ಐ ಯ್ಯಾಮ್ ನವೋಮಿ.. ಐ ಯ್ಯಾಮ್ ಜಸ್ಟ್ 30

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
 
 
 
-ನವೋಮಿ
 
ಕನ್ನಡಿಯಲ್ಲೊಮ್ಮೆ ನೋಡಿಕೊಂಡೆ.
ಕನ್ನಡಿ ಹೇಳಿತು.
ನಿನ್ನನ್ನು ನೀನು ಕಣ್ಣ ತುಂಬ ನೋಡಿಕೊಂಡು ನವೋಮಿ ಎಷ್ಟು ದಿನವಾಗಿ ಹೋಗಿತ್ತು.ನಾನು ಇಷ್ಟುದ್ದಕ್ಕೆ ನಿನ್ನ ಬೆಡ್್ರೂಮಿನಲ್ಲಿ,ಆಲ್ಮೇರಾದಲ್ಲಿ ನಿಂತಿರುವುದನ್ನು ನೀನು ಮರೆತುಹೋಗಿದ್ದೆಯಲ್ಲಾ. 

ನಿಜಕ್ಕೂ ನೆನಪಾಗ್ತಾ ಇಲ್ಲ.

ನಿಂಗೇನೋ ಪುರುಸೊತ್ತಾಯ್ತು. ಆದ್ರೆ ನನಗೆ ಖುಷಿಯಾಗುವಂತೆ ನೀನು ಕಾಣಿಸ್ತಿಲ್ವಲ್ಲ ನವೋಮಿ
ಕನ್ನಡಿ ನಕ್ಕಿತು.
ಏನು ಹೇಳಿದ್ದು?

ಸ್ವಲ್ಪ ನೆನಪಿಸ್ಕೋ.
ಹು..ಹು…ನೆನಪಾಗ್ತಾ ಇಲ್ವಲ್ಲ.
ನೆನಪು ಮಾಡ್ಕೋ ಪ್ಲೀಜ್.

ಅದೆಲ್ಲ ಹಳೆ ಪುರಾಣ. ಹೇ…ನವೋಮಿ ಇಂದು ಬೆಳಿಗ್ಗೆ ನಿನ್ನ ಗಂಡ ಹೇಳಿದ್ದ ಮಾತು ನೆನಪಾಯ್ತಾ?
ನನಗೇನು ನಿನ್ನನ್ನು ನೋಡೋದೇ ಕೆಲಸನಾ. ನಾನೀಗ ಸೆಟ್ಲ್ ಆಗಿದ್ದೀನಿ.ನನಗೆ ನನ್ನ ಗಂಡ,ಅತ್ತೆ,ಮಕ್ಕಳು ಇವ್ರೇ ಮುಖ್ಯ ನಂದೇನಿದೆ ಹೇಳ ಅವರೆಲ್ಲಾ ಖುಷಿಯಾಗಿದ್ರೆ ನಾನು ಖುಷಿಯಾಗಿದ್ದಂಗೆ

ಅರೆರೆ….ಇದೇನಿದು. ನಾನ್ಯಾರ ಹತ್ತಿರ ಮಾತನಾಡ್ತಾ ಇದ್ದೀನಿ. ಜೀವ ಇಲ್ಲದ ನಿನ್ನ ಹತ್ತಿರಾನಾ…ಹೋ…ಹೋ….ಬಿದ್ದು ಬಿದ್ದು ನಕ್ಕೆ.
ನಗಬೇಡ….ನವೋಮಿ…ಒಂದು ಮಾತು ಹೇಳ್ಲಾ. ನಿಜಹೇಳಬೇಕೆಂದರೆ ನಮ್ಮಿಬ್ಬರಿಗೂ ಜೀವ ಇಲ್ಲ.
ಅಯ್ಯೋ …ನಿನ್ನ ಹತ್ತಿರ ಎಂಥಾ ಮಾತು.
ನಾನು ಒಳಗೆ ಬಂದೆ. ಅಂದ ಹಾಗೆ ಅದೆನೋ ಹೇಳ್ತಲ್ಲ. ಇಂದು ಬೆಳಿಗ್ಗೆ ಅವರೇನೋ ಹೇಳಿದ್ರಂತೆ.
ಏನು ಹೇಳಿದ್ದು…ನನಗೆ ಮರ್ತೆ ಹೋಯ್ತಲ್ಲ.
ಅಯ್ಯೋ..ಈ ಕನ್ನಡಿ-ಗಿನ್ನಡಿಯನ್ನೆಲ್ಲಾ ನಾನು ಸೀರಿಯಸ್ ಆಗಿ ತಗೊಳ್ಲೋಕೆ ಶುರುಮಾಡಿದ್ದೀನಲ್ಲಾ..
ನನಗೆಲ್ಲೋ ಹುಚ್ಚು. ನನ್ನಷ್ಟು ಸುಖವಾಗಿರೋರು ಯಾರಾದ್ರೂ ಇದ್ದಾರಾ.ಊಹೂಂ…ಇನ್ನೇನು..ಊರಹಬ್ಬಕ್ಕೆ ಬೇರೆ ಹೋಗ್ಬೇಕಲ್ಲ ಬೇಗನೆ ರೆಡಿಯಾಗ್ಬೇಕು. ಮತ್ತೊಂದು ರೂಮಿಗೆ ಬಂದೆ.
ಆದರೂ… ಕನ್ನಡಿ ಅದ್ಯಾಕೆ ಹಾಗೆ ಹೇಳಿರಬಹುದು…

 

ನಾನು ಅಮ್ಮನ ಥರ ಕಾಣುತ್ತೇನೆಂದು ಹೇಳುವ ಅವರ ಉದ್ದೇಶ ಏನಿರಬಹುದು.ನಾನು ಏನೆಲ್ಲಾ ಮಾಡ್ದೆ. ಒಂಚೂರು ಕಿಮ್ಮತ್ತಿಲ್ಲ.ಸ್ವಾರ್ಥಿ.. ಮನಸ್ಸಿನಲ್ಲೇ ಬೈಯ್ಕೊಂಡೆ. ಬದಲಾಗಬೇಕು.ಬದಲಾಗ್ತೀನಿ.ನೋಡ್ತಾ ಇರಿ.ಹೆಂಗೆ ಸ್ಲಿಮ್ ಎಂಡ್ ಟ್ರಿಮ್ ಆಗ್ತಿನಿ.
ಕನ್ನಡಿ ನೀನು ಹೇಳೋದು ಸತ್ಯ.ನಿನ್ನಂತೆ ನಾನು ನಿರ್ಜಿವವಾಗಿದ್ದೇನೆ . ಈಗೇನು ಕಾಲ ಮಿಂಚಿಲ್ಲ. ಐ ಎಮ್ ಜಸ್ಟ್ 30.
ನನ್ನ ನೋಡಿ ಕನ್ನಡಿಯೂ ನಕ್ಕಿತು..
ನಾನು ನಾಳೆಯೇ ಜಿಮ್ ಸೇರ್ತಿನಿ.

ಯಾಕೆ?

ವ್ಯಾಯಾಮ ಮಾಡೋಕೆ
ಬಾ ಹೋಗೋಣ.
ಜಿಮ್ ತುಂಬೆಲ್ಲ ಕಟ್ಟು ಮಸ್ತಾದ ಆಳುಗಳು.
ನೋಡಿ ಹೇಗಿಟ್ಕೊಂಡಿದ್ದಾರೆ..ತಮ್ಮ ಬಾಡಿನ . ನಾನು ಇದ್ದೀನಿ ನೋಡಿ ಡನ್್ಲಪ್ ಟಾಯರ್ ಥರ.
ಅವರು ನನ್ನನ್ನೊಮ್ಮೆ ನೋಡಿದರು.
ಜಿಮ್ ಬೇಡ..ಬೆಳಿಗ್ಗೆದ್ದು ವಾಕಿಂಗ್ ಮಾಡು.
ನನಗರ್ಥವಾಯಿತು.
ಅಲ್ಲಿ ಲೇಡಿಸ್ ಕೂಡ ಬರ್ತಿದ್ದಾರಲ್ಲ.
ಆದರೂ ಬೇಡ..
ಸರಿ.

ನಾಳೆಯಿಂದಲೇ ವಾಕಿಂಗ್ ಹೋಗ್ತೀನಿ. ಲಾಟರಿ ಕ್ಲಬ್ ಹಿಂದೆ ಒಳ್ಳೇ ಜಾಗ ಇದೆ. ಫ್ರೆಶ್ ಇರುತ್ತೆ. ಒಳ್ಳೇ ಜನ ಕೂಡ ಬರ್ತಾರೆ.

ಅವಶ್ಯಕತೆಯಿಲ್ಲ.
ನಿಂಗೆ ಬೇಕಾಗಿರೋ ಇಕ್ವಿಪ್್ಮೆಂಟ್ಸ್ ಮನೆಯಲ್ಲೇ ತಂದ್ಹಾಕ್ತಿನಿ. ಅದೇನ್ಮಾಡ್ತೀಯೋ ಇಲ್ಲೇ ಮಾಡು..
ಆಯ್ತು.
ವ್ಯಾಯಾಮಕ್ಕೆ ಬೇಕಾದಂಥ ಇಕ್ವಿಪ್್ಮೆಂಟ್ಸ್್ ಮಾರನೆ ದಿನ ನನ್ನ ರೂಮಲ್ಲಿ ಹಾಜರಾಗಿತ್ತು.
ಎಷ್ಟು ಒಳ್ಳೆಯವ್ರು. ನಾನೇ ಸುಮ್ಮನೆ ಸಂಶಯ ಪಡುತ್ತೇನೆ.ನನಗೆ ಬೇಕಾದ್ದನ್ನು ತಂದು ಹಾಕುತ್ತಾರೆ .ಅವರು ಒಂದು ಮಾತು ಹೇಳಿದ್ದಕ್ಕೆ ನನಗೆ ಕೋಪ. ಈ ಕನ್ನಡಿ ಬೇರೆ. ನಮ್ಮ ಮಧ್ಯೆ ತಂದುಹಾಕುತ್ತೆ. ಆದರೂ ಏನಕ್ಕೂ ಇರಲಿ. ಸ್ವಲ್ಪ ಫಿಟ್್ನೆಸ್್ ಕಡೆ ಗಮನ ಕೊಡೋಣ.
ಗಂಡ,ಅತ್ತೆ ಮಕ್ಕಳ ದಿನಚರಿಯಲ್ಲಿ ಬಾಡಿ ಫಿಟ್್ನೆಸ್ ಕೂಡ ಸೇರಿತು
ಬೆಳಿಗ್ಗೆ ೪ ಘಂಟೆಗೆ ಎಚ್ಚರ. ಒಂದೇ ಸಮ ವ್ಯಾಯಾಮ. ಮ್ಯಾಗಜಿನ್ಸ್ ತಿರುವಿ ಹಾಕಿದೆ. ಆರೋಗ್ಯ ಭಾಗ್ಯ, ಕೀಫ್ ಫಿಟ್–ಎಲ್ಲಾ ಓದಿದೆ. ಮಸಾಲದೋಸೆ,ಪೂರಿ ಬೇಡವೇ ಬೇಡ. ಬೀಟ್್ರೂಟ್, ಬಾಳೆ ಹಣ್ಣು ಇಲ್ಲವೇ ಇಲ್ಲ. ಏನಿದ್ರೂ ಮೊಸಂಬಿ, ಬಿಟ್ಟರೆ ಲಿಂಬೆ ಜ್ಯೂಸ್. ಮಕ್ಕಳು ಬಿಟ್ಟಿದ್ದು ವೇಸ್ಟ್ ಆಗುತ್ತೆ ಅಂತ ಇನ್ನು ಮುಂದೆ ತಿನ್ನುವ ಹಾಗಿಲ್ಲ. ಮಗಳ ಬೋರ್ನವಿಟಾ, ಮಗನ ಚಾಕಲೇಟ್, ಅತ್ತೆ ಕೈಯಡುಗೆಯ ಒಬ್ಬಟ್ಟು, ಕಡುಬು ಚಕ್ಕಲಿ ಬೇಡ್ವೆ ಬೇಡ.ಬೇಕರಿ ಐಟಮ್ಸ್್ಗೆ ನೋ. ದಿನಕ್ಕೆ ೭ ರಿಂದ 8 ಬಾಟಲ್ ನೀರು ಕಂಪಲ್ಸರಿ. ಒಣಗಿದ ಚಪಾತಿ ಲೈಟ್ ಟೀ, ಕಾಫಿ……
ಒನ್ ಫೈನ್ ಡೇ-
ಡಯನಾ ಬ್ಯೂಟಿಕ್ಲಿನಿಕ್್ಗೆ ಫೋನು.
ನಾನು ನವೋಮಿ.
ಫೇಶಿಯಲ್, ಫೆಡಿಕ್ಯೂರ್, ಮ್ಯಾನಿಕ್ಯೂರ್…ಎಕ್ಸೆಟ್ರಾ.
ಬ್ಯಾಗ್ ಹಿಡಿದು ಹೊರಟಾಗ ಅತ್ತೆಗೂ ಆಶ್ಚರ್ಯ. ದಿನಗಳು ಕಳೆದವು. ವೇಟ್ ನೋಡ್ಕಂಡೆ. ಏನಿಲ್ಲಾ ಅಂದ್ರೂ 10 ಕೆ. ಜಿ.ನಾದರೂ ಕಡಿಮೆ ಆಗಿದ್ದೀನಿ.
ನಮ್ಮನೇಲಿ ವಿಚಿತ್ರ ಬದಲಾವಣೆ. ನನ್ನನ್ನು ವಿಚಿತ್ರವಾಗಿ ನೋಡುತ್ತಿರುವುದು ನನಗೂ ಖುಷಿ. ನಾನು ಗಮನ ಸೆಳೆಯುವ ಹಾಗೆ ಆಗುತ್ತಿದ್ದೀನಾ..ಇನ್ನೂ ನೋಡ್ತಾ ಇರಿ. ಮೂಗಿನ ಮೇಲೆ ಬೆರಳಿಟ್ಕೋ ಬೇಕು. ಹಂಗಾಗ್ತೀನಿ.
ನನ್ನಮ್ಮನ ಥರ ಕಾಣ್ತೀನೋ ಅಥ್ವಾ ತುಂ ಔರ್ ಮಮ್ಮಿ…ಅನ್ನೋ ಥರ ಕಾಣ್ತೀನೋ  ನೋಡ್ತಾ ಇರಿ.
ಸೀರೆ ತಗೋಬೇಕಾ.
ನಿಂಗ್ಯಾಕೆ ಅವೆಲ್ಲ. ಇಬ್ಬರು ಮಕ್ಕಳಿದ್ದಾರೆ. ನವೋಮಿ.
ಅಯ್ಯೋ ಬೇಡಪ್ಪಾ.
ಮತ್ತೆ ಇನ್ನೇನ್ಬೇಕು
ಚೂಡಿದಾರ್.
ಬೇಕಾದಷ್ಟಿವೆಯಲ್ಲಾ. ರೇಶ್ಮೆ ಸೀರೆ ತಗೋ.
ಅವೆಲ್ಲಾ ಲೂಸು..ಸಾಯನಾರಾದಲ್ಲಿ ಒಳ್ಳೋಳ್ಳೆ ಟೈಟ್ ಫಿಟಿಂಗ್ ಚೂಡಿದಾರ್ಸ್ ಬಂದಿವೆ ಯಂತೆ. ಅವೆ ಬೇಕು.
ಯಾಕೆ…ನಾನೇನು ಮನುಷ್ಯಳಲ್ವಾ. ನಂಗೇನು ಆಸೆ ಇಲ್ವಾ. 24 ಘಂಟೆ ಎಲ್ಲರ ಸೇವೆ ಮಾಡ್ಕೊಂಡಿರೋದೇ ಕೆಲ್ಸಾನಾ. ನಿಮ್ಮೆಲ್ಲರ ಸಲುವಾಗಿ ನನ್ನ ಕರಿಯರ್, ಹಾಬಿಸ್ ಎಲ್ಲಾ ಬಿಟ್ಟೆ. ಇನ್ನೂ ಹೆಂಗಿರ್ಬೇಕು..ಮೈತುಂಬ ಕೋಪ ನಂಗೆ.
ಅಯ್ಯೋಯ್ಯೋ ಇಷ್ಟಕ್ಕೆಲ್ಲಾ ಯಾಕೆ ಸಿಟ್ಟು ನವೋಮಿ. ನಾನೇನು ಕೊಡ್ಸಲ್ಲ ಅಂದ್ನಾ. ಸುಮ್ನೇ ಯಾಕೆ ಜನ ಏನಾದ್ರೂ ಅಂದ್ಕೋತಾರೆ ಅದಕ್ಕೆ ಹೇಳ್ದೆ. ಮನಸ್ಸಿಗೆ ಬೇಜಾರು
 
ನೀನು ನಿನ್ನಮ್ಮನ ಥರ ಕಾಣ್ತಾ ಇದೀಯಾ
ಇದೆ ಅಲ್ವಾ ಅವರು ಹೇಳಿದ್ದು.
ಯಾಕೆ...ನಾನೇನು ಮನುಷ್ಯಳಲ್ವಾ.ನಂಗೇನು ಆಸೆ ಇಲ್ವಾ.24 ಘಂಟೆ ಎಲ್ಲರ ಸೇವೆ ಮಾಡ್ಕೊಂಡಿರೋದೇ ಕೆಲ್ಸಾನಾ.ನಿಮ್ಮೆಲ್ಲರ ಸಲುವಾಗಿ ನನ್ನ ಕರಿಯರ್,ಹಾಬಿಸ್ ಎಲ್ಲಾ ಬಿಟ್ಟೆ.ಇನ್ನೂ ಹೆಂಗಿರ್ಬೇಕು..ಮೈತುಂಬ ಕೋಪ ನಂಗೆ.
ಅಯ್ಯೋಯ್ಯೋ ಇಷ್ಟಕ್ಕೆಲ್ಲಾ ಯಾಕೆ ಸಿಟ್ಟು ನವೋಮಿ. ನಾನೇನು ಕೊಡ್ಸಲ್ಲ ಅಂದ್ನಾ. ಸುಮ್ನೇ ಯಾಕೆ ಜನ ಏನಾದ್ರೂ ಅಂದ್ಕೋತಾರೆ ಅದಕ್ಕೆ ಹೇಳ್ದೆ. ಮನಸ್ಸಿಗೆ ಬೇಜಾರು ಮಾಡ್ಕೋಬೇಡಾ.ನಿಂಗ್ಯಾವುದು ಬೇಕೋ ಅದನ್ನು ನಿನು ತೆಗೆದುಕೋ. ನಿಂಗೆ ಹೆಂಗಿಷ್ಟನೋ ಹಂಗಿರು...ಕೊನೆಯಲ್ಲಿ ವ್ಯಂಗ್ಯವಿತ್ತು.
ಏನಾದ್ರೂ ಅಂದ್ಕೊಳ್ಲಿ. ನಾನಂತೂ ಅವರು ತಮ್ಮ ಸ್ಟೇಟ್್ಮೆಂಟ್ ವಾಪಸು ತಗೊಳ್ಳೊವರೆಗೂ ವಿರಮಿಸಲ್ಲ.
ಬಾಲಾಜಿ ಟೆಲಿಫಿಲ್ಮಸ್್ನ ದ್ರೌಪದಿ ನನ್ನ ಡಯಟ್ ಬಾಡಿ ಸೇರಿತ್ತು.
ಮಾಲ್್ನಲ್ಲಿ ಥರಾವರಿ ಬಟ್ಟೆಗಳು. ನಾನು ಇಂಥ ಬಟ್ಟೆನೇ ನೋಡಿರ್್ಲಿಲ್ವಲ್ಲ. ಆ ಹುಸೇನ್್ ಹೆಂಗ್ಹೇಂಗೋ ಬಟ್ಟೆ ಹೊಲಿದುಕೊಡುತ್ತಿದ್ದ. ನಾನು ಹೇಳಿದ್ದಕ್ಕಿಂತ ಇನ್ನೂ ಸ್ವಲ್ಪ ಲೂಸೇ ಹೊಲಿದು ಕೊಡುತ್ತಿದ್ದ. ಅಯ್ಯೋಯ್ಯೋ ಅಂಥದ್ದನ್ನೆಲ್ಲಾ ನಾನು ಹಾಕ್ಕೊತ್ತಿದ್ನಲ್ಲಾ.
 
ಅನ್ಯಾಯ ನವೋಮಿ. ಅಲ್ಲಿಯೂ ಒಂದು ಫಾಶ್ ಕನ್ನಡಿ ವಟಗುಟ್ಟಿತು.
ಈಗ ನೋಡು ಹೆಂಗೆ ಕಾಣಿಸ್ತಾ ಇದ್ದೀಯಾ.ಸ್ವಲ್ಪ ಹೀಲ್ಸ್ ಹಾಕು. ಇನ್ನೂ ಚೆನ್ನಾಗಿರುತ್ತೆ.
 
ಸರಿ.
 
ಮ್ಯಾಚಿಂಗ್ ಇಯರ್್ರಿಂಗ್, ಬ್ಯಾಂಗಲ್ಸ್ ಚೆನ್ನಾಗಿರು್ತ್ತೆ.
 
ಸರಿ ಇನ್ನೇನು ಚೆನ್ನಾಗಿರುತ್ತೆ ಅಂತ ಒಂದೇ ಸರ್ತಿ ಹೇಳಿ ಬಿಡು.
 
ಏನಿಲ್ಲಾ.ಮತ್ತೆ ಯಾವಾಗಲಾದ್ರೂ ಹೇಳ್ತೀನಿ.
 
ಆಯ್ತು.
 
ಸಾಯೋನಾರಾದಿಂದ ಒಂದು ಬಟ್ಟೆ ಅಂಟಿಸಿಕೊಂಡೇ ಮನೆಗೆ ಬಂದೆ.
 
ಮಕ್ಕಳೆರಡು ಕಣ್ಣು ಕಣ್ಣು ಬಿಟ್ಟು ನೋಡ್ತಾ ಇವೆ.ಅಡಿಯಿಂದ ಮುಡಿಯವರೆಗೂ ದಿಟ್ಟಿಸಿದರು ಅತ್ತೆ.
 
ಹಾದಿ ಬೀದಿಯಲ್ಲಿ ಸುಮಾರು ಕಣ್ಣುಗಳು ನನ್ನ ಕಡೆ ನೆಟ್ಟಿದ್ದು ಸುಳ್ಳಲ್ಲ.
 
ಕನ್ನಡೀಲಿ ಲೆಪ್ಟ್, ರೈಟ್. ತಿರುತಿರುಗಿ ನೋಡಿದೆ. ಇದು ನಾನೇನಾ
 
ನಾಟ್ ಬ್ಯಾಡ್.ನನಗೂ ಸಿಲೆಬ್ರಿಟಿ ಸ್ಟೇಟಸ್ ಬರ್ತಾ ಇದೆ.
 
ಇನ್ನು ಅವರೊಬ್ಬರು ಬಾಕಿ ಇದ್ದಾರೆ. ನೋಡೋಣ
 
ರಾತ್ರಿ ಎಷ್ಟೊತ್ತಾದರೂ ಅವರು ಬರಲಿಲ್ಲ.ಫೋನ್ ಮಾಡ್ದೆ.ವಿಚಾರಿಸಿದೆ .
 
ಬೆಳಿಗ್ಗೆ ಬರ್ತೀನಿ.
 
ಯಾಕೆ.ಎಲ್ಲಿಗೆ ಹೋಗ್ತಿದ್ದೀರಿ.
 
ಊರಿಗೆ.
 
ಬರೋದು
 
ನಿಂಗ್ಯಾಕೆ ಅದೆಲ್ಲ.
 
ಏನೋ ಟೆನ್ಶನ್ ಇರ್ಬೇಕು.
 
ಬೆಳಿಗ್ಗೆದ್ದಾಗ ಮೈಯೆಲ್ಲ ಹಗುರ..ಎಷ್ಟೊಂದು ಖುಷಿಯಾಗ್ತಾ ಇದೆ.
 
ಮೈ ಹಗುರ ಇದ್ರೆ ಅದರ ಸುಖನೇ ಬೇರೆ.ಅವರಿಗೂ ಹೇಳ್ಬೇಕು ಸ್ವಲ್ಪ ಬೊಜ್ಜು ಕರಗಿಸ್ಬೇಕು ಅಂತ. ಸಾಧ್ಯವಾದ್ರೆ ನಾನೇ ದಿನಾ ಎಬ್ಬಿಸಿ ವಾಕಿಂಗ್್ಗೆ ಕರ್ಕೊಂಡು ಹೋಗ್ತೀನಿ.
 
ಮಧ್ಯಾಹ್ನ ೧೨ ಘಂಟೆ ಆದ್ರೂ ಬರಲಿಲ್ಲ.
 
ಮತ್ತೆ ಫೋನ್್ ಮಾಡಿದೆ.
 
ಮಲ್ಲೇಶ್ವರಂಗೆ ಹೋಗ್ತೀನಿ. ಭಾಗ್ಯ ಮಗಳನ್ನು ನೋಡೋಕೆ ಯಾರೋ ಬರ್ತಿದ್ದಾರೆ.
 
ಮತ್ತೆ ನಂಗೆ ಗೊತ್ತೇ ಇಲ್ಲ.ಊರಿಂದ ಯಾವಾಗ ಬಂದ್ರಿ
 
ಅದರ ಬಗ್ಗೆ ನೀನ್ಯಾಕೆ ತಲೆಕೆಡಿಸ್ಕೋತೀಯಾ.
 
ಸರಿ ನಾನೇ ಮಲ್ಲೇಶ್ವರಂಗೆ ಬಂದು ಬಿಡ್ತೀನಿ.
 
ನಿನ್ನಿಷ್ಟ ಫೋನ್ ಕಟ್್ ಆಯ್ತು.
 
ಏನೋ ಆಗಿದೆ.ಸಮಾಧಾನ ಪಡಿಸ್ಬೇಕು.ಇಂದು ನಾನು ಏನು ಅಂಥ ಅವರಿಗೆ ತೋರಿಸ್ತೀನಿ.
 
ಸಯೋನಾರಾ ಸ್ಪೆಶಲ್ ಚೂಡಿ , ವೂಡ್ಸ್್ನ ಸ್ಯಾಂಡಲ್, ಸೆಟ್ ಮಾಡಿದ ದಟ್ಟಗೂದಲಿನಲ್ಲಿ ನಾನೂ ಗಾರ್ಜಸ್ ಆಗೇ ಕಾಣ್ತಾ ಇದ್ದೀನಿ.
 
ಅವರಿಗೆ ಸರ್ಪೈಸ್ ಕೊಡಬೇಕು.
 
ಬಾಗ್ಯ ಅವರ ಅವರ ಮನೆ ಮಂದಿಗೆಲ್ಲಾ ಆಶ್ಚರ್ಯ. ಇದೇನೆ ನವೋಮಿ ಇಷ್ಟೊಂದು ಸಣ್ಣಕ್ಕಾಗಿದೀಯ. ಎನು ಮಾಡ್ಕೊಂಡೆ.
 
ಏನಿಲ್ಲ .. ಹಂಗೆ ಸ್ವಲ್ಪ ಸ್ಟೈಲ್ ಮಾಡಿ ಹೇಳಿದೆ.
 
ಎಲ್ಲಿಯೋ ಇದ್ದವರು ಅವರು ಬಂದರು.
 
ಕಣ್ತಪ್ಪಿಸಿ ಒಡಾಡುತ್ತಿದ್ದಾರೆ. ಇರಲಿ. ಬಂದೇ ಬರ್ತಾರೆ. ಹೊಟ್ಟೆಕಿಚ್ಚು.ಒಳಗೊಳಗೆ ಖುಷಿಯಿಂದ ನಕ್ಕೆ.
 
ಹಾ.. ಸಿಕ್ಕೇಬಿಟ್ರು.
 
ಹೇಗೆ ಕಾಣಿಸ್ತಾ ಇದೀನಿ
 
....
 
ನಿಮ್ಗೇ ಕೇಳ್ತಾ ಇರೋದು. ನಾನು ಹೇಗೆ ಕಾಣಿಸ್ತಾ ಇದ್ದೀನಿ
ನವೋಮಿ ನೀನು ಯಾರನ್ನಾದ್ರೂ ಇಟ್ಕೊಂಡಿದ್ದೀಯಾ.

...
ವಾಪಸು ಮನೆಗೆ ಹೋಗ್ತಾ ಇದ್ದೀನಿ.ಚಿಕ್ಕವಳಿದ್ದಾಗ ಅಪ್ಪ ನನ್ನ ತಂಗಿಗೆ ಫ್ರಾಕ್ ತಂದಿದ್ದ.ನೇರಳೆ ಬಣ್ಣದ ಮೇಲೆ ಬಿಳಿ ಬಣ್ಣದ ದೊಡ್ಡ ಹೂವುಗಳು. ನನಗೆ ತಂದಿಲ್ಲ ಎಂದು ಒಳಗೊಳಗೆ ಅತ್ತು ಬಿಟ್ಟಿದ್ದೆ. ನನಗೆ ಆಗದಿದ್ದರೂ ಜಗಳವಾಡಿ ಅದನ್ನ ಹಾಕಿಕೊಂಡು
 
ಕನ್ನಡಿ ಮುಂದೆ ನಿಂತು ಸಂಭ್ರಮಿಸಿದ್ದೆ ...
ಅವಳನ್ಯಾಕೆ ಅಳಿಸ್ತೀಯಾ ಅಂತ ಅಮ್ಮ ಜಬರ್್ದಸ್ತಿ ಅಂಗಿ ಬಿಚ್ಚಿಸಿದ್ದು ಇನ್ನು ಮರೆತಿಲ್ಲ.ಈಗಲೂ ಕನಸಲ್ಲಿ ಒಮ್ಮೊಮ್ಮೆ ಆ ಫ್ರಾಕ್ ,ಆ ಹೂವುಗಳು ನೆನಪಾಗುತ್ತವೆ.ಸಂಭ್ರಮ ಪಡಲು ನನಗೆ ದೊಡ್ಡಮಟ್ಟದ ಖುಷಿ ಬೇಕಾಗಿರಲಿಲ್ಲ.ಅಮ್ಮನ ವೃತ ಉಪವಾಸಗಳಿಂದ ಹಿಡಿದು ಹೂವು,ಗಿಡ ಮರ,ಮೀನಿನಸಾರು ಎಲ್ಲವೂ ಖುಷಿಕೊಡುತ್ತಿದ್ದವು.ಇತ್ತಿತ್ತಲಾಗಿ ಸಂಭ್ರಮಿಸುವುದನ್ನೇ ನಾನು ಮರೆತುಬಿಟ್ಟಿದ್ದೆ.ಅಪರೂಪಕ್ಕೊಮ್ಮೆ ಖುಷಿಪಡೋಕೆ ಹೊರಟ್ನಲ್ಲಾ.ಏನಾದ್ರೂ ತಪ್ಪಾಯ್ತಾ...
 
ಕನ್ನಡಿ ಮತ್ತೆ ಮಾತಾಡತೊಡಗಿತು.
 
ಇಂದು ನಂಗೆ ಬೇಜಾರು..
 
ಯಾಕೆ
 
ನನ್ನಿಂದ್ ಇಷ್ಟೆಲ್ಲಾ ಆಯ್ತಲ್ಲಾ
 
ಅಯ್ಯೋ ಅದಕ್ಕೆಲ್ಲಾ ಯಾಕೆ ಬೇಜಾರು.ನಾನು ಬಹಳ ದೂರ ಬಂದಿದ್ದೇನೆ
 

‍ಲೇಖಕರು avadhi

June 19, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

8 ಪ್ರತಿಕ್ರಿಯೆಗಳು

 1. srivastav

  sambhashaneyalle entaha alavaada vastuvannu tandiddeeri. good navomi. keep it up
  -sreevastava, chikkamagalore

  ಪ್ರತಿಕ್ರಿಯೆ
 2. HEMASHREE

  ನಿಮ್ಮ ಬರಹ ಓದಿ… ಅರೆ… ನಾನೂ ಇದೇ ಥರಾ ಯೋಚಿಸ್ತೀನಲ್ಲಾ … ಅಂತ ಅನ್ನಿಸ್ತು. late ಆಗ್ಲಿಲ್ಲ. ಯೋಗ , ಜಿಮ್, walking , jogging ಶುರು ಮಾಡ್ಬೇಕು.
  thanks navomi for reminding me that i am just thirty.
  – take care of yourself.
  Hemashree

  ಪ್ರತಿಕ್ರಿಯೆ
 3. ಮಲ್ನಾಡ್ ಹುಡ್ಗಿ

  super nvOmi.. touching.. sarcastic..
  ಹೆಂಡತಿ ಕಂಪ್ಯೂಟರ್ ಕಲಿಬೇಕು ಅಂತ classes ಸೇರ್ಕೊಂಡಾಗ ನಾನು ಕಲಿಬೇಕು
  ಅಂತ ಅವರ ಗಂಡಾನು ಸೇರ್ಕೊಂಡಿದ್ದು ಸುಮ್ಮನೆ ನೆನಪಾಯಿತು..

  ಪ್ರತಿಕ್ರಿಯೆ
 4. subramani

  ಕೂಲ್ ಆಗಿ ಮಾತನಾಡತ್ತೀಯ ನವೋಮಿ.ನಿಮ್ಮ ಬರಹ ಇಷ್ಟವಾಯಿತು.
  ಸುಬ್ರಮಣಿ.

  ಪ್ರತಿಕ್ರಿಯೆ
 5. saranjini

  very good writing… keep it up.. you are bringing those issues which lies deep in all our minds. but some were we are our minds are so dead, that we cannot even sense the ense all these. Even if i sense that my mind has to say some thing, i am too scared to give ears to it, because it is always difficult to remain dump and dead, once you start listening to your mind.

  ಪ್ರತಿಕ್ರಿಯೆ
 6. leela sampige

  ನವೋಮಿ! ! ಹೆಸರು ಅದೆಷ್ಟು ಚೆನ್ನಾಗಿದೆ. ಸಖತ್ ರೈಲು ಅನ್ನಿಸ್ತ ಇದೆ. ಆದ್ರೂ ಬರೆಯೋ ಸ್ಟೈಲ್, ಆಯ್ಕೆ ಮಾಡ್ಕೊಳ್ಳೋ ವಿಚಾರಗಳು ಕೂಡ ನಮ್ಮನ್ನ ನೇವರಿಸಿ ನಿಮ್ಮವಳೇ, ನೀವೇ ಅಂತಾನು ಅನ್ನಿಸಿಬಿಡ್ತೀಯ.
  ಆದ್ರೂ ನವೋಮಿ ನಿನ್ನ ಎಲ್ಲೋ ನೋಡಿದ ನೆನಪಾಗ್ತಾ ಇದ್ದೀಯಲ್ಲ. ಸ್ವಲ್ಪ ಹತ್ತಿರದ ಫ್ರೆಂಡ್ ಆಗ್ತೀಯ? ಹೇಗೂ ಜೆಂಡರ್ ಪ್ರಾಬ್ಲಂ ಇಲ್ಲ ! ಏನಂತೀಯ?

  ಪ್ರತಿಕ್ರಿಯೆ
 7. nayana

  ಜೆಂಡರ್ ಸಮಸ್ಯೆ ಆದ್ರೆ ಏನಾಗುತ್ತೆ ಲೀಲಾ,ಸುಮ್ನೆ ಹಾಗೆಲ್ಲ ಗೂಬೆ ಕೂರ್ಸೋದು ತಪ್ಪಲ್ವಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: