
ರಾಜಶೇಖರ ಕುಕ್ಕುಂದಾ
ಮಕ್ಕಳ ಸಾಹಿತ್ಯದ ಚಟುವಟಿಕೆಗಳಿಂದ ರಾಜ್ಯದಾದ್ಯಂತ ತನ್ನನ್ನು ಗುರುತಿಸಿಕೊಂಡು, ಕಲಬುರ್ಗಿಯ ಶಹಾಪುರವನ್ನು ಕೇಂದ್ರವಾಗಿರಿಸಿಕೊಂಡು, ಬೆಳ್ಳಿ ಹಬ್ಬವನ್ನೂ ಆಚರಿಸಿಕೊಂಡು ಕಳೆದ ೨೦ ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆಯವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ ಮಕ್ಕಳಿಗಾಗಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನೀಡುತ್ತ ಬರುತ್ತಿರುವ “ವಿದ್ಯಾಸಾಗರ ಬಾಲ ಪುರಸ್ಕಾರ” ಕ್ಕೆ ಈ ಬಾರಿ “ಮೊಬೈಲ್ ಮೈಥಿಲಿ ಮತ್ತು ಮುಗ್ಧ ಕತೆಗಳು” ಕೃತಿಯ ಕರ್ತೃ ಉಡುಪಿಯ ಬಹುಮುಖ ಪ್ರತಿಭೆ ಕುಮಾರಿ ಕೆ ಸುರಭಿ ಕೊಡವೂರು ಆಯ್ಕೆಯಾಗಿದ್ದಾಳೆ.

ಉಡುಪಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿರುವ ಸುರಭಿ ಸಂಗೀತ, ನಾಟಕ, ಕೊಳಲು ವಾದನದಲ್ಲಿ ಆಸಕ್ತಿ ಹೊಂದಿದ್ದಾಳೆ. ಪುರಸ್ಕಾರವು ಐದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ರೋಹಿಣಾಕ್ಷ ಶಿರ್ಲಾಲು ಅವರು ಈ ಸಲದ ನಿರ್ಣಾಯಕರಾಗಿದ್ದರು ಮತ್ತು ಸುಮಾರು ಮೂವತ್ತು ಕೃತಿಗಳು ಆಯ್ಕೆಗಾಗಿ ಬಂದಿದ್ದವು ಎಂದು ವೇದಿಕೆ ಸಂಚಾಲಕರಾದ ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ರಾಜಶೇಖರ ಕುಕ್ಕುಂದಾ ತಿಳಿಸಿದ್ದಾರೆ.
0 ಪ್ರತಿಕ್ರಿಯೆಗಳು