ಏನಾಗುತ್ತಿದೆ ಬೆಂಗಳೂರು?

I AM INDIAN FIRST …….

– ಹರ್ಷ ಕೇದಿಲ

ಮೊನ್ನೆ ಆಫೀಸ್ ಒಳಗೆ ಬರುತ್ತಿದ್ದಂತೆ ಯಾವಾಗಲೂ ಸಲ್ಯೂಟ್ ಹೊಡೆಯುತ್ತಿದ್ದ ಸೆಕ್ಯೂರಿಟಿಕಾಣಲಿಲ್ಲ. ಎನೋ ರಜೆಯಲ್ಲಿದ್ದಾನೆ ಎಂದು ಆಫೀಸ್ ಒಳಗೆ ಬಂದು ಲಾಗ್ ಇನ್ ಮಾಡುವಷ್ಟರಲ್ಲಿ ಸ್ಮಿತಾಬಂದಳು. ನಿನಗೊಂದು ವಿಷ್ಯ ಗೊತ್ತಾ, ಇನ್ನು ಕೆಲವು ದಿನ ಮ್ಯಾನೇಜರ್ ಬರುವುದಿಲ್ಲ. ಊರಿಗೆಹೋಗಿದ್ದರೆ ಎಂದಳು. ಅದೇನು ಅಷ್ಟೊಂದು ತುರಾತುರಿ, ನಿನ್ನೆ ರಾತ್ರೆ ಮನೆಗೆ ಹೋಗುವಾಗ ಏನು ಹೇಳಲೇಇಲ್ಲ ಎಂದೆ. ನೋಡಿಲ್ವಾ ಪೇಪರ್ ಈಶಾನ್ಯ ಭಾರತದವರೆಲ್ಲ ವಾಪಸು ಹೋಗುತ್ತಿದ್ದರೆ, ಅದ್ಯಾರೋ ಅವರಮೇಲೆ ದಾಳಿ ಮಾಡುತ್ತಾರೆ ಎಂದು ಭಯವಂತೆ ಎಂದಳು. ಪೇಪರೂ ಓದೋದಕ್ಕೆ ಸಮಯ ಸಿಗದ IT ಕಂಪನಿ ಜೀತದಾಳುವಾದ ನನಗೆ ಇದೆಲ್ಲ ಹೇಗೆಗೊತ್ತಾಗ ಬೇಕು ಎಂದು ಎನ್ನುತಾ ಆನ್ಲೈನ್ ಪತ್ರಿಕೆ ಓಪನ್ ಮಾಡಿದೆ. ಮುಖಪುಟದ ದೊಡ್ಡ ಚಿತ್ರಗಳುಸ್ಮಿತಾಳ ಮಾತಿಗೆ ಸಾಕ್ಷಿ ನೀಡುವಂತಿದ್ದವು. ಆದರೂ ಬೆಂಗಳೂರು ಜನರೇಕೆ ಇವರಿಗೆ ಕಿರುಕಳ ನೀಡಬೇಕುಎಂದು ಮಿಲಿಯನ್ ಡಾಲರ್ ಪ್ರಶ್ನೆ ಮನಸಲ್ಲೇ ಕೇಳುತ್ತಿರಬೇಕಾದರೆ ಪೂಜಾಳ ಫೋನು ಬಂತು. ಟ್ರೈನ್ಗೆಲ್ಲೂಟಿಕೆಟ್ ಸಿಕ್ತಿಲ್ಲ. ವಿಮಾನ ಟಿಕೆಟ್ ಆದರು ಬುಕ್ ಮಾಡ್ತಿಯ ಎಂದು ಕೇಳಿದಳು. ಅಯ್ಯೋ ಹುಚ್ಚಿ ನಿನಗೇನೂ ಬಂತು ರೋಗ, ಏನೂ ಆಗುವುದಿಲ್ಲ ಇದೆಲ್ಲ ಗಾಳಿ ಸುದ್ದಿ ಎಂದು ಸಮಾದಾನ ಪಡಿಸತೊಡಗಿದೆ. ಇದು ಗಾಳಿ ಸುದ್ದಿ ಆಗಿದ್ದರೆ ಇಷ್ಟೊಂದು ಜನ ಉದ್ಯೋಗಬಿಟ್ಟು ಹಸಿ ಹೊಟ್ಟೆಯಲ್ಲೇ ಊರಿಗೆ ಹೋಗುತ್ತಿದ್ದರೆ ಎಂದಳು. ಹೇಳಲು ನನ್ನಲ್ಲಿ ಉತ್ತರವಿರಲಿಲ್ಲ. ಏನೇ ಆದರು ನಾನಿದ್ದೇನೆಎಂದು ಉತ್ತರಕುಮಾರನಂತೆ ಸಮದಾನಿಸಿದೆ. ಪೂಜಾಗೂ ನನಗೂ ಏಳು ವರ್ಷದ ಪರಿಚಯ. ನಾನು ಎಂಜಿನೀಯರಿಂಗು ಓದಲು ಬೆಂಗಳೂರಿಗೆ ಬಂದಲ್ಲಿಂದಶುರುವಾದ ಸ್ನೇಹ ಇದು. ಹಳ್ಳಿಯಿಂದ ಬಂದ ನನಗೆ ನಗರದ ಅಗಾದತೆಯಲ್ಲಿ ದೈರ್ಯ ತುಂಬಿದವಳು,ಇಂಗ್ಲಿಷ್ ಬಾರದಿದ್ದ ನನ್ನನ್ನು ತಿದ್ದಿ ಆತ್ಮವಿಶ್ವಾಸ ತುಂಬಿದವಳು ನಗರದ ಏಕಾಂತದ ಬದುಕಿಗೆಜತೆಯಾದವಳು, ಇಂದು ಹೆದರಿದ್ದಳು. ಯಾವುದೇ ಕ್ಷಣಏನುಬೇಕಾದರೂ ನಡೆಯಬಹುದು ಎನ್ನುತಿದ್ದಳು.ಅತ್ತ ಬಾಸ್ ರಜೆ ನೀಡುತ್ತಿಲ್ಲ ಇತ್ತ ಅಪ್ಪನ ಫೋನುಮೇಲಿಂದ ಮೇಲೆ ಬರುತ್ತಿದೆ ಏನಾದರು ಮಾಡು ಎನ್ನುವಾಗ ವಿಶೇಷ ಟ್ರೈನ್ನಲ್ಲಿ ಯಾರಿಗೋ ಹೇಳಿ ಟಿಕೆಟ್ ಬುಕ್ಕು ಮಾಡಿಸಿದೆ. ಆಫೀಸ್ ನಿಂದ ಬೇಗ ಹೊರಟು ಪೂಜಾಳ ಪಿಜಿ ತಲುಪುತ್ತಿದ್ದಂತೆ ನಾಲ್ಕು ಬ್ಯಾಗುಗಳೊಂದಿಗೆ ತಯಾರಾಗಿದ್ದಳು. ಟಾಕ್ಸಿ ಬರಹೇಳಿ ಲಗೇಜು ತುಂಬಿ ರೈಲ್ವೆ ನಿಲ್ದಾಣತಲುಪುವುದರವೊಳಗೆ ಜನಗಳಿಂದ ಪುತ್ತೂರು ಜಾತ್ರೆಯಂತಗಿತ್ತು. ಅಂತೂಇಂತೂ ರೈಲು ಹತ್ತಿಸಿ ಹೊರಬರುವುದರಲ್ಲಿ “ ಕನ್ನಡಮಾತನಾಡದ, ಹೊರ ರಾಜ್ಯದವರನ್ನು ಹೊರದಬ್ಬಲು ಇದೆ ಸರಿಯಾದ ಸಮಯ “ ಎಂಬ SMS ಮೊಬೈಲ್ ಒಳಗೆ ಬಂದು ಕೂತಿತ್ತು. ಪಕ್ಕದಗೋಡೆಯ ಮೇಲೆ” I AM INDIAN FIRST ……. ” ಎಂಬ ಬಿತ್ತಿ ಪತ್ರ ಮೌನವಾಗಿನಿಂತಿತ್ತು.]]>

‍ಲೇಖಕರು G

August 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. D.RAVI VARMA

    ಇದು ಒಂದು ವ್ಯವಸ್ತಿತ ಪಿತೂರಿ …ಎಲ್ಲಿನ್ದೊಲೋ ಬಂದು ಬದುಕು ಕಟ್ಟಿಕೊಳ್ಳುವ ಈ ಜನರನ್ನು ಒಕ್ಕಲೆಬ್ಬಿಸುವ ಕುತಂತ್ರ ಅಸ್ತೆ… ಇವರಿಗೆ ಧೈರ್ಯ ಕೊಡುವವರು ಯಾರು ……

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: