ಎನ್ ಎಸ್ ಶ೦ಕರ್ ಕಾಲ೦ : ಯಾವ ಮೆರಿಟ್ ಬಗ್ಗೆ ಮಾತಾಡುತ್ತಿದ್ದೀರಿ?

– ಎನ್ ಎಸ್ ಶ೦ಕರ್

 

ಯಾವ ಮೆರಿಟ್ ಬಗ್ಗೆ ಮಾತಾಡುತ್ತಿದ್ದೀರಿ?

 

ಒಂದು ವರ್ಷದ ಹಿಂದೆ ಕೇಂದ್ರ ಸಕರ್ಾರಕ್ಕೊಂದು ಲಹರಿ ಬಂತು: ಖಾಸಗಿ ಕ್ಷೇತ್ರದಲ್ಲಿ ಯಾಕೆ ಮೀಸಲಾತಿ ಇರಬಾರದು? ಈ ಆಲೋಚನೆಯನ್ನು ಸಕರ್ಾರ ಬಹಿರಂಗವಾಗಿ ಹರಿಯಬಿಟ್ಟಿದ್ದೇ ತಡ, ಇಡೀ ದೇಶದ ಉದ್ಯಮಪತಿಗಳು ಇದರ ವಿರುದ್ಧ ಒಕ್ಕೊರಲಿನಿಂದ ಕೂಗೆಬ್ಬಿಸಿದರು. ಮೀಸಲಾತಿಗೆ ಅವಕಾಶ ಕೊಟ್ಟಿದ್ದೇ ಆದರೆ ತಮ್ಮ ಸರ್ವಸ್ವವೇ ನಾಶವಾಗುವುದು; ಐಟಿ ಬಿಟಿಗಳಿಂದ ಜಗತ್ತಿನಲ್ಲಿ ಭಾರತ ಗಿಟ್ಟಿಸಿಕೊಂಡಿರುವ ಪ್ರತಿಷ್ಠೆ ಮತ್ತು ರಫ್ತು ಮಾರುಕಟ್ಟೆಗಳಿಗೆ ಸಂಚಕಾರ ಬರುವುದು… ಒಟ್ಟಿನಲ್ಲಿ ಭಾರತೀಯ ನಾಗರಿಕತೆ ಮತ್ತೆ ಶಿಲಾಯುಗಕ್ಕೆ ಮರಳುವುದೇನೋ ಎಂಬ ಧಾಟಿಯಲ್ಲಿ ತಂಟೆಕೋರ ಮಕ್ಕಳಂತೆ ಬೊಬ್ಬಿಡತೊಡಗಿದರು. ದೇಶದ ಪ್ರತಿಷ್ಠಿತ ಪತ್ರಿಕೆಗಳು ಕೂಡಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರ ಪರವೇ ನಿಂತವು. ಆದರೆ ಈ ದೊಡ್ಡ ಮನುಷ್ಯರ ಆತಂಕ, ವಾದಗಳಿಗೆ ನಿಜಕ್ಕೂ ವಾಸ್ತವದ ಆಧಾರವಿದೆಯೇ, ಅಥವಾ ಶತಮಾನಗಳ ಪೂರ್ವಗ್ರಹವೇ ಈ ಚೀತ್ಕಾರವಾಗಿ ಹೊಮ್ಮುತ್ತಿದೆಯೇ, ಯಾರೂ ಒರೆಗೆ ಹಚ್ಚಲು ಹೋಗಲಿಲ್ಲ. ಹಾಗಾಗಿ ರಾಷ್ಟ್ರಮಟ್ಟದ ಚಚರ್ೆಯೊಂದಕ್ಕೆ ದಾರಿ ಮಾಡಬೇಕಿದ್ದ ವಿಷಯ ತಂತಾನೇ, ಕಣ್ಣೀರು ಹಾಕುವವರೂ ಇಲ್ಲದೆ ಸತ್ತುಹೋಯಿತು. ಮತ್ತೆ ಈ ವರ್ಷ- ಅಂದರೆ ಕಳೆದ ತಿಂಗಳು, ದೇಶದ ಇಪ್ಪತ್ತೊಂದು ಅಗ್ರಗಣ್ಯ ಉದ್ಯಮಿಗಳು ಕೇಂದ್ರ ಸಚಿವೆ ಮೀರಾ ಕುಮಾರ್ಗೆ ಒಂದು ಪತ್ರ ಬರೆದರು: ಯಾವ ಕಾರಣಕ್ಕೂ ಖಾಸಗಿ ರಂಗದಲ್ಲಿ ಮೀಸಲಾತಿಗೆ ಎಡೆ ಮಾಡಲು ನಾವು ಸಿದ್ಧರಿಲ್ಲ, ಬೇಕೆಂದರೆ ಹಿಂದುಳಿದ ಜಾತಿ- ವರ್ಗಗಳಿಗೆ ವಿಶೇಷ ತರಬೇತಿ ನೀಡಿ ಆ ವರ್ಗಗಳನ್ನು ಮೇಲೆತ್ತುವ ಉದಾರ ಉಪಕಾರಗಳನ್ನು ಮಾಡಲು ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಮೀಸಲಾತಿ? ಊಹ್ಞೂಂ, ಬಿಲ್ಕುಲ್ ಸಾಧ್ಯವೇ ಇಲ್ಲ!… ಆ ಮಂದಿ ಇಂಥ ದಾನಧರ್ಮದ ಮಾತಾಡಿದ್ದೇ ದೊಡ್ಡದು ಅನಿಸಿತೇನೋ, ಅವರು ಅಷ್ಟು ಹೇಳಿದ್ದೇ ಮಹತ್ಸಾಧನೆ ಎಂಬಂತೆ ಮೀರಾ ಕುಮಾರ್ ಸಂತೋಷದಿಂದ ಪತ್ರಿಕಾ ಹೇಳಿಕೆ ಕೊಟ್ಟರು! ಈ ಜನಗಳ ಮೀಸಲಾತಿವಿರೋಧಿ ಜಿಗುಟನ್ನು ಅರ್ಥ ಮಾಡಿಕೊಳ್ಳುವುದೇನೂ ಕಷ್ಟವಲ್ಲ. ಅವರು ಬಾಯಿ ಬಿಟ್ಟು ಹೇಳಲಿ ಬಿಡಲಿ, ಅವರಲ್ಲಿ ಪೂರ್ವಜನ್ಮದ ವಾಸನೆಯಂತೆ ಸುಪ್ತ ಪ್ರಜ್ಞೆಯಲ್ಲಿ ನೆಲೆ ನಿಂತ ಕೆಲ ತೀಮರ್ಾನಗಳಿವೆ: ಬುದ್ಧಿವಂತಿಕೆ ಹಾಗೂ ಶೈಕ್ಷಣಿಕ ಸಾಧನೆಯೆಂಬುದು ಮೇಲ್ಜಾತಿಗಳ ಸ್ವತ್ತು; ದಲಿತರು ಹಾಗೂ ಇತರೆ ಹಿಂದುಳಿದವರಿಗೆ ಎಷ್ಟೇ ಸೌಲಭ್ಯ ಕೊಟ್ಟರೂ ಅವರು ಮೇಲು ಜಾತಿಗಳಲ್ಲಿ ರಕ್ತಗತವಾಗಿಯೇ ಹರಿಯುವ ಪ್ರತಿಭೆಂುನ್ನು ಗಳಿಸಲಾರರು; ಆದ್ದರಿಂದ ಆ ವರ್ಗಗಳ ಪ್ರತಿಭಾಹೀನರನ್ನು ನೇಮಿಸಿಕೊಂಡು ಇಂದಿನ ಪೈಪೋಟಿಯ ಯುಗದಲ್ಲಿ ತಾವು ಅಂತಾರಾಷ್ಟ್ರೀಯ ಸಾಧನೆ ಮಾಡಲು ಸಾಧ್ಯವಿಲ್ಲ; ಒಟ್ಟಾರೆ ಖಾಸಗಿ ರಂಗದಲ್ಲಿ ಮೀಸಲಾತಿಯನ್ನು ಒಪ್ಪಿಕೊಳ್ಳುವುದೆಂದರೆ ಅದು ಆಥರ್ಿಕ ಆತ್ಮಾಹುತಿಯೇ ಸರಿ…. ಇತ್ಯಾದಿ. ಇದು ನಿಜಕ್ಕೂ ನಿಜವೇ ಎಂಬ ಪ್ರಶ್ನೆ ಎತ್ತಿಕೊಂಡು ಉತ್ತರ ಹುಡುಕುವ ಮೊದಲು ಮೀಸಲಾತಿ ಪರ ಇರುವ ವಾದಗಳನ್ನೂ ನೋಡಬಹುದು. ಈ ಉದ್ಯಮಪತಿಗಳೂ ಈ ನೆಲದ ಕಾನೂನಿಗೆ ಒಳಪಟ್ಟ ಪ್ರಜೆಗಳಾಗಿ, ಇಲ್ಲಿನ ನೆಲ ಜಲದ ಫಲಾನುಭವಿಗಳೇ ಆದ್ದರಿಂದ ನಮ್ಮ ಸಮಾಜದ ಮೂಲ ಧ್ಯೇಂುಗಳಿಗೆ ಅವರು ಬೆನ್ನು ಹಾಕುವಂತಿಲ್ಲ; ನಮ್ಮ ಸಂವಿಧಾನದ ಸಾಮಾಜಿಕ ನ್ಯಾಂುದ ಹಂಬಲವನ್ನು, ಸಮಾನತೆಂು ಆಶಂುಗಳನ್ನು ಕೊಡವಿಕೊಳ್ಳುವಂತಿಲ್ಲ; ಅಂದರೆ ಸಮಾನತೆಂು ಸಾಧನೆಗಾಗಿ ಮೀಸಲಾತಿ ಎಂಬ ತತ್ವದಿಂದ ಅವರು ತಪ್ಪಿಸಿಕೊಳ್ಳುವಂತಿಲ್ಲ… ಇತ್ಯಾದಿ. ಆದರೆ ಹಣ ಬಲ, ಬಾಯಿ ಬಲ ಮತ್ತು ತರ್ಕ ಬಲದ ಮುಂದೆ ಈ ಶುಷ್ಕ ತಾತ್ವಿಕ ಬುಡುಬುಡಿಕೆಂುನ್ನು ಕೇಳುವ ತಾಳ್ಮೆ ಂಾರಿಗಿದೆ? ಅದಕ್ಕೇ ಉಳಿದ ವಿಷಂುಗಳಲ್ಲಿ ಪ್ರಗತಿಪರ ಪೋಸುಗಳಲ್ಲಿ ಮಿಂಚುವವರು ಕೂಡ ಖಾಸಗಿ ವಲಂು ಎಂಬ ಪ್ರಸ್ತಾಪ ಬಂದ ಕೂಡಲೇ ಅಳುಕಿನಿಂದ `ಅಲ್ಲವೇ? ಪ್ರತಿಭೆ? ಮೆರಿಟ್? ಪೈಪೋಟಿ?’ ಮುಂತಾಗಿ ಗೊ ಣಗುತ್ತ ಚಡಪಡಿಸತೊಡಗುತ್ತಾರೆ. ಅಷ್ಟಕ್ಕೂ, ಇವರು ಮಾತಾಡುತ್ತಿರುವುದು ಂಾವ ಪ್ರತಿಭೆ, ಯಾವ ಮೆರಿಟ್ ಬಗ್ಗೆ? ನಂನಮ್ಮ ಪದಕೋಶಗಳಲ್ಲಿ ಪ್ರತಿಭೆ ಎಂಬ ಶಬ್ದಕ್ಕೆ ಏನೇ ವ್ಯಾಖ್ಯಾನವಿರಲಿ, ಇವರೆಲ್ಲರ ಕಣ್ಣಲ್ಲಿ ಪ್ರತಿಭೆ ಎನ್ನುವುದು ಸ್ಕೂಲು ಕಾಲೇಜುಗಳಲ್ಲಿ ಪಡೆದ ಫಲಿತಾಂಶ; ಮಾಕರ್್ಸ ಕಾಡರ್ೇ ಈ ಪ್ರತಿಭೆಂು ಮಾನದಂಡ. ಹೌದೇ? ಈ ಪ್ರತಿಭೆ- ಅಂದರೆ ಮಾಕ್ಸರ್್ ಕಾಡರ್ಿನ ಸಾಧನೆ- ಈಗಲೂ ಮೇಲು ಜಾತಿಗಳ ಹೆಮ್ಮೆಂಾಗಿ, ತಳ ಜಾತಿಗಳಿಗೊಲಿಂುದ ಮಾಂಾಂಗನೆಂಾಗಿಂೆು ಉಳಿದಿದೆಂೆು? ಅದನ್ನೂ ನೋಡಿಬಿಡೋಣ. ನಮ್ಮ ವಿದ್ಯಾಥರ್ಿಗಳ ಶೈಕ್ಷಣಿಕ ಬಾಳಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಂುೂಸಿಗಳು ನಿಣರ್ಾಂುಕ ಮಹತ್ವದ ಘಟ್ಟಗಳಾದ್ದರಿಂದ ಅವೆರಡೂ ಪರೀಕ್ಷೆಗಳಲ್ಲಿ ಈ ವರ್ಷದ ಪಂಗಡವಾರು ಅಂಕಪಟ್ಟಿ ಸಿಗಲು ಸಾಧ್ಯವೇ ಎಂದು ಆಂಾ ಪರೀಕ್ಷಾ ಮಂಡಳಿಗಳನ್ನು ಕೇಳಿಕೊಂಡೆ. ಎಸ್ಸೆಸ್ಸೆಲ್ಸಿ ಮಂಡಳಿ ಒದಗಿಸಿದ ಕಳೆದ ಮಾಚರ್ಿ ಪರೀಕ್ಷೆಂು ಅಂಕಿ ಅಂಶಗಳಂತೂ ಹೇಗಿವೆಂೆುಂದರೆ, ಆರೋಗ್ಯವಂತ ಮನಸ್ಸುಗಳಿಗೆ ಆನಂದ ಆಶ್ಚರ್ಯಗಳನ್ನೂ, ಜಾತಿಗೂ- ಪ್ರತಿಭೆಗೂ ನೇರ ಗಂಟು ಹಾಕುವ ನೀಚರಿಗೆ ಆಘಾತವನ್ನೂ ಉಂಟು ಮಾಡುವಂತಿವೆ! ನೀವೇ ನೋಡಿ: ಈ ಪರೀಕ್ಷೆಂುಲ್ಲಿ ಮೀಸಲಾತಿಗೆ ಹೊರತಾದ ಸಾಮಾನ್ಯ ವರ್ಗದ ವಿದ್ಯಾಥರ್ಿ ಪಡೆದ ಗರಿಷ್ಠ ಅಂಕ 99.20% ಆದರೆ, ಪರಿಶಿಷ್ಟ ಜಾತಿಂು ಬಾಲಕ 98.24% ಗಳಿಸಿದ್ದಾನೆ. ವ್ಯತ್ಯಾಸ ಎಷ್ಟು?! ಕೇವಲ 1%! ಹಾಗೇ ಇತರೆ ಎಲ್ಲ ವರ್ಗಗಳು. ಪರಿಶಿಷ್ಟ ಪಂಗಡದಲ್ಲಿ 96.64%, ಹಿಂದುಳಿದ ಬುಡಕಟ್ಟಿನಾತ 97.12%, ಆಥರ್ಿಕವಾಗಿ ಹಿಂದುಳಿದ ವರ್ಗದಲ್ಲಿ 96%! ಅಂದರೆ ಇಲ್ಲಿ ಂಾರು ಹೆಚ್ಚು, ಂಾರು ಕಮ್ಮಿ? ಎಲ್ಲರೂ ಒಂದೇ! (ಮಂಡಳಿ ನನ್ನ ಕೋರಿಕೆ ಮೇರೆಗೆ ಒದಗಿಸಿದ್ದು- ಪಾಸಾದವರಲ್ಲಿ ಮೇಲಿನಿಂದ- ಅಂದರೆ ಗರಿಷ್ಠ ಅಂಕಗಳಿಂದ ಆರಂಭಿಸಿ ಕೆಳಮುಖವಾಗಿ ಶೇಕಡಾ ಐದರಷ್ಟು ವಿದ್ಯಾಥರ್ಿಗಳ ವಿವರ) ಒಂದೇ ಮಾತಿನಲ್ಲಿ ಹೇಳುವುದಾದರೆ- ನೀವು ಈಗ ಂಾವುದೇ ವಿದ್ಯಾಥರ್ಿಂುನ್ನು ಂಾವುದೇ ಸ್ಪಧರ್ೆಗೆ ಒಡ್ಡಿದರೂ, ಹಿಮ್ಮೆಟ್ಟುವ ಅಶಕ್ತರು ಂಾರೂ ಇಲ್ಲ. ಎಲ್ಲ ವರ್ಗಗಳ ಪ್ರತಿಭೆಂುೂ ಒಂದೇ ಮಟ್ಟದಲ್ಲಿ, ಸಮಾನ ಪೈಪೋಟಿ ನೀಡಬಲ್ಲ ಸ್ತರದಲ್ಲಿದೆ. ಅಂದರೆ ಮೀಸಲಾತಿಂು ಹಂಗು, ದಾಕ್ಷಿಣ್ಯವಿಲ್ಲದೆಂೆು ಂಾವುದೇ ಹುದ್ದೆ ಗಿಟ್ಟಿಸಿಕೊಳ್ಳಬಲ್ಲ ಶೈಕ್ಷಣಿಕ ಸಾಧನೆ ಇಂದು ಂಾವೊಂದು ವರ್ಗದ ಸ್ವತ್ತಾಗಿಂುೂ ಉಳಿದಿಲ್ಲ. ಮತ್ತು ಇಷ್ಟು ಕಾಲ, ನಾಡಿನ ಪ್ರಜ್ಞಾವಲಂುದಲ್ಲಿ ನಡೆಂುುತ್ತಿದ್ದ ಪರ ವಿರೋಧಿ ವಾದಗಳ ಜಗ್ಗಾಟದ ಅವಾಂತರವನ್ನು ಅದರ ಪಾಡಿಗೆ ಬಿಟ್ಟು, ಎಲ್ಲ ಜಾತಿ ವರ್ಗಗಳ ಮಕ್ಕಳು ತಮ್ಮ ಪಾಡಿಗೆ ತಾವು ಓದುತ್ತ ಬರೆಂುುತ್ತ ಸದ್ದಿಲ್ಲದೆ ತಲುಪಿದ ಎತ್ತರ ಂಾರ ಕಣ್ಣಿಗೆ ಬೀಳಲೂ ಇಲ್ಲ! ಈಗ ಕೇಳಬೇಕೋ ಬೇಡವೋ?- ಸ್ವಾಮಿ, ನೀವು ಂಾವ ಮೆರಿಟ್ ಬಗ್ಗೆ ಮಾತಾಡುತ್ತಿದ್ದೀರಿ? ಹೀಗೆಂದ ಕೂಡಲೇ ಮೀಸಲಾತಿ ವಿರೋಧಿಗಳು ತುಟಿಂು ಮರೆಂುಲ್ಲೇ ಸೂಸುವ ಗೆಲುವಿನ ನಗೆಂುನ್ನು ನೀವು ಊಹಿಸಬಲ್ಲಿರಿ. ಜೊತೆಗೆ ಅವರ ಬಾಯಿಂದ ಹೊರಡುವ ವಾದಗಳ ಧಾಟಿಂುನ್ನೂ: ಅಲ್ರೀ, ಎಲ್ಲರ ಪ್ರತಿಭೆಂುೂ ಒಂದೇ ಅನ್ನುತ್ತೀರಿ; ಅದಕ್ಕೆ ಅಂಕಿ ಅಂಶವನ್ನೂ ಕೊಟ್ಟು ಸಾಧಿಸುತ್ತೀರಿ. ಮತ್ತೆ ಆ ಪ್ರತಿಭೆಂು ಆಧಾರದ ಮೇಲೇ ನಿಲ್ಲದೆ, ಮೀಸಲಾತಿಗಾಗಿ ಂಾಕೆ ಗುಂಜುತ್ತೀರಿ? ಅಗತ್ಯವೇ ಇಲ್ಲವಲ್ಲ? ಅವರೆಲ್ಲ ಹಾಗೆಂೆು ಬರಬಹುದಲ್ಲ…? ಮೇಲ್ನೋಟಕ್ಕೆ ಅತ್ಯಂತ ಮುಗ್ಧವಾದ ಸಾಚಾ ಸವಾಲಿದು! ಆದರೆ ನಮ್ಮ ದೇಶದ ಆಂತಂರ್ು ಬಲ್ಲವರಾರೂ ಈ ಪ್ರಶ್ನೆಂುನ್ನು ಅಷ್ಟು ನಿರುಮ್ಮಳವಾಗಿ ನೋಡಲಾರರು. ಕಾಲಾಂತರದಿಂದ ಪರಂಪರೆಂು ಜಡ್ಡಿಗೆ ಬಿದ್ದ ಂಾವ ಮನಸ್ಸು- ವಿವಿಧ ಜನವರ್ಗಗಳ ಶೈಕ್ಷಣಿಕ ಏಳಿಗೆಂು ಬಗ್ಗೆ ತಿಳಿಂುುವ ಸೈರಣೆಂುೂ ಇಲ್ಲದೆ ಕುರುಡಾಗಿ ಉಳಿಯಿತೋ, ಅದೇ ಮನಸ್ಸು ನಾಳೆ ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರುವ ದಾರಿಂುನ್ನು ಅರಸುತ್ತದೆ. 95 ಪಸರ್ೆಂಟಿನ ಮೇಲ್ಜಾತಿಂು ಅಭ್ಯಥರ್ಿ ಹಾಗೂ ಅದೇ 95 ಪಸರ್ೆಂಟಿನ ದಲಿತ/ಹಿಂದುಳಿದವನ ನಡುವೆ ಆಂೆ್ಕು ಪ್ರಶ್ನೆ ಬಂದಾಗ ನಮ್ಮ ಶತಮಾನಗಳ ಇತಿಹಾಸ- 95 ಪಸರ್ೆಂಟಿನ ಮೇಲ್ಜಾತಿಂುನ್ನೇ ಆಂು್ದುಕೊಳ್ಳುತ್ತದೆ! ಉದಾಹರಣೆಗಳ ಅಗತ್ಯವೂ ಇಲ್ಲದ ಸ್ವಯಂಸಿದ್ಧ ಅನುಭವವಿದು. ಈ ವಿಷಂುದಲ್ಲಿ ಸಕರ್ಾರದ ಮಧ್ಯಪ್ರವೇಶ ಬೇಕಾಗುವುದು ಇದೇ ಕಾರಣಕ್ಕೆ: ಂಾವ ನೀತಿ ತಂದರೂ ಚಾಪೆ, ರಂಗೋಲಿ ಕೆಳಗೆ ನುಸುಳುವ ಬುದ್ಧಿವಂತರನ್ನು ನಿಂುಂತ್ರಿಸುವುದಕ್ಕೆ. ಅದಕ್ಕಾಗಿಂೆು ಖಾಸಗಿ ರಂಗದಲ್ಲಿ ಮೀಸಲಾತಿ ಅನ್ನುವುದು ಸಕರ್ಾರದ ಅಧಿಕೃತ ನೀತಿಂಾಗಬೇಕು. ಮತ್ತು ತಪ್ಪಿತಸ್ಥರಿಗೆ ಶಿಕ್ಷೆಂು ಕಟ್ಟುಪಾಡುಗಳನ್ನೂ ಒಳಗೊಂಡ ಸಮಗ್ರ ಕಾನೂನು ರೂಪುಗೊಳ್ಳಬೇಕು. ಪ್ರತಿಭೆಂು ಸೊಲ್ಲೆತ್ತುವವರ ಬಾಯಿ ಮುಚ್ಚಿಸುವಂಥ ಸಾಧನೆಂೆುನೋ ಕಣ್ಣ ಮುಂದಿದೆ. ಆದರೆ ಕಾಣದಂತೆ ನಟಿಸುವ ಜಾಣಗುರುಡರಿಗೇನೂ ಇಲ್ಲಿ ಬರ ಇಲ್ಲವಲ್ಲ! 8 ಜುಲೈ 2005 *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ ]]>

‍ಲೇಖಕರು G

March 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. bharathi

    onde percentaagina ibbaru vidyarthigaliruva naduve aayke bandaaga jaathi maana dandavaaguttadeye? uhoo .. avru paatada horathaagi nadesida samshodhane.. group activity.. parishrama ivella gananege baruttade .. jaathiyalla annodu nanna nambike ..

    ಪ್ರತಿಕ್ರಿಯೆ
  2. N.Viswanatha

    Yava yava pangadada jana hindulidavarendu anisike ideyoo avrigiruva korathe yenu arthika,vasathi ananukoolagalu ithyadi. namma sarakara eee amshavannu gamanadalli ittukondu vasakke anukoolathe,pusthaka ,table kurchi ityadi yellavannoo madi aaa jana buddhivantharaguva disheyalli hogalu anukoola madikodabeku..Yavude jathiyavaragalee avaralli arthika munduvarike agiruttado avarige anukoolathe idde iruttadeyaddarinda anthahavarannu kai bidabeku. Avaru hindulide iralu bidabaaradu. Yavude jathiya buddivantharige bhrama nirasanavagalu bidabaradu.Eee tiluvalike bandaga matra namma desha RAMARAJYA

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ bharathiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: