರಿಯ ಸೊಬಗು’ ಕೃತಿಯನ್ನು ಕುತೂಹಲದಿಂದ ಓದಿ, “ಆಂಖೋವಾಲೇ ಅಂಧೇ” ಎಂದು ಮನಗಂಡೆ. ನಾನೂ ಸಹ ‘ಪರಿ’ಯ ಜೊತೆ ಹೆಜ್ಜೆ ಹಾಕಲಾರಂಭಿಸಿದೆ.

ಪುಸ್ತಕದ ಶೀರ್ಷಿಕೆ ‘ಈ ಪರಿಯ ಸೊಬಗು..’ ಓದುತ್ತಿದ್ದಂತೆ, ಪುರಂದರದಾಸರ ಪ್ರಸಿದ್ಧ ಕೃತಿ ‘ಈ ಪರಿಯ ಸೊಬಗಾವ ದೇವರಲಿ ಕಾಣೆ’ ನೆನಪಾಯಿತು

13935038_10209787940192561_8018151404228666624_nಮೋಹನ ಅವರದ್ದು crisp, lyrical ಯಥೋಚಿತ ಮುನ್ನುಡಿ ಬರವಣಿಗೆ. ಇದನ್ನೇ  ಮುಂದುವರಿಸುತ್ತಾರೆ ಇತರ ಅನುವಾದಕರು, ಪುಸ್ತಕದ ಅಚ್ಚುಕಟ್ಟಾದ get-up, – ಇವೆಲ್ಲವುಗಳ ಜೊತೆ ಎದೆ ಎದೆಗಳ ನಡುವೆ ಮುರಿದು ಹೋಗಿರುವ, ಬೀಳುತ್ತಿರುವ ಸೇತುವೆಗಳ ರಿಪೇರಿಗಾಗಿ ಮಿಡಿಯುತ್ತಿರುವ ಮನೀಷೆ, ದುಡಿಯುತ್ತಿರುವ ಜೀವಿಗಳ ಜಿಗುಟುತನ – ಇವೆಲ್ಲವನ್ನು ಒಳಗೊಂಡಿರುವ ‘ಈ ಪರಿಯ ಸೊಬಗು’ ಇನ್ನೆಲ್ಲಿ ಸಿಕ್ಕೀತು? ‘ಸಾಮಾನ್ಯ ಜನತೆಯ ನಿತ್ಯದ ಬದುಕು’ ಎಂಬ ಪರಿಯ ಆಶಯ ಮತ್ತು ಧ್ಯೇಯಗಳ ಅಸ್ಮಿತೆ, ಅನುಷ್ಠಾನ, ಅನುಸಂಧಾನ, ಅನುಕರಣ ಹಾಗೂ ಆಪ್ತೀಕರಣಗಳಲ್ಲಿ ಸಿಕ್ಕದೆ?

ಪಿ. ಸಾಯಿನಾಥರ ಬರಹಗಳನ್ನು ಅವರು ಸುಪ್ರಸಿದ್ಧ” BLITZ'” ವಾರಪತ್ರಿಕೆಗೆ ಬರಯುತ್ತಿದ್ದ ಕಾಲದಿಂದಲೂ ಓದುತ್ತ ಬಂದಿರುವೆ. ಅವರ ಅಚಲ ಬದ್ಧತೆ, ಬಡ ಜನತೆಯ ನೋವು ನಲಿವುಗಳೊಡನೆ ಮಿಡಿಯುವ ಅವರ ಹೃದಯ ಶ್ರೀಮಂತಿಕೆ, ಹಾಗೂ ದೈವದತ್ತ ಬರಹ ಕಲೆಗಳು ಅವರನ್ನು ICON ಮಟ್ಟಕ್ಕೆ ಏರಿಸಿವೆ.

ನಮ್ಮ ಗೆಳೆಯರಿಗೆ ಒಂದು ಸೂಚನೆ.
1950 ದಶಕ ದ ಉತ್ತರಾರ್ಧ ಹಾಗು 1960 ದಶಕದ ಪೂರ್ವಾರ್ಧ ದಲ್ಲಿ Kusum Nayyar ಅಥವಾ Nair ಎಂಬ ಅದ್ಭುತ ಲೇಖಕಿ “BLOSSOMS UNDER THE DUST” ಅಂಕಣ ಬರೆಯುತ್ತಿದ್ದಳು, ಬಹುಶಃ Times of India ‘ದಲ್ಲಿ. ಹೊಸತು ಹೊಸತು ಎಂದು ಹಂಬಲಿಸುವವರಿಗೆ ಅದೊಂದು ಹೊಸ ಅನುಭವ ನೀಡಬಲ್ಲದು. ಬಹಶಃ ಆ ಹೆಸರಿನ ಪುಸ್ತಕವೂ ಪ್ರಕಟವಾಗಿರಲೂ ಸಾಧ್ಯ. ಶೋಧಿಸಿ ನೋಡಿ.

ಎಲ್ಲಾ ಮಳಿಗೆಗಳಲ್ಲೂ ಪುಸ್ತಕ ಲಭ್ಯ.
ಆದರೂ ಪ್ರತಿಗಳಿಗಾಗಿ ಪಲ್ಲವ ವೆಂಕಟೇಶ್ : 9480353507

‍ಲೇಖಕರು Admin

August 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This