ಎನ್ ಎಸ್ ಶ೦ಕರ್ ಕಾಲ೦ : ಪರ್ಯಾಯ ರಾಜಕಾರಣ

ಎನ್ ಎಸ್ ಶ೦ಕರ್

  ಪರ್ಯಾಯ ರಾಜಕಾರಣ ಅಪನಂಬಿಕೆ ಯಾಕೆಂದರೆ…   ಒಂದು ವರ್ಷಕ್ಕೂ ಹಿಂದಿನ ಮಾತು. ಕೇಂದ್ರ ಸರ್ಕಾರ ಅದೇ ತಾನೇ ಖಾಸಗಿ ವಲಂುದಲ್ಲಿ ಮೀಸಲಾತಿ ತರುವ ಮಾತೆತ್ತಿ, ದೇಶದ ಉದ್ಯಮಿಗಳಿಂದ ತೀಕ್ಷ್ಣ ವಿರೋಧದ ಮಾರುತ್ತರ ಪಡೆದಾಗಿತ್ತು. ಆಗೊಮ್ಮೆ ದಲಿತ ಸಂಘಟನೆಯ ಕೆಲವು ಗೆಳೆಯರು ಮಾತಿಗೆ ಸಿಕ್ಕರು. ‘ಸರ್ಕಾರದಿಂದ ಇಂಥದೊಂದು ಪ್ರಸ್ತಾಪ ಬರುವುದೇ ಅದೃಷ್ಟ, ಅಂತೂ ಈ ಯೋಚನೆ ಅವರ ಕಡೆಯಿಂದಲೇ ಬಂದಿದೆ. ಒಂದು ವೇಳೆ ಚಳವಳಿಯ ಮೂಲಕವೇ ಈ ಧೋರಣೆಗೆ ಸರ್ಕಾರವನ್ನು ನಾವು ಬಗ್ಗಿಸಬೇಕಿದ್ದಿದ್ದರೆ, ಹತ್ತಾರು ವರ್ಷ ಎಲ್ಲರೂ ಬೀದಿಯ ಮೇಲೇ ಇರಬೇಕಾಗುತ್ತಿತ್ತು. ಈಗ ಅವಕಾಶ ಬಂದಿದೆ, ಕಳೆದುಕೊಳ್ಳುವುದು ಬೇಡ’ ಎನ್ನುತ್ತ ಆ ಗೆಳೆಯರ ಮುಂದೆ ಇನ್ನೊಂದು ವಿನಂತಿ ಇಟ್ಟೆ: ‘ಮೆರಿಟ್ ಅನ್ನುವುದು ಈಗ ಯಾರೊಬ್ಬರ ಜಹಗೀರೂ ಅಲ್ಲ, ನನಗನಿಸುವ ಮಟ್ಟಿಗೆ ಇಂದು ಎಲ್ಲ ವರ್ಗಗಳ ಮಕ್ಕಳೂ ಸರಿಸುಮಾರು ಸಮಾನ ಸಾಮಥ್ರ್ಯವನ್ನೇ ಪಡೆದಿದ್ದಾರೆ. ಅದಕ್ಕೇ, ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿ ಮಂಡಳಿ/ ಇಲಾಖೆಗಳಿಂದ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಪಂಗಡವಾರು ಪಡೆದರೆ, ಆ ಅಂಕಿ ಅಂಶಗಳನ್ನು ಸಕರ್ಾರದ ಹಾಗೂ ಉದ್ಯಮಿಗಳ ಮುಖಕ್ಕೆ ಹಿಡಿದು ವಾದಕ್ಕೆ ನಿಲ್ಲಬಹುದು. ಸಮಾಜದ ಎಲ್ಲ ಚಿಂತನಶೀಲರನ್ನೊಳಗೊಂಡು ಒಂದು ಆಂದೋಲನವನ್ನೇ ರೂಪಿಸಬಹುದು. ಈಗಿಂದೀಗಲೇ ಹೀಗೆ ಪಟ್ಟು ಹಿಡಿಯದೆ ಇದ್ದರೆ, ಸದ್ಯದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಲ್ಲ ಮಹತ್ವದ ಅವಕಾಶವೊಂದು ಕೈ ತಪ್ಪಿಹೋಗುತ್ತದೆ’ ಎಂದು ವಿವರಿಸಿದೆ. ಗೆಳೆಯರು ಆ ಕ್ಷಣ ಉತ್ಸಾಹದಿಂದ ಹೌದೆಂದು ಗೋಣಾಡಿಸಿದರೂ, ಅವರ ಲಹರಿ ಬೇರೆಯಿತ್ತೆಂದು ತೋರುತ್ತದೆ. ಮರುದಿನ ಮೈಸೂರಿನಲ್ಲಿ ಪರ್ಯಾಯಯ ರಾಜಕಾರಣ ಕುರಿತ ಸಮಾವೇಶ ನಡೆಯುವುದಿತ್ತು. ತಾವು ಅದರಲ್ಲಿರಬೇಕೋ ಬೇಡವೋ ಎಂಬ ಜಿಜ್ಞಾಸೆಯೇ ಈ ಗೆಳೆಯರಿಗೆ ಮುಖ್ಯವಾದಂತಿತ್ತು. ಆಮೇಲೆ ಆ ಅಂಕಿ ಅಂಶಗಳ ವಿಷಯ ಅವರು ಮರೆತೇಬಿಟ್ಟರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮತ್ತೆ ಇದೇ ಹಂಬಲವನ್ನು ಕೆಲವು ಪ್ರಗತಿಪರ ಪತ್ರಕರ್ತ ಗೆಳೆಯರ ಮುಂದೆಯೂ ತೋಡಿಕೊಂಡೆ. ಆಗಲೂ ಏನೂ ಆಗಲಿಲ್ಲ. ಕೊನೆಗೆ ಪೂರಾ ಒಂದು ವರ್ಷದ ನಂತರ, ನಾನೇ ಎಸ್ಸೆಸ್ಸೆಲ್ಸಿ/ ಪಿಯೂಸಿ ಪರೀಕ್ಷೆಯ ವಿವರ ಸಂಗ್ರಹಿಸಿ ಅರ್ಥೈಸಲು ಯತ್ನಿಸಿದ್ದೇ ಕಳೆದ ಸಂಚಿಕೆಯ ಹುಡುಕಾಟ. ಈ ವಿಷಯವನ್ನೇ ಬೆಳೆಸಿ ಪ್ರಸ್ತಾಪಿಸುತ್ತಿರುವುದು,- ಈಗ ಸರ್ವೋದಯ ಕರ್ನಾಟಕ ಪಕ್ಷದ ರೂಪದಲ್ಲಿ ರೈತ, ದಲಿತ ಸಂಘಟನೆಗಳು ಇತರೆ ಚಿಂತಕರೊಂದಿಗೆ ಸೇರಿ ಕಟ್ಟಲೆತ್ನಿಸುತ್ತಿರುವ ಪರ್ಯಾಯ ರಾಜಕಾರಣದ ಗುಂಗು- ಯಾಕೆ ನಮ್ಮಲ್ಲಿ ಅನುಮಾನ, ಅಪನಂಬಿಕೆಗಳನ್ನು ಹುಟ್ಟಿಸುತ್ತಿದೆ ಎಂಬ ಶೋಧನೆಗೆ ಇದು ದಾರಿ ಮಾಡುವುದರಿಂದ. ಹೋದ ಫೆಬ್ರವರಿಯಲ್ಲಿ ಕೋಲಾರದ ಗೆಳೆಯರು ಅಲ್ಲೊಂದು ಚರ್ಚೆಗೆ ಕರೆದಿದ್ದರು. ಯಾವುದೇ ಸೆಮಿನಾರು, ಸಭೆಗಳೆಂದರೆ ಅಂಜಿ ಹಿಂಜರಿಯುವ ನನ್ನನ್ನು ಬಿಡದೆ ಕರೆದೊಯ್ದರು! ವೇದಿಕೆಯ ಮೇಲಿದ್ದ ಇತರೆ ಗೆಳೆಯರು ಕನ್ನಡನಾಡಿನ ಎಲ್ಲ ಚಳವಳಿಗಳು ಹೇಗೆ ಬಸವಳಿದಿವೆ ಎಂಬ ವಿಶ್ಲೇಷಣೆ ಮಾಡಿದರೆ, ನನಗೆ `ಪರ್ಯಾಯ ರಾಜಕಾರಣ’ವನ್ನು ಅವಲೋಕಿಸುವ ಹೊಣೆ. ಅಲ್ಲಿ ಎತ್ತಿದ ಅನುಮಾನಗಳನ್ನೇ ಇಲ್ಲಿ ಸಂಗ್ರಹಿಸಿ ಹೇಳುವುದಾದರೆ:- ಮೊದಲಿಗೆ ಇವರು ಪರ್ಯಾಯ ಅನ್ನುತ್ತಾರೆ. ಯಾವುದಕ್ಕೆ ಪರ್ಯಾಯು ಮತ್ತು ಅದಕ್ಕಿಂತ ಮುಖ್ಯವಾಗಿ, ಹೇಗೆ ಪರ್ಯಾಯು ಎಂದು ವಿವರಿಸುವುದಿಲ್ಲ. ಕಾಂಗ್ರೆಸ್ಸಾಯಿತು, ವಿರೋಧ ಪಕ್ಷಗಳಾದವು, ಕಡೆಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೂ ಬಂದುಹೋಯಿತು. ಇವೆಲ್ಲಕ್ಕೆ ಪರ್ಯಾಯ ಅಂದುಕೊಳ್ಳೋಣ. ಆದರೆ ಇವರೂ ಪಕ್ಷ ಕಟ್ಟಬೇಕು, ಚುನಾವಣೆಗಳನ್ನು ಎದುರಿಸಬೇಕು, ಗೆದ್ದು ಅಧಿಕಾರ ಹಿಡಿಂುಬೇಕು. ಅದಕ್ಕೆಲ್ಲ ಬೇಕಾದ ಕೊಪ್ಪರಿಗೆ ಹಣ ಎಲ್ಲಿಂದ ಬರುತ್ತದೆ? ಅದನ್ನು ವಿವರಿಸಿಲ್ಲ. ಕೊನೇ ಪಕ್ಷ, ತಮ್ಮ ಯಾವ ನಿರ್ದಿಷ್ಟ ಚಿ೦ತನೆ, ಕಾರ್ಯಕ್ರಮಗಳ ಮೂಲಕ ಪರ್ಯಾಯು ಒದಗಿಸಬಹುದು; ತಾವು ಮಿಕ್ಕವರಿಗಿಂತ ಹೇಗೆ ಭಿನ್ನ ಎಂಬುದನ್ನೂ ಬಿಡಿಸಿ ಹೇಳಿಲ್ಲ. ಇವರೆಲ್ಲ ಹೋರಾಟದ ಕುಲುಮೆಂುಲ್ಲೇ ಬೆಂದು ಬಂದು ಪರ್ಯಾಯದ ಚಿಂತನೆಗಿಳಿದವರು. ಹಾಗಾಗಿ ಬೇರೆ ಯಾವ ಸಾಂಪ್ರದಾಯಿಕ ಪಕ್ಷಕ್ಕೂ ಇಲ್ಲದ ಹೊಣೆ ಇವರ ಮೇಲಿದೆ. ಬೇರೆ ಯಾರೂ ಎದುರಿಸದ ಪ್ರಶ್ನೆಗಳಿಗೆ ಇವರು ಎದೆಯೊಡ್ಡುವುದು ಅನಿವಾರ್ಯವಾಗುತ್ತದೆ. ಮತ್ತು ವಿವರಣೆ, ಸಮರ್ಥನೆಗಳನ್ನು ಮೀರಿದ ನಡೆಗಳಿಂದ, ಕಾರ್ಯಗಳಿ೦ದ ತಮ್ಮ ಹಾದಿಂುನ್ನು ಸ್ಪಷ್ಟಗೊಳಿಸಬೇಕಾಗುತ್ತದೆ. ಮಾತಿನಿಂದಲ್ಲ. ಖಾಸಗಿ ರಂಗದಲ್ಲಿ ಮೀಸಲಾತಿಂು ವಿಷಂುವನ್ನೇ ನೋಡಿ: ಈವರೆಗೆ ಈ ಪರ್ಯಾಯುದ ಹುರಿಂಾಳುಗಳು ಕೆಲವು ಹೇಳಿಕೆ ನೀಡುವುದರ ವಿನಾ ಬೇರೇನು ಮಾಡಿದರು? ಅದೂ ಬೇಡ. ಈ ನಾಡಿನ ಜೀವಧಾರೆಗಳ ಮೂಲ ಒರತೆಂೆು ಬತ್ತಿಹೋದಂತೆ ಕಂಡ ರೈತರ ಆತ್ಮಹತ್ಯೆ? 1996ರಿಂದ 2003ರ ಸೆಪ್ಟೆಂಬರ್ವರೆಗೆ ರಾಜ್ಯದಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಅಂದರೆ ಸತತ ಏಳು ವರ್ಷಗಳ ಕಾಲ ದಿನಕ್ಕೆ ಸರಾಸರಿ ನಾಲ್ಕು ಆತ್ಮಹತ್ಯೆ! ಒಂದು ಕಾಲದಲ್ಲಿ ಕನರ್ಾಟಕದ ರೈತರ ಆತ್ಮಗೌರವದ ಪ್ರತೀಕವಾಗಿದ್ದ ರೈತಸಂಘಕ್ಕೆ (ಈಗ ಪರ್ಯಾಯುದ ಪಾಲುದಾರ) ಇದು ದಿಗ್ಭ್ರಮೆಗೊಳ್ಳಬೇಕಾದ, ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ, ಈ ಕ್ಷಣ ಏನಾದರೂ ಮಾಡದಿದ್ದರೆ ಈ ನಾಡಿಗೆ ಭವಿಷ್ಯವಿಲ್ಲವೆಂಬ ಆತಂಕ ಹುಟ್ಟಿಸಬೇಕಾದ ಸಮಸ್ಯೆಂಾಗಿ ಂಾಕೆ ಕಾಡಲಿಲ್ಲ? ಆ ದಿನಗಳಲ್ಲಂತೂ ಒಬ್ಬ ರೈತನಾಂುಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರೆ, ಮಿಕ್ಕವರು ಸ್ಥಳೀಂು ರಾಜಕಾರಣದಲ್ಲಿ ಹೂತುಹೋಗಿದ್ದರು. ಇದು ವಾಸ್ತವ! ಇನ್ನು ದಲಿತ ಸಂಘಟನೆಗೆ ಇದು ತನಗೆ ಸಂಬಂಧಪಡದ ವಿಷಂುವಾಗಿ ಕಂಡಿತೇ? ಗೊತ್ತಿಲ್ಲ. ಆದರೆ ಇದು ಕೇವಲ ರೈತರಿಗೆ ಸೀಮಿತವಾದ ದುರಂತವೆಂದು ಕಣ್ಣು ಮುಚ್ಚಿಕೊಂಡು ಮುಂದೆ ಹೋಗಿಬಿಡಬಹುದಾಗಿತ್ತೇ?… ಈಗಾಗಲೇ `ಸರ್ವೋದಯು ಸಂತ’ ಎಂಬ ಬಿರುದಿಗೆ ಪಾತ್ರರಾಗಿರುವ ಹಿರಿಂು ಗೆಳೆಯ ದೇವನೂರ ಮಹಾದೇವ, ಸರ್ವೋದಯು ಪಕ್ಷದ ಅಧ್ಯಕ್ಷರಾಗಿ ಸಂದರ್ಶನವೊಂದರಲ್ಲಿ ಮುತ್ತಿನಂಥ ಮಾತುಗಳನ್ನು ಆಡಿದ್ದಾರೆ. (ಅವರು ಯಾವಾಗ ತಾನೇ ಬೇರೆ ಥರದ ಮಾತಾಡಿದ್ದಾರೆ?) ಅವರು ಅಲ್ಲಿ ಉಲ್ಲೇಖಿಸಿದ ತಮ್ಮ ಪಕ್ಷದ ಎರಡು ಕಾರ್ಯಕ್ರಮಗಳು: -ತನ್ನೂರಿಗೆ ತನ್ನ ಕೈಲಾದಷ್ಟು -ಪ್ರತಿ ಊರಿನಲ್ಲಿ ಊರಿನ ಕೆಲಸಗಳಿಗಾಗಿ ಹತ್ತು ಜನರ ಸಮಿತಿ. ಈ ಹತ್ತು ಜನರ ಸಮಿತಿಂು ಆಲೋಚನೆ, ಹಳ್ಳಿ ಹಳ್ಳಿಗಳಲ್ಲಿ ರೈತರು ವಿಷ ಕುಡಿಂುುತ್ತಿದ್ದಾಗ, ನೇಣು ಹಾಕಿಕೊಳ್ಳುತ್ತಿದ್ದಾಗ ಂಾಕೆ ಬರಲಿಲ್ಲ ಎಂಬುದು ನನಗೀಗಲೂ ಸೋಜಿಗವಾಗಿಂೆು ಕಾಣುತ್ತದೆ. ಮುಖ್ಯ ಪ್ರಶ್ನೆಂೆುಂದರೆ- ಕಣ್ಣೆದುರು ಎದೆಯೊಡೆಯುವ ಸಮಸ್ಯೆಗಳು ತಲೆಂೆುತ್ತಿದಾಗಲೂ ಅವಕ್ಕೆಲ್ಲ ಬೆನ್ನು ಹಾಕಿ ನಿಜರ್ೀವವಾಗಿದ್ದವರು ಈಗ ಂಾವ ಬಾಯಿಂುಲ್ಲಿ ಪರ್ಯಾಯುದ ಮಾತಾಡುತ್ತಾರೆ? ಇನ್ನು ಇವರು ಕಟ್ಟುವ ಪರ್ಯಾಯುದ ಸ್ವರೂಪ ಎಂಥದಿರಬಹುದು? ಈ ಕ್ಷಣಕ್ಕೆ ಕುರುಡಾದವರು ನಾಳಿನ ದೊಡ್ಡ ಬೆಳಕಿನ ಬಗ್ಗೆ ಹೇಗೆ ಮಾತಾಡಬಲ್ಲರು? ಇಂದು ಮನೆಂು ಮುಂದಿನ ಸಸಿಗೆ ನೀರೆರೆಂುುವುದನ್ನೇ ತಪ್ಪಿಸಿಕೊಂಡವನು, ಇನ್ನು ತಿಂಗಳೆರಡರಲ್ಲಿ- ಹಸಿರು ತುಂಬಿದ ವಿಶಾಲ ವನ ನಿಮರ್ಿಸುತ್ತೇನೆಂದು ಮಾತಾಡಿದರೆ… ನಂಬಿಕೆ ಬರುವುದಿಲ್ಲ. ಮೂಟೆ ಹೊತ್ತೋ, ಗಾಡಿ ತಳ್ಳಿಂೋ, ಗಾರೆ ಕೆಲಸದಲ್ಲೋ ಹೊಟ್ಟೆ ಹೊರೆಂುುವವನು ತನ್ನ ನಿರಂತರ ಜಂಜಡದಿಂದ ಬೇಸತ್ತು ಪ್ಲೇವಿನ್ ಲಾಟರಿ ಟಿಕೆಟ್ ಕೊಂಡರೆ ತಪ್ಪಿಲ್ಲ. ಆದರೆ ಆ ಪ್ಲೇವಿನ್ನಿನ ಹಗಲುಗನಸಿನಲ್ಲಿ ನಿತ್ಯದ ಕಸುಬನ್ನೂ ಬಿಟ್ಟು, ಕೋಟಿಗಟ್ಟಲೆ ಬಂದಾಗ ಏನೇನು ಮಾಡುತ್ತೇನೆಂದು ಲೆಕ್ಕಾಚಾರ ಹಾಕುತ್ತಾ ಕೂತರೆ, ಅವನ ಮನೆ ಒಲೆ ಉರಿಂುುವುದೇ? ಚಳವಳಿಗಳನ್ನು ರೂಪಿಸುತ್ತಾ, ಜನರೊಂದಿಗೆ ನೋಂುುತ್ತಾ ಹಷರ್ಿಸುತ್ತಾ, ನಾಡಿನ ಸಂಕಟಗಳಿಗೆ ಮೈಂೊಡ್ಡಿಕೊಂಡಿದ್ದ ಈ ಮುಂದಾಳುಗಳೇ ಇಂದು ತಕ್ಷಣದ್ದನ್ನು ಮರೆತು ನಾಳಿನ ದೊಡ್ಡ ಕನಸುಗಳ- ಪ್ಲೇವಿನ್ ಮನಸ್ಥಿತಿಗೆ ಶರಣಾದಂತೆ ತೋರುವುದಿಲ್ಲವೇ? ಅದಕ್ಕೇ ನನ್ನಂಥವರಿಗೆ ನಂಬಿಕೆ ಹುಟ್ಟುತ್ತಿಲ್ಲ….   ಇವರು ಕಳೆದ ಮೂವತ್ತು ವರ್ಷಗಳಿಂದ ಪ್ರಮುಖ ಪಕ್ಷವೊಂದರಲ್ಲಿ ಸಕ್ರಿಂುರಾಗಿರುವ ನನ್ನ ಸ್ನೇಹಿತರು. ಪಕ್ಷದೊಳಗಿನ ಅಧಿಕಾರ ಕೇಂದ್ರಗಳಿಗೆ ನಿಕಟವಾಗಿದ್ದೂ, ಎಂದೂ ವಿಧಾನಸೌಧದ ಮೆಟ್ಟಿಲು ಏರದವರು. ನಾನೊಮ್ಮೆ ಅವರನ್ನು ನೀವೇಕೆ ಂಾವತ್ತೂ ಎಮ್ಮೆಲ್ಲೆ, ಎಮ್ಮೆಲ್ಸಿ ಆಗಲು ಂುತ್ನಿಸಲಿಲ್ಲ? ಎಂದು ಕೇಳಿದ್ದಕ್ಕೆ ಅವರು ನಕ್ಕು ನಾನು ಅಡುಗೆಮನೆ ನೋಡಿದ್ದೀನಲ್ಲ? ಎಂಬ ನಿಗೂಢ ಉತ್ತರ ಕೊಟ್ಟರು! ನನಗೆ ಅರ್ಥವಾಗಲಿಲ್ಲ. ನೀವೆಲ್ಲ ಹೋಟೆಲ್ಗೆ ಹೋಗುತ್ತೀರಿ, ಮಸಾಲೆದೋಸೆಗೆ ಆರ್ಡರು ಮಾಡುತ್ತೀರಿ. ದೋಸೆ ಬಂದಾಗ ಅದರ ಗರಿಗರಿ ಕಂಪು ಆಸ್ವಾದಿಸುತ್ತ ಆಲೂಗಡ್ಡೆ ಪಲ್ಯದೊಂದಿಗೆ ಮೆದ್ದು ಆನಂದಿಸುತ್ತೀರಿ. ಆದರೆ ನಾನು ಅಡುಗೆಮನೆಂುಲ್ಲಿ ಗೋಣಿತಟ್ಟಿನ ಮೇಲೆ ಬೆಂದ ಆಲೂಗಡ್ಡೆ ಸುರುವಿಕೊಂಡು ಕಾಲಿನಿಂದ ಕಚಪಚ ತುಳಿದು ಪಲ್ಯ ಮಾಡುವುದನ್ನು ನೋಡಿದ್ದೀನಲ್ಲ, ಅದಕ್ಕೇ ನಾನು ದೋಸೆಂುನ್ನು ಆಸ್ವಾದಿಸಲಾರೆ…. ಇಲ್ಲಿ ದೋಸೆ ಎಂದರೆ ಅಧಿಕಾರ ಸ್ಥಾನ, ಅಡುಗೆಮನೆ ಎಂದರೆ ಅದರ ಹಿಂದಿನ ರಾಜಕೀಂು ಕಸರತ್ತು ಎಂಬುದು ಸ್ವಯಂವೇದ್ಯ. ಈ ಉಪಮೆ ತುಸು ಹುಂಬತನದ್ದಲ್ಲವೇ, ಆ ನನ್ನ ಮಿತ್ರರದು ಒಂದು ರೀತಿ ಪಲಾಂುನವಲ್ಲವೇ ಅನಿಸಿದರೂ- ಅಧಿಕಾರದ ಪ್ರಲೋಭನೆ ಮತ್ತು ಗೋಳುಗಳನ್ನು ಅರಿಂುಲು ಈ ಹೋಲಿಕೆ ನೆರವಾಗಬಹುದು. ದೇವನೂರ ಮಹಾದೇವ ಊರಿಗೆ ಹತ್ತು ಜನರ ಸಮಿತಿ ಎಂಬ ಕಾಂರ್ುಕ್ರಮದ ಬಗ್ಗೆ ಹೇಳಿದ್ದಾರೆ. ತುಸು ಒಳ ಹೊಕ್ಕು ನೋಡುತ್ತಿದ್ದಂತೆಂೆು ಇದು ಮೇಲೆ ತೋರುವಷ್ಟು ಅಂದದ ವ್ಯವಸ್ಥೆ ಇರಲಾರದು ಅನ್ನುವ ಅನುಮಾನವೇಳುತ್ತದೆ. ಂಾರು ಈ ಹತ್ತು ಜನ? ಎಲ್ಲಿಂದ ಉದ್ಭವಿಸುವವರು? ಪಕ್ಷದ ಉದ್ದೇಶವೇ ಅಧಿಕಾರಗ್ರಹಣವಾದ್ದರಿಂದ ಈ ಆಂ್ದು ಹತ್ತು ಜನಕ್ಕೆ ಆಗಲೇ ಕುಚರ್ಿ, ಸ್ಥಾನಮಾನಗಳ ಒಗ್ಗರಣೆಂು ಸುವಾಸನೆ ಮೂಗಿಗೆ ಬಡಿಂುದಿರಲು ಸಾಧ್ಯವಿಲ್ಲ. ಅಂದರೆ ಅವರ ಲಕ್ಷ್ಯವೆಲ್ಲ ಅಧಿಕಾರದ ಕಡೆಗಿರುವುದು ಅವಶ್ಯ; ಆದರೆ ನಡವಳಿಕೆಂೆುಲ್ಲವೂ ಅದಕ್ಕಾಗಿ ಹೂಡಿದ ಸ್ವಾರ್ಥ ತಂತ್ರವಾಗಿರದೆ ನಿಸ್ಪೃಹವಾಗಿರಬೇಕು. ಹಾಗಿಲ್ಲದಿದ್ದರೆ ಈ ಜನ ತಮ್ಮ ಸುತ್ತಲಿನವರ ವಿಶ್ವಾಸ ಗಳಿಸಲಾರರು. ಈ ದ್ವಂದ್ವದ ಇತ್ಯರ್ಥ ಹೇಗೆ? ಬೀದಿ ರಾಜಕಾರಣದ ತೊಡಕುಗಳು ಒಂದೆರಡಲ್ಲ. (ಈ ಶಬ್ದವನ್ನು ಠಿಡಿಚಿಛಿಣಛಿಚಿಟ ಠಿಠಟಣಛಿ- ದೈನಿಕದ ರಾಜಕೀಂು ಎಂಬರ್ಥದಲ್ಲಿ ಬಳಸುತ್ತಿದ್ದೇನೆ). ನಿಮಗೆ ನೆನಪಿದೆ: ಪ್ರೊ. ನಂಜುಂಡಸ್ವಾಮಿಂುವರು ಕರೆ ಕೊಟ್ಟಾಗ ಐದು ಲಕ್ಷ ಜನ ರೈತರು ಕಬ್ಬನ್ ಪಾಕರ್ಿನಲ್ಲಿ ಒಟ್ಟುಗೂಡಲು ಸಿದ್ಧರಿದ್ದರು. ಆದರೆ ಅವರ್ಯಾರೂ ರೈತಸಂಘಕ್ಕೆ ವೋಟು ಹಾಕಲಿಲ್ಲ. ಅಂದರೆ ಪ್ರೊಫೆಸರರ ತಾತ್ವಿಕ ರಾಜಕೀಂು ಶಕ್ತಿ ಎಷ್ಟೇ ಇದ್ದರೂ, ಅವರಿಗೆ ಬೀದಿ ರಾಜಕಾರಣದ ನುಡಿಗಟ್ಟು ದಕ್ಕಿರಲಿಲ್ಲ. ಎಮ್ಮೆಲ್ಲೆಂಾಗಿ ಗೆಲ್ಲುವ ಸರಾಸರಿ ರಾಜಕಾರಣಿ ಎಂದೂ ಐದು ಲಕ್ಷ ಜನಕ್ಕೆ ಉದ್ಯೋಗ ಕಲ್ಪಿಸುವ ಮಾತಾಡುವುದಿಲ್ಲ, ಒಂದು ವೇಳೆ ಬಾಯಿಮಾತಿಗೆ ಹೇಳಿದರೂ, ಹತ್ತಿರದ ಐದು ಜನಕ್ಕೆ ಮಾತ್ರ ಕೆಲಸ ಕೊಡಿಸುತ್ತಾನೆ. ಈ ಕಾಳಜಿ ಕಣ್ಣಿಗೆ ಕಾಣುವುದಾದ್ದರಿಂದ ಗೆಲ್ಲುತ್ತಾನೆ. ಬೆಂಗಳೂರಿನಲ್ಲೇ ಒಬ್ಬ ಶಾಸಕ (ಮಂತ್ರಿಗಿರಿಂುನ್ನೂ ಅನುಭವಿಸಿದವರು) ತಾನೇ ಫೋನ್ ಮಾಡಿ ಒಂದು ಬೀದಿಂುಲ್ಲಿ ನೀರು ಬಂದ್ ಮಾಡಿಸಿ, ಮತ್ತೆ ತಾನೇ ಆ ಬೀದಿಗೆ ಹೋಗಿ ಜಲಮಂಡಳಿಂುವರನ್ನು ಕರೆದು ಉಗಿದು ನೀರು ಬಿಡಿಸುತ್ತಿದ್ದರು! ಇದು ಬೀದಿ ರಾಜಕಾರಣದ ಲಕ್ಷಣ. ಅಂದರೆ ದಿನದಿನವೂ ಜನರೊಂದಿಗೆ ಒಡನಾಡುತ್ತ, ಅವರ ಮನೆಂು ಮದುವೆ, ಕಾಯಿಲೆಗಳ ಗರಜನ್ನೆಲ್ಲ ಹಚ್ಚಿಕೊಂಡು, ತನ್ನ ಕೈಂುಲ್ಲಿ ಆಗಲಿ, ಬಿಡಲಿ- ಆಗುವುದಿಲ್ಲ ಎಂದು ಮಾತ್ರ ಬಾಂುಲ್ಲಿ ಹೇಳದೆ ವಿಶ್ವಾಸ ಗೆಲ್ಲುವ ಈ ಉಪಾಂು- ಒಂದು ಹಂತದಲ್ಲಿ ನಿರೀಕ್ಷೆಗಳನ್ನು ನಿಭಾಯಿಸುವ ಕುಶಲತೆ. ಇದಕ್ಕೇ ಮೊಂಡುತನ ಬೆರೆತೆರೆ ಅದು ಸ್ವಾರ್ಥ, ದ್ರೋಹಗಳ ಎಂದಿನ ತಂತ್ರಗಾರಿಕೆ ಆಗತೊಡಗುತ್ತದೆ. ಅಥವಾ ಇದು ಇನ್ನೂ ಸಂಕೀರ್ಣವಾದದ್ದೂ ಆಗಿರಬಹುದು. ಒಟ್ಟಿನಲ್ಲಿ ಇದಿಲ್ಲದ ರಾಜಕೀಂು, ಪುಸ್ತಕದ ಬದನೆಕಾಯಿ ಅಷ್ಟೇ. ಇನ್ನೂ ತುಸು ಹಗುರವಾಗಿ ಹೇಳುವುದಾದರೆೆ ತಾತ್ವಿಕ ರಾಜಕಾರಣವನ್ನು ಗಂಭೀರ ಆಟರ್್ ಸಿನಿಮಾಗೂ, ಬೀದಿ ರಾಜಕಾರಣವನ್ನು ಕಮಷರ್ಿಂುಲ್ ಸಿನಿಮಾಗೂ ಹೋಲಿಸಬಹುದು. ಆಟರ್್ ಸಿನಿಮಾದ ಉದ್ದೇಶ ಘನವಾದದ್ದು (ಅಥವಾ ಹಾಗೆ ಕಾಣುವಂಥಾದ್ದು.) ಆದರೆ ಬೋರು! ಕಮಷರ್ಿಂುಲ್ ಸಿನಿಮಾದ ಉದ್ದೇಶ ರಂಜನೆ ಮಾತ್ರ. ಆದಕ್ಕೇ ಜನಪ್ರಿಂು! ಹಾಗೂ, ತಾತ್ವಿಕ ಗಾಂಭೀಂರ್ುವನ್ನೂ ಜೊತೆಗೆ ಬೀದಿ ರಾಜಕೀಂುದ ಪಟ್ಟುಗಳನ್ನೂ ನಾಂುಕನೊಬ್ಬ ಒಟ್ಟಿಗೇ ಪಡೆದ ಅಪರೂಪದ ಉದಾಹರಣೆಗಳೂ ಇವೆ- ದೇವರಾಜ ಅರಸು ತರಹದವರಲ್ಲಿ. ಅದಕ್ಕೇ ಬೇರೆಂುವರಿಗೆ ಭಾಷಣದಲ್ಲಿ ಮಾತ್ರ ನಿಜವಾದದ್ದು, ಅರಸರಿಗೆ ನಿಜದಲ್ಲಿ ಸಾಧ್ಯವಾಯಿತು. ಇದು ಚಚರ್ೆಂುನ್ನು ಮತ್ತೆ ಹಳೆ ಅನುಮಾನದೆಡೆಗೇ ಒಂು್ಯುತ್ತದೆ. ಆ ಊರಿನ ಸಮಿತಿಂು ಹತ್ತು ಜನ ಹೇಗೆ ಸಮತೋಲ ಸಾಧಿಸುತ್ತಾರೆ? ಹೋರಾಟಗಾರನ ನಿಷ್ಠುರತೆ, ರಾಜಕೀಂುದ ಮುತ್ಸದ್ದಿತನ… ಚಳವಳಿಂು ಆತ್ಮ, ರಾಜಕೀಂುದ ದೇಹ. ಸುಲಬವೇ? ಕೋಲಾರದ ಚಚರ್ೆಂುಲ್ಲೂ ಈ ಪ್ರಸ್ತಾಪ ಬಂತು. ಈಗ ಪರ್ಯಾಯದ ಮುಂಚೂಣಿಂುಲ್ಲಿರುವ ಕೆಲವರಾದರೂ, ನಾಳೆ ಂಾವುದೋ ಮಂಡಳಿ, ನಿಗಮದ ಅಧ್ಯಕ್ಷಗಿರಿ ಅಥವಾ ಎಮ್ಮೆಲ್ಸಿಗಿರಿ ಸಿಕ್ಕರೆ, ಆ ಗಳಿಗೆಂೆು ಪರ್ಯಾಯದಿಂದ ಕೊಡವಿಕೊಂಡು ಹೋಗುವುದು ಶತಸ್ಸಿದ್ಧ!… ಊರ ಸಮಿತಿಂು ಮುಂದೆ ಇಂಥ ಮೇಲ್ಪಂಕ್ತಿಗಳಿದ್ದರೆ, ಈ ಹತ್ತು ಂುುವಕ ಂುುವತಿಂುರಲ್ಲಿ ಆದರ್ಶದ ಕೃತಾರ್ಥತೆ ಮೂಡುವುದು ಹೇಗೆ? ನಾವೇ ಕಂಡಂತೆ ಒಂದು ಕಾಲದಲ್ಲಿ ಕಂಗಳಲ್ಲಿ ಕನಸು, ಕೆಚ್ಚು ತುಂಬಿಕೊಂಡಿದ್ದ ಚಳವಳಿಗಾರರು ಇಂದು ತಾಲೂಕಾಫೀಸಿನ ದಲ್ಲಾಳಿಗಳಾಗಿಹೋಗಿದ್ದಾರೆ. ಚಳವಳಿಂು ಅಂದಿನ ಹುಮ್ಮಸ್ಸು ಪಳಗಿ ಇಂದು ಪುಢಾರಿಗಿರಿಯಾಗಿದೆೆ; ಇಲ್ಲವೇ ದಣಿದು ಸಿನಿಕತೆಂಾಗಿದೆ. ಈ ಮುರಿದ ತುಣುಕುಗಳನ್ನಿಟ್ಟುಕೊಂಡೇ ಪರ್ಯಾಯ ತನ್ನ ವರ್ತಮಾನವನ್ನು ಕಟ್ಟಬೇಕಿದೆ. ಇದು ಕೇವಲ ತತ್ವವಲ್ಲ, ಕೇವಲ ರಾಜಕೀಂುವಲ್ಲ; ಸ್ವಂತದ ಹಾದಿ, ಭಾಷೆ, ಸ್ಫೂತರ್ಿ, ಶೈಲಿ, ಉಮೇದುಗಳನ್ನು ಕಂಡುಕೊಳ್ಳುವ ಂಾತನಾಮಂು ಹೊಣೆಗಾರಿಕೆ. ಕೋಲಾರದ ಸಭೆಂು ನಂತರ ದಲಿತ ಸಂಘಟನೆಂು ಮುಂದಾಳು ಸಿ.ಎಂ. ಮುನಿಂುಪ್ಪ ನಿಡುಸುಂು್ದು ಹೇಳಿದರು: ಗುರೂ, ನಾವು ನಮ್ಮ ಕಾಲದಲ್ಲಿ(!) ನಮಗೆ ಸರಿ ಅನಿಸಿದ್ದನ್ನು ಮಾಡಿದೆವು. ಸಮಸ್ಯೆಗಳನ್ನು ಎತ್ತಿಕೊಂಡು ಬಡಿದಾಡಿದೆವು. ಆಂ್ತುಪ್ಪ, ನಮ್ಮ ಕೈಂುಲ್ಲಿ ಸಾಧ್ಯವಿದ್ದಿದ್ದು ಆಷ್ಟೇ ಅಂದುಕೊಳ್ಳೋಣ. ಆದರೆ ನಮ್ಮ ನಂತರದವರು ಂಾಕೆ ಸುಮ್ಮನಿದ್ದಾರೆ? ಅವರಿಗೆ ಅನಿಸಿದ್ದನ್ನು ಂಾಕೆ ಮಾಡುತ್ತಿಲ್ಲ? ಅಥವಾ ಅವರಿಗೆ ಂಾಕೆ ಏನೂ ಅನಿಸುತ್ತಿಲ್ಲ?… ಇಂಥ ದಟ್ಟ ವಿಷಾದ, ನಿರಾಸೆಗಳ ವಾತಾವರಣದಲ್ಲಿ ಪರ್ಯಾಯುದ ಸೊಲ್ಲು ಹೊರಟಿದೆ. ಕೋಲಾರದ ಚಚರ್ೆಂುಲ್ಲಿ ಲಂಕೇಶರ ಪ್ರಗತಿರಂಗದ ಪ್ರಸ್ತಾಪವೂ ಬಂದಾಗ ನೆನಪಾದದ್ದು: ಲಂಕೇಶರಿಗೆ ನಿಜಕ್ಕೂ ಅಧಿಕಾರದ ಆಸೆ ಹುಟ್ಟಿದ್ದರೂ, ಅಧಿಕಾರದ ಗೀಳು ಹಿಡಿದಿರಲಿಲ್ಲ. ಅದಕ್ಕೇ ಪ್ರಗತಿರಂಗ ಬೋಡರ್ಿಗಿಲ್ಲದಂತೆ ಧೂಳೀಪಟವಾದಾಗಲೂ ಅವರು ನಿರುಮ್ಮಳವಾಗಿ ತಮ್ಮ ಪತ್ರಿಕೆಗೆ, ಬರಹಗಳಿಗೆ ಮರಳಿದರು. `ಮುಟ್ಟಿಸಿಕೊಂಡವನು’ ಥರದ ಕಥೆ ಕೊಟ್ಟು, ಇನ್ನಷ್ಟು ಸಮಾಜಮುಖಿಂಾಗಿ ಚಿಂತಿಸತೊಡಗಿದರು. ಮೂಲತಃ ಅವರ ಪ್ರಯೋಗ- ಸೃಜನಶೀಲ ಮನಸ್ಸಿನ ಹುಡುಕಾಟವಾಗಿ ಸೋಲಿನ ದುಗುಡದಿಂದ ಮುಕ್ತವಾಗಿತ್ತು. ಪರ್ಯಾಯುದ ಪ್ರಯೋಗವೂ ಇಂಥ ಹುಡುಕಾಟವಾದಾಗ, ಆ ಪಂುಣ ನಾಡಿನ ತುಂಬ ಕ್ರಿಂೆುಂು ಮೂಲಕವೇ ಭರವಸೆಂು ಗಾಳಿ ತರುವಂತಾದಾಗ, ಅಡುಗೆ ಮನೆಂು ಶುಚಿ- ಮಸಾಲೆದೋಸೆಂು ರುಚಿಗಳೆರಡನ್ನೂ ಸರಿದೂಗಿಸಿದಾಗ, ನನ್ನಂಥ ಮೂದೇವಿಂು ಬಾಂುನ್ನೂ ಮುಚ್ಚಿಸಬಹುದು. ಆದರೆ ಅದುವರೆಗೂ ಅಪನಂಬಿಕೆ ಹೋಗುವುದಿಲ್ಲ.   15-22 ಜುಲೈ 2005 *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ  ]]>

‍ಲೇಖಕರು G

March 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This