ಎ ಕೆ ಹಾನಗಲ್ ಒಂದು ನೆನಪು…

ನಟನೆ ಎಂದರೆ ಹಂಗಲ್ಲ ಹಿಂಗೆ ಎಂದ ಹಂಗಲ್ ಇನ್ನಿಲ್ಲ

– ನಾ ದಿವಾಕರ್

1970ರ ದಶಕದಲ್ಲಿ ತೆರೆಕಂಡ ಶೋಲೆ ಚಿತ್ರವನ್ನು ನೋಡಿದವರು ಆ ಚಿತ್ರದಲ್ಲಿನ ನಾಲ್ಕು ಪಾತ್ರಗಳನ್ನು ಮರೆಯಲಾಗುವುದಿಲ್ಲ. ಅಮಿತಾಬ್, ಸಂಜೀವ್ ಕುಮಾರ್, ಅಮ್ಜದ್ ಖಾನ್ ಮತ್ತು ಜಯಾಬಾಧುರಿ. ಈ ನಾಲ್ಕೂ ಪಾತ್ರಗಳು ಕಥಾ ಹಂದರದ ಪ್ರಧಾನ ಪಾತ್ರಗಳು. ಆದರೆ ಈ ಪಾತ್ರಗಳ ನೆರಳಿನಲ್ಲೇ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿಯುವ ಪಾತ್ರವೆಂದರೆ ರಹೀಂ ಚಾಚಾ. ಅಂಧ ಇಮಾಂ ಪಾತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಒಂದು ವಿಶಿಷ್ಟ ಆಯಾಮವನ್ನು ನೀಡಿ, ಇತ್ನಾ ಸನ್ನಾಟ ಕ್ಯೂಂ ಹೈ ಭಾಯ್ (ಏಕೆ ಇಷ್ಟೊಂದು ಮೌನ ಆವರಿಸಿದೆ ) ಎಂಬ ಸಂಭಾಷಣೆಯನ್ನು ಅಜರಾಮರವಾಗಿಸಿದ ರಹೀಂ ಚಾಚಾ ಯಾನೆ ಅವತಾರ್ ಕೃಷ್ಣ ಹಂಗಲ್ ಇಂದು ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಸನ್ನಾಟ ಸೃಷ್ಟಿಸಿ ತಮ್ಮ 97 ವರ್ಷಗಳ ಪಯಣವನ್ನು ಮುಗಿಸಿ ಇಹಲೋಕ ಯಾತ್ರೆಯನ್ನು ಪೂರೈಸಿದ್ದಾರೆ. ತಮ್ಮ 97ನೆಯ ವಯಸ್ಸಿನಲ್ಲೂ ಸಿಪಿಎಂ ಪಕ್ಷದ ಸದಸ್ಯತ್ವವನ್ನು ನವೀಕರಿಸಿದ್ದ ಹಂಗಲ್ ಅವರ ಸೈದ್ಧಾಂತಿಕ ಬದ್ಧತೆಗೆ ಮತ್ತೇನು ನಿದರ್ಶನ ಸಾಧ್ಯ ? ವೃತ್ತಿಯಲ್ಲಿ ದಜರ್ಿಯಾಗಿದ್ದು ತಮ್ಮ ಜೀವನದ ಹಾದಿಯ ಸಂಪರ್ಕ ಕಡಿದುಹೋಗದಂತೆ ನಾಟಕರಂಗ ಎಂಬ ಹೊಲಿಗೆಯಂತ್ರದ ಮೂಲಕ ಹೊಸೆದ ಹಂಗಲ್ ಹೊಲಿದ ಬಟ್ಟೆಗೂ ಮತ್ತು ದಾರಕ್ಕೂ ಇರುವ ನಂಟಿನಂತೆ ತಮ್ಮ ಹಾಗೂ ತಮ್ಮ ಅಭಿಮಾನಿಗಳ ಸಂಬಂಧವನ್ನು ಹೊಸೆದು ಕಣ್ಮರೆಯಾಗಿದ್ದಾರೆ. 1915ರ ಆಗಸ್ಟ್ 15ರಂದು ಜನಿಸಿದ ಎ.ಕೆ. ಹಂಗಲ್ 1929-47ರ ಅವಧಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿದಕೊಂಡಿದ್ದು ಇದೇ ಅವಧಿಯಲ್ಲಿ ನಾಟಕರಂಗವನ್ನೂ ಪ್ರವೇಶಿಸಿದ್ದರು. 1936 ರಿಂದ 1965ರವರೆಗೆ ನಾಟಕರಂಗದಲ್ಲಿ ಕೆಲವು ವಿಶಿಷ್ಟ ಪಾತ್ರಗಳನ್ನು ನಿರ್ವಹಿಸಿದ್ದ ಹಂಗಲ್ ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ಸ್ )ನ ಸಂಸ್ಥಾಪಕರಲ್ಲೊಬ್ಬರಾಗಿದ್ದರು. ಬಲರಾಜ್ ಸಾಹ್ನಿ, ಸಾಹಿರ್ ಲುದಿಯಾನ್ವಿ, ಉತ್ಪಲ್ ದತ್ ಮತ್ತು ಕೈಫಿ ಅಜ್ಮಿ ಮುಂತಾದ ದಿಗ್ಗಜರ ನಡುವೆ ಹಂಗಲ್ ಒಬ್ಬ ವಿಶಿಷ್ಟ ನಟರಾಗಿ ಹೊರಹೊಮ್ಮಿದ್ದರು. ತಮ್ಮ ಐವತ್ತನೆಯ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿದ ಹಂಗಲ್ 225 ಚಿತ್ರಗಳಲ್ಲೂ ನಟಿಸಿದ್ದು ಪೋಷಕ ಪಾತ್ರದಲ್ಲೇ ಆದರೂ ಅವರ ಅಭಿನಯದ ಗಾಂಭೀರ್ಯ ಮತ್ತು ಚತುರತೆ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಪೋಷಕ ಪಾತ್ರಗಳಿಗೆ ಜೀವ ತುಂಬುವುದೇ ಅಲ್ಲದೆ ಒಂದು ಘನತೆಯನ್ನು ತಂದಿತ್ತ ಕೀತರ್ಿ ಹಂಗಲ್ ಅವರಿಗೆ ಸಲ್ಲುತ್ತದೆ. ಕಾಶ್ಮೀರಿ ಪಂಡಿತರ ಕುಟುಂಬದಲ್ಲಿ ಜನಿಸಿ , ಪೇಶಾವರದಲ್ಲಿ ಬಾಲ್ಯವನ್ನು ಕಳೆದು ಬಾಲ್ಯದಲ್ಲೇ ದಜರ್ಿ ವೃತ್ತಿಯಲ್ಲಿ ತೊಡಗಿದ್ದ ಹಂಗಲ್ ಸ್ವಪ್ರೇರಣೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿ ಭಾರತ ವಿಭಜನೆಯಾದ ನಂತರ ಕರಾಚಿಯಿಂದ ಮುಂಬೈಗೆ ಬಂದು ನೆಲೆಸಿದ್ದರು. ಇದಕ್ಕೂ ಮುನ್ನ ಮೂರು ವರ್ಷಗಳ ಜೈಲು ಸಜೆಯನ್ನೂ ಅನುಭವಿಸಿದ್ದರು. ಬಾಲ್ಯದಿಂದಲೇ ಎಡಪಂಥೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಹಂಗಲ್ ತಮ್ಮೊಳಗಿನ ಕಲಾವಿದನನ್ನೇ ಕಮ್ಯುನಿಸ್ಟ್ ಚಳುವಳಿಗೆ ಮುಡಿಪಾಗಿರಿಸಿ ಇಪ್ಟಾದ ಮೂಲಕ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ನಾಟಕರಂಗದಲ್ಲಿ ಮೆರೆದ ಹಂಗಲ್ ಬಾಲಿವುಡ್ ಪ್ರವೇಶಿಸಿದ್ದು 1967ರಲ್ಲಿ ಬಸು ಭಟ್ಟಾಚಾರ್ಯ ನಿಮರ್ಿಸಿದ ತೀಸ್ರಿ ಕಸಂ ಚಿತ್ರದ ಮೂಲಕ. ಅಂದಿನಿಂದ ಇಂದಿನವರೆಗೆ ತಿರುಗಿ ನೋಡದ ಹಂಗಲ್ ತಮ್ಮ ವೈವಿಧ್ಯಮಯ ನಟನೆಯಿಂದಲೆ ಜನರ ಮನಸೂರೆಗೊಂಡಿದನ್ನು ಮರೆಯಲಾಗದು. ಶೌಕೀನ್ , ಬಾವಚರ್ಿ, ಶೋಲೆ, ಶಾಗಿದರ್್, ಶರಾರತ್, ನಮಕ್ ಹರಾಮ್ , ಶೋಲೆ, ಮಂಜಿಲ್, ಪ್ರೇಮ್ ಬಂಧನ್, ಆಪ್ ಕಿ ಕಸಮ್, ಗುಡ್ಡಿ ಹೀಗೆ ಹಂಗಲ್ ಅವರ ಚಿತ್ರಗಳ ಪಟ್ಟಿ ಬೆಳೆಯುತ್ತದೆ. ಶೋಲೆಯ ಇಮಾಂ ಸಾಬ್ ಆಗಲಿ, ಶೌಕೀನ್ ಚಿತ್ರದ ಚಪಲ ಚನ್ನಿಗರಾಯನ ಪಾತ್ರವಾಗಲಿ, ಪ್ರೆಮ್ ಬಂಧನ್ ಚಿತ್ರದ ವಿಲನ್ ಪಾತ್ರವಾಗಲಿ ತಮ್ಮ ಪಾತ್ರದಲ್ಲಿ ತಲ್ಲೀನರಾಗಿ ನಟಿಸುತ್ತಿದ್ದ ಹಂಗಲ್ ಹಲವಾರು ಸಂದರ್ಭಗಳಲ್ಲಿ ಚಿತ್ರದ ಮುಖ್ಯ ಪಾತ್ರಧಾರಿಗಳನ್ನೂ ಮಂಕಾಗಿಸುತ್ತಿದ್ದುದುಂಟು. ಬಹುಪಾಲು ಚಿತ್ರಗಳಲ್ಲಿ ಭಾವನಾತ್ಮಕವಾದ ಪಾತ್ರಗಳನ್ನು ನಿಭಾಯಿಸುತ್ತಿದ್ದ ಹಂಗಲ್ ನಿಜ ಜೀವನದಲ್ಲೂ ಅದೇ ಸಂಕಷ್ಟಗಳನ್ನು ಎದುರಿಸಿದ್ದು ವಿಡಂಬನೆಯೇ ಸರಿ. ತಮ್ಮ ನಟನಾ ಕೌಶಲ್ಯವನ್ನು ಹೊರಸೂಸಲು ದೊರೆತ ಅವಕಾಶವನ್ನೇ ಬಳಸಿಕೊಳ್ಳುತ್ತಿದ್ದ ಹಂಗಲ್ ರೇಖಾ ಪ್ರಧಾನ ಪಾತ್ರ ವಹಿಸಿದ್ದ ಖೂನ್ ಭರಿ ಮಾಂಗ್ ಚಿತ್ರದಲ್ಲಿ ನಿರ್ವಹಿಸಿದ ಚಾಚಾನ ಪಾತ್ರ ಮರೆಯಲಾಗದಂತಹುದು. ಶೌಕೀನ್ ಚಿತ್ರದ ಪಾತ್ರದಿಂದ ಜನಪ್ರಿಯತೆ ಗಳಿಸಿದ ಹಂಗಲ್ ತಾವು ಹಾಸ್ಯ ಪ್ರಧಾನವಾಗಿಯೂ ನಟಿಸಬಲ್ಲೆ ಎಂದು ನಿರೂಪಿಸಿದ್ದರು. ಮೇ 2012ರಲ್ಲಿ ಮಧುಬಾಲಾ ಟಿವಿ ಧಾರಾವಾಹಿಯಲ್ಲಿ ಕಡೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡ ಹಂಗಲ್, ಚಿತ್ರೀಕರಣದಲ್ಲಿ ಒಂದೇ ಶಾಟ್ನಲ್ಲಿ ತಮ್ಮಪಾತ್ರವನ್ನು ನಿರ್ವಹಿಸಿದ್ದು ಅವರ ನಟನಾ ಪರಿಪೂರ್ಣತೆಗೆ ಸಾಕ್ಷಿ. ಒಮ್ಮೆ ಔತಣಕೂಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಂಗಲ್ ಅವರನ್ನು ಕಾರಿನಲ್ಲಿ ಡ್ರಾಪ್ ಮಾಡಲು ಮಹಿಳೆಯೊಬ್ಬರಿಗೆ ಹೇಳಿದಾಗ, ತಾನು ಶೌಕೀನ್ ಚಿತ್ರ ನೋಡಿದ್ದೇನೆ ಎಂದು ಹೇಳುವ ಮೂಲಕ ಆಕೆ ಹಂಗಲ್ ಅವರ ಪರದೆಯ ಮೇಲಿನ ನಟನೆಯನ್ನು ನಿಜ ಜೀವನಕ್ಕೂ ಅನ್ವಯಿಸಿದ್ದುಂಟು. ಶೌಕೀನ್ ಚಿತ್ರದಲ್ಲಿ ಹುಡುಗಿಯರ ಚಪಲ ಇರುವ ವೃದ್ಧನ ಪಾತ್ರ ವಹಿಸಿದ್ದ ಹಂಗಲ್ ಅವರನ್ನು ಹೀಗೆ ಅಪಾರ್ಥಮಾಡಿಕೊಂಡಿದ್ದು ಆ ಮಹಿಳೆ ಮಾಡಿದ ಪ್ರಮಾದವೇ ಆದರೂ, ನಿಜ ಜೀವನದಲ್ಲೂ ಹಂಗಲ್ ಅವರನ್ನು ಬಾಲಿವುಡ್ ಅರ್ಥಮಾಡಿಕೊಂಡಿದ್ದು ತಡವಾಗಿಯೇ ಎನ್ನಬಹುದು. 2007ರಲ್ಲಿ ಹಂಗಲ್ ಅಸ್ವಸ್ಥರಾದಾಗ ಅವರ ಬಳಿ ಚಿಕಿತ್ಸೆಗೂ ಹಣ ಇರಲಿಲ್ಲ. ಹಂಗಲ್ ಅವರ ಪುತ್ರ ವಿಜಯ್ ಸ್ವತಃ 75 ವರ್ಷದ ನಿವೃತ್ತ ಸಿನಿಮಾ ಛಾಯಾಗ್ರಾಹಕರಾಗಿದ್ದು ತಮ್ಮ ತಂದೆಯ ಮನೆಯ ಪಕ್ಕದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಮ್ಮ ಪತ್ನಿಯ ಮರಣಾನಂತರ ಏಕಾಂಗಿಯಾಗಿಯೇ ಇದ್ದ ಹಂಗಲ್ ತಮ್ಮ ಧ್ಯೇಯ ಆದರ್ಶಗಳನ್ನು ಪಾಲಿಸದ ಮಗನೊಡನೆ ಬಾಳಲು ಇಚ್ಚಿಸಿರಲಿಲ್ಲ. ಆದರೂ ಹಂಗಲ್ ಅಸ್ವಸ್ಥರಾದಾಗ ತಿಂಗಳಿಗೆ 15 ಸಾವಿರ ಔéಷಧಿಗಳಿಗೆ ಖಚರ್ಾಗುತ್ತಿತ್ತು. ಮಾಧ್ಯಮಗಳಲ್ಲಿ ಈ ವಿಷಯ ಪ್ರಚಾರವಾದ ನಂತರವೇ ಬಾಲಿವುಡ್ ನಟರು ಮತ್ತು ಮಹಾರಾಷ್ಟ್ರ ಸಕರ್ಾರ ಈ ನಟನ ನೆರವಿಗೆ ಧಾವಿಸಿತ್ತು. ಬಾವಚರ್ಿ, ಗುಡ್ಡಿ, ಶೋಲೆ, ಅಭಿಮಾನ್ ಮುಂತಾದ ಒಂಭತ್ತು ಚಿತ್ರಗಳಲ್ಲಿ ಅವರೊಡನೆ ನಟಿಸಿದ್ದ ಜಯಾಬಚ್ಚನ್ ವಿಷಯ ತಿಳಿದ ಕೂಡಲೇ ಹಂಗಲ್ ಅವರ ವೈದ್ಯಕೀಯ ವೆಚ್ಚಗಳನ್ನು ಸಂಪೂರ್ಣವಾಗಿ ವಹಿಸಿಕೊಳ್ಳಲು ಮುಂದಾಗಿದ್ದರು. ಟಿವಿ ಮತ್ತು ಚಿತ್ರರಂಗದ ಕಲಾವಿದರ ಸಂಘದ ವತಿಯಿಂದ ಮಿಥುನ್ ಚಕ್ರವತರ್ಿ 50 ಸಾವಿರ ರೂಗಳ ಕಾಣಿಕೆ ನೀಡಿದ್ದರು. ರಾಜ್ಯ ಸಕರ್ಾರವೂ ಹಂಗಲ್ ಅವರಿಗೆ 50 ಸಾವಿರ ಪರಿಹಾರ ಧನ ನೀಡಿತ್ತು. ತದನಂತರವೇ ಬಾಲಿವುಡ್ನ ಖ್ಯಾತನಾಮರು ಹಂಗಲ್ ಅವರ ನೆರವಿಗೆ ಧಾವಿಸಿದ್ದರು. ಕಲಾವಿದರಿಗಾಗಿ ವೃದ್ಧಾಶ್ರಮ ನಿಮರ್ಿಸಲು ಯೋಜಿಸಿದ್ದ ಹಂಗಲ್ ಇದೇ ಕಥಾಹಂದರವನ್ನು ಆಧರಿಸಿದ್ದ ಶರಾರತ್ ಎಂಬ ಚಿತ್ರದಲ್ಲೂ ನಟಿಸಿದ್ದರು. ತಮ್ಮ ಜೀವನ ನಿರ್ವಹಣೆಗೆ ಪುನಃ ತಮ್ಮ ದಜರ್ಿ ವೃತ್ತಿಯನ್ನೇ ಅವಲಂಬಿಸಿದ್ದ ಹಂಗಲ್ ಎಂದಿಗೂ ಮತ್ತೊಬ್ಬರ ಹಂಗಿಗೆ ಒಳಗಾದವರಲ್ಲ. ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಹಂಗಲ್ ಅವರ ವಿರುದ್ಧ ಹಿಂದುತ್ವವಾದಿಗಳು ಅವರನ್ನು ದೇಶದ್ರೋಹಿ ಎಂದು ಜರೆದಿದ್ದರು. ಅನೇಕ ಚಿತ್ರ ನಿಮರ್ಾಪಕರೂ ಹಂಗಲ್ ಅವರಿಗೆ ಅವಕಾಶ ನೀಡಲು ಹಿಂಜರಿದಿದ್ದೂ ಉಂಟು. ಕರಾಚಿಯಲ್ಲಿ ತನ್ನ ಸರ್ವಸ್ವವನ್ನೂ ತೊರೆದು ಭಾರತಕ್ಕೆ ಬಂದು ನೆಲೆಸಿದ್ದರೂ ತಮ್ಮನ್ನು ಪಾಕಿಸ್ತಾನಿ ಎಂದೇ ಭಾವಿಸುತ್ತಿದ್ದ ಕೋಮುವಾದಿಗಳ ಬಗ್ಗೆ ಹಂಗಲ್ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಷ್ಟೇ ವಿಷಾದವೂ ಅವರ ಮನದಲ್ಲಿ ತುಂಬಿತ್ತು. ಎಡಪಂಥೀಯರೊಡನೆ ತಮ್ಮ ಸಹಯೋಗವನ್ನು ಹೆಮ್ಮೆಯಿಂದ ನೆನೆಯುವ ಹಂಗಲ್ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದ ದೃಶ್ಯವನ್ನು ಸದಾ ಸ್ಮರಿಸುತ್ತಿದ್ದರು. ತಮ್ಮ ಜೀವನ ಚರಿತ್ರೆಯಲ್ಲಿ ಹಂಗಲ್ ಬಾಲಿವುಡ್ ಚಿತ್ರರಂಗದ ಸಾಮಾಜಿಕ ನಿಷ್ಕಾಳಜಿ ಮತ್ತು ನಮ್ಮ ಸಮಾಜದ ಸಂಕೀರ್ಣತೆಗಳನ್ನು ಗ್ರಹಿಸುವಲ್ಲಿನ ವೈಫಲ್ಯವನ್ನು ವಿಷಾದದಿಂದ ಉಲ್ಲೇಖಿಸುತ್ತಾರೆ. 200 ಚಿತ್ರಗಳಲ್ಲಿ ನಟಿಸಿದ್ದರೂ ತಮ್ಮ ಸಿದ್ಧಾಂತ ಮತ್ತು ಧೋರಣೆಯ ಪರಿಣಾಮ ತಾವು ಈ ಲೋಕಕ್ಕೆ ಆಗಂತುಕನಂತೆಯೇ ಭಾವಿಸುವುದಾಗಿ ಹೇಳುತ್ತಿದ್ದ ಹಂಗಲ್ ತಮ್ಮ ಈ ನೆನಪುಗಳ ಹೆಜ್ಜೆ ಗುರುತುಗಳೊಡನೆಯೇ ತಮ್ಮ ಅದ್ಭುತ ಮಾನವೀಯ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಶಬಾನ ಅಜ್ಮಿ ಹೇಳಿದಂತೆ ಹಂಗಲ್ ಅವರ ನಿರ್ಗಮನದೊಂದಿಗೆ ಇಪ್ಟಾ ಚಳುವಳಿಯ ಕೊನೆಯ ಕೊಂಡಿ ಕಳಚಿಕೊಂಡಿದೆ. ಬಲರಾಜ್ ಸಾಹ್ನಿ, ಕೈಫಿ ಅಜ್ಮಿ, ಉತ್ಪಲ್ ದತ್ ಅವರ ಹೆಜ್ಜೆ ಗುರುತುಗಳೊಡನೆ ರಹೀಂ ಚಾಚಾ ತಮ್ಮ ಹೆಜ್ಜೆ ಗುರುತುಗಳನ್ನೂ ಮೂಡಿಸಿ ಕಣ್ಮರೆಯಾಗಿದ್ದಾರೆ. ಇತ್ನಾ ಸನ್ನಾಟಾ ಕ್ಯೂಂ ಹೈ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇರುತ್ತದೆ.  ]]>

‍ಲೇಖಕರು G

September 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This