ಎಲ್ಲಿ ಬಿದ್ದಿತೋ ನನ್ನ ನತ್ತು

ಸ್ಮಿತಾ ಶೆಣೈ

ಮದುವೆಯಾದ ಲಗಾಯ್ತು ಮೂಗಲ್ಲೇ ಇತ್ತು
ರಾತ್ರಿ ಹಗಲು ಎಲ್ಲ ಹೊತ್ತು
ಬೆಳಕು ಬೀಳಲು ಥಳಥಳ ಹೊಳೆಯತಿತ್ತು
ಎಲ್ಲಿ ಬಿದ್ದಿತೋ ನನ್ನ ನತ್ತು

ಮಾವನ ಮುಂಗೋಪದ ಮುಖಕ್ಕೆ ಮುದುರಿ
ಅತ್ತೆಯ ರಿವಾಜಿನ ಶಾಸನಕ್ಕೆ ಹೆದರಿ
ಗಂಡನ ವಜ್ರದ ಪ್ರತಿವಾದಕ್ಕೆ ಒದಗಿ
ಅಕ್ಕಸಾಲಿಗನ ಚಿಮಟಕ್ಕೆ
ಮೂಗೊಡ್ಡಿದ ದಿನ ಇನ್ನೂ ನೆನಪಿದೆ
ಎಲ್ಲಿ ಹೊಯಿತೋ ನತ್ತು

ಚುಚ್ಚಿಸಿಕೊಂಡೆನಾದರೂ ಎಲ್ಲರಂತೆ
ಎಡಕ್ಕಲ್ಲ ಬಲಕ್ಕೆ
ನನ್ನ ಮೂಗಿಗೆ ನನ್ನದೂ ಒಂದು ಶರತ್ತು
ಕೊನೆಗೂ ಕೋಪ ರಾಜಿಯಾಗಿ
ಮೂಗೇರಿತ್ತು ನತ್ತು

ಅರೆರೆ ಹೆಂಗಸಾದಳು!! ಎಂಬ ತವರವರ ಸೋಜಿಗ
ಇರಲಿ ಮನೆತನದ ಗೌರವಕ್ಕಾಯಿತೆಂಬ
ಮಾತಿಗೆ ಮತ್ತಷ್ಟೂ ಭಾರವಾದರೂ
ಅದು ಮಿನುಗುತ್ತಿದದ್ದು ನನಗೂ ಗೊತ್ತು

ಸರ ಬಳೆಗಳು ಪೋಣಿಸಿದಲ್ಲೇ ಇವೆ
ಕಣ್ರೆಪ್ಪೆ ಅಡಿ ಕೂತು ನೋಟಕ್ಕೆಲ್ಲಾ
ಒಂದು ಹೊಳಪಿಡುತಿದ್ದ ನತ್ತೆಲ್ಲಿ ಹೊಯಿತು
ದೂರ ನೋಡುತ್ತಿರುವಾಗ ಹತ್ತಿರದಲ್ಲೆಲ್ಲೊ ಬಿತ್ತು

ಮುಂದೆ ಬಂದವರ ಕಣ್ಣು ತಪ್ಪಿಸುತ್ತೇನೆ
ಮುಸುಕು ಮೇಲೆಳೆದು ಮೂಗು ಮುಚ್ಚಿ
ಮಾತು ಬದಲಿಸುತ್ತೇನೆ
ಕೇಳದಿದ್ದರೂ ನನಗಂತು ಗೊತ್ತು
ಅಲ್ಲಿಲ್ಲ ನನ್ನ ಅಭಿಮಾನದ ಸೊತ್ತು

ವಜ್ರದಲ್ಲವಾದರೂ ಮುತ್ತಿನದು
ಮತ್ತೆ ಮಾಡಿಸಬೇಕು
ಅದೇ ಹಳೆಯ ತಿರುಗಣೆಗೆ ಸುತ್ತಿ
ಮೂಗೆತ್ತಿ ನಡೆಯಬೇಕು
ಅದೇ ಅಲ್ಲದಿದ್ದರೂ
ಅದರ ನೆನಪಾದರೂ ಬರಬೇಕು
ಅಂತೂ ನತ್ತೊಂದು ಬೇಕು

‍ಲೇಖಕರು Avadhi

January 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕೇಳಿದ್ದೇನೆ..

ಕೇಳಿದ್ದೇನೆ..

ವಿಜಯ ವಾಮನ್ ಕೇಳಿದ್ದೇನೆಊರಲ್ಲಿ ಜನ ಅವಳನ್ನು ಕಣ್ತುಂಬ ತುಂಬಿಕೊಂಡು ನೋಡುತ್ತಾ ರಂತೆಹಾಗಾದರೆ ನಡಿ ಅಲ್ಲಿಗೆ ಎರಡು ದಿನ ಇದ್ದು ನೋಡೋಣಂತೆ....

ಕಾತರದ ಕಾಯುವಿಕೆಗೆ ವಿರಾಮದ ಸಂಭ್ರಮ

ಕಾತರದ ಕಾಯುವಿಕೆಗೆ ವಿರಾಮದ ಸಂಭ್ರಮ

ಹೇಮಾ ಸದಾನಂದ್ ಅಮೀನ್ ಕಲ್ಪನೆಯಿಂದ ಸ್ವಲ್ಪ ಇತ್ತ ಬಂದುನಿಡುಸುಯ್ಯುವಿಕೆಗಳನ್ನುಒಂದರ ಬೆನ್ನಿಗೆ ಒಂದನ್ನು ಹೆಣೆದುರಾತ್ರಿಯ ಕೊರಳಿನ...

ಎಚ್ ಆರ್ ರಮೇಶ ಹೊಸ ಕವಿತೆ- ಸಾವಯವ

ಎಚ್ ಆರ್ ರಮೇಶ ಹೊಸ ಕವಿತೆ- ಸಾವಯವ

ಎಚ್ ಆರ್ ರಮೇಶ  ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಸೂರ್ಯ  ಸಾಯುತ್ತಿರುವುದನ್ನು ಸಾಯುತ್ತಿರುವ ಎಲ್ಲವೂ ನೋಡುತ್ತಿವೆ;...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This