ಎಲ್ಲಾ ಮಠಗಳನ್ನು ರಾಷ್ಟ್ರೀಕರಣಗೊಳಿಸಬೇಕು…

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ.
ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ
ಎಸ್ ಸಿ ದಿನೇಶ್ ಕುಮಾರ್ ಚಿತ್ರದುರ್ಗ ಸಾಹಿತ್ಯ ಸಮ್ಮೇಳನದಲ್ಲಿ ಎಲ್ ಬಸವರಾಜು ಅವರು ಆಡಿದ ಮಾತುಗಳನ್ನಿಟ್ಟುಕೊಂಡು ತಮ್ಮ ‘ದೇಸಿ ಮಾತು‘ ಅಂಕಣದಲ್ಲಿ ಚರ್ಚೆ ಮುಂದುವರೆಸಿದ್ದರು. ಇದು ಅವದಿಯ ಜುಗಾರಿ ಕ್ರಾಸ್ ಅಂಕಣದಲ್ಲಿ ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ ಎಂದು ಪುನರ್ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಲೇಖನಕ್ಕೆ ಸಿದ್ಧಮುಖಿ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ.
ಸಂವಾದ ಈಗ ಆರಂಭವಾಗಿದೆ. ನೀವೂ ಪಾಲ್ಗೊಳ್ಳಿ…
20081004swami4
ಸನ್ಯಾಸಿಗಳು ಸ್ವಾಮಿ ಇವರು ಸನ್ಯಾಸಿಗಳು,
ಯುದ್ದ ಬಂದಾಗ ಶಸ್ತ್ರ ಬಿಟ್ಟವರು..
ಸನ್ಯಾಸಿಗಳು ಎಲ್ಲವನ್ನೂ ಬಿಟ್ಟವರು…

ಇದು ಎ.ಕೆ. ರಾಮಾನುಜನ್ ಸ್ವಾಮಿಗಳ ಕುರಿತು ಕಟುವಾಗಿ ಬರೆದ ಪದ್ಯ.ಇದು ಸತ್ಯವೂ ಹೌದು.
ಸರ್ವಸಂಗ ಪರಿತ್ಯಾಗಿಯಾಗಬೇಕಾಗಿದ್ದ ಸನ್ಯಾಸಿ ಇಂದು ಎಲ್ಲವೂ ಆಗಿದ್ದಾನೆ.
ರಾಜಕೀಯ ಪಕ್ಷಗಳ, ಸರ್ಕಾರದ ನಿಯಂತ್ರಕ ಶಕ್ತಿಯಂತೆ ಸೂತ್ರಧಾರನಂತೆ ಕೆಲಸ ಮಾಡುತ್ತಿರುವುದು ಕಟು ವಾಸ್ತವ.
ಸ್ವಾಮಿಗಳೆಂಬ ಧಾರ್ಮಿಕ ಭ್ರಷ್ಟಾಚಾರಿಗಳು ಧರ್ಮದ ತಿರುಳೇ ಅರಿಯದವರು.
ಧರ್ಮ ವೃಕ್ಷದ ನೆರಳಿನಲ್ಲಿ ಬೆಂಕಿ ಕಾಸಿಕೊಳ್ಳುವ ವೀರರು. ಮೌಢ್ಯ ತುಂಬಿತ ಜನರೇ ಇವರಿಗೆ ಸೌದೆ. ಎಲ್ಲರ ಸಂಗವಿದ್ದರೂ ಅವರ ಅಭಿಮಾನಕ್ಕೆ ಭಂಗ ಬರದು.
 (ಇಲ್ಲಿ ಒಂದಿಷ್ಟು ಬಾಗ ಎಡಿಟ್ ಮಾಡಲಾಗಿದೆ-ಸಂ)

ರಾಜ್ಯದಲ್ಲಿ ಸ್ವಾಮಿಗಳು ಮಠಗಳನ್ನು ಸ್ಥಾಪಿಸುತ್ತಿರುವುದನ್ನು ನೋಡಿದರೆ ಹಿಂದೆ ರಾಜರು, ಸಣ್ಣ ಪುಟ್ಟ ಪಾಳೇಗಾರರು ಪಾಳೆಪಟ್ಟುಗಳನ್ನು ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಆಳ್ವಿಕೆ ನಡೆಸುತ್ತಿದ್ದ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ಇವರಿಗೆ ಯಾವ ನಿಯಮಗಳು ಅನ್ವಯವಾಗುವುದಿಲ್ಲ. ತಾವು ನೀಡಿದ ಹೇಳಿಕೆಯೇ ವೇದ ವಾಕ್ಯ ಎಂದು ನಂಬಿಕೊಂಡ ಕೂಪ ಮಂಡೂಕಗಳು.

ಸ್ವಾಮಿಗಳನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆ ಮಾಡಬೇಕು, ಬಹುಪರಾಕ್ ಕೂಗಬೇಕು.ಪಾದಕ್ಕೆ ಪೊಡಮಡಬೇಕು. ಟೀಕೆ ಮಾಡಬಾರದು ಎಂಬ ಧೋರಣೆಯುಳ್ಳ ಸ್ವಾಮಿಗಳು ಸ್ಥಾಪಿಸಿಕೊಂಡಿರುವ ಎಲ್ಲಾ ಮಠಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಈಗ ಹೊಂದಿರುವ ಅಕ್ರಮ ಆಸ್ತಿಯನ್ನು ಸರ್ಕಾರಗಳು ವಶಪಡಿಸಿಕೊಳ್ಳಬೇಕು. ಮಠಗಳಿಗೆ ಹಣ ನೀಡುವುದನ್ನು ನಿಲ್ಸಿಸಬೇಕು …. ಹೀಗಾದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ.
ನಾಮವಿಟ್ಟರೆ, ವಿಭೂತಿ ಧರಿಸಿದರೆ ರುದ್ರಾಕ್ಷಿ ಹಾಕಿಕೊಂಡರೆ, ವೇದಮಂತ್ರಗಳನ್ನು ಕಲಿತರೆ ಅದು ಅವರ ಪಾಂಡಿತ್ಯದ ಪ್ರದರ್ಶನವೇ ಹೊರತು ಸ್ಲಂನಲ್ಲಿ ವಾಸಿಸುವವರು, ಸಾಮಾನ್ಯ ರೈತರಿಗಿಂತ ಹೆಚ್ಚೇನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಮಠಗಳು ಏನೋ ಮಹತ್ವದ ಸಾಧನೆ ಮಾಡಿವೆ ಎಂದಾದರೆ ಅದು ಸರ್ಕಾರಗಳು ಕಾಲಕಾಲಕ್ಕೆ ನೀಡಿದ ಪ್ರೋತ್ಸಾಹವೇ ಕಾರಣ.ಇಂದು ಯಾವುದೇ ಮಠ-ಪೀಠಾಧೀಶರು ನಾವು ಸರ್ಕಾರದ ಋಣದಲ್ಲಿ ಬದುಕುವುದಿಲ್ಲ. ಸರ್ಕಾರದ ನೆರವಿಲ್ಲದೆ ನಾವು ಮಠಗಳನ್ನು ನಡೆಸುತ್ತೇವೆ ಎಂದು ಎದೆತಟ್ಟಿಕೊಂಡು ಹೇಳಲಿ. ಇದಾಗದಿದ್ದರೆ ಎಲ್ಲವನ್ನೂ ತೊರೆದು ಮಠದ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟು ಸಾಮಾನ್ಯರಂತೆ ಬದುಕುವಂತಾದಾಗ ಮಾತ್ರ ಸಮತಾ ಸಮಾಜ ನಿರ್ಮಾಣವಾಗಲು ಸಾಧ್ಯ.
ಕುವೆಂಪು ಅವರ ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಆಶಯ ನೆರವೇರಲಿದೆ. ಇಲ್ಲದಿದ್ದರೆ ಒಡೆಯ ಗುಲಾಮ ಪದ್ದತಿ ಮುಂದುವರಿಯಲಿದೆ.
(ಇಲ್ಲಿ ಒಂದಿಷ್ಟು ಬಾಗ ಎಡಿಟ್ ಮಾಡಲಾಗಿದೆ-ಸಂ)

– ಸಿದ್ದಮುಖಿ
+++
ಗಮನಿಸಿ: ಸಂಪದ ದ ಎಚ್ ಪಿ ನಾಡಿಗ್ ಅವರ ಸಲಹೆಯಂತೆ ಪ್ರತಿಕ್ರಿಯೆ ನೀಡುತ್ತಿರುವವರ, ಲೇಖನ ಬರೆದವರ ಈ ಮೇಲ್ ಐ ಡಿ ನೀಡುತ್ತಿಲ್ಲ. ಯಾವುದೇ ಖಾಸಗಿ ಪತ್ರವಿದ್ದರೆ [email protected] ಗೆ ಮೇಲ್ ಮಾಡಿ. ಅವರಿಗೆ ಕಳಿಸುವ ಜವಾಬ್ದಾರಿ ನಮ್ಮದು.–ಸಂ   

‍ಲೇಖಕರು avadhi

March 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

4 ಪ್ರತಿಕ್ರಿಯೆಗಳು

 1. ಸುಬ್ಬು ಸಂಬುದ್ಧ

  ಸಿದ್ದಮುಖಿ ಅವರು ಸಮಾಜಮುಖಿ ನಿಲುವುಗಳಿಗೆ ಬದ್ಧರಾಗಿರುವವರು.
  ಅವರು ಎತ್ತಿರುವ ಪ್ರಶ್ನೆ ನನ್ನ ಪ್ರಶ್ನೆಯೂ ಆಗಿದೆ.
  ನನಗಂತೂ ಪುಡಾಟಿಕೆ ಸ್ವಾಮೀಜಿಗಳು,ಜಾತಿಯ ಬಾಲಗೋಂಚಿಗಳು,ಅವರ ಜನಪರ ಸೋಗಿನ ಶಾಲಾ ಕಾಲೇಜು,ಆಸ್ಪತ್ರೆಗಳು,ಮಠಗಳ ಬಗೆಗಿನ ಅಂಧಾನುಕರಣೆ,ಪಾದ ನೆಕ್ಕುವ ಮೂಢರು ಹೀಗೆ ಮೌಢ್ಯ,ಲೋಲುಪತೆ,ದರ್ಪ,ಸಿರಿವಂತಿಗೆಯೇ ಮಠ ಸಂಸ್ಕೃತಿಯ ಮೇಲುಗೈ ಆಗಿ ಬೆಳೆಯುತ್ತಿದೆ.ಇದೆಲ್ಲ ಸಾಮಾಜಿಕ ಅವನತಿಯಲ್ಲದೆ ಮತ್ತೇನು ?

  ಪ್ರತಿಕ್ರಿಯೆ
 2. ಅಜಯ್

  ನಾಮವಿಟ್ಟರೆ, ವಿಭೂತಿ ಧರಿಸಿದರೆ ರುದ್ರಾಕ್ಷಿ ಹಾಕಿಕೊಂಡರೆ, ವೇದಮಂತ್ರಗಳನ್ನು ಕಲಿತರೆ ಅದು ಅವರ ಪಾಂಡಿತ್ಯದ ಪ್ರದರ್ಶನವೇ ಹೊರತು ಸ್ಲಂನಲ್ಲಿ ವಾಸಿಸುವವರು, ಸಾಮಾನ್ಯ ರೈತರಿಗಿಂತ ಹೆಚ್ಚೇನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು
  ಅದೇ ರೀತಿ ಇಂತಹ ಲೇಖನಗಳನ್ನು ಬರೆದು ಮಠಗಳ ವಿರುದ್ಧ ಮಠಾಧೀಶರ ವಿರುದ್ಧ ಹರಿಹಾಯ್ದರೂ ಅದು ಪಾಂಡಿತ್ಯ ಪ್ರದರ್ಶನವೇ ಆದೀತು ಹೊರತು ಸ್ಲಂನಲ್ಲಿ ವಾಸಿಸುವವರು, ಸಾಮಾನ್ಯ ರೈತರಿಗಿಂತ ಹೆಚ್ಚೇನಲ್ಲ ಎಂಬುದೂ ನಿಜ.

  ಪ್ರತಿಕ್ರಿಯೆ
 3. chandrashekhar aijoor

  ಇದು ಕಾಯಿಲೆಯೋ… ಖಯಾಲಿಯೋ…
  ಮಠಗಳಿಗೆ ದುಡ್ಡು ಚೆಲ್ಲುವ ಯಡಿಯೂರಪ್ಪನವರ ಅತ್ಯುತ್ಸಾಹ ಈ ಸಲವೂ ಮುಂದುವರೆದು ಇದು ಅವರ ಸರ್ಕಾರದ ಹೊಸ ಆರ್ಥಿಕ ನೀತಿಯಾಗತೊಡಗಿದೆ. ಇದು ಯಡಿಯೂರಪ್ಪನವರ ಕಾಯಿಲೆಯೋ ಅಥವಾ ಖಯಾಲಿಯೋ ಗೊತ್ತಾಗಬೇಕಿದೆ. ಇಷ್ಟಕ್ಕೂ ಅಷ್ಟೊಂದು ದುಡ್ಡು ಪಡೆವ ಮಠಗಳು ಮಾಡುವ ಘನಕಾರ್ಯವಾದರೂ ಏನು? ಅವೇ ಪುರೋಹಿತಸಾಹಿ, ವೈದಿಕ ಆಚರಣೆಗಳಲ್ಲಿ ಕಾಲ ಕಳೆಯುತ್ತಾ ದಲಿತರನ್ನು ತಮ್ಮ ಮಠ ಮಂದಿರಗಳಿಂದ ಇನ್ನಷ್ಟು ದೂರವಿಡುವ ಹೊಸ ಬಗೆಯ ಸಂಶೋದನೆಗಳಲ್ಲಿ ತೊಡಗಿಕೊಳ್ಳುವುದು ತಾನೇ. ಕೆಲಸಕ್ಕೆ ಬಾರದ ಮಠಗಳಿಗೆ ಸುರಿಯುವ ದುಡ್ಡನ್ನು ಹಸಿರು ಕಾರ್ಡ್ ಸಿಕ್ಕರೆ ಮಾತ್ರ ಬದುಕಲು ಸಾದ್ಯ ಎಂದುಕೊಂಡಿರುವ ಬಡವರ ಅನ್ನದ ತಟ್ಟೆಗಳಿಗಾದರು ಹಾಕಬಾರದಿತ್ತೆ. ಕಡು ಬಡವನ ಪಾಲಿನ ಅನ್ನವನ್ನು ಉಣ್ಣಲು ಕುಳಿತಿರುವ ಈ ಮಠಾಧಿಪತಿಗಳಿಗಾದರೂ ಇಂಥ ಹಣವನ್ನು ನಿರಾಕರಿಸಬೇಕೆಂಬ ಕನಿಷ್ಠ ಸೌಜನ್ಯ ತಮ್ಮೊಳಗೆ ಹುಟ್ಟಿಕೊಳ್ಳದಿರುವುದು ದುರಂತ. ಇನ್ನು ಮೊನ್ನೆ ಶಿವರಾತ್ರಿ ಹಬ್ಬದಂದು ಸರ್ಕಾರ ಗಂಗಾಜಲವನ್ನು ಇಡೀ ನಾಡಿನ ಮನೆ ಮನೆಗೂ ತಲುಪಿಸುವ ಸಾಹಸಕ್ಕೆ ಕೈ ಹಾಕಿತು. ಅರೆ ಸುಟ್ಟ ಹೆಣಗಳನ್ನು, ಕೊಳೆತ, ಅನಾಥ ಶವಗಳನ್ನು ಗಂಗಾನದಿಗೆ ತೇಲಿಬಿಡುವ ಎಗ್ಗಿಲ್ಲದ ಪುಣ್ಯ ಕಾರ್ಯಗಳ ಬಗ್ಗೆ ಈ ಘನ ಸರ್ಕಾರಕ್ಕೆ ಅಂಥ ಅರಿವಿರಲ್ಲಿಲ್ಲವೆಂದು ಕಾಣುತ್ತದೆ. ದೆಹಲಿಯ M.C.ಮೆಹ್ತಾರಂತಹ ವಕೀಲರು ಗಂಗಾನದಿಯನ್ನು ಶುದ್ಧಿಕರಿಸಿ ಎಂದು ಸುಪ್ರೀಂ ಕೋರ್ಟ್ ನಲ್ಲಿ ಹತ್ತಾರು PIL(Public Interest Litigation) ಕೇಸು ಜಡಿದು ಅಲೆಯಬೇಕಿರಲ್ಲಿಲ್ಲ. ತೀರ್ಥ ಪವಿತ್ರ ಎಂಬ ಕಾರಣಕ್ಕೆ ಯಾವ ಮೂರ್ಖನು ಗಟಾರದೊಳಕ್ಕೆ ತನ್ನ ಬೊಗಸೆಯೊಡ್ದಲಾರ. ಇನ್ನಾದರು ಯಡಿಯೂರಪ್ಪನವರ ಘನಸರ್ಕಾರ ಇಂಥ ಅಡ್ಡಕಸುಬಿ ಕೃತ್ಯಗಳಿಂದ ಹೊರಬಂದು ಈ ಮಣ್ಣಿನ ಜನರ ನಿಜವಾದ ಕಷ್ಟಗಳಿಗೆ ಸ್ಪಂದಿಸಲಿ.
  ಕೆ.ಎಲ್.ಚಂದ್ರಶೇಖರ್ ಐಜೂರ್

  ಪ್ರತಿಕ್ರಿಯೆ
 4. siddamukhi

  Ajay ide nodi purohithashahi niluvu annodu.
  nimmanthavare vivekananda seridanthe halava
  chinthanegalnnu apa vyakhyana madiddu.
  samajadalli rogagrastha manasugalu badalagabeku
  emba nanu heliddannu estru chennagi maremachiddiri.
  – siddamukhi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: