ಎನ್ ಡಿ ಟಿವಿ ಹಾಗೂ ನಾಲ್ವರು ಶಿಷ್ಯರ ಕತೆ

b m basheer

ಬಿ ಎಂ ಬಷೀರ್ 

ಎನ್ ಡಿ ಟಿವಿ ಯನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಲು ಕೇಂದ್ರ ಸರಕಾರ ಹೊರಟಿದೆ. ಯಾಕೋ ಹಳೆ ಸ್ಟೇಟಸ್ ಒಂದು ನೆನಪಾಯಿತು.

ಮೋದಿ ಗೆದ್ದಾಗ May 24, 2014 5:11pm ರಂದು ನಾನು ಹಾಕಿದ ಸ್ಟೇಟಸ್ ನ್ನು, ಮತ್ತೆ ಕಾಪಿ ಮಾಡಿ ಇಲ್ಲಿ ಹಾಕಿದ್ದೇನೆ.

 

5f4de5e3a2e6089212a714dbaa1c22c6

ನಾಲ್ವರು ಶಿಷ್ಯರ ಕತೆ

ಮೋದಿ ಗೆದ್ದಾಗ ನನಗೆ ನೆನಪಾದ ಕತೆ ಇದು.

ನಾಲ್ವರು ಶಿಷ್ಯರು ಅದಾಗಲೇ ಶಿಕ್ಷಣ ಮುಗಿಸಿ ಗುರುಕುಲದಿಂದ ತಮ್ಮ ಗುರಿಯೆಡೆಗೆ ಹೊರಟಿದ್ದರು. ನಾಲ್ವರಲ್ಲಿ ಒಬ್ಬ ಮಾತ್ರ ಶತ ದಡ್ಡ. ಉಳಿದವರೆಲ್ಲ ಪ್ರಾಜ್ಞರು. ಅಪಾರ ಜ್ಞಾನವುಳ್ಳವರು. ಹೀಗೆ ದಾರಿ ಸಾಗುತ್ತಿದ್ದಂತೆ…ಒಂದೆಡೆ ಅವರಿಗೆ ಅದೇನೋ ಎಲುಬುಗಳ ಅವಶೇಷ ಕಂಡಿತು.

ಒಬ್ಬ ಶಿಷ್ಯ ತನ್ನ ಶಕ್ತಿಯನ್ನು ಪ್ರದರ್ಶಿಸುವುದಕ್ಕೆ ಮುಂದಾದ. ಚೂರು ಚೂರಾಗಿರುವ ಎಲುಬುಗಳನ್ನೆಲ್ಲ ಅವನು ಮರು ಜೋಡಿಸಿದ. ನೋಡುತ್ತಲೇ ಗೊತ್ತಾಗಿ ಹೋಯಿತು ಅದೊಂದು ಹುಲಿಯ ಎಲುಬುಗಳು ಎನ್ನುವುದು. ಇನ್ನೊಬ್ಬ ಶಿಷ್ಯ ಇನ್ನೂ ಶಕ್ತಿವಂತ. ಅವನು ಅದಕ್ಕೆ ರಕ್ತಮಾಂಸವನ್ನು ನೀಡಿದ. ಈಗ ಅದು ಸಂಪೂರ್ಣ ಹುಲಿಯೇ ಆಗಿತ್ತು. ಪ್ರಾಣ ಒಂದು ಇರಲಿಲ್ಲ. ಆಗ ಮೂರನೇಯವ ತನ್ನ ಶಕ್ತಿ ಪ್ರದರ್ಶಿಸಲು ಹೊರಟ. ಅವನ ಶಕ್ತಿ ಎಷ್ಟಿತ್ತೆಂದರೆ ಅವನು ಅದಕ್ಕೆ ಪ್ರಾಣ ಅಥವಾ ಜೀವ ಕೊಡಲು ಹೊರಟ.

ಆದರೆ ದಡ್ಡ ಶಿಷ್ಯನಿಗೆ ಇಷ್ಟೆಲ್ಲ ಜ್ಞಾನ, ಶಕ್ತಿ ಇರಲಿಲ್ಲ. ಅವನು ‘ಒಂದು ನಿಮಿಷ’ ಎಂದವನೇ ಪಕ್ಕದಲ್ಲೇ ಒಂದು ಮರವನ್ನು ನೋಡಿದ. ನೇರವಾಗಿ ಅವನು ಆ ಮರವನ್ನು ಹೋಗಿ ಹತ್ತಿಕೊಂಡ. ಇದೀಗ ಮೂರನೇ ಶಿಷ್ಯ ಹುಲಿಗೆ ಜೀವವನ್ನು ನೀಡಿದ. ಹುಲಿ ಜೀವ ಪಡೆದದ್ದೇ ಗರ್ಜಿಸಿ ಮೂವರ ಮೇಲೆ ಹಾರಿ ಅವರನ್ನು ತಿಂದು ಹಾಕಿ, ಕಾಡಿನ ಕಡೆಗೆ ನಡೆಯಿತು. ದಡ್ಡ ಶಿಷ್ಯ ಮರದಿಂದ ಇಳಿದು ತನ್ನ ಊರಿನ ಕಡೆಗೆ ಹೊರಟ.

ಮೋದಿಗೆ ಜೀವ ಕೊಡುವ ಮೂಲಕ ಮಾಧ್ಯಮಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿವೆ. ಆದರೆ ಸರ್ವಾಧಿಕಾರ ಮನಸ್ಥಿತಿ ಮೊತ್ತ ಮೊದಲು ಎರಗುವುದು, ಅದುಮಿ ಹಿಡಿಯುವುದು ಮಾಧ್ಯಮಗಳ ಶಕ್ತಿಯನ್ನೇ. ಇದು ನಿಜ ಆಗದಿರಲಿ ಎನ್ನುವುದು ನನ್ನ ಆಶಯ.

‍ಲೇಖಕರು Admin

November 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೇಮ ಎನ್ನುವ ವಿಸ್ಮಯ

ಬಿ ಎಂ ಬಶೀರ್ ಗುಜರಿ ಅಂಗಡಿ ಈ ಜಗತ್ತಿನ ಅತ್ಯಂತ ವಿಸ್ಮಯ ಯಾವುದು? ಎಂಬ ಪ್ರಶ್ನೆಗೆ ನಿಸ್ಸಂಶಯವಾಗಿ ಉತ್ತರಿಸಬಹುದು, ಅದು ಪ್ರೇಮ. ದೇವರ ಎಲ್ಲಾ...

ನನಗಿವತ್ತೂ ಚಂದ್ರದರ್ಶನವಾಗಿಲ್ಲ….

ದರ್ಶನ! ಬಿ ಎಂ ಬಶೀರ್ ಇಫ್ತಾರಿನ ಹೆಸರಲ್ಲಿ ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು ಇನ್ನೂ ಮೋರಿಯಲ್ಲಿ ತೇಲುತ್ತಿವೆ ಹಬ್ಬಕ್ಕೆಂದು ಕೊಂಡ...

ರಂಗಿತರಂಗ: ಅನಿರೀಕ್ಷಿತಗಳ ಮುಖಾಮುಖಿ!

ಬಿ ಎಂ ಬಶೀರ್ ನಿಮ್ಮನ್ನು ಎದುರುಗೊಳ್ಳುವ ಅನಿರೀಕ್ಷಿತಗಳೇ ‘ರಂಗಿತರಂಗ’ದ ಹೆಗ್ಗಳಿಕೆ ‘ರಂಗಿತರಂಗ’ ಎಂಬ ಹೆಸರು ಕಮರ್ಶಿಯಲ್ ಚಿತ್ರ ಲೋಕಕ್ಕೆ...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Gayatri Badiger, DharwadCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: