ಒಂದು ಅಪರಾಧ: ಮತ್ತದರ ವ್ಯಾಪಾರ

rajaram tallur low res profile
ರಾಜಾರಾಂ ತಲ್ಲೂರು

ಉಡುಪಿಯಲ್ಲಿ ಎರಡು ವಾರಗಳ ಹಿಂದೆ ನಡೆದ ಒಂದು ಅಪರಾಧ ಪ್ರಕರಣ ಮತ್ತು ಮಾಧ್ಯಮಗಳು ಅದನ್ನು ವರದಿ ಮಾಡುತ್ತಿರುವ ರೀತಿಯ ಹಿನ್ನೆಲೆಯಲ್ಲಿ, ಅಪರಾಧ ಪ್ರಕರಣಗಳನ್ನು ವ್ಯಾಪಾರವಾಗಿ ಪರಿವರ್ತಿಸಿಕೊಳ್ಳುವ ಮತ್ತು ಈ ಅಫೀಮಿನ ವ್ಯಸನವನ್ನು ಹೆಚ್ಚಿಸಿಕೊಳ್ಳುತ್ತಾ ಬರುತ್ತಿರುವ ಒಟ್ಟು “ ಪತ್ರಿಕಾ ಬ್ಯುಸಿನೆಸ್” ಕಡೆ ಒಂದು ನೋಟ ಇದು.

ಒಂದು ಅಪರಾಧ ಪ್ರಕರಣ ಗಮನಕ್ಕೆ ಬಂದಾಗ, ಅದರಲ್ಲಿ “ಯಾವುದೆಲ್ಲ ಸುದ್ದಿ?” ಎಂಬ ಅಂದಾಜು ಸಂಪೂರ್ಣ ತಪ್ಪಿಹೋಗಿರುವುದಕ್ಕೆ ಉಡುಪಿಯಲ್ಲಿ ಸಂಭವಿಸಿರುವ ಉದ್ಯಮಿಯೊಬ್ಬರ ನಾಪತ್ತೆ – ಕೊಲೆ ಪ್ರಕರಣ ಒಳ್ಳೆಯ ಉದಾಹರಣೆ. ತೀರಾ ಕನ್ಸರ್ವೇಟಿವ್ ಎಂದುಕೊಂಡಿದ್ದ ಪತ್ರಿಕೆಗಳೂ ತಮ್ಮ ರಂಗು ರಂಗಿನ ವರದಿಗಳು, ಅಭಿಪ್ರಾಯಗಳು, ಊಹಾಪೋಹಗಳ ಮೂಲಕ ಪರಿಸ್ಥಿತಿಯನ್ನು ಎಲ್ಲಿಗೆ ತಲುಪಿಸಿಬಿಟ್ಟಿವೆ ಎಂದರೆ, ನ್ಯಾಯಾಲಯದ ಆವರಣದಲ್ಲೇ avadhi-column-tallur-verti- low res- cropಸಾರ್ವಜನಿಕರು ತುಂಬಿಕೊಂಡು, ಬಂಧಿತ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗುವ, ಪೊಲೀಸರಿಗೆ ಆಪಾದಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸುರಕ್ಷತೆಯ ಬಗ್ಗೆ ಹತ್ತುಬಾರಿ ಯೋಚಿಸುವಂತೆ ಮಾಡುವ ಪರಿಸ್ಥಿತಿ ಉಂಟಾಗಿದೆ, ಈ ಸಾರ್ವಜನಿಕ ರಣಕೇಳಿಯ ಪೂರ್ಣ ಶ್ರೇಯಸ್ಸು ಮಾಧ್ಯಮಗಳಿಗೆ ಸಲ್ಲುತ್ತದೆ.

ಪತ್ರಿಕೆಗಳಲ್ಲಿ, ಸ್ಥಳೀಯ ಮತ್ತು ರಾಜ್ಯಮಟ್ಟದ ಟೆಲಿವಿಷನ್ ಮಾಧ್ಯಮಗಳಲ್ಲಿ ಕಳೆದೆರಡು ವಾರಗಳಿಂದ ಈ ಅಪರಾಧ ಪ್ರಕರಣದ ಭರಪೂರ ವಿಚಾರಣೆ ನಡೆದಿದ್ದು, ಆ ಮುಸುಕಿನಡಿ ತಮ್ಮ ತಮ್ಮ ಉತ್ಪನ್ನಗಳ ಮಾರಾಟದ ಮೇಲಾಟ ನಡೆಯುತ್ತಿದೆ. ಇದನ್ನೊಂದು ಉದಾಹರಣೆ ಆಗಿ ತೆಗೆದುಕೊಂಡು, ರಾಜ್ಯದಲ್ಲಿ ಅಥವಾ ದೇಶದಲ್ಲಿ ಇತ್ತೀಚೆಗೆ ನಡೆದಿರುವ ಎಲ್ಲ ದೊಡ್ಡ ಸುದ್ದಿ ಮಾಡಿರುವ ಅಪರಾಧ ಪ್ರಕರಣಗಳನ್ನು ಮತ್ತವುಗಳ ವರದಿಗಳ ಮೂಲಕ ಫಲಿತವಾಗುತ್ತಿರುವ ಸನ್ನಿವೇಶಗಳನ್ನು ಗಮನಿಸಿದರೆ, ಪರಿಸ್ಥಿತಿ ತೀರಾ ಸಮಾಜ ವಿರೋಧಿ ಹಂತಕ್ಕೆ ತಲುಪಿರುವುದು ಸ್ಪಷ್ಟವಾಗುತ್ತದೆ. ಇದು ಡೆಮಾಕ್ರಸಿಯೊಂದು ಮಾಬಾಕ್ರಸಿ ಆಗುವ ಅಪಾಯದ ಹಂತ!

ಕರಾವಳಿಯಲ್ಲೇ ಮೂವತ್ತು ವರ್ಷಗಳ ಹಿಂದೆ ಜನಜೀವನವನ್ನು ದಿಕ್ಕುಗೆಡಿಸಿದ್ದ “ರಿಪ್ಪರ್ ಚಂದ್ರನ್” ಪ್ರಕರಣ ಈವತ್ತು ನಡೆದರೆ, ಈವತ್ತಿನ ಮಾಧ್ಯಮಗಳ ಕೈಯಲ್ಲಿ ಆ ಇಡಿಯ ಪ್ರಕರಣ ಹೇಗಿರಬಹುದೆಂಬುದನ್ನು ಊಹಿಸಿ! ಆವತ್ತೇ ರಾತ್ರೋರಾತ್ರಿ ಚಂದ್ರನ್ ಅಲ್ಲಿ ಬಂದ – ಇಲ್ಲಿ ಬಂದ ಎಂದು ದೊಣ್ಣೆ ಹಿಡಿದು ಓಡಾಡಿ, ಜನ ಕೆಲವರ ಮೇಲೆ ಹಲ್ಲೆ ನಡೆಸಿದ್ದೂ ಇದೆ. ಈವತ್ತಿನ ಮಾಧ್ಯಮಗಳ ಸಮರೋತ್ಸಾಹದ ಪರಿಸ್ಥಿತಿಯಲ್ಲಿ ಇದು ಎಲ್ಲಿಗೆ ತಲುಪಬಹುದು?!!!

ಅಂದಹಾಗೆ, ಭಾರತೀಯ ಪತ್ರಿಕಾ ಮಂಡಳಿ ಮಾಧ್ಯಮವೇ ವಿಚಾರಣೆ ನಡೆಸುವ ಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ಏನೆಂದಿದೆ ಎಂಬುದು ಇಲ್ಲಿ ಕೆಳಗಿದೆ. ಅದು ಪತ್ರಕರ್ತರ ವರ್ತನೆ ಹೇಗಿರಬೇಕೆಂಬ ಬಗ್ಗೆ ಕೊಟ್ಟಿರುವ ನಿರ್ದೇಶನಗಳ ಪೂರ್ಣಪಾಠ ಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ. ಕಳೆದ ಒಂದೆರಡು ವರ್ಷಗಳಿಂದೀಚೆಗೆ ಈ ಕೆಳಗಿನ ನಿರ್ದೇಶನಗಳಲ್ಲಿ ಯಾವ ಯಾವ ಮಾಧ್ಯಮಗಳು ಏನೇನನ್ನು, ಎಷ್ಟೆಷ್ಟು ಮಟ್ಟಿಗೆ ಪಾಲಿಸುತ್ತಿವೆ ಎಂಬುದನ್ನು ನೀವೇ ಕಂಡುಕೊಳ್ಳಿ.

2 Press Council of India NORMS OF JOURNALISTIC CONDUCT Edition 2010 Contents Preface Part A: Principles and Ethics 1. Accuracy and fairness 2.

41. (A) Trial By Media

Introduction  

The media and judiciary are two vital pillars of democracy and natural allies; one compliments the other towards the goal of a successful democracy. Measures which are necessary for due process of law need to take precedence over freedom of speech. In a conflict between fair trial and freedom of speech, fair trial has to necessarily prevail because any compromise of fair trial for an accused will cause immense harm and defeat justice delivery system. Thus, media persons should be duly trained and imparted basic knowledge about functioning of courts and processes of law.

 i)    An accused is entitled to the privilege of presumption of being innocent till guilt is pronounced by the Court. 

ii)   The media reports should not induce the general public to believe in the complicity of the person indicted as such kind of action brings undue pressure on the course of fair investigation by the police.

iii)   Publishing information based on gossip about the line of investigation by the official agencies on the crime committed gives such publicity to the incident that may facilitate the person who indeed committed the crime to move to safer place.  

iv)  It is not always advisable to vigorously report crime related issues on a day to day basis nor to comment on supposed evidence of the crime without ascertaining the factual matrix.  

v)   While media’s reporting at the investigation stage in a criminal case may ensure a speedy and fair investigation, disclosure of confidential information may also hamper or prejudice investigation.   There cannot therefore be an unrestricted access to all the details of the investigation.

 vi) Victim, Witnesses, Suspects and accused should not be given excessive publicity as its amounts to invasion of their privacy rights.

vii)   Identification of witnesses by the newspapers/media endanger them to come under pressure from both, the accused or his associates as well as investigative agencies. Thus, media should not identify the witnesses as they may turn hostile succumbing to the pressure. 

  viii) The suspect’s picture should not be shown as it may create a problem during ‘identification parades’ conducted under the Code of Criminal Procedure for identifying the accused.       

   ix)   The media is not expected to conduct its own parallel trial or foretell the decision putting undue pressure on the judge, the jury or the witnesses or prejudice a party to the proceedings.    

x)  The reporting on post trial/hearing often consists of reporting on the decision handed down. But when there is a time lag between the conclusion of the proceedings and the decision, the comments on the concluded proceedings, including discussion on evidence and/or arguments, aimed at influencing the forthcoming decision must be avoided.

xi) Media having reported an initial trial is advised to follow up the story with publication of final outcome by the court, whenever applicable.

‍ಲೇಖಕರು Admin

August 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

೧ ಪ್ರತಿಕ್ರಿಯೆ

 1. Shashidar Hemmanna udupi joranlist

  ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಪೊಲೀಸರೊಂದಿಗೆ ಟಿವಿ 9 ವರದಿಗಾರ ಪೊಲೀಸರೊಂದಿಗೆ ಶಾಮಿಲು .?
  ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ವರದಿ ಮಾಡಲು ಟಿವಿ 9 ವರದಿಗಾರ ಹಿಂದೇಟು ಹಾಕಿದ್ದು ಯಾಕೆ ಅನ್ನುವುದು ಇದೀಗ ಪತ್ರಕರ್ತರು ಹಾಗೂ ಭಾಸ್ಕರ ಶೆಟ್ಟಿ ಕುಟುಂಬಸ್ಥರಲ್ಲಿ ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.ಭಾಸ್ಕರ್ ಶೆಟ್ಟಿ ನಾಪತ್ತೆಯಾಗಿದ್ದಾರೆ ಅವರನ್ನು ಹೆಂಡತಿ ಮಗನೇ ಅಪಹರಿಸಿದ್ದಾರೆ ಅಂತಾ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ಠಾಣೆಗೆ ದೂರು ನೀಡಿ ನೇರವಾಗಿ ಟಿವಿ9 ವರದಿಗಾರನಿಗೆ ಕರೆ ಮಾಡಲಾಗಿದೆ ಅದ್ರೆ ಟಿವಿ9 ವರದಿಗಾರ ಯೋಗರಾಜಾ ಕರೆ ಮಾಡಿದವರ ಯಾವುದೇ ಮಾತನ್ನು ಕೇಳಿಸುವ ಅವಸ್ಥೆಯಲ್ಲಿರಲಿಲ್ಲ ,ಕಂಠಪೂರ್ತಿ ಕುಡಿದು ತೊದಲು ತೊದಲು ಮಾತನಾಡುತ್ತಿದ್ದ ವರದಿಗಾರ ಅದೆಲ್ಲಾ ಪೊಲೀಸರ ಕೆಲಸ ನನಗ್ಯಾಕ್ರೀ ಫೊನ್ ಮಾಡ್ತೀರಾ ಅಂತಾ ಕಾಲ್ ಕಟ್ ಮಾಡಿದ್ದ.ಕ್ರೈಂ ನಡೆದಿದೆ ಅನ್ನೋ ಸೂಚನೆ ಸಿಕ್ಕಿದ್ರೆ ಅದರ ಫಾಲೋ ಅಪ್ ಮಾಡೊ ಟಿವಿ 9 ಚಾನಿಲ್ ನ ವರದಿಗಾರನ ಮಾತು ಕೇಳಿ ಭಾಸ್ಕರ್ ಶೆಟ್ಟಿ ಕುಟುಂಬಕ್ಕೂ ಆಶ್ಚರ್ಯ ಉಂಟಾಗಿತ್ತು. ನ್ಯಾಯಕ್ಕಾಗಿ ಮತ್ತು ಸಹಾಯಕ್ಕಾಗಿ ಮಾಧ್ಯಮದವರನ್ನ ಸಂಪರ್ಕಿಸಿದಾಗ ಈ ರೀತಿ ಉತ್ತರ ಬರುತ್ತೆ ಅಂತಾ ಯಾರೂ ನಿರೀಕ್ಷೆನು ಇಟ್ಟು ಕೊಂಡಿರಲಿಲ್ಲ .ಮಾರಾನೇ ದಿನ ಭಾಸ್ಕರ್ ಶೆಟ್ಟಿ ಊರಿನವರು ಉಡುಪಿ ಪ್ರೆಸ್ ಕ್ಲಬ್ಬಿಗೆ ತೆರಳಿ ಎಲ್ಲಾ ಚಾನೆಲ್ ಗಳ ನಂಬರ್ ಪಡೆದು ಕರೆ ಮಾಡಿದ ಕ್ಷಣರ್ಧದಲ್ಲೆ ಪಬ್ಲಿಕ್ ಟಿವಿ ,ಬಿ ಟಿವಿ,ಪ್ರಜಾ ಟಿವಿ ,ಈ ಟಿವಿ ,ಉದಯ ಟಿವಿ ಸ್ಥಳಿಯ, ಸ್ಪಂದನ ಪ್ರೈಮ್ ,ಉಡುಪಿ ಚಾನೆಲ್ ಹಾಗೂ ಪತ್ರಿಕಾ ಮಾಧ್ಯಮದವರು ಭಾಸ್ಕರ್ ಶೆಟ್ಟಿ ಮನೆಯವರನ್ನ ವಿಚಾರಿಸಿ ವರದಿ ಮಾಡಿದ ಪರಿಣಾಮವೇ ಪೊಲೀಸರು ಒತ್ತಡಕ್ಕೊಳಗಾಗಿ ಪ್ರಕರಣದ ತನಿಖೆ ಚುರುಕುಗೊಳ್ಳಲು ಸಾದ್ಯವಾಯಿತು .ಇಷ್ಟದಾರೂ ಟಿವಿ9 ವರದಿಗಾರ ಭಾಸ್ಕರ್ ಶೆಟ್ಟಿ ಪ್ರಕರಣವನ್ನೇ ವರದಿಯೇ ಮಾಡಲಿಲ್ಲ,
  ಸಹಜವಾಗಿಯೇ ಟಿವಿ9 ವರದಿಗಾರನ ಮೇಲೆ ಸಾರ್ವಜನಿಕರಿಗೆ ಸಂಶಯ ಹೆಚ್ಚಾಗಿತ್ತು.ಕೊನೆಗೆ ಉಳಿದ ಟಿವಿ ಹಾಗೂ ಪತ್ರಿಕಾ ವರದಿಗಳ ಒತ್ತಡದಿಂದ ಪೊಲೀಸರು ಭಾಸ್ಕರ್ ಶೆಟ್ಟಿ ಹಾಗೂ ಪುತ್ರನ ವಿಚಾರಣೆ ತೀವ್ರಗೊಳಿಸಿದಾಗ ಭಾಸ್ಕರ್ ಶೆಟ್ಟಿ ಕೊಲೆ ಅಗಿರುವುದು ಬೆಳಕಿಗೆ ಬಂದಿದೆ.ಇಷ್ಟಾಗಿಯೂ ಟಿವಿ9 ವರದಿಗಾರ ಮಾತ್ರ ಈ ಬಗ್ಗೆ ತಲೆಕೆಡಸಿ ಕೊಳ್ಳಲಿಲ್ಲ .ಕರೆ ಮಾಡಿದ್ರೂ ಹೆಣ ಸಿಗ್ಲಿರಿ ಅಂತಾನೇ ಹೇಳ್ತಾ ಇದ್ದಾ .ಅಷ್ಟೇ ಅಲ್ಲದೇ ಕೊಲೆಮಾಡಿದ ರಾಜೇಶ್ವರೀ ಹಾಗೂ ಪುತ್ರ ಪರ ವಾಕಾಲತ್ತು ವಹಿಸ ಮಾತನಾಡುತ್ತಿದ್ದ.ಕೊಲೆ ನಡೆದ್ದದ್ದು ಹೌದು ಎಂದು ಪೊಲೀಸರು ದೃಡ ಪಡಿಸುತ್ತಿದ್ದಂತೆ ಈತ ಕೆಲಸಕ್ಕೆ ರಜಾ ಹಾಕಿ ತನ್ನೂರಿಗೆ ಓಡಿ ಹೋಗಿದ್ದಾನೆ. ಪ್ರಕರಣ ತಣ್ಣಾಗಾದ ಬಳಿಕ ರಜಾ ಮುಗಿಸಿ ಉಡುಪಿಗೆ ಬಂದಿದ್ದು ಬಂಟ ಸಂಘದ ಸಭೆಗೆ ವರದಿಗೆ ಅಗಮಿಸಿ ಅಲ್ಲಿಯೂ ಉಡಾಫೆ ಪ್ರಶ್ನೆಗಳನ್ನ ಕೇಳಿ ಸ್ಥಳಿಯರ ಕಣ್ಣ ಕೆಂಪಾಗಿಸುವಂತೆ ನಡೆದುಕೊಂಡಿದ್ದಾನೆ. ವರದಿಗಾರ ಪ್ರಕರಣ ಬಗ್ಗೆ ಗಂಭೀರ ವರದಿಯಾಗಲೀ ಅದರ ಫಾಲೊ ಅಪ್ ಅಗಲಿ ಮಾಡಲೇ ಇಲ್ಲ.ಟಿವಿ 9 ಅಂತಾಹ ಕ್ರೈ ಸುದ್ದಿಗಳನ್ನೇ ಬಿತ್ತರಿಸುವ ಕಂಪನಿಯೂ ರಾಜ್ಯ ಮಟ್ಟದಲ್ಲಿ ಕೋಲಾಹಲವೆಬ್ಬಸಿರುವ ಸುದ್ದಿಯನ್ನ ಗಂಭಿರವಾಗಿ ಗಮನಿಸದೆ ಅಸಡ್ಡೆ ತೊರಿಸಿದೆ ಅಂದ್ರೆ ಪೊಲೀಸರ ಜೊತೆ ಈ ವರದಿಗಾರನೂ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾನೆ ಅನ್ನುವುದು ಸಾರ್ವಜನಿಕರ ಆಭಿಪ್ರಾಯವಾಗಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: