ಒಂದಲ್ಲ ಒಂದು ದಿನ ಓಡಿ ಹೋಗ್ತೀನಿ…

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
 
ಮನಸ್ಸು ಮಾಡಿದ್ರೆ ನಾನು ಕೂಡ ಡೈವೋರ್ಸ್ ನೋಟೀಸ್ ಕಳುಹಿಸಬಲ್ಲೆ….

ಒಂದು ಮಾತು.೧೦ ವರ್ಷಗಳ ನಂತರ ನನಗರಿವಿಲ್ಲದಂತೆ ಹೊರಬಂದು ಆತನ ಗಂಡಸ್ತನಕ್ಕೆ ಆಘಾತ ನೀಡಿತ್ತು. ಬೆವರಿಬಿಟ್ಟಿದ್ದೆ. ಇಷ್ಟೊಂದು ಶಕ್ತಿ ನನಗೆಲ್ಲಿಂದ ಬಂತು..ಎಲ್ಲಿಂದಲೋ ಒಟ್ಟಾರೆ ಬಂದು ಬಿಟ್ಟಿದೆ. ಬಿಡಬಾರದುಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಆದದ್ದಾಗಲಿ ಎಂದು ಮುಖ ತಿರುಗಿಸಿ ನಡೆದವಳ ಬೆನ್ನಿಗೆ ಬಿದ್ದಿತ್ತು ಬಲವಾದ ಏಟು.ಮುಂದೆ ತಲೆಗೆ ಎದೆಗೆ ಮೈ ಮೇಲೆ ಬಾಸುಂಡೆಗಳ ಮೆರವಣಿಗೆ.ಮಾತು ಹೊರಡಲಿಲ್ಲ.ಕಣ್ಣೀರಿಗೆ ಹೊರಬರದೆ ತಪ್ಪಿಸಿಕೊಳ್ಳಲಾಗಲಿಲ್ಲ.ಕೇಳಬೇಕೆಂದಿದ್ದ ಪ್ರಶ್ನೆ ಮನದಲ್ಲೇ ಉಳಿದುಬಿಡ್ತು..
ನಾಳೆನೆ ಡೈವೋರ್ಸ್ ಮಾಡ್ತೀನಿ. ಅದು ಯಾರ್ಯಾರನ್ನು ಕರೆಸ್ತಿಯೋ ಕರ್ಸು ಎಂದು ವರ್ಷದಲ್ಲಿ ೧೦ ಸಾವಿರ ಸಲ  ಹೇಳಿದವರಿಗೆ ನನ್ನ ಒಂದು ಹೇಳಿಕೆ ಅಷ್ಟೊಂದು ತೊಂದ್ರೆ ಕೊಡ್ತಾ….
ನವೋಮಿ ನಿನಗ್ಯಾಕೆ  ಇಂಥದ್ದೆಲ್ಲ.ನಿಂಗೇನು ಕಡಿಮೆ. ಎಲ್ಲ ಇದೆ ಅಲ್ಲ. ಆದರು ಏಕೆ  ಹೀಗೆಲ್ಲ ನನ್ನತ್ತಿಗೆಸುಮಾ ಕೇಳುತ್ತಲೇ ಇದ್ದಾಳೆ.
ನಿನಗೆ ಇದೆಲ್ಲ ಅರ್ಥ ಆಗಲ್ಲ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದುಡಿದು ರಾತ್ರಿ ಮನಸ್ಸಿಲ್ಲದ ಮನಸ್ಸಿನಿಂದ ಗಂಡನ ಸೇವೆ ಮಾಡೋ ನಿಂಗು ನಂಗೂ ತುಂಬ ವ್ಯತ್ಯಾಸ ಇದೆ ಆಯ್ತಾ

ನನಗೆ ಏನೂ ಅರ್ಥ ಆಗದು ಅಂಥ ತಿಳ್ಕೋಬೇಡ ಎಲ್ಲ ಅರ್ಥ ಆಗುತ್ತೆ.ಆದ್ರೆ ನಿನ್ನಷ್ಟು ಧೈರ್ಯ ಇಲ್ವೆ..ಇದ್ರೂ ನನ್ನ ಕಾಲ ಮೇಲೆ ನಾನು ನಿಂತ್ಕೋತೀನಿ ಅನ್ನೋ ವಿಶ್ವಾಸ ಇಲ್ಲ ನವೋಮಿ.ನಿನ್ನ ಯಾವುದೇ ಪ್ರತಿಭಟನೆಯ ಅಂತ್ಯ ದುರಂತವಾಗಬಾರದು.ನೀನು ಸುಖವಾಗಿರ್ಬೇಕು ಅಷ್ಟೇ ನನ್ನ ಉದ್ದೇಶ..ಎಷ್ಟೋ ಹೆಣ್ಮಕ್ಕಳಿಗೆ ಎಷ್ಟೊಂದು ಕಷ್ಟ ಇರುತ್ತೆ.ಅವರೆಲ್ಲ ಹೊಟ್ಟೆಗೆ ಹಾಕ್ಕೊಂಡು ಬದುಕಲ್ವಾ..

ಸುಮ ನೀನ್ನ ಪುರಾಣ ಸ್ವಲ್ಪ ನಿಲ್ಸು. ಹೊಟ್ಟೆಗೆ ಹಾಕ್ಕೋಳ್ಳೋದು ಅಂದೆಯಲ್ಲಾ ಅದೇ ನಂಗಾಗಲ್ಲ..ನಿನು ನೋಡ್ತಾ ಇರು ಒಂದಲ್ಲ ಒಂದು ದಿನ ಓಡಿ ಹೋಗ್ತೀನಿ
ಇದೇನಿದು ನಿಂಗೇನು ಹುಚ್ಚಾ..ಸುಮಾ ಬೆಚ್ಚಿಬಿದ್ದಳು..
ಯಾರಾದ್ರೂ  ಕೇಳಿಸ್ಕೊಂಡು ಬಿಡ್ತಾರೆ ಕಣೆ.ಸ್ವಲ್ಪ ಕುಲ್ ಆಗಿ ವಿಚಾರ ಮಾಡು. ನಿನ್ನ ಮಕ್ಕಳ ಗತಿ ಏನಾಗಬೇಕು..ಕಾಲಿಗಿ ಬಿಳ್ತಿನಿ ಬಿಡ್ತು ಅನ್ನು…
ಸುಮಾ ನೀನು ಪಾಪದವಳು.ನೀನಂತೂ ಸತ್ತೆ ಹೋಗಿದ್ದಿಯ ನನಗಾದ್ರೂ ಬದುಕೋಕೆ ಬಿಡು..
ಹಾ ನಾನಂತೂ ಸತ್ತೆ ಹೋಗಿದ್ದೀನಿ ನೀನಾದ್ರೂ ಬದುಕಬೇಕು ಅಂತಲೇ ಹೇಳ್ತಾ ಇದ್ದೀನಿ.ನೋಡ್ದೆಯಲ್ವಾ ಅವಳ ಪಾಡೇನಾಯ್ತು..ಅಂಥವಳಿಗೇನೇ ಸಮಾಜ ಬದುಕೋಕೆ ಬಿಡಲಿಲ್ಲ.ಅಂಥದ್ರಲ್ಲಿ ನಮ್ಮಂಥೋರ ಪಾಡೇನು..ಬುದ್ದಿ ಇಲ್ಲ ನಿಂಗೆ..
ಸುಮಳ ಕೊನೆಯ ಮಾತು ಕೇಳಿ ತಳಮಳಗೊಂಡೆ.ನಿಜ ಅವಳು ಸತ್ತೇ ಹೋದ್ಲು ಅಲ್ವ.ಅಸ್ತಿತ್ವದ ಹುಡುಕಾಟದಲ್ಲಿ ಹೆಣವಾಗಿ ಹೋದಳಲ್ಲ..ಅಲ್ಲಲ್ಲಿ ಒಂದಿಬ್ಬರು ಬಿಟ್ಟರೆ ಸಾವಿನ ವಿರುದ್ಧ ಒಂದು ಗಟ್ಟಿಧ್ವನಿಯೂ ಏಳಲಿಲ್ವಲ್ಲ….
ಜನ ಮಾತಾಡಿದ್ದೇನು
ಅವಳಿಗೇನು ಬಂದಿತ್ತುಎಲ್ಲ ಇರೋಳು ತೆಪ್ಪಗೆ ಇರಲಾರದೆ ಮತ್ತೊಬ್ಬ ಬೇಕಾದಇದನ್ನೇ ಅಲ್ವ 

ಚೆನ್ನಾಗಿ ಕಂಠಮಟ್ಟ ತಿಂದು ಉಂಡು ಜರತಾರಿ ಸೀರೆ ಉಡೋದ್ರಲ್ಲೇ ಸುಖ ಕಾಣೋರು ಇನ್ನೇನು ಚಿಂತಿಸೋಕೆ ಸಾಧ್ಯ..

ನಾನು ಗಂಡು ಏನು ಬೇಕಾದರೂ ಮಾಡಬಹುದು.ನೀನು ಹೆಣ್ಣು ಎಷ್ಟು ಬೇಕೋ ಅಷ್ಟು ಇದ್ರೆ ಸರಿ ಎಂಬ ಹೇಳಿಕೆಗಳು ನನ್ನನ್ನಂತೂ ಕಂಗೆಡಿಸಿವೆ. ಬೇರೆಯವರಿಗೆ ಇವು ಯಾವ ರೀತಿ ಪರಿಣಾಮ ಬೀರುತ್ತೋ ಅರ್ಥವಾಗುತ್ತಿಲ್ಲ.
ನನ್ನ ಗಂಡ ನೂರು ಮಂದಿ ಸೂಳೆಯರನ್ನು ಇಟ್ಟುಕೊಂಡಿದ್ದ ಎಂದು ನನ್ನತ್ತೆ ನಗುತ್ತಲೇ ಹೇಳುವಾಗ ಬೆಚ್ಚಿ ಬೀಳುತ್ತೇನೆ.
ನೀನಗ್ಯಾರಾದ್ರೂ ಇದ್ದಾರಾ ಅಂತ ಕೇಳಿದಾಗಲೆಲ್ಲ ಇಲ್ಲ ಎಂದು ಹೇಳಿ ಹೇಳಿ ಸುಸ್ತಾಗುತ್ತೇನೆ. ನನಗೆ ನನ್ನ ಸ್ಪೇಸ್ ಕೊಡಿ ನಾನು ಉಸಿರಾಡಬೇಕು ಎಂದು ಹೇಳಲು ಪ್ರಯತ್ನಿಸಿ ಸೋಲುತ್ತೇನೆ. ನನ್ನ ಇಗೋನ ಕೆಣಕುವ ಅವರ ಮಾತುಗಳಿಗೆ ಪ್ರತಿಭಟಿಸಿದರೆ  
ನೀನಗ್ಯಾರೋ ಇದ್ದಾರೆ ಬಿಡೆ ಅದಕ್ಕೆ ಹೀಂಗಾಡ್ತೀಯಾ ಎಂದು ಕಟಕಿಯಾಡುವ ಅವರ ಬಗ್ಗೆ ನನ್ನಲ್ಲಿ ವಿಚಿತ್ರ ಕೋಪ ಬರುತ್ತೆ.ನನಗೂ ಎಷ್ಟೋ ಸಾರಿ  ಒಬ್ಬಳೇ   ದೂರ ಎಲ್ಲಿಯಾದರೂ ಓಡಿ ಹೋಗೋಣ ಎನ್ನಿಸಿ ಬಿಡುತ್ತದೆ. ಇವೆಲ್ಲ ನಿಂಗೆ ಹೇಗೆ ಅರ್ಥ ಆಗ್ಬೇಕು ಸುಮಾ….

ನನ್ನನ್ನು ಒಂದೇ ಸಮ ಕನಿಕರದಿಂದ ನೋಡಿದ ಅವಳು ….
ಹೇಳು ನಿನ್ನ ಮನಸ್ಸಲ್ಲಿ ಯಾರಾದ್ರೂ ಇದ್ದಾರಾ…
ಅವಳ ಪ್ರಶ್ನೆಗೆ ನಗಬೇಕಷ್ಟೇ..
ಇದೇ ಕಣೆ.ಯಾರಾದ್ರೂ ಇದ್ರೆ ಮಾತ್ರ ಬದುಕ್ಬೇಕು ಅಲ್ವಾ.ಗಂಡು ಎನ್ನೋ ಪ್ರಾಣಿ ಇಲ್ದಿದ್ರೆ ಬದುಕೋಕೆ ಆಗಲ್ಲ.ನೀವೆಲ್ಲ ಒಂದೇ…
ನಾನು ಹೊರನಡೆದಿದ್ದೆ..
ಯಾರಿಗೆ ಸಮಜಾಯಿಷಿ ನೀಡಲಿ. 
ಸಮಜಾಯಿಷಿ ನೀಡಿ ಸುಸ್ತಾಗಿದ್ದೇನೆ..ಅಂಥ ವಾಂಛೆ ಇದ್ದಿದ್ದರೆ ಅವಳು ಆ ಮನೆಯಲ್ಲಿದ್ದುಕೊಂಡೇ ಚೆನ್ನಾಗಿ ಬದುಕಬಹುದಿತ್ತಲ್ಲ.ಇಡೀ ಸಮಾಜವನ್ನು ಎದುರು ಹಾಕಿಕೊಂಡು ಅಲ್ಲೇಲ್ಲೋ ಕಾಲ್ ಸೆಂಟರ್ ಉದ್ಯೋಗ ಅರಸಿ ಹೊರಡುವ ಅಗತ್ಯ ಇರಲಿಲ್ಲ..

‍ಲೇಖಕರು avadhi

July 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

9 ಪ್ರತಿಕ್ರಿಯೆಗಳು

 1. leelasampige

  ನವೋಮಿ, ನಿನ್ನ ತಳಮಳಗಳು ನಿನ್ನವು ಮಾತ್ರವಲ್ಲ, ಈ ದೇಶದ ಲಕ್ಷಾಂತರ ಹೆಣ್ಣುಗಳ ತಳಮಳವು ಹೌದು. ಕೋರ್ಟುಗಳಿಗೆ ಈಗ ತಲೆಬಿಸಿಯಾಗಿದೆಯಂತೆ! ದಿನವು ನೂರಾರು ಕೇಸುಗಳು ಈ ತಳಮಳಗಳಿಗೊಂದು ಅಂತ್ಯ ಹಾಡೋಕೆ. ಅಂದ್ರೆ ಅವಳಂತ ಅದೆಷ್ಟು ಮನಸ್ಸುಗಳು ಆ ಸ್ಥಿತಿ ತಲುಪಿವೆ. ಅದಕ್ಕೆ ಈ ವ್ಯವಸ್ಥೆಯ ನ್ಯಾಯದ ಮನಸ್ಸುಗಳು ಕಾನೂನನ್ನು ಪುನಃ ಪರಿಶೀಲಿಸುವ ಹುನ್ನಾರ ಹೂಡ್ತಿವೆಯೇ ಹೊರತು ಪರಿಸ್ಥಿತಿಯನ್ನು ವಿಶ್ಲೇಷಿಸುವ ಪ್ರೌಢಿಮೆ ತೋರಿಸ್ತಿಲ್ಲ.Leela Sampige

  ಪ್ರತಿಕ್ರಿಯೆ
 2. Shwetha, Hosabale

  ನವೋಮಿಯವರೆ, ಚೆನ್ನಾಗಿದೆ ಬರ್ದಿದ್ದು ; ಲೀಲಾಸಂಪಿಗೆಯವರು ಪ್ರತಿಕ್ರಿಯೆಯಲ್ಲಿ
  ಹೇಳಿರುವುದೂ ಕಟುಸತ್ಯವೇ. ಸುತ್ತಲಿನ ಪರಿಸರವೇ ಹಾಗಿರುವಾಗ ಎಲ್ಲೋ ನಮ್ಮಂ
  ಥವರು ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ, ಆಲೋಚಿಸಿದರೆ ದೊಡ್ಡ ಅಪರಾಧವೆಂಬಂತೆ
  ಪರಿಗಣಿಸುತ್ತಾರೆ;ಎಷ್ಟೋ ಸಲ ಸ್ತ್ರೀ ಸಮುದಾಯದಿಂದಲೂ ನಮ್ಮ ಅಭಿಪ್ರಾಯಕ್ಕೆ
  ಸಹಮತ ಸಿಗುವುದಿಲ್ಲ ; ಎಲ್ಲ ನಿರೀಕ್ಷಿಸುವುದೂ ಹೆಣ್ಣೇ ಹೊಂದಿಕೊಂಡು ಹೋಗಬೇ
  ಕೆಂದು !! ಇದ್ಯಾವ ನ್ಯಾಯ ಅಲ್ವಾ ?

  ಪ್ರತಿಕ್ರಿಯೆ
 3. subramani

  ಕೂಲ್ ಹುಡುಗಿ ಮತ್ತೊಮ್ಮೆ ಮಾತನಾಡಿರುವುದು ನನಗಂತೂ ಖುಷಿಯಾಗಿದೆ.

  ಪ್ರತಿಕ್ರಿಯೆ
 4. avadhi

  ittechege navomi baraha kanade kangaalagidde. thanks navomi. olle barahadondige bandiddeeri
  -rajesh arkula

  ಪ್ರತಿಕ್ರಿಯೆ
 5. malathi S

  This has distinct chaap of Chets.:-)
  Hot topic under a ‘cool’head. but oDi hOgodu yaake? One can walk out coolly alwaa?? With dignity? Enanteeraa??
  🙂
  Malathi S

  ಪ್ರತಿಕ್ರಿಯೆ
 6. Santhosh Ananthapura

  really good one. taking a same subject in a different ferent angle is the splity of this write up. baduko hambala idre yaara hangoo beda. ella bandhagalinda vimuktharaagabekashte. keep it up.

  ಪ್ರತಿಕ್ರಿಯೆ
 7. siddesh

  yes hennu thaggi baggi nedeyabeku /naya/vinaya
  /sahaNE/preethi/hriyarabagge gourava/swarthavannu thejisi/nannademba bavaneyannu bittu/nammadembaa bhavaneyinda jeevana sagisabeku /hennu iththtecheganthu gandasinanthe varthisi/ nanu yarigukadimeyillav
  anthendu thilidu/ thanu hennu hembudannu
  marethu/hennina nija arthavannu avare hennagi
  thamma kayyara thave chitege4 benky hachchikol
  luthiddare…..urs.. siddesh/hennau nijavagi preethisuvavanu

  ಪ್ರತಿಕ್ರಿಯೆ
 8. jodidar

  this article should be made as copulsory chapter in text books at graduate level.It will open every husband’s eyes.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: