ಒಂದು ಅಮೆರಿಕನ್ ಜಾಹಿರಾತು..

ಆರಿಫ್ ರಾಜಾ

ಅಮೆರಿಕನ್ ಆಟೋಮೆಟಿಕ್ ಶಿಶ್ನ ವರ್ಧಕ ಯಂತ್ರ
ಬಳಸಿದ ತಕ್ಷಣವೇ ಕೆಲಸ ಆರಂಭ

ಚಿಕ್ಕ, ತೆಳುವಾದ, ಡೊಂಕಾದ ಶಿಶ್ನವನ್ನು
9ರಿಂದ 10 ಇಂಚು ಉದ್ದ, ದಪ್ಪ ಶಕ್ತಿಶಾಲಿ
ಮತ್ತು ಸುಂದರವಾಗಿ ಮಾಡುವುದು
ಸಂಭೋಗದ ಸಮಯವನ್ನು
40ರಿಂದ50 ನಿಮಿಷ ಹೆಚ್ಚಿಸುವುದು
ನಪುಂಸಕತ್ವ, ಹಸ್ತ ಮೈಥುನ, ಶೀಘ್ರ ಸ್ಖಲನದಲಿ
ಉತ್ತಮ ಕೆಲಸ ಮಾಡುವ ಇದು
ಶೇಕಡಾ 100 ಆಯುರ್ವೇದಿಕ್ ಔಷಧ

ವೈಟ್ಹೌಸಿನಿಂದಲೇ ಪ್ರಮಾಣಿಕರಿಸಲ್ಪಟ್ಟ
ಸಂಜೀವಿನಿಯ ಗುಣಮಟ್ಟದ ಕುರಿತು
ವೀರ ಭಾರತೀಯರೇ ಸಂಶಯ ಬೇಡ
ಆರು ತಿಂಗಳ ಕೂಸಿನಿಂದ
ಅರವತ್ತು ವರ್ಷದ ಮುದುಕರವರೆಗೆ
ಎಲ್ಲರು ಬಳಸಲು ಮುಕ್ತ
ನೋ ಸೈಡ್ ಎಫೆಕ್ಟ್

ಬೇಕಾದರೆ ಕೇಳಿ ನೋಡಿ
ಮೊದಲಿಗೆ ರೆಡ್ ಇಂಡಿಯನ್ನರು ಆಮೇಲೆ ಜಪಾನಿಯರು
ಮತ್ತೇ ಕ್ಯೂಬನ್ನರು ವಿಯಟ್ಟಾಮಿಗಳು
ಈಗೀಗ ಪ್ಯಾಲಸ್ತೀನ್ ಅರಬ್ಬರು ಆಫ್ಘನ್ನರು ಇರಾನಿಗಳು
ಎಲ್ಲರೂ ಆಗಿ ಹೋಗಿದ್ದಾರೆ
ಇದರ ಆಟ ನೋಡಿದ್ದಾರೆ

ಈಗ ನಿಮ್ಮದೇ ಸರದಿ ಭಾರತೀಯರೆ
ಅಮೇರಿಕನ್ ಆಟೋಮೆಟಿಕ್ ಶಿಶ್ನವರ್ಧಕ ಯಂತ್ರ ಧರಿಸಿ
ಕೇವಲ ನೆಲ ಜಲವಷ್ಟೇ ಅಲ್ಲ
ನಭೋಮಂಡಲದಾಚೆಗೂ ಗುರಿಯನ್ನು ಸಜ್ಜುಗೊಳಿಸಿ
ನಿಮ್ಮ ಸ್ವಂತ ಬಿಲ್ಲು ಬಾಣ ಹೆದೆಗೇರಿಸಿ

ಆತಂಕ ಬೇಡ ಮಧ್ಯಮ ವರ್ಗದ ಭಾರತೀಯರೆ ಡಿಸ್ಕೌಂಟ್ ಇದೆ
ಯಂತ್ರದೊಂದಿಗೆ ನಿಮ್ಮವನೇ ಬರೆದ
‘ಕಾಮ ಸೂತ್ರʼದ DVD ಉಚಿತವಿದೆ
ನೋಡಿ ಮಾಡಿ, ಮಾಡಿ ನೋಡಿ ಆರಾಮಾಗಿ ಅವಸರ ಬೇಡ
ಹೌದು ಹಾಕಿದ ಆಸನಗಳೇನೋ ವಾತ್ಸಾಯನನವೇ
ಆದರೆ ಬಳಸಿದ ಲಿಂಗಾಂಗಗಳು ಮಾತ್ರ ಪೆಂಟಗಾನಿನವು!

ಸಚಿತ್ರ ವಿವರಗಳಿಗಾಗಿ ಸಂಪರ್ಕಿಸಿ :

www.penniprabhu.com

ಇವು ಅವೇ ಕಣ್ಣು

ಎವೆ ನಿಂತ
ನನ್ನ ಮೀಸಲುಗಣ್ಣಗಳ ಕಡೆಗಣಿಸಿ
ಬಹುದಿನಗಳ ನಂತರ ನೀನು
ಎದುರಾದೆ
ನನ್ನನ್ನು ನಿನ್ನ ಕನ್ನಡಿಯಂತೆ

ಇವು ಅವೇ ತುಂಟ ಕಣ್ಣು
ಮತ್ತೆ ನೆತ್ತರಗೆಂಡವ ಚಿಮ್ಮಿ
ಕಾಲವನು ಅಭಿನಯಿಸಿ
ಕಾಲಾತೀತವಾಗ ಬಯಸುವ
ಕೆಂಪು ಗುಲಗಂಜಿ ಕಣ್ಣು

ಆದರೀಗ
ಕರಿನೀರ ಕೊಳದಂತೆ
ರಸಬತ್ತಿ ಹೋದ ಕರಿದ್ರಾಕ್ಷಿಯಂತೆ
ನುಸಿ ಹಿಡಿದು ಟೊಳ್ಳಾದ ನಕ್ಷತ್ರದಂತೆ

ಹಾಲು ಹಾದಿಯತನಕ ಚೆಲ್ಲಿ ಅಮಲುಗಣ್ಣು
ಮಾತಿಗೆ ನಿಲುಕದ ಅದೇನನೋ
ಮುಟ್ಟಿ ಮುಟ್ಟಿ ನೋಡುತಿವೆ;
ಮತ್ತೆ ಮತ್ತೆ ಮೌನದ ಅಂಚಿಗೆ ಸರಿದು ಹೋಗಿ
ಕಿವಿಗೊಟ್ಟು ಕೇಳುತಿವೆ..

ನನಗೂ
ನನ್ನ ಅಪ್ಪ ಅಮ್ಮನಿಗೂ
ಅವರಪ್ಪ ಅಮ್ಮ ಕೊಟ್ಟ ಬಳುವಳಿ
ಕತ್ತಲ ಕೀವನು ಹೀರುವ
ಒಂದು ಜೊತೆ ಬೆತ್ತಲ ಗಣ್ಣುಗಳು

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲೋಕದ ಕಣ್ಣು ಮರುಗಲೂಬಹುದು!

ಲೋಕದ ಕಣ್ಣು ಮರುಗಲೂಬಹುದು!

ಕೆ.ಜೆ.ಕೊಟ್ರಗೌಡ ತೂಲಹಳ್ಳಿ ಊರ ಬಯಲಿನ ದಿಬ್ಬದ ಮೇಲೆಈ ಮಳೆಗಾಲಕ್ಕೆಚಿಗುರೊಡೆದ ಹುಲ್ಲು ಗಂಬಳಿಯಹಾಸಿನಲಿನಾವಿಬ್ಬರೇ ಸಾನಿಧ್ಯವಹಿಸೋಣಅದೆಷ್ಟು...

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ರಾಘವೇಂದ್ರ ದೇಶಪಾಂಡೆ ವಯಸ್ಸೊಂದಿತ್ತು ಆ ದಿನಗಳಲ್ಲಿಜಾದೂವಿನಲ್ಲು ನಂಬಿಕೆಯಿತ್ತು...ವಯಸ್ಸೊಂದಿದೆ ಇವಾಗವಾಸ್ತವತೆಯಲ್ಲು ಸಂಶಯವಿದೆ......

ಲಂಗರು ಕಚ್ಚಿದ ದೋಣಿ

ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು ಲಂಗರು ಕಚ್ಚಿದ ದೋಣಿ ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This