ಈ ಹುಡುಗಿ ದೀಪಿಕಾ…

ಮೇ ಫ್ಲವರ್ ಅಂಗಳದಲ್ಲಿ ನಡೆಯುವ ಫಿಶ್ ಮಾರ್ಕೆಟ್ ಕಾರ್ಯಕ್ರಮಗಳಿರಲಿ ಅಥವಾ ನಗರದ ಯಾವ ಮೂಲೆಯಲ್ಲಾದರೂ ಜರುಗುವ ಕಾರ್ಯಕ್ರಮಗಳಿರಲಿ ಅಲ್ಲಿ ನಮ್ಮ ದೀಪಿಕಾ ಇರಲೇಬೇಕು. ಎಲ್ಲರ ಮೊಗದಲ್ಲಿ ನಗೆ ಅರಳುವಂತೆ ಕ್ಯಾಮೆರಾ ಫೋಕಸ್ ಮಾಡುವ, ಒಂದಷ್ಟು ಜನ ನೆಟ್ಟನೇರ ಗಂಭೀರವಾಗಿ ನಿಲ್ಲುವಂತೆ ಮಾಡುವ, ಅರಳು ಹುರಿದಂತೆ ಮಾತನಾಡುತ್ತಲೇ ಎಲ್ಲರನ್ನೂ ತನ್ನ ಕ್ಯಾಮೆರಾದಲ್ಲಿ ತುಂಬಿಕೊಳ್ಳುವ ಈ ಹುಡುಗಿ ದೀಪಿಕಾ.

ಬ್ಲಾಗ್ ಮಂಡಲದ ವಿಕಾಸ್ ಬಣ್ಣಿಸಿದಂತೆ ಫೋಟೋ ಟೆರರಿಸ್ಟ್ ಪೈಕಿ ಒಬ್ಬಳು. ಕೆನ್ ಕಲಾ ಶಾಲೆಯಲ್ಲಿ ಕ್ಯಾನ್ವಾಸ್ ಮೇಲೆ ಬಣ್ಣ ಹರಡುತ್ತಿದ್ದ ಈ ಹುಡುಗಿ ನಂತರ ಇಡೀ ರಾಜ್ಯಕ್ಕೇ ಕಲಾ ಪದವಿಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾಳೆ. ಕ್ಯಾಮರಾ- ಇವಳ ಹಲವು ಹುಚ್ಚುಗಳ ಪೈಕಿ ಒಂದು. ತನ್ನ ಬಳಿ ಇರುವ ಕ್ಯಾನನ್ ಡಿಜಿಟಲ್ ಕ್ಯಾಮೆರಾದಿಂದಲೇ ಹಲವರನ್ನು ‘ಶೂಟ್’ ಮಾಡಿ ಬಿಸಾಡಿರುವ ದೀಪಿಕಾ ಈಗ ದೊಡ್ಡ ಕ್ಯಾಮೆರಾದ ತಲಾಶ್ ನಡೆಸಿದ್ದಾಳೆ. ‘ನಿಮ್ಮ ನಿಮ್ಮ ತನುವ ಸಂರಕ್ಷಿಸಿಕೊಳ್ಳಿ’.
ಅವಧಿ ಹಾಗೂ ಬುಕ್ ಬಜಾರ್ ಎರಡಕ್ಕೂ ಕ್ಯಾಮೆರಾ ಹಿಡಿಯುವ ದೀಪು ನಿಮ್ಮ ಬಳಿ ಬಂದಾಗ, ಎಸ್.. ನಿಮ್ಮ ದಂತಪಂಕ್ತಿಗಳನ್ನು ತೋರಿಸಿ. ಅವಳ ದಂತಪಂಕ್ತಿಯ ಕಡೆ ಕಣ್ಣು ಹಾಯಿಸಲೂ ಬೇಡಿ..

‍ಲೇಖಕರು avadhi

September 15, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

5 ಪ್ರತಿಕ್ರಿಯೆಗಳು

 1. ವಿಕಾಸ್ ಹೆಗಡೆ

  congrats and thanx Deepika. ಟೆರರಿಸಂ ಮಟ್ಟ ಹಾಕಲು ’ಫೋಟೋ’ ಕಾಯಿದೆ ಜಾರಿ ಮಾಡುವಂತೆ ’ಅವಧಿ’ ಬಳಗಕ್ಕೆ ಒತ್ತಡ ಹೇರುವ ಆಲೋಚನೆ ಕೈ ಬಿಡಲಾಗಿದೆ 🙂

  ಪ್ರತಿಕ್ರಿಯೆ
 2. ಸಂದೀಪ್ ಕಾಮತ್

  ಮೊನ್ನೆ ನರೇಂದ್ರ ಮೋದಿ ಫೋಟೊಗ್ರಾಫರ್ ’ನೀನು ಎಲ್ಲರ ಫೋಟೋ ತೆಗೀತಿಯಲ್ಲಪ್ಪ ನಿನ್ನ ಫೋಟೊ ಯಾರು ತಗೀತಾರೆ ? ಬಾ ನಿಲ್ಲು ’ ಅಂತ ಫೋಟೊ ತೆಗೆಸ್ಕೊಂಡ್ರಂತೆ !
  ಲಕ್ಕಿ ದೀಪಿಕಾ ,ಮೇ ಫ್ಲವರ್ ನಲ್ಲಿ ಇಬ್ರು ಫೋಟೊಗ್ರಾಫರ್ ಗಳಿದ್ದಾರೆ !
  ಅಂದ ಹಾಗೆ ಜೋಜಿಗ ಪರಿಚಯ ಯಾವಾಗ ಮಾಡಿಸ್ತೀರ?? 🙂 (ಕಾಫಿ ,ಟೀ ಕೊಡೋರು ಲೆಕ್ಕಕ್ಕಿಲ್ವ?? 🙁

  ಪ್ರತಿಕ್ರಿಯೆ
 3. ಶ್ರೀದೇವಿ ಕಳಸದ

  ಸಂದೀಪ, ನೀವು ಹಾಗೆಲ್ಲ ಅವರನ್ನ ಕರೆಯೋ ಹಾಗಿಲ್ಲ ಕಾಫಿ ಟೀ ಕೊಡೋವ್ರು ಅಂತ ರಮೇಶ್ ಅರವಿಂದ್ ಅವರಿಗೆ ಮುಂದಿನ ಪ್ರಾಜೆಕ್ಟ್‌ನಲ್ಲಿ ಒಂದು ಆಫರ್‍ ಕೊಟ್ಟಿದಾರೆ. ನೋಡ್ತಿರ್‍ರಿ ನಮ್ ಜೋಜಿ ಹೇಗೆ ಬೆಳಿತಾಳೆ ಅಂತ. ದೀಪಿಕಂಗಿನ್ನು ಅವಳು ಪರಿಚಯ ಇಲ್ವೇನೋ…

  ಪ್ರತಿಕ್ರಿಯೆ
 4. ಸಂದೀಪ್ ಕಾಮತ್

  ಶ್ರೀದೇವಿ ,
  ತಮಾಷೆಗಂದೆ ರೀ ,ನಂಗೂ ಗೊತ್ತು ಅವರು ಸುವರ್ಣ ಚಾನೆಲ್ ನಲ್ಲಿ ಕೆಲಸ ಮಾಡ್ತಾರೆ ಅಂತ.
  All the best Jojiga 🙂

  ಪ್ರತಿಕ್ರಿಯೆ
 5. deepika

  ಶ್ರೀದೇವಿಯವರೇ, ಜೋಜಿಗ ನಂಗೂ ಫ್ರೆಂಡ್. ಅವ್ರು ಕಾಫಿ, ಟೀ ಕೊಡೊ ಸಡಗರದಲ್ಲಿ ಕ್ಯಾಮರಕ್ಕೆ ಸಿಗೋದೆ ಇಲ್ಲ ಅಂತಾರೆ, ನೆಕ್ಸ್ಟ್ ನನ್ನ ಟಾರ್ಗೆಟ್ ಜೋಜಿಗಾನೆ ! ಓಕೆ ನಾ ಸಂದೀಪ್ರವರೆ ?
  ನಿಮ್ಮೆಲ್ಲರ ಪ್ರೀತಿಯ ಪ್ರತಿಕ್ರಿಯೆಗೆ ಥ್ಯಾಂಕ್ಸ್. ಎಲ್ಲ ಕ್ರೆಡಿಟ್ ಅವಧಿಗೆ.
  -ದೀಪಿಕಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: