ಐಟಿ ಮತ್ತು ಅರಸು

ದೇವರಾಜ ಅರಸು ಮತ್ತು ಎಲೆಕ್ಟ್ರಾನಿಕ್ ಸಿಟಿ

– ಲಕ್ಷ್ಮಣ್ ಹೂಗಾರ್

ದೇವರಾಜ ಅರಸು ಅಂದ್ರೆ ಇಂದಿಗೂ ಬರೀ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತ್ತು ಅಲೆಮಾರಿಗಳಿಗೆ ಸಾಮಾಜಿಕ ನ್ಯಾಯ ನೀಡಿದ ಹರಿಕಾರ ಅಂತಲೇ ಭಾವನೆ. ಹಾಗೇ, ದೇಶಕ್ಕೆ ಮಾದರಿ ಆಗುವಂಥ ಉಳುವವನೇ ಭೂಮಿಗೊಡೆಯ ಕ್ರಾಂತಿಕಾರಿ ಕಾನೂನು ಜಾರಿಗೊಳಿಸಿದವರು. ಆದ್ರೆ, ಬೆಂಗಳೂರು ಇಡೀ ವಿಶ್ವದಲ್ಲೇ ಐಟಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸೋದಕ್ಕೆ ಕಾರಣರಾದವರೂ ದಿವಂಗತ ಅರಸು ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. 1970ರಲ್ಲಿ ಎಲೆಕ್ಟ್ರಾನಿಕ್ ಸಿಟಿ ಸ್ಥಾಪನೆಗೆ ಹಸಿರು ನಿಶಾನೆ ನೀಡಿದ್ದು ಆಗ ರಾಜ್ಯದ ಚುಕ್ಕಾಣಿ ಹಿಡಿದಿದ್ದ ದೇವಾರ ಅರಸು. ವಿಶ್ವದ ನಕಾಶೆಯಲ್ಲಿ ಸ್ಥಾನ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ದೇಶ-ವಿದೇಶಗಳ ಸಾವಿರಾರು ಐಟಿ-ಬಿಟಿ ಕಂಪನಿಗಳು ಲಕ್ಷಾಂತರ ಕೋಟಿ ವ್ಯವಹಾರ ನಡೆಸುತ್ತಿವೆ. ಜೊತೆಗೆ ಇದೇ ಕಂಪನಿಗಳಲ್ಲಿ ಎಲ್ಲ ಜಾತಿ, ಕೋಮಿನ ಲಕ್ಷಾಂತರ ಯುವಕರಿಗೆ ಉದ್ಯೋಗ ಅವಕಾಶ ಸಿಕ್ಕಿದೆ. ಹೀಗಾಗಿ ಅರಸು ಬರೀ ಅಹಿಂದ ವರ್ಗಕ್ಕೆ ಮಾತ್ರ ಸೀಮಿತ ಆದ ನಾಯಕ ಅಲ್ಲ. ಯಾವುದೇ ಜಾತಿಯ ವಿರೋಧಿಯೂ ಆಗಿರಲಿಲ್ಲ. ಅಂದ್ರೆ, ಅಲಕ್ಷಿತ ಸಮುದಾಯಗಳಿಗೆ ಹುಡುಕಿ ಪ್ರಾತಿನಿಧ್ಯ ನೀಡಿದ ನಾಯಕ. ಎಲ್ಲರಿಗೂ ಸಾಮಾಜಿ ನ್ಯಾಯಕ ಸಿಗಬೇಕು ಅನ್ನೋದವರ ಗುರಿ ಆಗಿತ್ತು. ಮೌನ ಸಾಮಾಜಿಕ ಕ್ರಾಂತಿಗೆ ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನದ ಶುಭಾಶಯಗಳು.]]>

‍ಲೇಖಕರು G

August 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: