ಈ ರಾತ್ರಿಗೆ ಬೆಳಗಾಗುವುದಿಲ್ಲ..

– ಚಾಮರಾಜ ಸವಡಿ

ಇದ್ದ ಒಂದೇ ಕನ್ನಡಕ ಬಿದ್ದು ಒಡೆದುಹೋಯಿತು   ಬೆಳಕಿಲ್ಲದ ರಾತ್ರಿ ಗಡಿಯಾರ ಹೆಳವ ಅವಳ ದೀಪದಂಥ ಕಂಗಳಿಗೆ ಅಕ್ಷರಗಳ ಹುಡುಕಲಿ ಹೇಗೆ?   ಗಾಜೆಂದುಕೊಂಡಿದ್ದು ಕಣ್ಣೇ ಆಗಿತ್ತೇನೋ ಖಾಲಿ ಫ್ರೇಮಿನ ಕನ್ನಡಕದಲ್ಲಿ ಅತಿ ನಿಚ್ಚಳ ಅವಳ ಬಿಂಬ   ಏನು ಮಾಡುವುದು ಅಪರಾತ್ರಿಯಲಿ ದಿನದ ನಿಟ್ಟುಸಿರಿಗೆ ಹೊಸ ಕನಸ ಪೋಣಿಸಿ ಹೃದಯದ ತೂತ ಮುಚ್ಚಲಾಗದು ಸುಮ್‌ಸುಮ್ನೇ ಬೀರಿದ ಮುಗುಳ್ನಗೆಗಳ ಖಾಲಿತನ ತುಂಬಲಾಗದು   ನಾಳೆ ಬೆಳಗಾಗುವವರೆಗೂ ಕತ್ತಲೆಯೇ ಈ ರಾತ್ರಿ ದೂಡಬೇಕು, ಹೇಗೋ ಅಕ್ಷರಗಳ ಕ್ಷಮೆ ಕೇಳಿ, ಕನಸುಗಳಿಗೆ ಕಾಡದಿರಲು ಹೇಳಿ ಖಿನ್ನ ಮನಸಿಗೆ ನಿದ್ರಿಸಲೊಂದು ಮನವಿ   ಹೂಂ. ಹಾಗೇ ಮಾಡಬೇಕು ಮುರಿದ ಗಾಜುಗಳ ಗುಡಿಸಿ, ಕನ್ನಡಕದ ಫ್ರೇಮು ಎತ್ತಿಟ್ಟು ಬಾರದ ನಿದ್ದೆಗೆ ಬೇಡಿಕೆ ಇಟ್ಟು ಮುಚ್ಚಬೇಕು ಕಣ್ಣ   ನಿನ್ನೆಯದೆಲ್ಲ ಇಂದಿಗಾದಂತೆ ನಾಳೆಗಿರಲಿ ಇಂದು, ಎಂದು ದೀಪವಾರಿಸಿ, ಎವೆ ಮುಚ್ಚಿದರೆ ಕಣ್ಣರಳಿಸುತ್ತಾಳೆ ಕಣ್ಣೊಳಗೆ ಕನ್ನಡಕದ ಹಂಗಿಲ್ಲದೇ ಸ್ಪಷ್ಟವಾಗುತ್ತಾಳೆ ಮರೆಯಬೇಕೆಂದರೂ ಇಷ್ಟವಾಗುತ್ತಾಳೆ   ಅಷ್ಟೇ, ಇನ್ನು ಈ ರಾತ್ರಿಗೆ ಬೆಳಗಾಗುವುದಿಲ್ಲ    ]]>

‍ಲೇಖಕರು G

April 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

ಚೈತ್ರಚೇತನ ಕೊನರಿ…

ಚೈತ್ರಚೇತನ ಕೊನರಿ…

ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ...

ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ...

2 ಪ್ರತಿಕ್ರಿಯೆಗಳು

  1. Ramesh Aroli

    ಈ ರಾತ್ರಿಗೆ ಬೆಳಗಾಗುವುದಿಲ್ಲ wah! sir kavite eshtavaayitu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: