ಉತ್ತರ ಕೊಡ್ತೀರಾ ಪಿಲೀಜ್?

ಎಸ್ ಸಿ ದಿನೇಶ್  ಕುಮಾರ್

ನಯನತಾರಾ (ಸೂಪರ್), ಸದಾ (ಮೈಲಾರಿ), ಭಾವನಾ (ಜಾಕಿ), ಚಾರ್ಮಿ (ದೇವ್), ಭಾವನಾ (ವಿಷ್ಣುವರ್ಧನ್), ನಿಖಿತಾ (ನಾರಿಯ ಸೀರೆಕದ್ದ, ಸಂಗೊಳ್ಳಿ ರಾಯಣ್ಣ), ನಮಿತಾ (ಹೂ), ಪ್ರಿಯಾಮಣಿ (ಕೋಕೋ, ರಾಮ್ ಇತ್ಯಾದಿ), ಸುಮಿತ್ ಕೌರ್ (ಜೋಗಯ್ಯ), ಕರಿಷ್ಮಾ ತನ್ನಾ (ಮತ್ತೆ ಪ್ರೀತ್ಸೋಣ ), ಮಂಜರಿ (ಮುಂಜಾನೆ), ರೋಮಿಯೋ (ಭಾವನಾ), ಭಾಮಾ (ಶೈಲು), ಸಮೀರಾ ರೆಡ್ಡಿ (ವರದನಾಯಕ), ಆಕಾಂಕ್ಷಾ ಭಟ್ (ದಶಮುಖ), ಇಲಿಯಾನಾ (ಹುಡುಗಾ ಹುಡುಗಿ), ಉದಯತಾರಾ (ಪ್ರೀತ್ಸೆ ಪ್ರೀತ್ಸೆ), ಸಲೋನಿ (ತೀರ್ಥ, ಬುದ್ಧಿವಂತ), ಪಾರ್ವತಿ ಮೆನನ್ (ಅಂದರ್ ಬಾಹರ್)…… ಪಟ್ಟಿ ಮುಗಿಯೋದೇ ಇಲ್ಲ ಕಣ್ರೀ. ಇವರೆಲ್ಲ ನಮ್ಮ ಸೂಪರ್ ಸ್ಟಾರ್ ಗಳ ಫೇಮಸ್ ಪಿಕ್ಚರ್ ಗಳ ಹೀರೋಯಿನ್ ಗಳು. ಒಬ್ಬರಿಗೂ ಒಂದಕ್ಷರ ನೆಟ್ಟಗೆ ಕನ್ನಡ ಮಾತಾಡೋದಕ್ಕೆ ಬರೋದಿಲ್ಲ. ರಾಧಿಕಾ ಪಂಡಿತ್, ಹರ್ಷಿಕಾ ಪೂಣಚ್ಚಾ, ಹರಿಪ್ರಿಯ, ನಿವೇದಿತಾ, ಸುಚಿತಾ ಶೆಟ್ಟಿ, ಭಾವನಾ ರಾಮವ್, ಶರ್ಮಿಳಾ ಮಾಂಡ್ರೆ, ತೇಜಸ್ವಿನಿ, ದೀಪಾ ಸನ್ನಿಧಿ ಇವರೆಲ್ಲ ಕನ್ನಡದ ಹುಡುಗೀರು. ಜತೆಗೆ ನಂಗೊಂದು ಛಾನ್ಸು ಕೊಡಿ ಎಂದು ದಿನನಿತ್ಯ ಪ್ರೊಡ್ಯೂಸರು, ಡೈರೆಕ್ಟರುಗಳನ್ನು ಹುಡುಕಿಕೊಂಡು ಬರುವ ನೂರಾರು ಹುಡುಗೀರೂ ಇದ್ದಾರೆ. ಡಬ್ಬಿಂಗ್ ಬಂದ್ರೆ ನಮ್ಮ ಕಲಾವಿದರು ಹೊಟ್ಟೆ ಹಸಿದುಕೊಂಡು ಒದ್ದಾಡಬೇಕಾಗುತ್ತೆ ಅನ್ನೋರಿಗೆ ಕನ್ನಡದ ಹುಡುಗೀರ ಹಸಿವು ಅರ್ಥವಾಗಲ್ವಾ? ಅವರ ಹೊಟ್ಟೆಪಾಡು ಮುಖ್ಯ ಅಂತ ಅನಿಸೋದೇ ಇಲ್ವಾ? ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾಗೆ ಇನ್ನೂ ಹೀರೋಯಿನ್ನೇ ಬುಕ್ ಆಗಿಲ್ಲ, ಯಾಕೆ ಅಂದ್ರೆ ಅವರಿಗೆ ಕಾಜೋಲ್ ಅಗರ್ ವಾಲ್ ಎಂಬ ಹುಡುಗೀನೇ ಬೇಕಂತೆ. ಜಾಕಿ ಸಿನಿಮಾಕ್ಕೆ ಸೆಲೆಕ್ಟ್ ಆಗಿದ್ದ ಹರ್ಷಿಕಾ ಪೂಣಚ್ಚ ಮೂಹರ್ತಕ್ಕೂ ಬಂದಿದ್ದರೂ ಉದ್ದ ಕಮ್ಮಿ ಎಂಬ ಕಾರಣಕ್ಕೆ ರಿಜೆಕ್ಟ್ ಆದಳು, ಮಲಯಾಳಿ ಹುಡುಗಿ ಭಾವನಾ ಆ ಜಾಗಕ್ಕೆ ಬಂದಳು. ಯಾಕೆ ಈ ಗೋಸುಂಬೆಯಾಟ? ಯಾಕೆ ಎರಡೆರಡು ನಾಲಿಗೆ? ಯಾರಾದ್ರೂ ಉತ್ತರ ಕೊಡ್ತೀರಾ ಪಿಲೀಜ್?]]>

‍ಲೇಖಕರು G

April 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

ನನ್ನ ’ಎದೆಗೆ ಬಿದ್ದ ಅಕ್ಷರ’

ನನ್ನ ’ಎದೆಗೆ ಬಿದ್ದ ಅಕ್ಷರ’

ಡಾ.ಬಿ.ಆರ್.ಸತ್ಯನಾರಾಯಣ ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು...

೧ ಪ್ರತಿಕ್ರಿಯೆ

  1. Pramod

    ಇತ್ತೀಚಿನ ದಿನಗಳಲ್ಲಿ ಸೊ ಕಾಲ್ಡ್ ಡೈರಕ್ಟರ್, ಪ್ರೋಡಸರ್, ಆಕ್ಟರ್ ಗಳು ಯಾವ ಚಿತ್ರದಲ್ಲಿ ಹೀರೋಯಿನ್ ಗೆ ಅಥವಾ ಯಾವುದೇ ಮಹಿಳ ಗೆ ಒಪ್ಪುವ೦ತಹ, ಗೌರವಾನ್ವಿತ, ರಿಯಲಿಸ್ಟಿಕ್ ಪಾತ್ರ ಕೊಟ್ಟಿದ್ದಾರೆ ಎನ್ನುವುದು ಕ್ವಿಜ್ ಪ್ರಶ್ನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: