ಏನಾದರೂ ಮಾಡುತಿರು ಅರವಿಂದ, ನೀ ಸುಮ್ಮನಿರಬೇಡ..

theatre_wideweb__470x2842

ಅರವಿಂದ ನಾವಡ ‘ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ’ ಎನ್ನುವ ಗುಂಪಿಗೆ ಸೇರಿದವರು ವಿಜಯ ಕರ್ನಾಟಕ ಮೈಸೂರು ಬ್ಯೂರೋ ಮುಖ್ಯಸ್ಥರಾದ ನಾವಡ ಸಾಹಿತ್ಯದಲ್ಲಿ ಪಳಗಿದ ಕೈ. ಕನ್ನಡ ಸಾಹಿತ್ಯ ಸಮ್ಮೇಳನದ ಇವರ ವರದಿಗಳು ಸದಾ ಕಾಲ ನೆನಪಿನಲ್ಲಿಡುವನ್ತಹದ್ದು. ಸದಾ ಗೆಳೆಯರ ಗುಂಪು ಕಟ್ಟಿಕೊಂಡು ಕೂಡುವ, ಏನಾದರೊಂದು ಹೊಸ ಆಲೋಚನೆಗೆ ಚಾಲನೆ ನೀಡುವ ನಾವಡರು ಈಗ ಮಲೆನಾಡ ತಪ್ಪಲಿನತ್ತ ಹೆಜ್ಜೆ ಹಾಕಿದ್ದಾರೆ.

ಕವಿ ಕುವೆಂಪು ಅವರ ಕುಪ್ಪಳ್ಳಿಯಲ್ಲಿ ಒಂದಿಷ್ಟು ದಿನ, ಒಂದಷ್ಟು ಜನ ಹಾಗೂ ಒಂದಷ್ಟು ಸಿನೆಮಾ ಎನ್ನುವ ಯೋಚನೆ ಹೊತ್ತೇ ಹೊರಟಿದ್ದಾರೆ.

ಕಾವಾದಿಂದ ಪ್ರವೀಣ್ ಸೇರಿ ಐದಾರು ಜನ, ಮಂಗಳೂರು ಸಂಯುಕ್ತ ಕರ್ನಾಟಕದಿಂದ ರಾಜೇಶ್, ಬೆಂಗಳೂರಿನಿಂದ ಗ್ರೇಟ್ ಸ್ಟಾರ್ ಗಳಾದ ಚೇತನಾ, ಟೀನಾ ಇವರೆಲ್ಲಾ ಬರುತ್ತಾರೆ. ಜೊತೆಗೆ ನಮ್ಮ ಟ್ರೆಕ್ಕಿಂಗ್ ಗುಂಪೂ ಇರುತ್ತದೆ ಎಂದಿದ್ದಾರೆ. ಒಳ್ಳೆ ಹುಚ್ಚು ಎಂದರೆ ಇದೇ ಇರಬೇಕು.

ಇವರ ಫಿಲ್ಮೀ ಸಾಹಸಕ್ಕೆ ಜೋತೆಯಾಗಬೇಕಾದರೆ ಅರವಿಂದ ನಾವಡರ ಸಂಪರ್ಕ- 9343381802

[email protected] ಇನ್ನಷ್ಟು ವಿವರಗಳಿಗೆ ಭೇಟಿ ಕೊಡಿ- ಚೆಂಡೆಮದ್ದಳೆ

film_20reel_202

ಸಹ್ಯಾದ್ರಿ ತಪ್ಪಲಲ್ಲಿ ನಮ್ಮ ಚಿತ್ರೋತ್ಸವ

ನಾವು ನೋಡುವ ದಿನ ನಿಗದಿಯಾಗಿದೆ. ಜತೆಗೆ ಸ್ಥಳವೂ ಸಹ. ಇನ್ನು ಉಳಿದಿರುವುದು ನೀವು ಹೊರಡಲು ನಿರ್ಧರಿಸಬೇಕಷ್ಟೇ.

ಕಳೆದ ನನ್ನ ಬರಹದಲ್ಲಿ ತಿಳಿಸಿದಂತೆಯೇ ನಮ್ಮ ಫಿಲ್ಮ್ ಫೆಸ್ಟಿವಲ್ ಜ. ೩ ಮತ್ತು ೪ ರಂದು ನಿಗದಿಯಾಗಿದೆ. ಸ್ಥಳ ಎಲ್ಲರಿಗೂ ಇಷ್ಟವಾಗುವ ಕುಪ್ಪಳ್ಳಿ.
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ಕವಿಶೈಲ ರಾಷ್ಟ್ರಕವಿ ಕುವೆಂಪು ಹುಟ್ಟಿದ ಸ್ಥಳ. ಅಲ್ಲಿರುವ ಪ್ರಕೃತಿ ಅನನ್ಯ ; ಅದ್ಭುತ. ಕುವೆಂಪು ನಡೆದಾಡಿದ ಪರಿಸರ. ಅಲ್ಲಿ ಕುವೆಂಪು ಟ್ರಸ್ಟ್ ಕಟ್ಟಿದ ಹೇಮಾಂಗಣವಿದೆ. ಅಲ್ಲಿ ನಮ್ಮ ಚಿತ್ರೋತ್ಸವ ನಡೆಸಬೇಕೆಂದಿದ್ದೇವೆ.

ಮೂವತ್ತರಿಂದ ನಲವತ್ತು ಮಂದಿ ಸೇರಿಕೊಳ್ಳೋಣ ಎಂದಿದ್ದೇವೆ. ಪುಟ್ಟದಾದ ಚಿತ್ರೋತ್ಸವವಿದು.

ಕನ್ನಡ ಒಳಗೊಂಡಂತೆ ಸುಮಾರು ಎಂಟು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಬಹಳ ವಿಭಿನ್ನವಾದ ಮತ್ತು ಹಿಡಿಸುವಂಥ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಬರೀ ಚಿತ್ರ ನೋಡುವುದಲ್ಲ. ಅದರ ಬಗ್ಗೆ ಚರ್ಚೆ ಇರುತ್ತದೆ. ಅಂದರೆ ಇಲ್ಲಿ ಯಾರೋ ಒಬ್ಬರು ನಿಂತು ಚರ್ಚೆಯನ್ನು ತಮ್ಮ ಕಡೆಗೆ ಬೇಕಾದ ಹಾಗೆ ಅಥವಾ ತಮಗೆ ತೋಚಿದ ಕಡೆಗೆ ಸಾಗುವಂತೆ ಮಾಡುವ ಜಾದೂಗಾರರಿರುವುದಿಲ್ಲ. ನಮ್ಮ ಚಿತ್ರೋತ್ಸವ “ಚಿತ್ರ ನೋಡುವ ಬಗೆಯನ್ನೇ, ಅರ್ಥ ಮಾಡಿಕೊಳ್ಳುವ ನೆಲೆಯನ್ನೇ’ ಕಂಡುಕೊಳ್ಳುವುದಕ್ಕಾಗಿ.

ನಮಗೆ ಚಿತ್ರ ಹೊಸ ಮಾಧ್ಯಮ. ಅದನ್ನು ಅರ್ಥ ಮಾಡಿಕೊಳ್ಳುವ ನೆಲೆ ಬಹಳ ಪರಿಚಿತವಿಲ್ಲ. ಅದರಲ್ಲೂ ಸಂಕೇತಗಳು, ಗೂಢಾರ್ಥಗಳು ಅಥವಾ ಹಲವು ನೆಲೆಗಳಲ್ಲಿ ಅರ್ಥೈಸಬಹುದಾದ ಸಾಧ್ಯತೆ ಇರುವ, ಚಿತ್ರದ ಕಥೆ ನೋಡಿದಂತೆ ಬೆಳೆಯುವ ಮಾದರಿ ತಿಳಿದುಕೊಳ್ಳಬೇಕಿದೆ. ಅಂಥದೊಂದು ಪ್ರಯತ್ನ ಈ ಚಿತ್ರೋತ್ಸವ.

ಇಲ್ಲಿ ಒಂದೆರಡು ದಿಗ್ದರ್ಶಕರನ್ನು ಕರೆಸಲು ಪ್ರಯತ್ನಿಸಲಾಗುತ್ತಿದೆ. ಅದೂ ಅಷ್ಟೇ. ಅವರೂ ನಮ್ಮೊಂದಿಗೆ ನಾವು ತೋರಿಸುವ ಚಿತ್ರಗಳನ್ನು ನೋಡಿ ಅವರು ಅರ್ಥ ಮಾಡಿಕೊಂಡ ಬಗೆಯನ್ನು ಹೇಳಬೇಕು. ಅದಕ್ಕೆ ನಮಗೆ ಅರ್ಥವಾಗಿದ್ದನ್ನು ಹೇಳುತ್ತೇವೆ. ಆಗ ಪರಸ್ಪರ ಕೊಡು-ಕೊಳ್ಳುವಿಕೆ ಮೂಲಕ ನಮಗೆ ಚಿತ್ರ ಅರ್ಥವಾಗಬಹುದು, ನಾವೂ ಬೆಳೆಯಬಹುದು. ಇದು ನಮ್ಮ ಅಂದಾಜು. ನಾವು ಕರೆಯುವ ಅತಿಥಿಗಳಲ್ಲೂ ಅದನ್ನೇ ಬಿನ್ನವಿಸಿಕೊಳ್ಳುತ್ತಿದ್ದೇವೆ.

ಹೀಗೆ ಒಂದು ಚಿತ್ರೋತ್ಸವ ಏರ್ಪಡಿಸಬೇಕೆಂಬುದು ಕೊಡಚಾದ್ರಿಯಲ್ಲಿ ಕಂಡ ಕನಸು. ಈಗ ನೆರವೇರುತ್ತಿದೆ. ವಾದಿರಾಜ್ ಮತ್ತಿತರ ಗೆಳೆಯರು ಇದಕ್ಕೆ ಸಹಕಾರ ನೀಡಿದ್ದಾರೆ. ಬನ್ನಿ, ಎಲ್ಲರೂ ಸೇರಿ ಒಂದಿಷ್ಟು ಚಿತ್ರಗಳನ್ನು ನೋಡೋಣ, ಅರಿಯೋಣ, ನಲಿಯೋಣ.

ಅಂದ ಹಾಗೆ ಚಿತ್ರಗಳ ಮೊದಲ ಪಟ್ಟಿ ಸಿದ್ಧವಾಗಿದೆ. ಎರಡನೇ ಪಟ್ಟಿ ಸಿದ್ಧತೆಗೆ ಚಾಲನೆ ನೀಡಲಾಗಿದೆ. ಸದ್ಯವೇ ಅಂತಿಮಪಟ್ಟಿ ಸಿದ್ಧಗೊಳ್ಳಬಹುದು. ನೀವು ನೋಡಿದ ಒಳ್ಳೆ ಚಿತ್ರಗಳಿದ್ದರೆ ಹೇಳಿ.
-ನಾವಡ‍ಲೇಖಕರು avadhi

November 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. Tina

  Eನೂಊಊ? ಗ್ರೇಟ್ ಸ್ಟಾರಾ? ಯೀಈಈಈಶ್.
  ಯಾರು ಹಾಗೆ ಹೇಳುತ್ತಿರೋರು? ನಾವಡರಾ? ಅವಧೀನಾ?
  ಮೊದಲು ಹೇಳಿ, ಆಮೇಲೆ ಮುಂದಿನ ಮಾತು!!
  :p

  ಪ್ರತಿಕ್ರಿಯೆ
 2. avadhi

  ನಾವಲ್ಲಪ್ಪಾ….. ನಾವಡರೆ ಅಂಗೆಲ್ಲಾ ಹೇಳೋದು… ಚ್ಯಾಟರ್ ಬಾಕ್ಸ್ ಬಗ್ಗೆ ಹೇಳಿ ನಾವು ಬದ್ಕೋದುಂಟಾ…?

  ಪ್ರತಿಕ್ರಿಯೆ
 3. chetana chaitanya

  ಟೀನ್,
  ಸುಖಾ ಸುಮ್ನೆ ಸೆಲೆಬ್ರಿಟಿಗಳಾಗೋ ಅದೃಷ್ಟ, ಗ್ರೇಟ್ ಸ್ಟಾರ್ ಗಳಾಗೋ ಭಾಗ್ಯ ನಮ್ಮಿಬ್ರನ್ನ ಹುಡುಕ್ಕೊಂಡ್ ಬರತ್ತಲ್ಲೇ!?
  ನಂದೂ ಇದೇ ಪ್ರಶ್ನೆ… ಈ ಬಿರುದು ಬಾವಲಿ ಕೊಟ್ಟಿದ್ದು ಅವಧೀನಾ? ನಾವಡರಾ?

  ಪ್ರತಿಕ್ರಿಯೆ
 4. ಅರವಿಂದ ನಾವಡ

  ನಮಸ್ಕಾರ,
  ಅವಧಿಗೆ, ಟೀನಾರಿಗೆ, ಚೇತನಾರಿಗೆ.
  ನಾನಂತೂ ಹಂಗೆ ಬಿರುದು ಬಾವಲಿ ಕೊಟ್ಟಿಲ್ಲ. ನಂಗೆ ಅದು ಗೊತ್ತೂ ಇಲ್ಲ. ಬೇಕಾದ್ರೆ ನೀವು ಹೇಳೋ ದೇವರ ಮೇಲೆ ಆಣೆ ಮಾಡ್ತೀನಿ..ಹ್ಹ…ಹ್ಹ.. ಅಂದ ಹಾಗೆ ಚಿಕ್ಕ ಅನುಮಾನ. ನೀವು ಗರೇಟ್ ಅಲ್ವಾ?

  ಪ್ರತಿಕ್ರಿಯೆ
 5. Tina

  aವಧಿ ನಾನ್ ಹೇಳಿಲ್ಲಾಂತದೆ, ನಾವಡ ನಾನ್ ಹೇಳಿಲ್ಲಾಂತಾರೆ!!
  ಹಂಗಾದ್ರೆ ಇದನ್ನ ಟೈಪಿಸಿದವರ ಕರಾಮತ್ತೇನೇ ಇದು!!
  ನಾವಡಾ ಸಾಬ್, ನಾನಂತೂ ಗರೇಟ್ ಅಲ್ವೇ ಅಲ್ಲ!!
  ಚೇತನಾನೂ ನಾನೂ ಒಂದು ನಿಶ್ಚಯ ಮಾಡ್ಕೊಂಡಿದೀವಿ,
  ಶಿಬಿರಕ್ಕೆ ಬರೋವಾಗ ಇಬ್ಬರೂ ಹಣೆಗೆ ಒಂದೊಂದು ದೊಡ್ಡ ಸ್ಟಾರ್ ಅಂಟಿಸ್ಕೊಂಡು ಬರ್ತೀವಿ.
  ಗುರುತಿಸೋಕೆ ಸುಲಭವಾಗಲಿ ಅಂತ!!

  ಪ್ರತಿಕ್ರಿಯೆ
 6. 'ಶಮ', ನಂದಿಬೆಟ್ಟ

  ಮಾನ್ಯರೇ,
  ನಾನು ಶಮ ಅಂತ. ಒಂದಷ್ಟು ದಿನ ಪತ್ರಿಕೆಗಳಲ್ಲಿ ಕೆಲಸ ಮಾಡಿ ಗೊತ್ತು. ಹೆಚ್ಚು ಬರೆದವಳಲ್ಲ.. ಹೆಚ್ಚು ಓದಿದವಳಲ್ಲ. ಸಾಹಿತ್ಯ ಸಂಗೀತ, ಚಿತ್ರ ಎಲ್ಲ ಇಷ್ಟ. ನಿಮ್ಮ ಚಿತ್ರೋತ್ಸವದ ಬಗ್ಗೆ ಆಕಸ್ಮಿಕವಾಗಿ ಓದಿದ್ದು ಖುಷಿಯಾಯಿತು. ನಮ್ಮಂತ ಆಸಕ್ತರಿಗೆ ಪ್ರವೇಶ ಇದೆಯಾ ? ನನ್ನ ಮನೆ ಕವಿಶೈಲದಿಂದ ಮೂರೇ ಕಿಲೋಮೀಟರ್ ದೂರ. ವಸತಿ ಮುಂತಾದ ಸಮಸ್ಯೆಗಳು ಇಲ್ಲ. ಆದ್ದರಿಂದ ಕೇಳಿದೆ. ಈ ಬೆಂಗಳೂರಿನ ಕೆಲಸದ ಒತ್ತಡಗಳ ನಡುವೆ ಒಂದಷ್ಟು ಸಾಹಿತ್ಯಾಸಕ್ತ, ಕಲಾಸಕ್ತ ಮನಸುಗಳ ಜತೆ ನಾನು ಬೆರೆಯಬೇಕಿದೆ. ಅವಕಾಶ ಇದ್ದರೆ ದಯವಿಟ್ಟು ತಿಳಿಸಿ. ಖಂಡಿತ ಭಾಗವಹಿಸುತ್ತೇನೆ.ನಿಮ್ಮ ಈ ಮೇಲ್ ವಿಳಾಸ ತಿಳಿಸಿದಲ್ಲಿ ಸಂಪರ್ಕಿಸುವೆ.
  – ‘ಶಮ’, ನಂದಿಬೆಟ್ಟ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: