ಎ೦ ಎಫ಼್ ಹುಸೇನ್ ನೆನಪಿನಲ್ಲಿ

ಎತ್ತ ಸಾಗಿಬಿಟ್ಟಿರಿ ಸಾಹೇಬರೇ !

– ನಾ ದಿವಾಕರ

ಖ್ಯಾತ ಕಲಾವಿದ ಎಂ.ಎಫ್ . ಹುಸೇನ್ ಅವರ ಮೊದಲ ಪುಣ್ಯತಿಥಿಯ ಸಂದರ್ಭದಲ್ಲಿ (09-6-2012)

ಎಲ್ಲಿ ಮರೆಯಾಗಿಬಿಟ್ಟರಿ ಹುಸೇನರೇ ಬಿಳಿ ಕುರುಚಲು ಗಡ್ಡ ಬಿಳಿಯ ಜುಬ್ಬವ ಧರಿಸಿ ಗೆರೆಗಳಂಚಿನಲ್ಲೇ ಅಡ್ಡಾಡುತ್ತಿದ್ದ ಬೊಗಸೆಗಂಗಳ ಅಜ್ಜ ಎತ್ತ ಹೋದಿರಿ ?   ನಿಮ್ಮ ಕಂಗಳಿಂದ ಸೂಸುವ ಕಿರಣಗಳು ಸ್ನಿಗ್ಧ ಕೈಬೆರಳುಗಳೊಳಗಿಂದ ಸೃಷ್ಟಿಸಿದ ಗೆರೆಗಳು ನಿಜರ್ೀವ ನಿಭರ್ಾವ ಜಡವಸ್ತುಗಳಿಗೂ ಜೀವ ನೀಡಿದಾಗ ಅನಿಸುತ್ತಿತ್ತು ಇದು ಸಾಧ್ಯವೇ ?   ಏನೆಲ್ಲಾ ಸೃಷ್ಟಿಸಿದಿರಿ ನಿಮ್ಮ ಅಂತರಂಗದ ಕಲಾಕುಂಚದೊಳಗಿಂದ ರಾಗ ಭಾವ ತಾಳಕ್ಕೆ ತಕ್ಕಂತೆ ಭರತನಾಟ್ಯ- ವಾಡುತ್ತಿದ್ದ ಆ ಸುಕ್ಕುಗಟ್ಟಿದ ಕೈಗಳು ಜೀವ ನೀಡಿದ್ದು ಗೆರೆಗಳಂಚಿನ ಪ್ರತಿಮೆಗಳಿಗಲ್ಲ ಭವ್ಯ ಭಾರತದ ಸಂಸ್ಕೃತಿಗೆ !   ಏನೆಲ್ಲಾ ಅವಾಂತರ ಸಾಹೇಬರೇ ! ನೋಡಿ ನಿಮ್ಮ ಸುವರ್ಣ ರೇಖೆಗಳನ್ನೇ ತುಂಡುತುಂಡಾಗಿಸಿ ಒಂದಾಗಿ ಸೇರಿಸಿ ಮದ್ದು ಸೀಸಗಳ ತುಂಬಿ ಕಡಲಾಳದ ಗಾನ ಸರಸ್ವತಿಯ ನಗ್ನತೆಯಡಿ ಇಟ್ಟೇ ಬಿಟ್ಟರು ಸ್ಫೋಟಗೊಳ್ಳಲು :   ಸಿಡಿಯಿತಲ್ಲವೇ ಬಾಂಬುಗಳಂತೆ ಸೀಸದ ಕಡ್ಡಿಗಳು ಎತ್ತರಿಸಿ ಸುನಾಮಿ ಅಲೆಗಳನು ಲಗ್ಗೆ ಇಟ್ಟಾಯಿತು ಮಾನವ ಸಂವೇದನೆಗಳಿಗೆ ಹೃದಯದ ಅಭಿವ್ಯಕ್ತಿಗೆ ; ಕಿಡಿ ಹೊತ್ತಿಸಿದವರೆಲ್ಲೋ ತಿಳಿಯದು ಕುಂಚವಾದಿಗಳೇ ನೀವಂತೂ ಹೊರಟುಬಿಟ್ಟಿರಿ ಪರದೇಶಿಯಂತೆ ಹುಟ್ಟಿ ಮೆಟ್ಟಿದ ನೆಲ ತೊರೆದು ಸಹೃದಯಿಗಳನು ಮರೆತು !   ನಿಮ್ಮ ಅಸ್ಥಿಯೂ ಇಲ್ಲ ಮತಿಗೇಡಿಗಳ ಪಂಜರವೂ ಇಲ್ಲ ಆದರೂ ನಿಮ್ಮ ಹೆಜ್ಜೆ ಗುರುತುಗಳು ಅಲ್ಲಲ್ಲಿ ತುಂಡು ಗೆರೆಗಳ ನಡುವೆ ಗಹಗಹಿಸಿ ನಗುತ್ತಿರುತ್ತವೆ ; ಮರೆವುದಂತು ಸಾಹೇಬರೇ ಗೆರೆಗಳನ್ನು ಸ್ಫೋಟಿಸಬಹುದು ಸ್ಫೋಟದಿಂದ ಮೂಡಿದ ಗೆರೆಗಳನು ಕಾಣಲಾದೀತೇ ?   ಇರಲಿ ಬಿಡಿ ಹುಸೇನರೇ ನೀವೆಲ್ಲಿರುವಿರೋ ತಿಳಿಯದು ನಿಮ್ಮ ನೆನಪುಗಳು ಸದಾ ಹಿಂಬಾಲಿಸುತ್ತವೆ ಸಾರಸ್ವತ ತಾರಾ ಪುಂಜದ ನಡುವೆ ನೆನೆದೇವು ನೆನೆದೇವು ಗೆರೆಗಳ ಸಾಮ್ರಾಟನನ್ನು ವಿಷಾದದ ನಗೆಯೊಂದಿಗೆ !  ]]>

‍ಲೇಖಕರು G

July 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

4 ಪ್ರತಿಕ್ರಿಯೆಗಳು

  1. ರವಿ ಮೂರ್ನಾಡು, ಕ್ಯಾಮರೂನ್

    ಕಲಾವಿದ ಬದುಕಿದ್ದಾಗ ಸಿಗದ ಗೌರವ ಸತ್ತ ನಂತರವಾದರೂ ಜಗತ್ತು ಅರಿತುಕೊಳ್ಳುವುದು ಈ ಜಗತ್ತಿನ ದುರಂತಗಳಲ್ಲಿ ಒಂದು.ಅದು ಹುಸೇನ್ ಸಾಬರನ್ನು ಮಾತ್ರವಲ್ಲ, ಬದುಕಿರುವ ಹಲವರನ್ನು ಈಗಲೂ ಬಿಟ್ಟಿಲ್ಲ. ಈ ಜಗತ್ತಿನಲ್ಲಿ ಹುಟ್ಟಿಸುವುದು ಎಷ್ಟು ಸುಲಭವೋ , ಕೊಲ್ಲುವುದು ಅಷ್ಟೇ ಸುಲಭ. ಎರಡಕ್ಕಿರುವ ಅಂತರ ವಿಪರ್ಯಾಸ ಮಾತ್ರ. ಇದು ಸಾಹಿತ್ಯಕ್ಕೂ ಅನ್ವಯಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: