ಈ ಶನಿವಾರ ಸುಚಿತ್ರದಲ್ಲಿ ‘ಗಗ್ಗರ’

ಗಗ್ಗರ (ತುಳು)

(110ನಿಮಿಷ/2008)

ಕಥಾ ಸಾರಾಂಶ

ಭೂತಕೋಲ ಕರಾವಳಿ ಕನರ್ಾಟಕದಲ್ಲಿ ರೂಢಿಯಲ್ಲಿರುವ ಧಾಮರ್ಿಕ ಆರಾಧನೆ. `ಗಗ್ಗರ ಭೂತ ಕಟ್ಟುವ ಮಂದಿ ಎದುರಿಸುವ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಭೂತ ಕಟ್ಟುವವನನ್ನು ಕೆಳಜಾತಿಯವನೆಂದು ಸಮಾಜದಲ್ಲಿ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಜನರೊಡನೆ ಮುಕ್ತವಾಗಿ ಆರ ಬೆರೆಯುವಂತಿಲ್ಲ. ಉಳಲು ಹೋಗುವಂತಿಲ್ಲ, ಕೂಲಿ ಮಾಡುವಂತಿಲ್ಲ. ವರ್ಷದಲ್ಲಿ ಕೇವಲ ಐದು ತಿಂಗಳು ಮಾತ್ರ ಅವರಿಗೆ ಉದ್ಯೋಗ. ಅದಕ್ಕಾಗಿ ಅಲ್ಪಮೊತ್ತ ಮತ್ತು ಆಹಾರವಷ್ಟೇ ಸಂಬಳ. ವರ್ಷದ ಇತರ ದಿನಗಳಲ್ಲಿ ಭಿಕ್ಷೆ ಎತ್ತಿಕೊಂಡು ಬದುಕಬೇಕಾದ ಪರಿಸ್ಥಿತಿ ಅವರದು. ಭೂತ ಕಟ್ಟುವ ಶಂಕರ ಎನ್ನುವವನ ಕುರಿತ ಚಿತ್ರ ಇದು. ಆತ ಓದಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ತಂದೆಯ ನಿಧನದ ನಂತರ ಭೂತ ಕಟ್ಟುವ ಕೆಲಸವನ್ನೂ ಮುಂದುವರಿಸುತ್ತಾನೆ. ಸಮಾಜ ಉಳಿದವರಂತೆ ತಮ್ಮನ್ನೂ ಕಾಣಬೇಕು ಎಂದು ಆಗ್ರಹಿಸುತ್ತಾನೆ. ಇದರಿಂದ ಈ ಮಂದಿಗೆ ಆಥರ್ಿಕವಾಗಿಯೂ ಸಾಮಾಜಿಕವಾಗಿಯೂ ಮೇಲೇಳಲು ಸಾಧ್ಯವಾಗುತ್ತದೆ.

ಪ್ರಶಸ್ತಿ

ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ -2008

ಚಿತ್ರೋತ್ಸವ

ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ, ಗೋವಾ -2009

ನಿದರ್ೆಶಕರ ನುಡಿ

ಕನರ್ಾಟಕದ ಕರಾವಳಿ, ತುಳುನಾಡಿನಲ್ಲಿ ಭೂತಾರಾಧನೆ ಸಾಮಾನ್ಯ ದೃಶ್ಯ. ವೇಷ-ಭೂಷಣ, ಹಾಡು, ನೃತ್ಯ, ಮಾತುಗಳ ಮೂಲಕ ಬೇರೆಯೇ ಆದ ವಾತಾವರಣವನ್ನು ಇದು ಸೃಷ್ಟಿಸುತ್ತದೆ. ನಂಬಿಕೆ, ಆಚರಣೆ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಸಂಗಮ ಎಂದು ಭೂತಕೋಲವನ್ನು ವಿಶ್ಲೇಷಿಸಲಾಗುತ್ತಿದೆ. ಭೂತ ವೇಷಧಾರಿ ತಾನು ಕಟ್ಟಿದ ಭೂತದ ಅವತಾರವೆನ್ನುವಂತೆ ವತರ್ಿಸಿ, ಭಕ್ತರ ಕಷ್ಟಗಳನ್ನು ಕೇಳಿ, ಸಮಸ್ಯೆಗಳನ್ನು ನೀಗಿಸಿ, ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಾನೆ. ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ಪರಿಹರಿಸುವ ಕೆಲಸ ಇಲ್ಲಿ ಆಗುತ್ತದೆ.

ತಾಂತ್ರಿಕ ವರ್ಗ

ನಿಮರ್ಾಪಕರು : ಗುರುದತ್ ಮತ್ತು ದುಗರ್ಾನಂದ

ಸಂಕಲನ : ಕೆ.ಎಂ. ಪ್ರಕಾಶ್

ಛಾಯಾಗ್ರಹಣ : ಸುರೇಶ್ ಬೈರಸಂದ್ರ

ಚಿತ್ರಕಥೆ, ಸಂಗೀತ, ನಿದರ್ೆಶನ : ಶಿವಧ್ಜಜ ಶೆಟ್ಟಿ

ತಾರಾಗಣ

ಸುಚೇಂದ್ರ ಪ್ರಸಾದ್, ಎಂ.ಕೆ ಮಠ, ಜಯಶೀಲ

ನಿಮರ್ಾಪಕರು

ಗುರುದತ್ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಟಿವಿ ಧಾರಾವಾಹಿಗಳಲ್ಲಿ ನಿದರ್ೇಶನ, ನಿಮರ್ಾಣ ಮತ್ತು ಸಂಕಲನ ಮಾಡುತ್ತಿದ್ದಾರೆ. ಸುವರ್ಣ ಕನ್ನಡ ವಾಹಿನಿಯ ಕಾರ್ಯಕ್ರಮಗಳ ಉಪಾಧ್ಯಕ್ಷರಾಗಿ ಕಾರ್ಯ ಕೂಡ ನಿರ್ವಹಿಸಿದ್ದಾರೆ.

ಎಂ.ದುಗರ್ಾನಂದ್ ಇವರು ಕನ್ನಡದಲ್ಲಿ ಈತನಕ ಐದು ಚಲನಚಿತ್ರಗಳನ್ನು ನಿಮರ್ಿಸಿದ್ದಾರೆ. ಗಗ್ಗರ ಇವರ ಮೊದಲ ತುಳು ಭಾಷೆಯ ಚಿತ್ರ.

ನಿದರ್ೆಶಕರು

ಶಿವಧ್ವಜ್ ಶೆಟ್ಟಿ ಚಿತ್ರರಂಗದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. 22 ಕನ್ನಡ, ಒಂದು ಮಲಯಾಳಂ ಹಾಗೂ ಒಂದು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. `ನೀನೆ ನೀನೆ (ಕನ್ನಡ) ಇವರು ನಿದರ್ೇಶನದ ಮೊದಲ ಚಿತ್ರ. ಇವರು `ಪ್ರೊಡಕ್ಷನ್ ಹೌಸ್ ಎಂಬ ಹೆಸರಿನ ನಿಮರ್ಾಣ ಸಂಸ್ಥೆಯನ್ನು ಹೊಂದಿದ್ದಾರೆ.

‍ಲೇಖಕರು avadhi

June 17, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This