ಈ ವರ್ಷದ ಭೂಮಿಹಬ್ಬಕ್ಕೆ ಬನ್ನಿ

ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಉತ್ತರ ತಾಲೂಕಿನ ಅದ್ದೆ, ವಿಶ್ವನಾಥಪುರ, ಅರಕೆರೆ, ರಾಜಾನುಕುಂಟೆ, ಮಾರಸಂದ್ರ ಮೊದಲಾದ ಹದಿನೆಂಟಕ್ಕೂ ಹೆಚ್ಚು ಗ್ರಾಮಗಳು ಈ ಭೂಮಿಹಬ್ಬವನ್ನು ಆಚರಿಸಿಕೊಂಡು ಬಂದಿವೆ. ‘ಬೆವರ ಸಂಸ್ಕೃತಿಯ ಬೆರಗಿನ ಭೂಮಿಹಬ್ಬ.. ಬುದ್ಧ ಅರಿವಿನ ಸಿರಿಬೆಳಕ ದಾರಿಯಲ್ಲಿ…’ ಎಂಬ ಆಶಯ ಹೊತ್ತಿರುವ ಹಬ್ಬಕ್ಕೆ ಕಳೆದ ಕೆಲವು ವರ್ಷಗಳಿಂದ ಸಿಕ್ಕಿರುವ ಪ್ರೋತ್ಸಾಹ ಅದ್ಭುತ. ಅದೇ ಉತ್ಸಾಹದಲ್ಲಿ ಮೇಲಿನ ಎಲ್ಲಾ ಗ್ರಾಮಸ್ಥರೂ ಸೇರಿ ಕಟ್ಟಿಕೊಂಡಿರುವ ‘ನಿರಂತರ’ ಎಂಬ ಸಂಸ್ಥೆ ಈ ಬಾರಿಯೂ ಹಬ್ಬವನ್ನು ಹಮ್ಮಿಕೊಂಡಿದೆ. ಏಪ್ರಿಲ್ 6, ಬೆಳಿಗ್ಗೆ 8ರಿಂದ ರಾತ್ರಿ 12.30ರವರೆಗೆ ಕಡತನಮಲೆಯ ಚಿಕ್ಕಣ್ಣನಕೆರೆಯಲ್ಲಿ ಅಂದು ಬೆಳಿಗ್ಗೆ 8 ಗಂಟೆಗೇ ಹಳ್ಳಿ ಆಟಗಳೊಂದಿಗೆ ಶುರುವಾಗುವ ಹಬ್ಬ ಸಂಜೆ ರಂಗೇರುತ್ತೆ. ಸಂಜೆ ನಮ್ಮೊಂದಿಗೆ ಡಾ.ಸಿದ್ಧಲಿಂಗಯ್ಯ, ಅಗ್ನಿ ಶ್ರೀಧರ್, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಟಿ.ಎನ್.ಶಿವಾನಂದ ಹಾಗೂ ಚಿತ್ರನಟಿ ಪೂಜಾಗಾಂಧಿ ಇರುತ್ತಾರೆ. ಇದರೊಂದಿಗೆ ರಾತ್ರಿ 8 ರಿಂದ ಜನಪದ ಕಲಾಪ್ರದರ್ಶನಗಳನ್ನು ನಾಡಿನ ವಿವಿಧ ಕಡೆಗಳಿಂದ ಬರುವ ತಂಡಗಳು ಪ್ರದರ್ಶಿಸಲಿವೆ.. ರಾಥ್ರಿ 7 ಗಂಟೆಗೆ ಹಳ್ಳಿ ಊಟದ ಸಹಭೋಜನವೂ ಇರುತ್ತದೆ. ಬಿಡುವು ಮಾಡಿಕೊಂಡು ಆಪ್ತರನ್ನು ಕರೆದುಕೊಂಡು ಬನ್ನಿ…. ಹೆಚ್ಚಿನ ಮಾಹಿತಿಗೆ ಮಂಜುನಾಥ ಅದ್ದೆಯವರ ಫೋನ್ ನಂಬರ್ ಇಟ್ಟುಕೊಂಡಿರಿ 94484 65233  ]]>

‍ಲೇಖಕರು G

April 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This