” ಎದೆಯೊಳಗಿನ ದೇವರಿಗೆ
ಸಾವು ಬರುವಷ್ಟು ಬದುಕಬೇಕು ಕಣಯ್ಯಾ ಪ್ರವರ…
ಬರಿತಿ ಬರಿ ಸುಮ್ಮನಾ ಬರಿ. ಯಾವ ಗುಂಪು ಗಲಾಟಿ ಬ್ಯಾಡಪ, ನಿನ್ ಸೃಜನಶೀಲತೆನ ಕೊಂದು ಹಾಕೋದೆ ಇದು. ನಾವು ಫೇಸ್ಬುಕ್ಕಿನ್ಯಾಗ ಲಬೊ ಲಬೋ ಹೊಯ್ಕೊಂಡ್ರ ಜನ ಬದ್ಲಾಗೋದಿಲ್ಲಪಾ… ಬದಲಾವಣೆ ಆಗೋ ಹಂಗ ಬದುಕಬೇಕು ಅಷ್ಟ..
ಅಪ್ಪನ ಮೀರ್ಸೊ ಹಂಗ ನಿನ್ ಕೈಲಿ ಬರ್ಯೋಕ್ ಆಗೂದಿಲ್ಲ
ಅದಂತೂ ಖರೆ… ನೀನು ಬ್ಯಾರೆ ಪ್ರವರಾಗು, ಸುಮ್ಮಾನ ಬರಿ, ಪೋಟ ತೆಗಿ, ಹಾಡು, ತಿರುಗು.. ಒಟ್ನ್ಯಾಗ ಛೊಲೊ ಬದುಕ ಬದ್ಕು…
ಛಂದ್ ಬರಿತೀ ಹುಡುಗಾ, ಇನ್ನಾ ಬರಿ…”
ತುಂಬಾ ಹಿರಿಯರಾದರೂ ನಮ್ಮಂಥಾ ಹುಡುಗರನ್ನು ಬಹು ಪ್ರೀತಿಯಿಂದಲೇ ಆಲಂಗಿಸಿ ಮಾತನಾಡುತ್ತಿದ್ದ
ಭಾಳ ಇಷ್ಟದ ಆತ್ಮೀಯ ಹಿರಿಯ ಸ್ನೇಹಿತರಾದ ಗೋಪಾಲ ವಾಜಪೇಯಿಯವರು ವಿಧಿವಶರಾದ ಸುದ್ಧಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ..
-ಪ್ರವರ ಕೊಟ್ಟೂರು
ಚಿತ್ರ: ರಘುಪತಿ ಶೃಂಗೇರಿ
🙁