ಉಂಡು ಮರೆತ ಒಡಲ ಕನಸು

ಪ್ರೊ. ಚಂದ್ರಶೇಖರ ಹೆಗಡೆ

ಪಲವಿನ್ನೂ ಹಸಿ ಹಸಿಯಾಗಿದೆ
ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ
ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ
ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ

ಕಮಟಾಗಿ  ಹಳಸಿಹೋಗುವ ಮುನ್ನ
ಯಾರ ಹೆಸರಿನ ಷರಾ ಬರೆದಿದೆಯೋ 
ಕತ್ತಿಯಂಚಿನಲಿ ಕತ್ತರಿಸಿಕೊಂಡು 
ಹೆಣವಾಗಿರುವ ಜೀವಕೋಶಗಳ ಮೇಲೆ 

ಸಾವೊಂದು ಬದುಕಾಗಿದೆ ನನಗೆ
ಬದುಕೊಂದು ಸಾವಾಗಿದೆ ಕೊನೆಗೆ
ಪಯಣವಿನ್ನು ಯಾರದೋ ಮನೆಗೆ
ನೇತುಹಾಕಿರುವ ಅಂಗಡಿಯೊಳಗೆ 

ಒಡಲುಗೊಂಡದ್ದೆಲ್ಲವೂ ಬಿಕರಿಗೆ
ಕಾಲು ಕೈ ಕಣ್ಣು ತೊಡೆಗಳೆಲ್ಲ
ಮಾಗಿದ ಹಣ್ಣುಗಳ ಬನದ ಬೆಲ್ಲ
ತನುವ ತುಂಬಿಕೊಳ್ಳಿ ಬಾಯಿ ಚಪ್ಪರಿಸಿ
ಮುತ್ತಿಟ್ಟು ನಾಲಿಗೆಯ ಸುಲಿದ ರಸಗಲ್ಲದಲಿರಿಸಿ

ಮುಗಿದು ಹೋಯಿತು ಕತೆಯೆಂದುಕೊಂಡೆ
ಆರಂಭವಿದೆಂದು ಅಂತರಂಗ ತುಂಬಿಕೊಂಡೆ
ಉಸಿರೆಳೆದುಕೊಂಡು ರಸಾಯನ ಕುದಿಸಿ
ಶಾಶ್ವತವಾಗಿರುವಂತೆ ನೆನಹು ಹಸಿ ಹಸಿ

ತುಂಡು ತುಂಡು ದಿಂಡು ಸುಖದ ಗೀರು
ಏರಬೇಡಿ ಇಮ್ಮನದಿ ನಿಂತ ತೇರು
ಮಿಗೆಯಾಗಲಿ ಆಯಸ್ಸು
ಉಂಡು ಮರೆತ ಒಡಲ ಕನಸು

ಅಳುವ ಕಂಡಿಲ್ಲ ಕೊಂದಹರೆಂದು
ನಂಬಿಲ್ಲ ತಕ್ಕುದ ಮಾಡುವನೆಂದು
ಬಯಲಾಗುವುದರಲ್ಲಿಯೇ ಬದಲು
ಬೆಳಕಾಗಲಿ ಬದುಕೆನ್ನುವುದೇ ಮೊದಲು

‍ಲೇಖಕರು Avadhi

November 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೇನು ಸೈನ್ಯ ಮತ್ತು ನಾನು!

ಜೇನು ಸೈನ್ಯ ಮತ್ತು ನಾನು!

ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು!...

ಅಂತರಂಗದ ಅಳಲು

ಅಂತರಂಗದ ಅಳಲು

ಅಮಿತಾ ರವಿಕಿರಣ್ ಹಾಗೆ ದಿನಕ್ಕೆಷ್ಟು ಬಾರಿ scrollಮಾಡುತ್ತೇನೋ ಗೊತ್ತಿಲ್ಲ,ನೂರಾರು ಅಂಕಿಗಳುಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು....

ಪಾದಗಳಿಗೆ ನಾನು ಋಣಿ

ಪಾದಗಳಿಗೆ ನಾನು ಋಣಿ

ಚಂದ್ರಪ್ರಭಾ ಈ ಪಾದಗಳನ್ನು ನಾನು ಪ್ರೀತಿಸುತ್ತೇನೆಯಾಕೆಂದರೆ ಅವು ಆಯುಷ್ಯ ಪೂರ್ತಿನನ್ನ ಭಾರ ಹೊತ್ತಿವೆಈ ಪಾದಗಳನ್ನು ನಾನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This