’ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೆ..’ ಬರಹಕ್ಕೆ ಒ೦ದು ಸ್ಪ೦ದನೆ

’ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೆ..’ ಲೇಖನ ಓದಿ ಸ್ಪ೦ದಿಸಿದ ಶ್ರೀ ವಿ ಎನ್ ಲಕ್ಷ್ಮೀನಾರಾಯಣ ಅವರು ಪ್ರತಿಕ್ರಯಿಸಿದ್ದು ಹೀಗೆ :

ವಿ.ಎನ್.ಲಕ್ಷ್ಮೀನಾರಾಯಣ

  ಮಾನ್ಯರೆ ನಿಮ್ಮ ಅನುಭವವನ್ನು ಕೇವಲ ತಾಯಿಯಾಗಿ ಅಲ್ಲದೆ ಈ ಸಮಾಜದಲ್ಲಿ ಬದುಕುತ್ತಿರುವ ಮನುಷ್ಯರಾಗಿ ಅರ್ಥೈಸಿಕೊಂಡರೆ ಭಕ್ತಿ, ದೇವರು, ಪುರೋಹಿತಶಾಹಿ ಮುಂತಾದ ಮಾತುಗಳು ಸ್ಪಷ್ಟವಾಗಬಹುದು. ಈ ಕೆಳಗಿನ ಲೇಖನದ ಭಾಗವನ್ನು (ನುಡಿ ಅಕ್ಷರದಲ್ಲಿ) ನೀವು ಓದಬೇಕೆಂದು ಬಯಸುತ್ತೇನೆ. ಪರಮಹಂಸರು ಗಂಟಲು ಹುಣ್ಣಿನಿಂದ ನರಳುತ್ತಿದ್ದಾಗ ಕುಡಿಸುತ್ತಿದ್ದ ಗಂಜಿ ಈಗ ರಾಮಕೃಷ್ಣಾಶ್ರಮದ ಸಿರಿವಂತ ಶಾಖೆಗಳಲ್ಲಿ ದ್ರಾಕ್ಷಿ-ಗೋಡಂಬಿ ಹಾಕಿದ ಪಾಯಸವಾಗಿ ಪ್ರಸಾದವೆನಿಸಿದೆ ಶಿರಡಿ ಸಾಯಿಬಾಬಾ ಒಣಕಲು ರೊಟ್ಟಿ ತಿಂದು ಜೀವಿಸುತ್ತಿದ್ದ, ನೊಂದವರಿಗೆ ಬೂದಿಯ ಸಾಂತ್ವನ ನೀಡುತ್ತಿದ್ದ ಬಡಸಾಧು.ಇಂದು ಬೆಳ್ಳಿಕಿರೀಟವನ್ನೊಪ್ಪಿಸುವ ಹಣ ಪ್ರಪಂಚದ ಅತ್ಯಂತ ಸಿರಿವಂತ ದೇವರಾಗಿ ಪೂಜೆಗೊಳ್ಳುತ್ತಿದ್ದಾನೆ. ಕಡುಬಡತನದಲ್ಲಿ ಮಠದ ಆಶ್ರಯದಲ್ಲಿ ಬದುಕುತ್ತಿದ್ದ ಬ್ರಾಹ್ಮಣನೊಬ್ಬ ಸ್ಫುರದ್ರೂಪಿ ಹೆಂಡತಿಯನ್ನು ತೊರೆದು ಸಂನ್ಯಾಸಿಯಾಗಿ,ಜೀವಂತ ಸಮಾಧಿಯಾದ ಕ್ರಿಯೆಗಳ ಹಿಂದೆ ಇದ್ದ ನೋವು, ನರಳಿಕೆ, ಅನಿವಾರ್ಯತೆಗಳು ಹಣದ ಹೊಳೆ ಹರಿಯುವ ಮಠದ ಭಕ್ತರಿಗೆ ಮುಟ್ಟುತ್ತದೆಯೆ? ಗುಲಾಮರ ರಾಜನೆಂದು ಹೀಯಾಳಿಸಿಕೊಂಡು ಕಡುಬಡವರು-ಕುಷ್ಠರೋಗಿಗಳನ್ನು ಸಂತೈಸುತ್ತಿದ್ದ ಬಡ ಸಂತ ಏಸು ಇಂದು ಶ್ರೀಮಂತರ ಕೈಗೊಂಬೆಯಾಗಿದ್ದಾನೆ. ಬಡಜನರ ಸಂತ ಸತ್ತು ಶ್ರೀಮಂತರ ದೇವರಾಗುತ್ತಾನೆ. ಆರಾಧನೆಯಲ್ಲಿ ನೇಗಿಲಿನ ಮೂಲದ ಆಹಾರ-ಪಾನೀಯಗಳ ಪಾತ್ರ ಹಿರಿದು. ಎಲ್ಲಾ ಬಗೆಯ ಉತ್ಸವ-ಹಬ್ಬಗಳು, ದೇವರ ಆರಾಧನೆಗಳು ಆಹಾರ-ಪಾನೀಯಗಳ ಸಮೃದ್ಧಿಯ ಜೊತೆಗೆ ಭೌತಿಕವಾಗಿ ಇಲ್ಲವೆ ಸಾಂಕೇತಿಕವಾಗಿ ತಳುಕು ಹಾಕಿಕೊಂಡಿವೆ. ಶ್ರಮಿಕರು ತಾವು ಬೆಳೆದ, ಉತ್ಪಾದಿಸಿದ ಆಹಾರವಸ್ತುಗಳನ್ನು, ಅವುಗಳಿಂದ ತಯಾರಿಸಿದ ಪಾನೀಯಗಳನ್ನು ತಮ್ಮ ದೇವರಿಗೆ, ಪೂಜಾರಿ, ಪುರೋಹಿತ, ಧರ್ಮಗುರುಗಳ ಮುಂದಾಳತ್ವ, ಮಧ್ಯವರ್ತನೆಯೊಂದಿಗೆ ಕೃಷಿ ಸಮೃದ್ಧಿಯ ಕಾಲದಲ್ಲಿ ಅಪರ್ಿಸುವುದು ಸಾಮಾನ್ಯ. ಆರಾಧನೆಯೆಂದರೇ ಆಹಾರವನ್ನು ಬಲಿಕೊಟ್ಟು, ಕತ್ತರಿಸಿ, ಪಕ್ವವಾಗಿಸಿ ದೇವರ ಹೆಸರಿನಲ್ಲಿ ಹಂಚಿ ತಿನ್ನುವುದು. ಅವರು ಆರಾಧಿಸುವ ದೇವರು ಎಷ್ಟೇ ರೂಕ್ಷವಾಗಿದ್ದರೂ ಜನರು ಮತ್ತು ಪೂಜಾರಿ-ಪುರೋಹಿತ-ಧರ್ಮಗುರುಗಳು ತಿನ್ನಲಾಗದ, ತಿನ್ನಬಾರದ ಆಹಾರಪಾನೀಯಗಳನ್ನು ಒಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಗಮನಿಸಬೇಕು. ಜನರು ತಿನ್ನಲಾಗದ ಹುಲಿ-ಸಿಂಹಗಳನ್ನು ಯಾವ ದೇವರೂ, ಪೂಜಾರಿಯೂ ಬಲಿಕೊಡು ಎಂದು ಕೇಳುವುದಿಲ್ಲ. ಹಸು, ಹೋರಿ, ಕೋಣ, ಒಂಟೆ, ಕುದುರೆ, ಆಡು, ಕುರಿ, ಕೋಳಿಗಳನ್ನು ಬಲಿಕೇಳುವುದು ಸಾಮಾನ್ಯ. ಬ್ರಾಹ್ಮಣ ದೇವರು ಮಾಂಸಾಹಾರ, ಮದ್ಯಪಾನೀಯಗಳನ್ನು, ಹಿಂದೂ-ಜೈನ-ಬೌದ್ಧ ದೇವರು ದನವನ್ನು, ಇಸ್ಲಾಂ ದೇವರು ಹಂದಿಯನ್ನು, ಎಂದೂ ಕೇಳುವುದಿಲ್ಲ. ಬುಡಕಟ್ಟಿನ ಜೀವನ ನಶಿಸುತ್ತಾ ನಾಗರಿಕತೆ ವಿಕಾಸವಾಗುತ್ತಾ ಹೋದಂತೆ ದೇವರು, ಪೂಜಾರಿ-ಪುರೋಹಿತ-ಧರ್ಮಗುರುಗಳೂ ಬದಲಾಗುತ್ತಾ ಬಂದಿದ್ದಾರೆ. ನರಭಕ್ಷತೆ ಸಾಮಾನ್ಯವಾಗಿದ್ದ ಬುಡಕಟ್ಟುಗಳ ದೇವರು ನರಬಲಿಯನ್ನೆ ಕೇಳುತ್ತಿದ್ದವು. ನೇಗಿಲು ಮತ್ತು ಬಂದೂಕುಗಳು ಶಿಷ್ಟವಾಗುತ್ತಾ ಹೋದಂತೆ ದೇವರು ಮತ್ತು ಪೂಜಾರಿಗಳು ಜನರಿಗೆ ವಿಧಿಸುವ ಆರಾಧನೆಯ ವಿಧಾನಗಳೂ, ಆಹಾರ-ಪಾನೀಯಗಳ ಸ್ವರೂಪಗಳೂ ಬದಲಾಗಿವೆ. ಕಾಡು-ಮೇಡುಗಳ ಬುಡಕಟ್ಟು ದೇವರುಗಳು ಪೂಜಾರಿಗಳ ಮೂಲಕ ಕಾಡಿನಲ್ಲಿ ಬೆಳೆಯುವ ಹಣ್ಣು-ಹಂಪಲು, ಸೊಪ್ಪು-ಸದೆ ಕೇಳುತ್ತಿದ್ದವು. ನಗರ-ಪಟ್ಟಣಗಳ ಸಂಪರ್ಕಕ್ಕೆ ಬಂದಮೇಲೆ ಬಾಳೆಹಣ್ಣು-ತೆಂಗಿನಕಾಯಿ ಕೇಳಲು ಪ್ರಾರಂಭಿಸಿದವು. ಹಾಗೆಯೇ ಬ್ರೆಡ್ಡು-ವೈನಿನ ಕ್ರೈಸ್ತ ಆರಾಧಕರು ಖಜರ್ೂರ-ಕಲ್ಲುಸಕ್ಕರೆಯ ಮಹಮದೀಯ ಆರಾಧಕರು, ಹೋಳಿಗೆ-ಕಡುಬು-ತಂಬಿಟ್ಟಿನ ಕೃಷಿಕ ಆರಾಧಕರು ಬಂಡವಾಳವಾದೀ ಸಮಾಜಗಳು ಪ್ರಬಲವಾಗುತ್ತಾ ಹೋದಂತೆ ಹಣವನ್ನೇ ನೇರವಾಗಿ ಕಾಣಿಕೆಯೆಂದು ದೇವರಿಗೆ ಪೂಜಾರಿಗಳ ಮೂಲಕ ಅಪರ್ಿಸಿ ಆರಾಧಿಸತೊಡಗಿದ್ದಾರೆ. ರಾಗಿ-ಜೋಳದಂಥ ಬಡವರ ಧಾನ್ಯಗಳನ್ನು ಒಪ್ಪಿಸಿಕೊಳ್ಳುವ ದೇವರುಗಳು, ಸ್ವಾಗತಿಸುವ ಪೂಜಾರಿಗಳು ಕಾಣಸಿಗುವುದಿಲ್ಲ. ಹೆಚ್ಚೆಂದರೆ ಬತ್ತ, ಅಕ್ಕಿ, ಮುಂತಾದ ನಗರ ಆಹಾರಪದ್ಧತಿಯ ಧಾನ್ಯಗಳನ್ನು, ಸ್ಥಳೀಯವಾಗಿ ಬೆಳೆಯುವ ಸೋರೆ, ಕುಂಬಳ, ಬದನೆ ಮುಂತಾದ ತರಕಾರಿಗಳನ್ನು ಒಪ್ಪಿಸಿಕೊಳ್ಳುವ ಮಠ-ಧರ್ಮಕ್ಷೇತ್ರಗಳು ಸಿಗಬಹುದು. ಹಾಗೆಯೇ ಎಷ್ಟೇ ಸಮೃದ್ಧಿಯಿದ್ದರೂ, ಮಾರಿದರೆ ಕೈತುಂಬಾ ಹಣ ಸಿಗಬಹುದಾದ ಪೆಟ್ರೋಲು, ಡೀಸೆಲ್, ಸೀಮೆಣ್ಣೆಗಳನ್ನು ಅಪರ್ಿಸುವಂತೆ ತನ್ನ ಭಕ್ತರನ್ನು ಕೇಳುವ ದೇವರು ಇದ್ದಂತಿಲ್ಲ. ದೇವಸ್ಥಾನ, ಮಠ-ಮಾನ್ಯಗಳಿಗೆ ಸೇರಿದ ಪೆಟ್ರೋಲ್ ಬಂಕ್ ಗಳು, ಸಿನಿಮಾ ಟಾಕೀಸುಗಳು, ಮಾಲ್ ಗಳು ಖಂಡಿತವಾಗಿಯೂ ಇವೆ. ಅದೇ ಹಣದ ಬೆಳೆಗಳಾದ ಏಲಕ್ಕಿ, ಕಾಫಿ, ಮೆಣಸು ಮುಂತಾದ ದುಬಾರಿ ಬೆಲೆಯ ಕೃಷಿ ಉತ್ಪನ್ನಗಳನ್ನು ದೇವರು-ಪೂಜಾರಿ-ಪುರೋಹಿತ-ಧರ್ಮಗುರುಗಳು ಬೇಡವೆನ್ನುವುದಿಲ್ಲ. ಅಂದರೆ ಆರಾಧನೆಗೆ ಬಳಸುವ ವಸ್ತುಗಳು ನೇಗಿಲಿನ ಮೂಲದ ಆಹಾರಧಾನ್ಯಗಳಾಗಿರಬೇಕು, ಅಥವಾ ತಕ್ಕಡಿ ಮೂಲದ ಹಣದ ರೂಪದಲ್ಲಿರಬೇಕು. ಜನರು ಎಷ್ಟೇ ಬಡವರಾದರೂ ಅವರು ಆರಾಧಿಸುವ ದೇವರು, ಮಧ್ಯವತರ್ಿಯಾದ ಪೂಜಾರಿ-ಪುರೋಹಿತ-ಧರ್ಮಗುರುಗಳು ಯಾವತ್ತೂ ಬಡವರಲ್ಲ. ಶ್ರಮಿಕರು ಹೊಟ್ಟೆ-ಬಟ್ಟೆ ಕಟ್ಟಿ ಕೂಡಿಟ್ಟು, ಭಯ-ಭಕ್ತಿಯಿಂದ ಅಪರ್ಿಸಿದ ಕಾಣಿಕೆಗಳು, ಶ್ರಮಶಕ್ತಿಯ ಹೆಚ್ಚುವರಿ ಮೌಲ್ಯವನ್ನು ಶ್ರಮಿಕರಿಂದ ದರೋಡೆಮಾಡಿ ಸಿರಿವಂತರು ತಮ್ಮ ಹೆಸರಿನಲ್ಲಿ ಕಾಣಿಕೆಯಾಗಿ ಕೊಡುವ ಶ್ರಮಿಕರ ಹಣ ದೇವರಿಗೆ ಬೆಳ್ಳಿಯ ಮೀಸೆ, ಮುತ್ತಿನ ಹಾರ, ವಜ್ರಖಚಿತ ಕಿರೀಟ, ಚಿನ್ನದಕತ್ತಿ, ಕಲಾಪತ್ತಿನ ರೇಷ್ಮೆಸೀರೆ, ಬೆಳ್ಳಿಯರಥ, ಚಿನ್ನದ ತಗಡು ಹೊದ್ದಿಸಿದ ಗೋಪುರ, ಅಮೃತಶಿಲೆಯ ರತ್ನಖಚಿತ ದೇವಸ್ಥಾನಗಳಾಗಿ ಕಂಗೊಳಿಸುತ್ತವೆ. ನಯವಂಚನೆಯ ತಕ್ಕಡಿಯ ಮೂಲಕ ಕೊಳ್ಳೆಹೊಡೆದ ಹಣದಿಂದ ಮಾಡಿಸಿದ ಚಿನ್ನ-ಬೆಳ್ಳಿಯ ಗಂಟೆಗಳಾಗಿ ತೂಗುತ್ತವೆ. ಹೀಗೆ ದೇವರ -ಪೂಜಾರಿಗಳ-ಪುರೋಹಿತರ-ಧರ್ಮಗುರುಗಳ ಶ್ರೀಮಂತಿಕೆಯ ರಕ್ಷಣೆಗೆ ಬಂದೂಕನ್ನು ಬೇಡುತ್ತವೆ.  ]]>

‍ಲೇಖಕರು G

March 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This