ಎಕ್ಕುಂಡಿ ಕವಿತೆಗಳ ಗುಚ್ಚ ಬರಲಿದೆ

ಎಕ್ಕುಂಡಿ ಬೊಚ್ಚು ಬಾಯಿಯ ತುಂಬಾ ನಗೆ ಬೀರುತ್ತಾ ನಮ್ಮೆದುರು ಇದ್ದಾರೆ ಎಂದೇ ಅನಿಸುತ್ತಿದೆ. ಬಂಕಿಕೊಂಡ್ಲದ ಶಾಲಾ ಮಾಸ್ತರ್ ಆಗಿದ್ದ ಎಕ್ಕುಂಡಿ ಹಾಲಕ್ಕಿ ಒಕ್ಕಲಿಗರ ಎದೆಯಾಳದಿಂದ ಚಿಮ್ಮುತ್ತಿದ್ದ ಹಾಡುಗಳಿಗೆ ಕಿವಿಯಾದರು. ಅವರ ತಲ್ಲಣಗಳಿಗೆ ಬೆಂದರು. ಎಕ್ಕುಂಡಿ ಕಾವ್ಯ ಲೋಕದೊಳಕ್ಕೆ ನಡೆದು ಬಂದದ್ದು ಹೀಗೆ. ದುಃಖದ ಸರಮಾಲೆ ಹೊತ್ತು. ನೊಂದವರ ನಿಟ್ಟುಸಿರುಗಳ ಮೆರವಣಿಗೆ ಮಾಡಿಸುತ್ತಾ…

ಸುಬ್ಬಣ್ಣ ರಂಗನಾಥ ಎಕ್ಕುಂಡಿ ಈಗಿಲ್ಲ. ಆದರೆ ಈಗಲೂ ಮತ್ತೆ ಮತ್ತೆ ನೆನಪಾಗುವ ಅವರ ಕವಿತೆಗಳಿವೆ. ಎಕ್ಕುಂಡಿ ಅವರ ಎಲ್ಲಾ ಕವಿತೆಗಳನ್ನು ಗೊಂಚಲಾಗಿ ಮಾಡಿ ನಮ್ಮ ಕೈಗಿಡುವ ಉತ್ಸಾಹಕ್ಕೆ ‘ಸಂಚಯ’ದ ಪ್ರಹ್ಲಾದ್ ಮುಂದಾಗಿದ್ದಾರೆ.

ಇತ್ತೀಚೆಗೆ ಸಂಚಯ ಸಾಹಿತ್ಯ ಪತ್ರಿಕೆ ೭೫ ನೆ ಸಂಚಿಕೆಯಾಗಿ ಕಾಲಿಟ್ಟಿತು. ಅದನ್ನು ಡಿ ವಿ ಪ್ರಹ್ಲಾದ್ ೭೫ ಕವಿಗಳ ಕವಿತಾ ಗುಚ್ಚ ನೀಡುವುದರ ಮೂಲಕ ಅರ್ಥಪೂರ್ಣವಾಗಿಸಿದರು. ಪ್ರಹ್ಲಾದರು ಪುಸ್ತಕ ತರುವಲ್ಲಿ ತೋರುವ ಅಚ್ಚುಕಟ್ಟುತನ ಎಂತವರನ್ನೂ ನಿಬ್ಬೆರಗಾಗಿಸುತ್ತದೆ.

ಎಕ್ಕುಂಡಿ ಅವರ ಸಮಗ್ರ ಕಾವ್ಯವೂ ಹಾಗೆಯೇ ಸುಂದರವಾಗಿ, ಇದು ನಮ್ಮ ಮನೆಯಲ್ಲಿರಬೇಕು ಎನ್ನುವಂತೆ ಖಂಡಿತಾ ತರುತ್ತಾರೆ. ೫೦೦ ಪುಟಗಳ ಈ ಪುಸ್ತಕವನ್ನು ಒಬ್ಬ ಉತ್ಸಾಹಿ ತರುವುದು ಸುಲಭವಲ್ಲ. ಇದಕ್ಕೆ ನಾವೆಲ್ಲಾ ಕೈ ಜೋಡಿಸಿದರೆ ಹೇಗೆ. ತಾಖತ್ತಿರುವ ಹಾಗೂ ಅಂತಃಕರಣವಿರುವ ನೀವು ಖಂಡಿತಾ ಅದಕ್ಕೆ ನೆರವಾಗಬಲ್ಲಿರಿ. ಧನ ಸಹಾಯ ಮಾಡಿ ಇಲ್ಲವೇ ಈಗಲೇ ಎಕ್ಕುಂಡಿ ಪುಸ್ತಕದ ಸಾಕಷ್ಟು ಪ್ರತಿಗಳಿಗೆ ಮುಂಗಡ ಕೊಡಿ. ೩೫೦ ರೂ. ನ ಈ ಪುಸ್ತಕ ಪ್ರಕಟನಾಪೂರ್ವವಾಗಿ ೨೫೦ ಕ್ಕೆ ಸಿಗುತ್ತದೆ.

ಸಂಪರ್ಕಿಸಿ:
ಡಿ ವಿ ಪ್ರಹ್ಲಾದ್
ಸಂಚಯ
೧೦೦, ಎರಡನೆ ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ
ಮೂರನೇ ಘಟ್ಟ, ಬೆಂಗಳೂರು-೫೬೦೦೮೫
ದೂರವಾಣಿ: ೯೮೪೪೦ ೬೩೫೧೪ 

‍ಲೇಖಕರು avadhi

May 14, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This