1984…
ನಾನಾಗ ನಾಲ್ಕನೇ ಕ್ಲಾಸು.ಇದ್ದಕ್ಕಿದ್ದಂತೆ ಒಂದು ದಿನ ನಮ್ಮನೆ ಏರಿಯಾದ ಜನ ಶ್ರೀಮಂತರೊಬ್ಬರ ಮನೆ ಮುಂದೆ
ಜಮಾಯಿಸತೊಡಗಿದ್ದರು. ಎಲ್ಲರ ಮುಖದಲ್ಲಿ ಸೂತಕದ ಛಾಯೆ. ಆದರೆ ಆ ಮನೆಯೊಳಗೆ ಹೋಗಲು ಯಾರೊಬ್ಬರೂ ತಯಾರಿಲ್ಲ.
ಸುಮ್ಮನೇ ತಮ್ಮತಮ್ಮಲ್ಲೇ ಗುಸುಗುಸು.ನನಗಾಗಲೇ ಆ ಶ್ರೀಮಂತ ಸತ್ತು ಹೋಗಿರಬೇಕು ಅದಕ್ಕೇ ಇವರೆಲ್ಲ ಜಮಾಯಿಸಿದ್ದಾರೆಂಬ ಅನುಮಾನ ಶುರುವಾಗಿತ್ತು..
ಹಾಗೆ ಸುಮಾರು ಹೊತ್ತು ಅಲ್ಲಲ್ಲೇ ನಿಂತಿದ್ದ ಜನತೆಗೆ ಕೊನೆಗೂ ಆ ಮನೆಯೊಳಗಿಂದ ಬುಲಾವ್ ಬಂತು.
ಪುದುಪುದು ಅಂತ ಜನ ಒಳಗಡೆ ನುಗ್ಗತೊಡಗಿದರು.
ನಾನೂ ಹುಡುಗಾಟಕ್ಕಾಗಿ ನುಗ್ಗಿದ್ದೆ.
ನನ್ನ ಅನುಮಾನ ನಿಜವಾಗಿತ್ತು.ಯಾರೋ ಸತ್ತು ಹೋಗಿದ್ದರು.
ಪೂರ್ಣ ಓದಿಗೆ: ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು