ಭಾಗೇಶ್ರೀ ಕನ್ನಡ ಬ್ಲಾಗ್ ಲೋಕಕ್ಕೆ ಅಡಿ ಇಟ್ಟಿದ್ದಾರೆ. ಅವಧಿಯ ಓದುಗರಿಗೆ ಭಾಗೇಶ್ರೀ ಅಪರಿಚಿತರಲ್ಲ. ಇತ್ತೀಚೆಗಷ್ಟೇ ಅವರ ಕವನಗಳ ದ್ವನಿ ಸುರುಳಿ ‘ನಿನ್ನ ನೆನಪು’ ವನ್ನು ಅವಧಿಯಲ್ಲಿ ಪರಿಚಯ ಮಾಡಿ ಕೊಡಲಾಗಿತ್ತು. ಪತ್ರಕರ್ತೆಯಾಗಿ ಎಷ್ಟು ಭಾಗೇಶ್ರೀ ಪರಿಚಿತರಾಗಿದ್ದಾರೋ ಅಷ್ಟೇ ಸಾಹಿತ್ಯದ ಒಡನಾಡಿಯಾಗಿಯೂ ಎಲ್ಲರಿಗೂ ಪರಿಚಿತರು. ಪತ್ರಕರ್ತರ ಅದೇ ಇಂಟ್ರೋ ಅದೇ ಹೆಡ್ಡಿಂಗ್ ಅದೇ ಬಾಡಿ ಎಂಬ ಬದುಕಿನಲ್ಲಿ ಇದ್ದವರು ಒಂದಿಷ್ಟು ಲವಲವಿಕೆ ಹುಡುಕುತ್ತಾ ಈಗ ಬ್ಲಾಗ್ ಲೋಕಕ್ಕೆ ಬಂದಿದ್ದಾರೆ. ದಿ ಹಿಂದೂ ಪತ್ರಿಕೆಯ ಭಾಗೇಶ್ರೀ ಅಲ್ಲಿ ಪುಸ್ತಕದ ಬಗ್ಗೆ ತಮ್ಮ ಒಳನೋಟಗಳನ್ನು ಕಟ್ಟಿಕೊಟ್ಟಿದ್ದಾರೆ. ಈಗ ತಮ್ಮ ‘ಭಾಗೇಶ್ರೀ’ ಬ್ಲಾಗ್ ಮೂಲಕ ಓದುಗರಿಗೆ ಎದುರಾಗುತ್ತಿದ್ದಾರೆ.
ಅವರು ತಮ್ಮ ಬ್ಲಾಗನ್ನು ಪರಿಚಯಿಸಿಕೊಳ್ಳುವುದು ಹೀಗೆ…
+++
ಬರೆಯುವ ಕಾಯಕದಿಂದಾಚೆ…
ದಿನ ಬೆಳಗಾದರೆ ಬರೆಯುವುದೇ ಕೆಲಸ ಆದವರ ಬರವಣಿಗೆ ಒಂದು ಥರದ routineಗೆ ಬಿದ್ದುಬಿಡುತ್ತದೆ. ಒಂದು ಇಂಟ್ರೊ, ಒಂದು ಬಾಡಿ, ಒಂದು ಎಂಡಿಂಗ್… ಹೀಗೆ. ಎಲ್ಲವೂ inverted pyramid. ಅದರ ಆಚೆ ಎನೂ ಹೊಸ ತರಹದ್ದನ್ನು ಬರೆಯುವ ಸಾಧ್ಯತೆಯೇ ಕಳೆದು ಹೋಗಬಹುದೇನೋ ಎಂಬ ಭಯ ಶುರುವಾಗುತ್ತದೆ. ಅದರಲ್ಲೂ ವಯಸ್ಸಾಗುತ್ತಾ ಹೋದಂತೆ. ಇಂಗ್ಲಿಶ್ ಪೇಪರಿನಲ್ಲಿ ಕೆಲಸ ಮಾಡುವ ನನ್ನಂತ ಮಂದಿಗೆ ಕನ್ನಡ ಬರೆಯುವುದೇ ಮರೆತು ಹೋದರೆ ಎಂಬ ಇನ್ನೊಂದು ಭಯ. ಆದಕ್ಕೆ ಈ ಬ್ಲಾಗ್. ತುಂಬ selfish ಕಾರಣಕ್ಕೆ. ಸುಮ್ಮನೆ ಡೈರಿಯಲ್ಲಿ ಬರೆಯಬಹುದಲ್ಲ ಬ್ಲಾಗು ಗೀಗೆಲ್ಲ ಯಾಕೆ ಅಂತ ಕೇಳಬಹುದು. ಹೌದು. ಕೇಳಬಹುದು. ಉತ್ತರ ಸಧ್ಯಕ್ಕಂತು ಇಲ್ಲ. ಆದರೂ ಇರಲಿ. ಅಗಾಧ ಸೈಬರ್ ಲೋಕದ ಒಂದು ಮೂಲೆಯಲ್ಲಿ ಇದೂ ಒಂದಿದ್ದರೆ ನಷ್ಟವಂತೂ ಇರಲಾರದು ಎಂಬ ನಂಬಿಕೆಯೊಂದಿಗೆ… ನಮಸ್ಕಾರ.
+++ +++
ಅವರ ಬರಹದ ಸವಿ ತಿಳಿಸಲು ಅವರ ಬ್ಲಾಗ್ನಲ್ಲಿರುವ ಅನುವಾದ ಕುರಿತ ‘ಅನುವಾದದ ಮಜ’ ಬರಹದಿಂದ ಒಂದು ಕವಿತೆಯ ತುಣುಕು ಇಲ್ಲಿದೆ.
ಸಧ್ಯಕ್ಕೆ ಗಾಲಿಬನ ನನಗೆ ಪ್ರಿಯಾವಾದ ಗಜಲೊಂದರ ಕನ್ನಡೀಕರಣ. ಇಂಗ್ಲಿಷ್ ಭಾಷಾಂತರದ ಮರು ಭಾಷಾಂತರವಾದ್ದರಿಂದ ”ಮೂಲ ಅರ್ಥ” ಎನ್ನುವ ಕಲ್ಪನೆಯೇ ಇಲ್ಲಿ ವಿಚಿತ್ರ ಸ್ವರೂಪದ್ದು. ಅದರ form ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಾಡಿರುವ ಈ ಪ್ರಯತ್ನಕ್ಕೆ ಗಾಲಿಬ್ ಮತ್ತು ಆತನನ್ನು originalನಲ್ಲಿ ಓದಿದ ಎಲ್ಲರ ಕ್ಷಮೆ ಇರಲಿ.
ಮೊಂಬತ್ತಿ
ಆಕಾಶ ಭೂಮಿಗಳನ್ನು ನನಗಿತ್ತ ಅವನು ನಾನು ಸಂತುಷ್ಟನಾಗಿರುತ್ತೇನೆ ಅಂದುಕೊಂಡ.
ವಾದ ಮಾಡುವುದಕ್ಕೆ ಮುಜುಗರವೆನ್ನಿಸಿ ಏನೂ ಹೇಳದೆ ಸುಮ್ಮನಾಗಿಬಿಟ್ಟೆ.
ಆಧ್ಯಾತ್ಮ ಅರಸಿ ಹೊರಟವರೆಲ್ಲ ಸುಸ್ತಾಗಿದ್ದಾರೆ. ಪ್ರತಿ ತಿರುವಿನಲ್ಲಿ ಬಳಲಿ ಕುಳಿತಿದ್ದಾರೆ.
ಬಸವಳಿದು ಬೆಂಡಾದ ಇವರಿಗೆ ನಿನ್ನ ವಿಳಾಸವೇ ಯಾವತ್ತೂ ಗೊತ್ತಿರಲಿಲ್ಲ.
ಮೊಂಬತ್ತಿಗೆ ಶುಭ ಹಾರೈಸುವ ಬಹಳಷ್ಟು ಮಂದಿ ಇದ್ದಾರೆ ಈ ಕೂಟದಲ್ಲಿ. ಆದರೆ,
ಕರಗುವಿಕೆಯೇ ಇರುವಿಕೆಯಾದ ಮೇಲೆ ಯಾರ ಹಾರೈಕೆಯಿಂದೇನು ಸುಖ?
lovely
heart touching,ittichegaste ghalib avara pustaka odide umarkayyam galib,avara manamuutuva,manatattuva ghajalgalu nammannu berondu lokake konduyytave, superb kayyama keluva prasne matte matte kaduttade ” ee jagake naveeke bandihevoo tiliyadadu ellinda bandevo popudavadego icche keluvarilla guttu bichchuvarill marubhoomiyali boriduva gali nanu” d.ravi varma hospet