
ಅಶ್ಫಾಕ್ ಪೀರಜಾದೆ
ಅದೊಂದು ಕೂಗು
ಅದೊಂದು ಕೊನೆ ಚಿತ್ಕಾರ
ಅಲ್ಲಿಗೆ ಎಲ್ಲ ಮುಗಿಯುವುದು
ಅದೊಂದು ಕಂಬನಿ
ಅದೊಂದು ಆಘಾತ
ಅಲ್ಲಿಗೆ ಎಲ್ಲ ಮುಗಿಯುವುದು
ಅದೊಂದು ಮೌನ
ಅದೊಂದು ಸಾಂತ್ವನ
ಅಲ್ಲಿಗೆ ಎಲ್ಲ ಮುಗಿಯುವುದು

ಅದೊಂದು ಹಸಿವು
ಅದೊಂದು ಉಪವಾಸ
ಅಲ್ಲಿಗೆ ಎಲ್ಲ ಮುಗಿಯವುದು
ಅದೊಂದು ಅಪಘಾತ
ಅದೊಂದು ವಿನಾಶ
ಅಲ್ಲಿಗೆ ಎಲ್ಲ ಮುಗಿಯವುದು
ಅದೊಂದು ಮಾತು
ಅದೊಂದು ಕೊನೆಯ ಗುಟುಕು
ಅಲ್ಲಿಗೆ ಎಲ್ಲ ಮುಗಿಯುವುದು
ಅದೊಂದು ನೋವು
ಅದೊಂದು ಹತಾಶೆ
ಅಲ್ಲಿಗೆ ಎಲ್ಲ ಮುಗಿಯವುದು

ಅದೊಂದು ಸಾವು
ಅದೊಂದು ಕೊನೆಯುಸಿರು
ಅಲ್ಲಿಗೆ ಎಲ್ಲ ಮುಗಿಯವುದು
ಅಂದರೂ ಏನೂ ಮುಗಿಯದು.
0 ಪ್ರತಿಕ್ರಿಯೆಗಳು