ನನ್ನನ್ನೆಲ್ಲೆಲ್ಲೋ ಹುಡುಕುತಿ.. ನಾನಿರುವೆ ನಿನ್ನಾ ಬಳಿ

ಥಟ್ಟನೆ ಕಬೀರನ ಒಂದು ಗೀತೆ ನೆನಪಿಗೆ ಬಂತು

ಅದನ್ನಿಲ್ಲಿ ಅವಧಿಯ ಓದುಗರಿಗಾಗಿ ಕನ್ನಡಿಸಿ ಕೊಟ್ಟಿದ್ದೇನೆ.

gopala-vajapeyi1
ಗೋಪಾಲ ವಾಜಪೇಯಿ

 

‘ನನ್ನನ್ನೆಲ್ಲೆಲ್ಲೋ ಹುಡುಕುತಿ…’

ಹಿಂದಿ ಮೂಲ : ‘ಮೊಕೋ ಕಹಾಂ ಢೂಂಡೇರೆ ಬಂದೇ…’


heನನ್ನನ್ನೆಲ್ಲೆಲ್ಲೋ ಹುಡುಕುತಿ ದಾಸಾ ನಾನಿರುವೆನು ನಿನ್ನಾ ಬಳಿಗೆ

ತೀರ್ಥದೊಳಿಲ್ಲ, ಮೂರ್ತದೊಳೂ ಇಲ್ಲ ನಾ ಏಕಾಂತ ನಿವಾಸದೊಳು ಇಲ್ಲ

ಮಂದಿರದೊಳಿಲ್ಲ, ಮಸೀದೆಯೊಳಿಲ್ಲ ನಾ ಕಾಬಾ ಕೈಲಾಸದೊಳು ಇಲ್ಲ

ಇರುವೆನು ನಿನ್ನಾ ಬಳಿಗೆ ದಾಸಾ ನಾನಿರುವೆನು ನಿನ್ನಾ ಬಳಿಗೆ

ಜಪದೊಳು ನಾನಿಲ್ಲ, ತಪದೊಳು ನಾನಿಲ್ಲ, ವ್ರತ-ಉಪವಾಸದೊಳು ನಾನಿಲ್ಲ

ಕ್ರಿಯಾ-ಕರ್ಮದೊಳು ನಾನಿಲ್ಲವಯ್ಯ, ಯೋಗ ಸಂನ್ಯಾಸದೊಳಿಲ್ಲ

ಪ್ರಾಣದೊಳಿಲ್ಲ ನಾ ಪಿಂಡದೊಳಿಲ್ಲ, ಬ್ರಹ್ಮಾಂಡ ಆಕಾಶದೊಳು ಇಲ್ಲ

ಪ್ರಕೃತಿ ಗರ್ಭದಿ ನಾನಿಲ್ಲವಯ್ಯ, ಶ್ವಾಸ ನಿಃಶ್ವಾಸದೊಳು ಇಲ್ಲ

ಹುಡುಕುವವಗೆ ನಾನು ತಕ್ಷಣ ಸಿಗುವೆ ಎಂದಿಗೂ ತಡಮಾಡುವವನಲ್ಲ

ಹೇಳುವ ಕಬೀರ ಕೇಳಿ ಸಾಧುಗಳಿರ ಎಲ್ಲರ ವಿಶ್ವಾಸದೊಳಗೆ

ನಾನಿರುವೆ ಎಲ್ಲರ ವಿಶ್ವಾಸದೊಳಗೆ….

‍ಲೇಖಕರು g

September 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

ಮೋಹ ಇದಿರುಗೊಳ್ಳದ ದಿನ

ಮೋಹ ಇದಿರುಗೊಳ್ಳದ ದಿನ

ಕೆ ಜೆ ಕೊಟ್ರಗೌಡ ತೂಲಹಳ್ಳಿ ಪೋಲಿಯಾಗಿ ಬಿಡಬೇಕುಯಾವ ಶಿಲಾಬಾಲೆಯೂಎದುರುಗೊಳ್ಳದ ಕಾರಣ ಅತೀ ಆಸೆಯ ಹೊಂದಿಯೂಅಮಾಯಕತೆಯಪ್ರದರ್ಶನಕೆಯಾವ...

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

17 ಪ್ರತಿಕ್ರಿಯೆಗಳು

 1. bharathi bv

  Hmmm houdu wajapeyi sir ..ava iruvudu namma nambikeyalli … beligge odi yaako manassige hithavaaythu

  ಪ್ರತಿಕ್ರಿಯೆ
 2. chandra barkoor

  ಖಂಡಿತ… ನಮ್ಮನ್ನು ನಾವು ಹುಡುಕಿಕೊಂಡಾಗಲೇ ದೇವರು ಸಿಗುತ್ತಾನೇನೋ…

  ಪ್ರತಿಕ್ರಿಯೆ
 3. N.viswanatha

  Adhbhuthavada salugalu.Nambikeyalle sadhisa bahudada kelasavannu vyartavagi ellello hudukabedi ennuttare mahathmaru .N.Viswanatha

  ಪ್ರತಿಕ್ರಿಯೆ
 4. deepaG

  ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವ ಪ್ರೀತೀಸ್ನೇಹಗಳ ಗುರುತಿಸದಾದೇನು ನಮ್ಮೊಳಗೆ….ಪದ್ಯ ನೆನಪಾಯ್ತು ಹೌದು ಪ್ರೀತಿ ವಿಶ್ವಾಸವೇ ದೇವರು.. ಥಾಂಕ್ಯೂ ಗೋಪಾಲ್ ಸರ್,

  ಪ್ರತಿಕ್ರಿಯೆ
 5. h g malagi, dharwad

  ಹುಡುಕುತ ಹೋದವರು ತಿರುಗಿ ಬರಲಿಲ್ಲ! ಹುಡುಕಿಸಿಕೊಂಡವನು ಕಾಣಲಿಲ್ಲ! ತಡಪಿ ತಡಪಿ ಹಲುಬಿದವರೇ ನಮ್ಮ ನಿಮ್ಮ ತುಂಬೆಲ್ಲ

  ಪ್ರತಿಕ್ರಿಯೆ
 6. shadakshari.Tarabenahalli

  ಕ್ರಿಯಾ-ಕರ್ಮದೊಳು ನಾನಿಲ್ಲವಯ್ಯ, ಯೋಗ ಸಂನ್ಯಾಸದೊಳಿಲ್ಲ
  ಪ್ರಾಣದೊಳಿಲ್ಲ ನಾ ಪಿಂಡದೊಳಿಲ್ಲ, ಬ್ರಹ್ಮಾಂಡ ಆಕಾಶದೊಳು ಇಲ್ಲ
  ಪ್ರಕೃತಿ ಗರ್ಭದಿ ನಾನಿಲ್ಲವಯ್ಯ, ಶ್ವಾಸ ನಿಃಶ್ವಾಸದೊಳು ಇಲ್ಲ

  ಹುಡುಕುವವಗೆ ನಾನು ತಕ್ಷಣ ಸಿಗುವೆ ಎಂದಿಗೂ ತಡಮಾಡುವವನಲ್ಲ

  Tumbaa ishTa aaytu sir…
  i simply enjoyed ur kannada …

  ಪ್ರತಿಕ್ರಿಯೆ
 7. Pushparaj Chowta

  ನನ್ನೊಳಗೆ ನನ್ನನು ಹುಡುಕಬೇಕೀಗ ಊರವರಿಗೆ ಬೆರಳು ತೋರುವ ಮೊದಲು! ಸುಂದರ ಅನುವಾದ ಗೋವಾ ಸರ್!

  ಪ್ರತಿಕ್ರಿಯೆ
 8. umesh desai

  ಅವತ್ತು ಜೆಪಿ ಮೇಡಮ್ ಮನಿಯೊಳಗ ಈ ಹಾಡು ಧನಂಜಯ್ ಕುಲಕರ್ಣಿ
  ಎಷ್ಟು ಸೊಗಸಾಗಿ ಅಂದಿದ್ರಲ್ಲ ಗುರುಗಳ

  ಪ್ರತಿಕ್ರಿಯೆ
 9. ಜಿ.ಎನ್ ನಾಗರಾಜ್

  ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ
  ಕುಳಿತರೆ ನಿಲುವ, ನಿಂತರೆ ನಲಿವ,
  ನಲಿದರೆ ಒಲಿವೆ ನಿಮಗೆಂಬೀ ಹರಿ ಸುಲಭನೋ
  ತನ್ನವರನರಗಳಿಗೆ ಬಿಟ್ಟಗಲನೋ
  ರಮಾ ಮಾಧವನನೊಲಿಸರಿಯದೆ
  ಬಳಲುವರು ಪಾಮರರು ಜಗದೊಳಗೆ.
  ನಮ್ಮ ವಚನ, ದಾಸರ ಪದ, ಕಬೀರ ವಚನಾವಲಿ, ಮರಾಠೀ ಅಭಂಗಗಳು,ಚೌರಾಸೀ ಸಿದ್ಧರ ದೋಹೆಗಳು,ಚೈತನ್ಯನ ಸಹಜೀಯ ಪಂಥದ ಗಾಹೆಗಳು, ಅಣ್ಣಮಾಚಾರ್ಯರ ಹಾಡುಗಳು ಎಷ್ಟೊಂದು ವೈವಿಧ್ಯಮಯವಾಗಿ ಆ ಯುಗದ ಭಾವಗಳನ್ನು ಬಣ್ಣಿಸಿವೆ ?

  ಪ್ರತಿಕ್ರಿಯೆ
 10. ಹನುಮಂತ ಹಾಲಿಗೇರಿ

  ತುಂಬಾ ಸರಳವಾದ ಅರ್ಥಗರ್ಭಿತವಾದ ಅನುವಾದ ಸರ್

  ಪ್ರತಿಕ್ರಿಯೆ
 11. Ahalya Ballal

  ಕಬೀರನ ಯೋಚನಾ ಲಹರಿ ಕನ್ನಡದಲ್ಲಿ ಬಂದಿರುವುದು ನಮಗೆಲ್ಲ ಲಾಭ, ಸರ್.

  ಪ್ರತಿಕ್ರಿಯೆ
 12. g.rangaswamy

  wah tumba chennagide ide rithi halvAru dohe galu irutte. avugalannu kannawakke anuvadha madi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: