ಎದ್ದೇಳು ಮಂಜುನಾಥ..ಏಳಯ್ಯ ಬೆಳಕಾಯಿತು

munjane4-1

ಮಂಜುನಾಥ ಸ್ವಾಮಿ ಬೆಳಗ್ಗೆ ಏಳುತ್ತಿದ್ದಾರೆ, ವಾಕಿಂಗ್ ಮಾಡುತ್ತಿದ್ದಾರೆ. ಹಾಗೆ ಮಾಡುವಾಗ ತಮ್ಮ ಕ್ಯಾಮರಾವನ್ನೂ ಕಿವಿ ಹಿಂಡಿ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ ಎಂಬುದಕ್ಕೆ ಪ್ರೂಫ್ ಇಲ್ಲಿದೆ.

ಸಂಪೂರ್ಣ ಓದಿಗೆ ಭೇಟಿಕೊಡಿ: ಹಳ್ಳಿ ಕನ್ನಡ
+++

42-16036794

ಅಮೇಲೆ ಅವರು ಅಲ್ಲಿ-ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳತೊಡಗಿದರು. ಅದಕ್ಯಾರು ಅಂಥ ಮಹತ್ವ ಕೊಡಲಿಲ್ಲ. ಈ ಮಹಾನಗರದಲ್ಲಿ ಎಲ್ಲರೂ ಇಂಥಹದೊಂದು ಸಾಂಗತ್ಯಕ್ಕಾಗಿ ಹಾತೊರೆಯುವವರೇ ಆಗಿರುತ್ತಾರೆ. ಒಂದಷ್ಟು ಜನ ಅವರ ಭಾಗ್ಯಕ್ಕೆ ಕರುಬಿದರು.

ಅವನ ಪೀತಿಯ ಕಂಪನ ಅವಳ ಅನುಭವಕ್ಕೆ ಬರುತಿತ್ತು. ಭಾವನಾತ್ಮಕವಾಗಿ ಅವಳು ಅವನಲ್ಲಿ ಐಕ್ಯವಾಗುತ್ತಾ ಹೋದಳು. ನಂಬಿಕೆಯ ಶಿಖರದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಳ್ಳತೊಡಗಿದಳು.

ಸಂಪೂರ್ಣ ಓದಿಗೆ ಭೇಟಿಕೊಡಿ: ಮೌನ ಕಣಿವೆ 

+++

 

blacklandscape-2

ಹೆಚ್ಚು ಜನಪ್ರಿಯಗೊಂಡ ಯಾವುದೇ ’ಬ್ರ್ಯಾಂಡ್’ ನನ್ನಲ್ಲಿ ಅಷ್ಟೇ ಸಂದೇಹ ಮತ್ತು ಭಯ ಹುಟ್ಟಿಸುತ್ತದೆ.ಜನಪ್ರಿಯತೆಯ ಅಬ್ಬರದಲ್ಲಿ ಕಳೆದು ಹೋಗುತ್ತಾ ನಮ್ಮನ್ನೇ ನಾವು ಮರೆತುಬಿಡುವ ಅಪಾಯದಿಂದ ಸದಾ ಹಿಂದೆಸರಿಯುತ್ತ ಪೆಪ್ಸಿ,ಲ್ಯಾಕ್ಮೆ,ಲಕ್ಸ್ …ಎಲ್ಲವುಗಳಿಂದ ಸಾಕಷ್ಟು ದೂರವಿದ್ದುಬಿಡುವುದು ನನ್ನಮಟ್ಟಿಗೆ ಸಮಾಧಾನದ ವಿಷಯ.ಕಿವಿಗಡಚಿಕ್ಕುವ ಇವೆಲ್ಲದರ ಸಡಗರದ ಗದ್ದಲ ನಿಧಾನವಾಗಿ ನಮ್ಮ ಎಲ್ಲವನ್ನೂ ಆವರಿಸುತ್ತ ಅತಿಸಹಜವೆಂಬಂತೆ ತನ್ನ ಅಗಾಧ ಭದ್ರಬಾಹುಗಳಿಂದ ಬರಸೆಳೆದು ಪ್ರೀತಿಯ ಭ್ರಮೆ ಬರುವಂತೆ ಗಟ್ಟಿಯಾಗಿ ಅಪ್ಪುತ್ತಾ ಉಸಿರುಗಟ್ಟಿಸಿಬಿಡುವ ಮುನ್ನ ಸರಿಯಾದ ದೂರಕಾಯ್ದುಕೊಂಡುಬಿಡಲು ಹೆಣಗುತ್ತಿರುತ್ತೇನೆ.
ಇವನ್ನೆಲ್ಲ ತಮಾಷೆಯ,ಕೇವಲ ಮರಂಜನೆಯ ವಸ್ತುಗಳಷ್ಟೆ ಎಂದು ನಂಬಿ,ನಿಟ್ಟುಸಿರುಬಿಟ್ಟು ಹಗುರಾಗಿಬಿಡುವಹಾಗಿದ್ದರೆ ಚೆನ್ನಾಗಿತ್ತೇನೋ! ಆದರೆ ಇದು ಅಷ್ಟು ಸುಲಭ ಇರುವಂತೆ ಕಾಣುತ್ತಿಲ್ಲ.ನಮ್ಮ ದೃಷ್ಟಿ,ಗ್ರಹಿಕೆ..ಕಡೆಗೆ ವ್ಯಕ್ತಿತ್ವವನ್ನೂ ಖರೀದಿಸಿಬಿಡುವ ರಾಕ್ಷಸ ಶಕ್ತಿ ಜನಪ್ರಿಯತೆಯ ಲೇಬಲ್ ಗೆ ಇರುತ್ತದೆ !

ಸಂಪೂರ್ಣ ಓದಿಗೆ ಭೇಟಿಕೊಡಿ: ನನ್ನ ಪಾಡಿಗೆ ನಾನು 

‍ಲೇಖಕರು avadhi

November 12, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This