ಎಲ್ಲಿ ಬಚ್ಚಿಟ್ಟೆ ಇರುವುದೊಂದೆ ಗೆಜ್ಜೆಯ?

ರಂಗಭೂಮಿ ಹಾಗೂ ಕ್ಯಾಮೆರಾ ಎರಡನ್ನೂ ಸಮಾನವಾಗಿ ಪ್ರೀತಿಸುವವರು ನಾಗರಾಜ ಸೋಮಯಾಜಿ.

ಇತ್ತೀಚಿಗೆ ತಾನೇ ‘ಫೋಕಸ್’ ಎನ್ನುವ ತಮ್ಮದೇ ಕನಸಿಗೆ ಗರಿ ಕಟ್ಟಿದ್ದಾರೆ.

ಸೋಮಯಾಜಿ ತೆಗೆದ ಒಂದು ಫೋಟೋ ‘ಅವಧಿ’ಯಲ್ಲಿ ಪ್ರಕಟಿಸಿದ್ದೆವು. (ಮೇಲಿನ ಫೋಟೋ)

ಈ ಚಿತ್ರ ಗೀತಾ ಹೆಗ್ಡೆ ಅವರ ಮನದಲ್ಲಿ ಹುಟ್ಟು ಹಾಕಿದ ಭಾವನೆಗಳಿವು

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ಓ ಹೆಣ್ಣೆ
ನಿನ್ನ ಗೆಜ್ಜೆ ಕಟ್ಟಿದ ಕಾಲುಗಳ
ಮುಂದಿಟ್ಟುಕೊಂಡು ಅದ್ಯಾವ
ಪರಿಯಲ್ಲಿ ಮೋಡಿ ಮಾಡುವ
ಹವಣಿಕೆಯ ಹುನ್ನಾರ?

ankletsಅರೆ..
ಸಾಕಾಗಲಿಲ್ಲವೆ ಸೂರ್ಯ ರಶ್ಮಿ
ಇರುವುದದೊಂದೇ ಕಾಲಿಗೆ?
ಮತ್ತೊಂದು ಎಲ್ಲಿ ಬಚ್ಚಿಟ್ಟೆ
ಇರುವುದೊಂದೆ ಗೆಜ್ಜೆಯ?

ಅಯ್ಯೋ.
ನೋಡಲ್ಲಿ ಬಣ್ಣ ಬಳಿದೂ ಬಳಿದೂ
ಕಳಕೊಂಡಿತಲ್ಲೆ ಹಳೆತನ
ಅಮ್ಮ ಗದರಲಿಲ್ಲವೇನೆ?
ಕಾಲ ಗತಿ ಕಂಡು.

ಹಾ!
ನೆನಪಿದೆಯೆನೆ ನಿನಗೆ
ಮಿರಿ ಮಿರಿ ಮಿಂಚುವ
ಬಿಳಿ ಚಮ೯ದ ಮೃದುತ್ವ?
ಕಾಲಂದುಗೆಯಲ್ಲಿ ಕುಣಿದ
ಮುದ್ದು ಮುದ್ದಾದ ಕಾಲು.

ದೇವರೆ…
ಕಾಲನೊಂದಿಗೆ ಹೆಜ್ಜೆಯಿಡುವ
ಕಾಲೂ ಕೂಡಾ ಬಣ್ಣದ ಪ್ರಪಂಚಕ್ಕೆ
ಬಲಿಯಾಯಿತಲ್ಲೆ
ನೀ ಬಿಟ್ಟು ಬಿಡೆ
ಬಣ್ಣ ಹಚ್ಚಿ ಮೆರೆಯುವ ವೈಯ್ಯಾರ.

ನೀ ಕೇಳು
ಮದುರಂಗಿಯಲಿ ಮುಳುಗೇಳು
ನೋಡು ನಿನ್ನಂದ ಚಂದ
ಚಂದ್ರನ ಬೆಳಕೆ ಸಾಕೆ
ಥೈ ತಕ ಥೈ ತಕ ತಾಳಕ್ಕೆ ತಕ್ಕಂತೆ
ಗೆಜ್ಜೆಯ ನಾದದಲಿ ಹೆಜ್ಜೆ ಹಾಕಲು
ಪ್ರೇಕ್ಷಕನ ಮನ ಗೆಲ್ಲಲು!

ಗೊತ್ತು…
ನಟನಾಂಗಿ ಬೆಡಗಿನ
ಬಿನ್ನಾಣಗಿತ್ತಿ ನೀ ಚೆಲುವೆ
ಮತ್ತೆ ನಾಟ್ಯ ಮಾಡಲು
ಈ ಕೃತಕ ಬಣ್ಣ ಬೆಳಕು
ನಿಂಗ್ಯಾಕೆ ಹೇಳು?

‍ಲೇಖಕರು Admin

August 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

ಚೈತ್ರಚೇತನ ಕೊನರಿ…

ಚೈತ್ರಚೇತನ ಕೊನರಿ…

ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ...

ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ...

2 ಪ್ರತಿಕ್ರಿಯೆಗಳು

Trackbacks/Pingbacks

  1. ಎಲ್ಲಿ ಬಚ್ಚಿಟ್ಟೆ ಇರುವುದೊಂದೆ ಗೆಜ್ಜೆಯ? | | Sandhyadeepa…. - […] http://avadhimag.online/2016/08/14/%e0%b2%8e%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%9a%e0%… […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: