ಕೌರವ ಪಾಂಡವರ ಮೂಲ ಪುರುಷರಾದ ಧೃತರಾಷ್ಟ್ರ ಮತ್ತು ಪಾಂಡು ಹುಟ್ಟಿದ್ದು ನಿಯೋಗದ ಮೂಲಕ- ಅಂದರೆ ವ್ಯಾಸ ಮಹಷರ್ಿಯ ವೀರ್ಯದಾನದ ಕೃಪೆಯಿಂದ. ನಿಯೋಗದ ಬಗ್ಗೆ ಆಗಂತೂ ಯಾರ ಆಕ್ಷೇಪಣೆ ಇರಲಿಲ್ಲ. ಆದರೆ, ಮುಂದಿನ ಒಂದೇ ತಲೆಮಾರಿಗೆ ಇದು ಬದಲಾಯಿತು. ಪಾಂಡುಗೆ ಸ್ವತಃ ಮಕ್ಕಳಾಗದಿದ್ದಾಗ ಕುಂತಿ ತಾನು ಪಡೆದಿದ್ದ ವಿಶೇಷ ಮಂತ್ರವನ್ನು ಬಳಸಿ ಯಮಧರ್ಮ, ವಾಯುದೇವ ಮತ್ತು ಇಂದ್ರರನ್ನು ಆಹ್ವಾನಿಸಿ, ಸಂತಾನ ಪಡೆಯುತ್ತಾಳೆ. ಜೊತೆಗೆ, ತನ್ನ ಸವತಿ ಮಾದ್ರಿಗೂ ಆ ರಹಸ್ಯ ಬೋಧಿಸಿ ಅಶ್ವಿನಿ ದೇವತೆಗಳಿಂದ ಮಕ್ಕಳನ್ನು ಪಡೆಯಲು ನೆರವಾಗುತ್ತಾಳೆ.
ಮುಂದಕ್ಕೆ ಮಹಾಭಾರತದ ಕೇಂದ್ರ ತಕರಾರುಗಳಲ್ಲಿ ಒಂದಾದ ಭೂ ವ್ಯಾಜ್ಯಕ್ಕೆ- ಅಂದರೆ ರಾಜ್ಯಾಡಳಿತದ ಹಕ್ಕಿನ ವಿಷಯದ ಸಂಘರ್ಷಕ್ಕೆ ಕಾರಣವಾಗುವುದು ಇದೇ- ಪಾಂಡವರು ನಿಜಕ್ಕೂ ಪಾಂಡುಗೆ ಹುಟ್ಟಿದವರಲ್ಲವಾದ್ದರಿಂದ ಪಾಂಡವರಲ್ಲ; ಆದ್ದರಿಂದ ಅವರಿಗೆ ರಾಜ್ಯದ ಹಕ್ಕು ಸೇರಬೇಕಿಲ್ಲ ಅನ್ನುವ ವಾದ. ದುಯರ್ೋಧನಾದಿ ಕೌರವರ ಮಟ್ಟಿಗಿದು ಅಪ್ಪನಿಗೆ ಹುಟ್ಟಿದ ಜನ್ಮಶುದ್ಧಿಯ ಪ್ರಶ್ನೆ.
ಈ ಮೌಲ್ಯಪಲ್ಲಟವನ್ನು (ಮಾತೃಪ್ರಧಾನ ವ್ಯವಸ್ಥೆಯಿಂದ ಪಿತೃಪ್ರಧಾನ ವ್ಯವಸ್ಥೆಗೆ?) ದಾಖಲಿಸುವ ಮಹಾಭಾರತ- ಸಂಕ್ರಮಣ ಕಾಲಘಟ್ಟವೊಂದರ ಕಥಾನಕವೇ? ಪ್ರಾಯಶಃ ಹೌದು, ಆದರೆ ಅದಷ್ಟೇ ಅಲ್ಲ.
ದ್ರೌಪದಿಯನ್ನು ಐದೂ ಜನ ಅಣ್ಣ ತಮ್ಮಂದಿರು ಹೆಂಡತಿಯಾಗಿ ಹಂಚಿಕೊಂಡಾಗ ಕೌರವರು ಅವರನ್ನು ಅನಾರ್ಯ ಎಂದು ಜರೆಯುತ್ತಾರೆಯೇ ಹೊರತು, ಜಗತ್ತು ಕಂಡೇ ಇರದ ಅತಿಶಯವೆಂಬಂತೆ ನೋಡುವುದಿಲ್ಲ. ಅಂದರೆ ಅಣ್ಣತಮ್ಮಂದಿರೆಲ್ಲ ಒಬ್ಬಳನ್ನೇ ಮದುವೆಯಾಗುವ ಆ ಪದ್ಧತಿ ಆಯರ್ೇತರರಲ್ಲಿತ್ತು. (ಈಗಲೂ ಉತ್ತರ ಭಾರತದ ಕೆಲ ಬುಡಕಟ್ಟುಗಳಲ್ಲಿ ಆ ಸಂಪ್ರದಾಯವಿದೆಯಂತೆ). ಪಾಂಡವರು ತಮ್ಮ ಈ ಮದುವೆಯಿಂದಲೇ ಅನಾರ್ಯರ ಆದರಕ್ಕೂ ಪಾತ್ರರಾಗುತ್ತಾರೆ. ಹಾಗಾದರೆ, ಮಹಾಭಾರತ- ಸಂಸ್ಕೃತಿಗಳ ಮುಖಾಮುಖಿಯೇ? ಹೌದು, ಮತ್ತೆ ಅದಷ್ಟೇ ಅಲ್ಲ!
ಪಾಂಡವರಿಗೆ ಇಂದ್ರಪ್ರಸ್ಥದಲ್ಲಿ ಮಯ ಕಟ್ಟಿಕೊಡುವ ಅರಮನೆಯಲ್ಲಿ ಎಲ್ಲ ಅಯೋಮಯ. ನೀರಿನಂತೆ ಕಾಣುವ ನೆಲ, ನೆಲದಂತೆ ಕಾಣುವ ನೀರು. ರಾಜಸೂಯ ಯಾಗಕ್ಕೆ ಬಂದ ದುಯರ್ೋಧನ ನೆಲವೆಂದು ತಿಳಿದು ನೀರಿನಲ್ಲಿ ಮುಳುಗೆದ್ದು ಒದ್ದೆಯಾಗಿ, ನೀರೆಂದು ನೆಲದ ಮೇಲೆ ಹುಷಾರಾಗಿ ಹೆಜ್ಜೆಯಿಡಲು ಹೋಗಿ ಮುಗ್ಗರಿಸಿ… ದ್ರೌಪದಿ ಉಪ್ಪರಿಗೆ ಮೇಲಿನಿಂದ ಕಿಸಕ್ಕನೆ ನಕ್ಕುಬಿಡುತ್ತಾಳೆ. ನಿಮ್ಮ ದಾಯಾದಿಗಳು ಅರಮನೆಯಂಥ ಮನೆ ಕಟ್ಟಿಸಿ, ನೀವು ಅಲ್ಲಿ ಹೋಗಿ ಆ ಮನೆ ಹೆಣ್ಣುಮಕ್ಕಳಿಂದ ಅವಮಾನ ಅನುಭವಿಸಿದರೆ ಹೇಗಿರಬಹುದು ಅದರ ರುಚಿ! ದುಯರ್ೋಧನ ರಾಜ, ಶೂರ. ಇಲ್ಲಿ ವ್ಯಾಸ ಹೇಳದೇ ಬಿಟ್ಟಿದ್ದು ಕೂಡಾ ಅರ್ಥಪೂರ್ಣ. ಭೀಮ ಸಾವಿರ ಆನೆ ಬಲದವನು ಅನ್ನುವ ಬಣ್ಣನೆಯಿದೆ. ಹಾಗಾದರೆ ದುಯರ್ೋಧನ? ದುಯರ್ೋಧನನ ಬಲದ ಪ್ರಸ್ತಾಪವಿಲ್ಲದಿದ್ದರೂ- ಇವನು ಭೀಮನಿಗೆ ಸರಿಸಾಟಿಯಾಗಿ ಮಲ್ಲಯುದ್ಧದಲ್ಲಾಗಲೀ ಗಧಾಯುದ್ಧದಲ್ಲಾಗಲೀ ಇದಿರಾಗಬಲ್ಲವನು. ಅಂದರೇನರ್ಥ? ದುಯರ್ೋಧನನೂ ಸಾವಿರವಲ್ಲದಿದ್ದರೆ ಕಡೇ ಪಕ್ಷ 999 ಆನೆ ಬಲದವನೇ! ಪರಾಕ್ರಮಿ. ಮೊದಲೇ ಮತ್ಸರ. ಅದರ ಮೇಲೆ ನೆರೆದವರ ಮುಂದೆ ತಾನು ಮೂರ್ಖನಂತೆ ಕಾಣುವ ಹಾಗೆ ದ್ರೌಪದಿಯ ಅವಹೇಳನದ ನಗು. ದ್ರೌಪದಿಗೇನೋ ಇದು ನಕ್ಕು ಮರೆತುಬಿಡುವ ಸಣ್ಣ ವಿಷಯವಿರಬಹುದು. ಆದರೆ ದುಯರ್ೋಧನನಿಗೆ? ಈ ಅವಮಾನವನ್ನು ಅವನು ಹೇಗೆ ಮರೆತಾನು? ಅದಕ್ಕೇ ತುಂಬಿದ ಸಭೆಯಲ್ಲಿ ರಜಸ್ವಲೆಯಾಗಿ ಒಂಟಿ ವಸ್ತ್ರದಲ್ಲಿದ್ದ ಕೃಷ್ಣೆಯನ್ನು ತನ್ನ ತೊಡೆಯ ಮೇಲೆ ಬಂದು ಕೂರಲು ತೊಡೆ ತಟ್ಟಿ ಕರೆಯುವ ದರ್ಪ ತೋರುತ್ತಾನೆ. ಅವಮಾನಕ್ಕೆ ಸೇಡು, ಸೇಡಿಗೆ ಮರು ಪ್ರತೀಕಾರ. ಕಡೆಗೆ ಇದೇ ಕುರುಕ್ಷೇತ್ರ ಯುದ್ಧ ಮತ್ತು ದುಯರ್ೋಧನನ ಊರುಭಂಗ- ಸಾವಿನವರೆಗೆ ಬೆಳೆಯುತ್ತದೆ….
ಬಹುಶಃ ಮನುಕುಲ ಕಂಡ ಜಗತ್ತಿನ ಸರ್ವಶ್ರೇಷ್ಠ ಸಾಹಿತ್ಯಕೃತಿಯಾದ ಮಹಾಭಾರತ ಈಗ ನನ್ನಲ್ಲಿ ಸ್ಫುರಿಸುತ್ತಿರುವ ಬಿಡಿ ಅನಿಸಿಕೆಗಳಿವು. ಮತ್ತು ಕಾಲಕಾಲಕ್ಕೆ ಒಂದು ಕೃತಿ ಹೊಸ ಹೊಸ ಅರ್ಥಗಳಲ್ಲಿ ತೆರೆದುಕೊಳ್ಳದಿದ್ದರೆ ಅದು ಮಹಾಕಾವ್ಯ ಹೇಗಾದೀತು? ಎಲ್ಲ ಮೇರು ಕೃತಿಗಳಂತೆಯೇ, ಇದರ ಜೀವಾಳವನ್ನು ಒಂದು ಚೌಕಟ್ಟಿನಲ್ಲಿ ಕೂರಿಸುವುದು ಅಸಾಧ್ಯವಾದರೂ ಇಷ್ಟು ಹೇಳಬಹುದು: ಮಹಾಭಾರತ- ಯುಗಾಂತರದ ಭಿತ್ತಿಯ ಮೇಲೆ ಮೂಡಿದ- ವಿಧಿಯೊಂದಿಗೆ ಸೆಣೆಸುವ ಮಹಾನ್ ಸ್ತ್ರೀ ಪುರುಷರ ಕಥೆ. ಹಾಗೇ- ಉಪ್ಪು ಹುಳಿ ಖಾರದ ಮನುಷ್ಯರ ರಾಗ ದ್ವೇಷಗಳ, ಪ್ರತಿಷ್ಠೆ- ಅವಮಾನಗಳ, ಮೋಹ ಹಂಗು ಕಾರಸ್ಥಾನಗಳ, ಈಷ್ಯರ್ೆ- ತ್ಯಾಗಗಳ, ಯಾತನೆ- ಸಾಧನೆಗಳ ಅದ್ಭುತ ಗಾಥೆ. ಪ್ರಾಯಶಃ ಜಾನಪದದ ಮೌಖಿಕ ಪರಂಪರೆೆಯಲ್ಲಿ ಹಾಡುಗಬ್ಬವಾಗಿ ಹರಿದುಬಂದ ಪಾಂಡವ, ಕೌರವರ ಕಥಾನಕವೇ ವ್ಯಾಸನ ದಾರ್ಶನಿಕ ಪ್ರತಿಭೆಯಲ್ಲಿ ಮಹಾಕಾವ್ಯದ ರೂಪ ತಳೆದಿರಬೇಕು.
ಕುರುಕ್ಷೇತ್ರ ಯುದ್ಧ ಮುಗಿಯುವ ವೇಳೆಗೆ ಪಂಚಪಾಂಡವರು ತಮ್ಮ ಮಕ್ಕಳಾದ ಉಪಪಾಂಡವರನ್ನು, ಅಭಿಮನ್ಯುವನ್ನು ಕಳೆದುಕೊಂಡಿದ್ದಾರೆ. ಅತಿರಥ ಮಹಾರಥರೆಲ್ಲ ಗತಿಸಿಹೋಗಿದ್ದಾರೆ… ಎಲ್ಲ ತೀರಿದ ಮೇಲೆ ಯುಧಿಷ್ಠಿರನ ಕೈಯಲ್ಲಿ ಉಳಿಯುವುದು ಗೋಳಿಡುವ ವಿಧವೆಯರ ಸಾಮ್ರಾಜ್ಯ ಮಾತ್ರ. ಇಂಥ ಸರ್ವನಾಶದ ದುರಂತ- ‘ವಿಧಿಯಿಂದ ತಪ್ಪಿಸಿಕೊಳ್ಳಲಾಗದ ಮನುಷ್ಯನ ಆಯ್ಕೆಗಳಲ್ಲೇ ಅಡಗಿದೆ’ ಎಂಬ ಕಾಣ್ಕೆಯನ್ನು ಸಾಧಿಸುವ ವ್ಯಾಸಕವಿ- ತನ್ನ ಕಾವ್ಯದ ಅನುಭವಕ್ಕಾಗಿ ಇಡೀ ಜನಸಮೂಹದ ಕಲ್ಪನೆ, ಕನಸು, ಸುಪ್ತಪ್ರಜ್ಞೆಗಳನ್ನೆಲ್ಲ ಶೋಧಿಸಿ ಬರುತ್ತಾನೆ. ಅದಕ್ಕೇ ರಾಮಾಯಣ ಮಹಾಭಾರತಗಳು ಏಕಕಾಲಕ್ಕೆ ಅತಿ ಪ್ರಾಚೀನವೂ ಸಮಕಾಲೀನವೂ ಆದ ನಾಡಿನ ಕಾವ್ಯಗಳಾಗಿವೆ; ಹಾಗೆಯೇ ಊರೂರುಗಳಲ್ಲಿ ಕುಂತಿ ಬಟ್ಟೆ ಒಗೆದ ಸ್ಥಳ, ಸೀತೆ ತಲೆಗೂದಲು ಆರಿಸಿಕೊಂಡ ತಾಣ ಎಂಬಂಥ ಐತಿಹ್ಯಗಳು ಜನ್ಮ ತಳೆದಿವೆ.
ಚಿಕ್ಕಂದಿನಿಂದಲೂ ಮಕ್ಕಳ ಕಿವಿ, ಮನಸ್ಸಿಗೆ ರಾಮಾಯಣ ಭಾರತದ ಕಥೆಗಳನ್ನು ತುಂಬುವ ಪರಂಪರೆಯೇ ನಮ್ಮಲ್ಲಿದೆ. ಈ ಕಥೆಗಳು, ಗೊತ್ತಿಲ್ಲದೆಯೇ ಮಗುವಿನ ದೇಹಕ್ಕೆ ಪೋಷಕಾಂಶಗಳನ್ನು ಪೂರೈಸುವ ಅಮ್ಮನ ಕೈ ತುತ್ತಿನಂತೆ, ನಮ್ಮ ಅಂತರಂಗವನ್ನು ತಲುಪಿರುತ್ತವೆ. ಮತ್ತೆ ನಾವು ಬೆಳೆದಂತೆಲ್ಲ ಕಥೆಯೂ ನಮ್ಮೊಳಗೇ ಮರಿ ಹಾಕುತ್ತಾ ಹೋಗುತ್ತದೆ- ರಟ್ಟಿನ ಪುಸ್ತಕದೊಳಗಿನ ನವಿಲುಗರಿಯಂತೆ. ಬಹುಸಂಖ್ಯಾತ ಜನವರ್ಗಕ್ಕೆ ಅಕ್ಷರವನ್ನೇ ನಿರಾಕರಿಸಿದ್ದ ನಮ್ಮ ದೇಶದಲ್ಲಿ ತಲೆಯಿಂದ ತಲೆಗೆ ಸಂಸ್ಕೃತಿಯ ಸ್ಮೃತಿ ದಾಟಿ ಬಂದಿದ್ದೇ ಹೀಗೆ. ಮತ್ತು ಬಂದಿದ್ದು ಜಡವಾಗಿ ಉಳಿಯುವುದಿಲ್ಲ, ನಮ್ಮನ್ನೂ ಬೆಳೆಸಿ, ತಾನೂ ಬೆಳೆಯುತ್ತದೆ…
ಆ ಪರಂಪರೆ ಈಗ ಎಲ್ಲಿ ಹೋಯಿತು?
ಅಚಾನಕ್ಕಾಗಿ ಈ ಸಂದೇಹ ಉಂಟಾದಾಗ, ಎರಡನೇ ಪಿಯೂಸಿ ಓದುತ್ತಿರುವ ನನ್ನ ಮಗನಿಗೊಂದು ಕೆಲಸ ಒಪ್ಪಿಸಿದೆ. ಸುಮಾರು ಹದಿನೈದು ತರುಣರ ಅವನ ಗೆಳೆಯರ ಬಳಗದಲ್ಲಿ ಎಷ್ಟು ಜನಕ್ಕೆ ರಾಮಾಯಣ ಮಹಾಭಾರತಗಳ ಕಥೆ ಗೊತ್ತು ಕೇಳಿಕೊಂಡು ಬಾ ಅಂತ. ಅವನು ತಿಳಿದುಕೊಂಡು ಬಂದಿದ್ದು: ಅಷ್ಟೂ ಜನರಲ್ಲಿ ಒಬ್ಬನಿಗೆ ಮಾತ್ರ ಕಥೆ ಸಾಕಷ್ಟು ಗೊತ್ತು, ಇನ್ನೊಬ್ಬನಿಗೆ ಸುಮಾರಾಗಿ ಗೊತ್ತಿತ್ತು! ಮಿಕ್ಕವರಿಗೆ ಗಂಧ ಗಾಳಿಯಿಲ್ಲ! ಅಂದರೆ ಕಾನ್ವೆಂಟ್ ಶಿಕ್ಷಣ, ಹೋಂ ವಕರ್್, ಟೀವಿ, ಕಂಪ್ಯೂಟರ್ಗಳ ಲೋಕದಲ್ಲಿ ಮುಳುಗಿಹೋದ ಈ ಪೀಳಿಗೆ ಆಗಲೇ ನಮ್ಮ ಮಹಾಕಾವ್ಯ ಪುರಾಣಗಳನ್ನು ಕಳೆದುಕೊಂಡುಬಿಟ್ಟಿದೆಯೇ?
ಇಲ್ಲಿ ಮಹಾಭಾರತಕ್ಕೆ ಎಸ್.ಎಲ್. ಭೈರಪ್ಪನವರು ಮಾಡಿದ್ದನ್ನೂ ನೋಡಬಹುದು. ಅವರ ಪರ್ವ ಕಾದಂಬರಿಯ ಬಗ್ಗೆ ಏಳುವ ಮೊಟ್ಟಮೊದಲ ಆಕ್ಷೇಪವೆಂದರೆ- ಎಲ್ಲವನ್ನೂ ಅತಿ ವಾಸ್ತವದ ಬಂಜರುಭೂಮಿಗೆ ಇಳಿಸುವ ಆ ಕೃತಿಯ ಧೋರಣೆಯಿಂದಾಗಿ, ಪವಾಡ, ವರ, ಶಾಪಗಳ ಸಾಧ್ಯತೆಗಳಲ್ಲಿ ಹಿಗ್ಗುವ ಮಹಾಕಾವ್ಯದ ಜೀವಚಿಲುಮೆಯೇ ಬತ್ತಿಹೋಗಿದೆ; ಮನುಷ್ಯತ್ವ ದೈವತ್ವಗಳು ಸಮಾನ ಭೂಮಿಕೆಯಲ್ಲಿ ವ್ಯವಹರಿಸುವ,- ಸಮೂಹದ ಸಂವೇದನೆಗಳಿಂದ ಮೈದಳೆದ ವ್ಯಾಸನ ರೂಪಕ ಜಗತ್ತು- ಪರ್ವದ ತರ್ಕಪ್ರಪಂಚದಲ್ಲಿ ಸತ್ತುಹೋಗಿದೆ. ಈ ಇಂದ್ರಿಯಬದ್ಧ ಬದುಕಿನ ಗೊಡವೆಗಳನ್ನು ಅತಿಮಾನುಷ ಸ್ತರಕ್ಕೊಯ್ದು ಮುಟ್ಟಿಸುವ ಕಾವ್ಯಶಕ್ತಿಯೇ ಮಹಾಭಾರತದ ಪೌರಾಣಿಕ ತೇಜಸ್ಸಿನ ಮೂಲ. ಇದು ಭೈರಪ್ಪನವರ ಗ್ರಹಿಕೆಗೆ ಸಿಕ್ಕೇ ಇಲ್ಲ! (ಅಷ್ಟರ ಮೇಲೆ ಅವರ ಬೆನ್ನು ಬಿಡದ ವೈದಿಕ ಪೂರ್ವಗ್ರಹಗಳ ಪ್ರಸ್ತಾಪವನ್ನು ಇಲ್ಲಿ ತರುವುದು ಬೇಡ). ಅಂದರೆ ಮಹಾಭಾರತದ ಪೌರಾಣಿಕ ಪ್ರಭಾವಳಿಯನ್ನು ಕಿತ್ತೊಗೆಯುವ ಮುಖಾಂತರ ಭೈರಪ್ಪ ಈ ನಾಡಕಾವ್ಯ ಇಡೀ ಸಮುದಾಯಕ್ಕೆ ಸೇರಿದ್ದೆಂಬ ವಿನಯವಂತ ತಿಳಿವನ್ನು ಧಿಕ್ಕರಿಸಿದರೆೆ, ಈಗಿನ ಪೀಳಿಗೆ ತನ್ನ ಸ್ಮೃತಿಮೂಲಗಳನ್ನು ನಿರಾಕರಿಸುವ ಮೂಲಕ ತನ್ನ ಜೀವಂತ ಬೇರುಗಳನ್ನೇ ಕಡಿದುಕೊಳ್ಳುವ ಹಾಗೆ ಕಾಣುತ್ತಿದೆ.
ಈ ವಿಸ್ಮೃತಿಯ ಪರಿಣಾಮಗಳೇನಿರಬಹುದೋ, ಯಾರಿಗೂ ಗೊತ್ತಿಲ್ಲ.
23 ಸೆಪ್ಟೆಂಬರ್ 2005
]]>
Dear Mr Shankar,
Your approach is paradoxical.
The way you start reminds the readers of PARVA.
It surprises the people who know you!
The mid segment of your writing shows some flashes of intellect, but soon fades away.
Your regular Byrappa bashing comes at the end, contradicting your own chain of ideas, leading to a profound disappointment.
Please come out of prejudices. Accept what is good. That gentleman has produced a great work in PARVA. We may not agree with all his views, but we should develop the maturity to separate work from the person, in all shades of grey.
Think over
dear shankar
Duryodhana’s name was suyodhana which litterly means ‘a good or skilled warrior’.The hero worshipping nature of indians referred all bad qualities to him and in an attempt to glorify the pandavas he was named duryodhana which literaly means a bad warrior.No where in mahabharat it is said that he troubled his subjects or abandoned his wife in a forest nor even responsible for
forest fire which killed thousands of innocent lives.He was ambitious as any kig of those times to
be a ruler. the present generation is not familiar with these epics as we were because the parents buy the Harry potter series and not ramayana and mahabharat.there are many student who are from kannada families but cannot read kannada and do not like stories related to epics.
channagi bandide thanku avadhi