‘ಈ ಹೊತ್ತಿಗೆ’ ನವರಾತ್ರಿ ಕಾವ್ಯೋತ್ಸವ

ಕಳೆದೇಳು ವರ್ಷಗಳಿಂದ ಸತತವಾಗಿ ಅನೇಕ ಬಗೆಯ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಈ ಹೊತ್ತಿಗೆ ಟ್ರಸ್ಟ್, ಈ ಶನಿವಾರದಿಂದ ಅಂದರೆ, ಅಕ್ಟೋಬರ್ ೧೭ರಿಂದ ೨೫ರವರೆಗೆ ಆನ್‌ಲೈನ್‌ ನೇರ ಪ್ರಸಾರದ ಮೂಲಕ ಒಟ್ಟು ಹದಿನೇಳು ಕವಿ ಗೋಷ್ಠಿಗಳನ್ನು ಹಮ್ಮಿಕೊಂಡಿದೆ.

ಎಲೆಮರೆಯ ಕಾಯಿಯಂತಿರುವ ಅನೇಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಹೊತ್ತಿಗೆ ಹೀಗೊಂದು ಪ್ರಯತ್ನಕ್ಕೆ ಮುಂದಾಗಿದೆ. ಈ ಪ್ರತಿಭಾವಂತ ಕವಿಗಳ ಜೊತೆಗೆ ಹೆಸರು ಮಾಡಿರುವ ಕವಿಗಳೂ ಈ ಗೋಷ್ಠಿಗಳಲ್ಲಿ ಭಾಗವಹಿಸುತ್ತಿರುವುದು ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಅವರ ಸೌಜನ್ಯಪೂರ್ಣ ನಿಲುವನ್ನು ಎತ್ತಿ ತೋರಿಸುತ್ತದೆ.

ಈ ಗೋಷ್ಠಿಗಳಲ್ಲಿ, ನಿತ್ಯದ ಸುದ್ದಿಯಾಗುತ್ತ ಎಲ್ಲರಲ್ಲೂ ಆತಂಕ ಮೂಡಿಸುತ್ತಿರುವ ದಿನೇದಿನೇ ಹೆಚ್ಚುತ್ತಿರುವ ಲೈಂಗಿಕ ಅತ್ಯಾಚಾರಗಳನ್ನು ಪ್ರತಿಭಟಿಸಿ, ಭಾಗವಹಿಸಲಿರುವ ಪ್ರತಿಯೊಂದು ತಂಡವೂ ಒಂದೊಂದು ಕವನ ರಚಿಸಿ ಓದಲಿದೆ.

ಪ್ರತೀ ತಂಡದಲ್ಲಿ ಆರು ಜನ ಕವಿಗಳು, ಇಬ್ಬರು ಹಾಡುಗಾರರು ಮತ್ತು ನಿರೂಪಕರು ಭಾಗವಹಿಸಲಿದ್ದಾರೆ.

ಈ ಹದಿನೇಳು ತಂಡಗಳಲ್ಲಿ ಕರ್ನಾಟಕದ ಒಂಬತ್ತು ಜಿಲ್ಲೆಗಳ ಕವಿಗಳು ಮತ್ತು ಹಾಡುಗಾರರಿರುವ ಗೋಷ್ಠಿಗಳು ಅಪರಾಹ್ನ ೧೧ರಿಂದ ೧೨ರವರೆಗೆ ನಡೆಯಲಿವೆ.

ಸಂಜೆ ೫.೦೦ರಿಂದ ರಾತ್ರಿ ೧೦.೩೦ರವರೆಗೆ ನಡೆಯಲಿರುವ ಗೋಷ್ಠಿಗಳಲ್ಲಿ ವಿದೇಶದಲ್ಲಿರುವ ಕನ್ನಡ ಕವಿಗಳ ನಾಲ್ಕು ತಂಡಗಳು, ಹೊರರಾಜ್ಯ ಗಳ ಮೂರು ತಂಡಗಳು ಹಾಗು ಕರ್ನಾಟಕದ ಯುವಕವಿಗಳ ಒಂದು ತಂಡವು ಭಾಗವಹಿಸಲಿವೆ.

ಭಾಗವಹಿಸಲಿರುವ ಜಿಲ್ಲೆಗಳು ಮತ್ತು ಗೋಷ್ಠಿಗಳ ಸಮಯ

(ಸಮಯ: ಪೂರ್ವಾಹ್ನ ೧೧ರಿಂದ ೧೨ ಗಂಟೆಯವರೆಗೆ)

ಕಲಬುರಗಿ, ವಿಜಯಪುರ, ಮೈಸೂರು, ಹಾವೇರಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ ಮತ್ತು ಮಂಡ್ಯ.

ಭಾಗವಹಿಸಲಿರುವ ವಿದೇಶಿ ಮತ್ತು ಹೊರರಾಜ್ಯಗಳು

ಅಮೇರಿಕ (ರಾತ್ರಿ ೯.೦೦ರಿಂದ ೧೦.೩೦ರವರೆಗೆ), ಯುರೋಪ್ (ರಾತ್ರಿ ೯.೦೦ರಿಂದ ೧೦.೦೦ರವರೆಗೆ, ಕುವೈತ್ (ಸಂಜೆ ೭.೦೦ರಿಂದ ೮.೦೦ರವರೆಗೆ), ಆಸ್ಟ್ರೇಲಿಯಾ (ಸಂಜೆ ೫.೦೦ರಿಂದ ೬.೦೦ರವರೆಗೆ)

ದೆಹಲಿ, ತೆಲಂಗಾಣ-ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ಯುವಕವಿಗಳ ತಂಡ (ಸಂಜೆ ೬.೦೦ರಿಂದ ೭.೦೦ರವರೆಗೆ)

ಸಾಹಿತ್ಯಾಸಕ್ತರೆಲ್ಲರೂ ತಾವಿದ್ದಲ್ಲಿಂದಲೇ ಒಂಬತ್ತು ದಿನವೂ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಕವಿ ಗೋಷ್ಠಿಗಳನ್ನು ವೀಕ್ಷಿಸಿಸುವ ಅನುಕೂಲವಿರುವುದರಿಂದ, ಫೇಸ್‌ಬುಕ್‌ ಲ್ಲಿ ಲಭ್ಯವಿರುವ ಈ ಹೊತ್ತಿಗೆ ಪುಟದಲ್ಲಿ ( https://bit.ly/2SROd8L ) ಮತ್ತು E Hottige ಯುಟ್ಯೂಬ್ ಚಾನಲ್ ( https://bit.ly/3iX3lfN) ನಲ್ಲಿ ಪ್ರಸಾರಗೊಳ್ಳಲಿರುವ ಈ ಕಾವ್ಯೋತ್ಸವದ ನೇರ ಪ್ರಸಾರಗಳನ್ನು ವೀಕ್ಷಿಸಬಹುದು.

‍ಲೇಖಕರು Avadhi

October 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This