ಏಣಗಿ ನಟರಾಜ್ ಇನ್ನಿಲ್ಲ…

– ಗೋಪಾಲ ವಾಜಪೇಯಿ

ಏಣಗಿ ನಟರಾಜ ನನ್ನ ಆತ್ಮೀಯ ಗೆಳೆಯ. ಇಬ್ಬರೂ ಪರಸ್ಪರ ಏಕವಚನದಲ್ಲೇ ಮಾತಾಡಿಕೊಳ್ಳುತ್ತಿದ್ದದ್ದು. ನನಗಿಂತ ಒಂದು ಆರೇಳು ವರ್ಷ ಚಿಕ್ಕವನಾದರೂ ಪ್ರತಿಭೆಯಲ್ಲಿ ಆತ ತುಂಬ ದೊಡ್ಡವ. ಹುಟ್ಟಿದ್ದೇ ರಂಗಭೂಮಿಯ ವಿಂಗಿನಲ್ಲಿ. ಹೀಗಾಗಿ ಅಭಿನಯ ಅವನಿಗೆ ರಕ್ತಗತವಾಗಿ ಅಷ್ಟೇ ಅಲ್ಲ, ಜನಿಸಿದಾಕ್ಷಣ ಒಲಿಯಿತು. ವೃತ್ತಿರಂಗಭೂಮಿಯ ಶಕಪುರುಷರಲ್ಲಿ ಒಬ್ಬರಾದ ನಾಡೋಜ ಡಾ. ಏಣಗಿ ಬಾಳಪ್ಪ ಅವರ ಕಲಾವೈಭವ ನಾಟ್ಯಸಂಘವನ್ನು ಪುನರಾರಂಭಿಸಿ, ಧಾರವಾಡದಲ್ಲಿ ತಿಂಗಳುಗಟ್ಟಲೆ ಪ್ರಯೋಗಗಳನ್ನು ನೀಡಿದಾತ ಗೆಳೆಯಾ ನಟರಾಜ. ನೀನಾಸಂ ರಂಗಶಾಲೆಯಲ್ಲಿ ತರಬೇತಿ ಪಡೆದು, ಅದೇ ‘ನೀನಾಸಂ ತಿರುಗಾಟ’ದ ನಾಟಕಗಳ ಮೂಲಕ ತಾನು ಎಂಥ ಸಶಕ್ತ ನಟ ಎಂಬುದನ್ನು ಸಾಬೀತುಪಡಿಸಿದ. ಆತ ಎಂಥ ಅದ್ಭುತ ನಟ ಎಂಬುದಕ್ಕೆ ಆಗ ಪ್ರಸನ್ನ ನಿರ್ದೆಶಿಸಿದ ‘ತದ್ರೂಪಿ’, ಜಂಬೆ ನಿರ್ದೆಸಿದ ‘ಬಿರುದಂತೆಂಬರ ಗಂಡ,’ ಹಾಗೂ ಕಂಬಾರರ ‘ಸಾಂಬಶಿವ ಪ್ರಹಸನ,’ ಧಾರವಾಡದ ಕಲೋದ್ಧಾರಕ ಸಂಘದ ‘ನಟಸಮ್ರಾಟ್,’ ಮತ್ತು ಈಚೆಗೆ ಎಸ್. ಸುರೇಂದ್ರನಾಥ್ ಬರೆದು ನಿರ್ದೆಶಿಸಿದ ಬೆಂಗಳೂರಿನ ಸಂಕೇತ್ ತಂಡದ ‘ನಾ ತುಕಾರಾಂ ಅಲ್ಲ…’ ನಾಟಕಗಳೇ ಸಾಕ್ಷಿ. ನಾನು ರೂಪಾಂತರಿಸಿದ ಹಸಿರೆಲೆ ಹಣ್ಣೆಲೆ ನಾಟಕವನ್ನು ಧಾರವಾಡದ ಕಲೋದ್ಧಾರಕ ಸಂಘಕ್ಕೆ ನಟರಾಜ ನಿರ್ದೇಶಿಸಿದ್ದ. ಇನ್ನು ಸಿನೆಮಾ ಮತ್ತು ಕಿರುತೆರೆಗಳಲ್ಲಿ ನಟರಾಜ ಮಿಂಚಿದ ರೀತಿ ನಿಮಗೆಲ್ಲ ತಿಳಿದದ್ದೇ. ೧೯೮೭ ರಿಂದ ೧೯೯೦ ರ ಅವಧಿಗೆ ನಾವಿಬ್ಬರೂ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದೆವು. ಆಗ ನನ್ನೊಂದಿಗೆ ನಟರಾಜ ‘ನೇಪಥ್ಯಶಿಲ್ಪ’ ‘ಜಡಭರತ ನಾಟಕೋತ್ಸವ’ ಮುಂತಾದ ಅನೇಕ ಅಪರೂಪದ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದ. ಇತ್ತೀಚಿಗೆ ಧಾರವಾಡ ರಂಗಾಯಣದ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿದ್ದ ನಟರಾಜನಿಗೆ ಅನೇಕ ಕನಸುಗಳಿದ್ದವು. ಇದೀಗ ನಟರಾಜ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ. ಅವನ ಆತ್ಮಕ್ಕೆ ಶಾಂತಿ ಕೋರುವುದಷ್ಟೇ ಈಗ ನಾವು ಮಾಡಬಹುದಾದ ಕೆಲಸ.]]>

‍ಲೇಖಕರು G

June 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ನಾನು ನಿನ್ನೆ ಸಾಯಂಕಾಲ (೨೯-೭-೨೦೧೯) ರಾಜೀನಾಮೆ ನೀಡಿದ್ದೇನೆ. ಇದರ ಉದ್ದೇಶ: ಯಾವುದೇ...

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ನಾನು ನಿನ್ನೆ ಸಾಯಂಕಾಲ (೨೯-೭-೨೦೧೯) ರಾಜೀನಾಮೆ ನೀಡಿದ್ದೇನೆ. ಇದರ ಉದ್ದೇಶ: ಯಾವುದೇ...

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ನಾನು ನಿನ್ನೆ ಸಾಯಂಕಾಲ (೨೯-೭-೨೦೧೯) ರಾಜೀನಾಮೆ ನೀಡಿದ್ದೇನೆ. ಇದರ ಉದ್ದೇಶ: ಯಾವುದೇ...

9 ಪ್ರತಿಕ್ರಿಯೆಗಳು

 1. sunil rao

  teera dukkhavaagtaide…enagi nataraj avara naa tukaarama alla naataka ittechege nodi bahalave ishtavaagittu…ashte allade aaat teera sookshma nata….patrakke tookakkinta hecchu nyaaya odagisutidda jeeva…
  RIP

  ಪ್ರತಿಕ್ರಿಯೆ
 2. D.RAVI VARMA

  ಈ ಜಗತ್ತಿನಲ್ಲಿ ಯಾವುದೂ ಹೆಚ್ಚು ಹೊರೆಯಲ್ಲ ಆದರೆ ಮಗನ ಸಾವಿನ ಹೆಣವನ್ನು ಹೊರುವ ಪರಿಸ್ತಿತಿ ಯಾವ ತಂದೆಗೂ ಬರಬಾರದು ಹಾಗಂತ ನನ್ನ ಶಿಕ್ಷಕರು ತಮ್ಮ ಮಗ ಸತ್ತಾಗ ಹೇಳಿ ಕಂಬನಿ ಮಿಡಿದಿದ್ದರು .ನನಗೆ ಏಣಗಿ ಬಾಳಪ್ಪ ಅವರಿಗೆ ತಮ್ಮ ಮಗ ಇಡೀ ನಾಟಕರಂಗದ ದಿಗ್ಗಜಗಳು ಒಪ್ಪಿಕೊಂಡ ಅಪ್ಪಿಕೊಂಡ ಮನಸಾರೆ ಪ್ರೀತಿಸಿದ, ಹೊಗಳಿದ ಕರುಳಿನ ಬಳ್ಳಿಯನ್ನು ಕಳೆದುಕೊಂಡು , ತೀವ್ರ ನೋವು,ಸಂಕಟ, ಅನಾತಪ್ರಜ್ಞೆ , ಬರೆಯಲು ಹೇಳಲು ಸಾಧ್ಯವಾಗದ ಸಂಕಟ ಆ ಹಿರಿಯ ಜೀವಿಗೆ ಆ ಕರುಣಾಮಯಿಗೆ ಮಾನಸಿಕ ಸ್ಥಿರ್ಯ ,ನೀಡಲೆಂದು ಕೈಮುಗಿದು ಬೇಡುವೆ .

  ಪ್ರತಿಕ್ರಿಯೆ
 3. ನಾ ದಿವಾಕರ

  ಹಲವು ವರ್ಷಗಳ ಹಿಂದೆ ನಾಗಾಭರಣ ಸಂಕ್ರಾಂತಿ ಧಾರಾವಾಹಿಯ 200ನೆಯ ಕಂತು ಮುಗಿದ ನಂತರ ಏರ್ಪಡಿಸಿದ್ದ ಸಮಾರಂಭಕ್ಕೆ ನನ್ನನ್ನು ಧಾರಾವಾಹಿಯ ಬಗ್ಗೆ ಮಾತನಾಡಲು ಆಹ್ವಾನಿಸಿದ್ದ ಸಂದರ್ಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಪಿಚ್ಚಹಳ್ಳಿ ಶ್ರೀನಿವಾಸ್ ಅವರೊಡನೆ ಕಲೆತಿದ್ದಾಗ ಏಣಗಿ ನನಗೆ ಪರಿಚಯವಾಗಿದ್ದರು. ಸಹೃದಯ ನಟ, ಉತ್ತಮ ವಾಗ್ಮಿ ಮತ್ತು ಅದ್ಭುತ ಕಲಾವಿದ. ಎಲ್ಲಕ್ಕಿಂತಲೂ ಹೆಚ್ಚಾಗಿ ಸ್ನೇಹ ಜೀವಿ. ಅವರೊಡನೆ ಕಳೆದ ಕೆಲವೇ ಗಂಟೆಗಳು ಇಂದು ನೆನಪಾಗುತ್ತಿದೆ. ಒಬ್ಬ ಉತ್ತಮ ಕಲಾವಿದನನ್ನು ಕನ್ನಡಿಗರು ಕಳೆದುಕೊಂಡಿದ್ದಾರೆ. ಅವರ ನೆನಪು ಸದಾಹಸಿರಾಗಿಯೇ ಇರುತ್ತದೆ. ಅಗಲಿದ ಚೇತನಕ್ಕೆ ನನ್ನ ನಮನಗಳು.

  ಪ್ರತಿಕ್ರಿಯೆ
 4. prakash hegde

  ತುಂಬಾ ಬೇಸರದ ಸುದ್ಧಿ…
  ಈಗ್ಗೆ ಕೆಲವು ವರ್ಷಗಳ ಹಿಂದೆ ನಾಗಾಭರಣರ ಧಾರಾವಾಹಿ “ಸಂಕ್ರಾಂತಿ” ಉದಯ ಟಿವಿಯಲ್ಲಿ ಬರ್ತಿತ್ತು..
  ಅದರಲ್ಲಿ ನಟರಾಜ ಏಣಗಿಯವರ ಪಾತ್ರ ತುಂಬಾ ಸೊಗಸಾಗಿತ್ತು..
  ಅವರು ಮಾತನಾಡುವ ಶೈಲಿ.. ಅಭಿನಯ ಎಷ್ಟು ಸೊಗಸಾಗಿತ್ತು ಅಂದರೆ ನಾವೆಲ್ಲ ಗೆಳೆಯರು ಅವರ ಅಭಿಮಾನಿಗಳಾಗಿ..
  ಅವರನ್ನೊಮ್ಮೆ ಭೇಟಿಯಾಗಿ ಬಂದಿದ್ದೇವು..
  ಶೇಷಪ್ಪ ಅಂತ ಆ ಪಾತ್ರದ ಹೆಸರು…
  ದೇವರು ಅವರ ಆತ್ಮಕ್ಕೆ ಶಾಂತಿನೀಡಲಿ..

  ಪ್ರತಿಕ್ರಿಯೆ
 5. Pramod ambekar

  nanage Annanante idda Nataraj Enagi sdhya illa aadare nanna hrudayadalli sdakala TADRUPI yagi PUNTILANAGI IRUTTANE
  NATARJAN ATMAKKE SHANTI SIGALI
  PRAMOD AMBEKAR
  9844039532

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: