ಎಂ ಎಸ್ ಮೂರ್ತಿ ಪ್ರತಿಭಟನೆ ಮಾಡಿದ್ದಾರೆ.

2005052003930201

ಕಲಾವಿದರ ಪ್ರತಿಭಟನೆಗೆ ಕಾರಣವೇನಿತ್ತು?

ತಮಿಳುನಾಡಿನ ಪಾಲಾಗುತ್ತಿದ್ದ ’ಮಾಡರ್ನ್ ಆರ್ಟ್ ಗ್ಯಾಲರಿ’ಯನ್ನು ಬಹು ಪ್ರಯಾಸದಿಂದ ಕರ್ನಾಟಕ್ಕಕ್ಕೆ ತರಲಾಗಿತ್ತು. ಕಲಾವಿದರಿಗದು ಹೆಮ್ಮೆಯ ವಿಷಯ. ನಮ್ಮ ರಾಜ್ಯ ಸರಕಾರ ಗ್ಯಾಲರಿಗಾಗಿ ಪ್ರತಿ ವರ್ಷ ಸುಮಾರು ೩೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ.
ನಮ್ಮ ದುಡ್ಡು, ನಮ್ಮ ನೆಲ ಅಂದ ಮೇಲೆ ಕನ್ನಡಿಗರಿಗೂ ಅದರಲ್ಲಿ ಸೂಕ್ತ ಪ್ರಾತಿನಿದ್ಯ ಸಿಗಬೇಕೆಂದು ಬಯಸುವುದು ನ್ಯಾಯ ತಾನೆ? ಅದು ಸಿಕ್ಕಿಲ್ಲವೆಂದು
ಗ್ಯಾಲರಿಯಲ್ಲಿ ಸುಮಾರು ೫೦೦ ಕಲಾವಿದರ ಚಿತ್ರಗಳಿವೆ.ಅದರಲ್ಲಿ ಕರ್ನಾಟಕದ ಕಲಾವಿದರು ಬೆರಳೆಣಿಕೆಯಷ್ಟು ಮಾತ್ರ. ಅದಲ್ಲದೆ ಮುರ್ತಿಯವರೂ ಸೇರಿದಂತೆ ಕರ್ನಾಟಕದ ಅನೇಕ ಕಲಾವಿದರಿಗೆ ಸಮಾರಂಭಕ್ಕೆ ಅಹ್ವಾನ ನೀಡಲಿಲ್ಲವೆಂಬ ಸಕಾರಣವಾದ ಸಿಟ್ಟು.

ರಾಜಕೀಯ ವೇದಿಕೆಗಳಲ್ಲಿ ಹೇಗೆ ಮಾತಾಡಿದರೂ ನಡೆಯುತ್ತದೆ. ಆದರೆ ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದ ಲಲಿತ ಕಲೆಗಳ ಬಗ್ಗೆ ಮಾತಾಡುವಾಗ ಎಚ್ಚರವಾಗಿರಬೇಕಾಗುತ್ತದೆ. ಪ್ರೇಕ್ಷಕರಲ್ಲಿ ಪ್ರಾಜ್ನರೂ, ಸೂಕ್ಷಮತಿಗಳೂ ಇರುತ್ತಾರೆ. ಒಂದೋ ಇಂಥ ಸಮಾರಂಭಗಳಿಗೆ ಪೂರ್ವ ಸಿದ್ದತೆಯೊಂದಿಗೆ ಬರಬೇಕು. ಇಲ್ಲವಾದರೆ ತನ್ನ ಮಿತಿಯನ್ನು ಅರಿತುಕೊಂಡು ಶುಭ ಹಾರೈಸಿ, ಸರಕಾರದ ಸಹಕಾರವನ್ನು ಪ್ರಕಟಿಸಿ ,ಬಾಯಿ ಮುಚ್ಚಿ ಕಿವಿ ತೆರೆದು ಕುಳಿತುಕೊಳ್ಳಬೇಕು.

ಸಂಪೂರ್ಣ ಓದಿಗೆ ಭೇಟಿ ಕೊಡಿ- ಮೌನಕಣಿವೆ

‍ಲೇಖಕರು avadhi

February 21, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

4 ಪ್ರತಿಕ್ರಿಯೆಗಳು

 1. jinke subbanna

  ರಾಜಕಾರಣಿಗಳಿ೦ದ ಜವಾಬ್ದಾರಿಯನ್ನಾಗಲೀ, ಬಧ್ಧತೆಯಾಗಲೀ ಬಹುಶಃ ಯಾರೂ ನಿರೀಕ್ಷಿsuವುದಿಲ್ಲ. ಅದಕ್ಕೆ ತಕ್ಕ೦ತೆ ಮಾನ್ಯ ಮ೦ತ್ರಿಗಳು ನಡೆದುಕೊ೦ಡಿದ್ದಾರೆ, ಕೇ೦ದ್ರಸರಕಾರದ ಧೋರಣೆ, ಅದು ಕೇವಲ ಆಡಳಿತಾತ್ಮಕ ಧೋರಣೆ, ಪ್ರತಿಭಟಿಸಲು ಮೌನವಾಗಿದ್ದ ಕಲಾವಿದರು
  ರಾಜ್ಯಸಚಿವರ ಧೋರಣೆ ಪ್ರತಿಭಟಿಸಲು ಮಾತಿಗೆ ಶರಣಾದದ್ದು, ಅದೂ ’ಆಧುನಿಕ ಕಲೆಯ ಬಗ್ಗೆ ನಿಮಗೇನೂ ತಿಳಿದಿಲ್ಲ’ ಎ೦ಬ ಧಾಟಿಯಲ್ಲಿ ಮಾತಾಡಿದುದೂ ಪರಿಸ್ಥಿತಿ ಅಷ್ಟು ಹದಗೆಡುವ೦ತೆ ಮಾಡಿತು. ಇದನ್ನೇ ಸ್ವಲ್ಪ ನಾಜೂಕಾಗಿ ಮಾಡಬಹುದಿತ್ತೇನೋ? ಪರಿಣಾಮವಾಗಿ ಕೇ೦ದ್ರದ ವಿರುಧ್ಧದ ಪ್ರತಿಭಟನೆ ಕಾವು ಕಳೆದುಕೊ೦ಡಿತು, ನಷ್ಟ ಕಲಾವಿದರಿಗೆ, ಮತ್ತು ರಾಜ್ಯದ ಜನತೆಗೆ. ರಾಜಕಾರಣಿಗಳ೦ತೆ, ಕಲಾವಿದರಿ೦ದಲೂ ಅವರ ಕ್ಷೇತ್ರ ಹೊರತಾಗಿ ಜನತೆ ಯಾವುದೇ ಬಧ್ಧತೆ ನಿರೀಕ್ಷಿಸಬಾರದೇ ? ನೋವಾಗುತ್ತದೆ. ಜಿ೦ಕೆ ಸುಬ್ಬಣ್ಣ, ಪುತ್ತೂರು.

  ಪ್ರತಿಕ್ರಿಯೆ
 2. ಸಿದ್ದಮುಖಿ

  ಇದು ಬ್ರಾಹ್ಮಣರ ಶ್ರೇಷ್ಟ ಸರ್ಕಾರ ಎಂದು ಹೇಳಿದ ಸಚಿವ ರಾಮಚಂದ್ರಗೌಡ ಅಂಥವರಿಂದ ಏನನ್ನು ನಿರೀಕ್ಷಿಸಲೂ ಸಾಧ್ಯ.ಪುರೋಹಿತಶಾಹಿಯ ತುತ್ತೂರಿಯಂತಿರುವ ರಾಮಚಂದ್ರಗೌಡ ಆಧುನಿಕ ಕಲೆಯ ಬಗ್ಗೆ ಏನು ಹೇಳಿಯಾರು.ಎಂ.ಎಸ್.ಮೂರ್ತಿ ಅವರನ್ನು ಹೊರಗಟ್ಟಿ ಎಂದ ಸಚಿವರ ಹೇಳಿಕೆ ಅಧಿಕಾರದ ಮದದಿಂದ ಹೊರ ಬಂದ ಮಾತಿನಂತಿದೆ. ಸರ್ಕಾರವೇ ಮಾತನಾಡುತ್ತಿದೆ.ಯಾರಿಗೂ ಉತ್ತರಿಸಬೇಕಾಗಿಲ್ಲ ಎನ್ನುವ ಮೂಲಕ ಪ್ರಜಾತಂತ್ರ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.ಸರ್ಕಾರದ ವಿರುದ್ಧ ಪ್ರತಿಭಟಿಸುವ,ಹೇಳಿಕೆ ನೀಡುವವರ ಮೇಲೆ ಪ್ರಭುತ್ವ ದಬ್ಬಾಳಿಕೆ ನಡೆಸುತ್ತಿರುತ್ತಲೇ ಇರುತ್ತದೆ ಎಂಬುದಕ್ಕೆ ಎಂ.ಎಸ್. ಮೂರ್ತಿ ಅವರ ಪ್ರಕರಣವೇ ಸಾಕ್ಷಿ.ಆಧುನಿಕ ಜಗತ್ತಿನ ಸಂಕೀರ್ಣತೆಯ ಎಳೆಗಳನ್ನು ಕುಂಚದಲ್ಲಿ ಸೆರೆ ಹಿಡಿಯುವ ಶಕ್ತಿ ಕಲಾವಿದರಿಗೆ ಇದೆ ಎಂಬುದನ್ನು ರಾಮಚಂದ್ರಗೌಡರಂಥ ಮನುವಾದಿ, ಕೋಮುವಾದಿ ಹಾಗೂ ಸ್ತ್ರೀವಿರೋಧಿ ಮನಸ್ಸುಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೇಲೂರು, ಹಳೇಬೀಡು,ಹಂಪಿ ಸೇರಿದಂತೆ ನಮ್ಮ ಸಂಸ್ಕೃತಿಯ ಪ್ರತೀಕಗಳೆಂದು ಕರೆಯಲ್ಪಡುವ ದೇವಾಲಯಗಳಲ್ಲಿ ಕೆತ್ತಲಾಗಿರುವ ಶಿಲ್ಪಗಳನ್ನು ಇಂಥ ರೋಗಿಷ್ಟ ಮನಸ್ಸುಗಳು ನೋಡಿದರೆ ಕಾಮಾಲೆ ರೋಗ ಕಡಿಮೆಯಾಗಬಹುದು.ಮನುಸ್ಮೃತಿ,ಭಗವದ್ಗೀತೆ,ರಾಮಾಯಣ, ಮಹಾಭಾರತದಲ್ಲಿ ಬರುವ ರತಿಮನ್ಮಥರ ವರ್ಣನೆ, ಕಾಳಿದಾಸನ ಕೃತಿಗಳಲ್ಲಿ ಬರುವ ಪ್ರಣಯದ ವರ್ಣನೆ ಓದಿದರೆ ರಾಮಚಂದ್ರಗೌಡರಂಥ ಮನಸ್ಸುಗಳು ಒಳಗೊಳಗೆ ಖುಷಿಪಟ್ಟರೆ ಅಚ್ಚರಿಯಿಲ್ಲ.ಸಾಂಸ್ಕೃತಿಕ, ಸಾಹಿತ್ಯಕ, ಸಾಮಾಜಿಕ ಹಿನ್ನೆಲೆಯಲ್ಲದ ವ್ಯಕ್ತಿ ಇಂಥ ಹೇಳಿಕೆಗಳನ್ನು ನೀಡಲು ಸಾಧ್ಯವಿದೆ. ಹೀಗಾಗಿ ಎಂ.ಎಸ್. ಮೂರ್ತಿಯವರ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕಾಗಿದೆ. ಜಡಗೊಂಡ ಪ್ರಭುತ್ವದ ವಿರುದ್ದ ಕುಂಚ-ಲೇಖನಿಗಳನ್ನು ಜಳಪಿಸಬೇಕು.ಇಲ್ಲದಿದ್ದರೆ ನಾವು ಹೇಳಿದಂತೆ ಕೇಳಬೇಕೆಂಬ ಹಿಟ್ಲರ್ ಆಡಳಿತ ಜನದನಿಯನ್ನು ಹೊಸಕಿ ಹಾಕಿದರೂ ಅಚ್ಚರಿಯಿಲ್ಲ.
  – ಸಿದ್ದಮುಖಿ

  ಪ್ರತಿಕ್ರಿಯೆ
 3. ಸುಗಂಧ್

  ‘ಶ್ರೀಯುತ ರಾಮಚಂದ್ರ ಗೌಡರಂಥವರ ನಾಲಿಗೆ ಕುಲವನ್ನು ಹೇಳುತ್ತದೆ’ ಎಂದರೆ ಅದು ಮನುವಾದಿ ಭಾಷೆಯಾಗುತ್ತದೆ. ಆದರೆ, ಅವರ ಲಾನಿಗೆ ಕುಲವನ್ನಲ್ಲ ಮನುವಾದಿ ಕುಲವನ್ನು ಹೇಳುತ್ತದೆ ಎಂದರೆ ಇವತ್ತು ಕರ್ನಾಟಕ ಎದುರಿಸುತ್ತಿರುವ ಹಿಟ್ಲರ್ ಶಕೆಗೆ ಸೂಚನೆಯಾಗುತ್ತದೆ. ಮಹಿಳೆಯರು ಪಬ್ ಗೆ ಹೋದರೆಎ ಸಂಸ್ಕೃತಿ ವಿರೋಧಿ, ಮಹಿಳೆ ಜೀನ್ಸ್್ ಹಾಕಿದರೆ ಅಪಮಾನ ಎಂದು ದಾಳಿ ಮಾಡುವ ಮತಾಂಧರಿಗೆ ಆಧುನಿಕ ಕಲೆಯೇ ಸಂಸ್ಕೃತಿ ವಿರೋಧಿಯಾಗಿ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ, ಇಂತಹ ಪರಿಸ್ಥಿತಿಗೆ ನಾವು ಕೇವಲ ಸಂಘ-ಪರಿವಾರ ಮತ್ತು ಪುರೋಹಿತಶಾಹಿಯನ್ನು ಟೀಕಿಸಿದರೆ ಸಾಕೇ? ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಂಡರೆ, ನಮ್ಮ ನಡುವೆಯೇ ಇರುವ ಈಗಿನ ಹಲವು ಸೋಗಲಾಡಿ ಹಿಂದುತ್ವ ವಿರೋಧಿಗಳು, ಆಳದಲ್ಲಿ ಮೃದು ಹಿಂದುತ್ವವಾದಿಗಳೇ ಆಗಿಲ್ಲವೆ?
  ಸಾಹಿತ್ಯೇತರ ಕಾಣಕ್ಕಾಗಿ ‘ಈಕೆ ನಮ್ಮ ಕಾಲದ ಮಹತ್ತರ ಲೇಖಕಿ’ಎಂದು ಹೇಳಿ ಅಪ್ಪಟ ಜೀವವಿರೋಧಿ ಮೂಲಭೂತವಾದಿಯೊಬ್ಬರನ್ನು ಪರಿಪರಿಯಾಗಿ ಹೊಗಳುವ ವಿಮರ್ಶಕರು, ಭೈರಪ್ಪ ವಿರುದ್ಧ ಬರೆದಂತೆ ನಟಿಸಿ ಅವರ ಪರವಾದ ವಾದಗಳಿಗೆ ವೇದಿಕೆ ಕಲ್ಪಿಸುವ ಜನಪ್ರಿಯ ಕಥೆಗಾರರು, ಮಾನವೀಯ ಸಂಬಂಧ, ಆಪ್ತತೆಯ ಸೋಗಿನಲ್ಲಿ ಸನಾತನ ಧರ್ಮದ ಮೌಲ್ಯಗಳನ್ನೇ ನಯವಾಗಿ ಪ್ರತಿಪಾದಿಸುವ ಎನ್ಆರ್ಐ- ಐಟಿ-ಬಿಟಿ ಕಥೆಗಾರರು,… ಇವರೆಲ್ಲರ ಕೊಡುಗೆ ಮತ್ತು ಪರೋಕ್ಷ ಬೆಂಬಲ ಇಂತಹ ಸಚಿವರ ದಬ್ಬಾಳಿಕೆಯ ಹಿಂದಿನ ಪ್ರೇರಣೆಗಳಾಗಿಲ್ಲವೆ?
  ಯೋಚಿಸಬೇಕಿದೆ. ಈ ಕಾಲದ ಗಟ್ಟಿ ವೈಚಾರಿಕೆ ದನಿಗಳೆಲ್ಲ ಬದಿಗೆ ಸರಿದು ಇಂತಹ ಮೃದು ಹಿಂದುತ್ವವಾದಿ- ಜಾತಿವಾದಿ ದನಿಗಳು ಠಳಾಯಿಸುತ್ತಿರುವಾಗ ಸಹಜವಾಗೇ ಮತಾಂಧ ಸರ್ಕಾರವೊಂದು ದಬ್ಬಾಳಿಕೆಯ ಪ್ರಯೋಗಗಳನ್ನು ಮಾಡಲಾರಂಭಿಸುತ್ತದೆ. ಅದಕ್ಕೆ ಕಟ್ಟಾ ಮೂಲಭೂತವಾದಿ ಶಕ್ತಿಗಳಿಗಿಂತ ಇಂತಹ ಮೃದುವಾದಿಗಳ ಮೌನ ಮತ್ತು ಪರೋಕ್ಷ ಬೆಂಬಲಗಳೇ ನೀರೆರೆಯುತ್ತವೆ. ಏನಂತೀರಾ ಮೋಹನ್?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: