ಒಂದು ಬದನೇಕಾಯಿ ಪುರಾಣ

ಪ್ರಿನ್ಸ್ಟನ್ ಪಂಡಿತರ ಬದನೇಕಾಯಿ ಪರಾಕು

-ಎನ್. ಸದ್ಯೋಜಾತ

brinjal

ಮಾನ್ಯರೆ,

ಬಿಟಿ ಬದನೆಕಾಯಿಯ ಬಗೆಗೆ ನನಗೆ ಗೊತ್ತಿರುವ ವೈಜ್ಞಾನಿಕ ತಿಳುವಳಿಕೆ ಇಷ್ಟು:

ಇದು ರೈತನಿಗೆ ವಿಶೇಷ ಪ್ರಯೋಜನ ನೀಡುವುದಿಲ್ಲ ಏಕೆಂದರೆ,

1. ಬಿಟಿ ತಂತ್ರಜ್ಞಾನದಿಂದ ಬದನೆಯ ಇಳುವರಿ ಹೆಚ್ಚಾಗುವುದಿಲ್ಲ.

2. ಬಿಟಿ ಬದನೆ ಬೆಳೆದರೆ ರೈತನಿಗೆ ನೀರು ಗೊಬ್ಬರದಲ್ಲಿ ಉಳಿತಾಯವಾಗುವುದಿಲ್ಲ;

3. ಅದರ ಬೀಜವನ್ನು ಕಾದಿರಿಸಿ ಎರಡನೆಯ, ಮೂರನೆಯ ಬೆಳೆ ತೆಗೆಯುವಂತೆಯೂ ಇಲ್ಲ.

ಇದನ್ನು ಮಾರುವವನಿಗೂ ವಿಶೇಷ ಪ್ರಯೋಜನ ಇಲ್ಲ ಏಕೆಂದರೆ

1. ಕೊಯ್ಲು ಮಾಡಿದ ನಂತರ ಬಿಟಿ ಬದನೆ ಜಾಸ್ತಿ ದಿನ ಉಳಿಯುತ್ತದೆಯೆ ಅದೂ ಇಲ್ಲ.

2. ಬಳಕೆದಾರರು ಪೈಪೋಟಿಯಲ್ಲಿ ಖರೀದಿಸುತ್ತಾರೆಯೇ ಅದೂ ಇಲ್ಲ, ಏಕೆಂದರೆ-

ಬಳಕೆದಾರನಿಗೆ ಇದರಿಂದ ವಿಶೇಷ ಪ್ರಯೋಜನವೂ ಇಲ್ಲ, ಏಕೆಂದರೆ,

1. ಇದನ್ನು ಅಡುಗೆಯಲ್ಲಿ ಬಳಸಿದರೆ ರುಚಿ ಹೆಚ್ಚಾಗುವುದಿಲ್ಲ.

2. ಇದರ ಪಲ್ಯೆ ಹುಳಿ ತಿಂದರೆ ಆರೋಗ್ಯ ಹೆಚ್ಚುತ್ತದೆಯೆ ಅದೂ ಇಲ್ಲ.

ಹಾಗಿದ್ದರೆ ಇದು ಯಾರಿಗೆ ಪ್ರಯೋಜನ ಎಂಬ ಪ್ರಶ್ನೆ ಬರುತ್ತದೆ. ಬೀಜ ಮಾರಾಟ ಮಾಡುವ ಕಂಪನಿಗೆ, ಹಾಗೂ ಅಂಥ ಕಂಪನಿಗಳ ಅಡಿಯಾಳಾಗಿ ಬಿಟಿಯ ತುತ್ತೂರಿ ಊದುವ ‘ವಿ’ಜ್ಞಾನಿಗೆ ಲಾಭವಾಗುತ್ತದೆ.

ಇನ್ನು ತಾನೊಬ್ಬ ವಿಜ್ಞಾನಿ ಎಂಬ ಭ್ರಮೆಯಲ್ಲಿರುವ ಡಾ. ಎಸ್. ಶಾಂತಾರಾಮ್ ಅವರ ಲೇಖನವನ್ನು ಓದಿದ ನಂತರ ನನಗೆ ಅನ್ನಿಸಿದ್ದು ಇಷ್ಟು:

‘ವಿಜ್ಞಾನಿ’ ಎಂದರೆ ನಿಸರ್ಗದ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವವನು. (ಇದು ನಾನು ಹೇಳಿದ್ದಲ್ಲ, ದಾರ್ಶನಿಕರ ಮಾತು). ನಿಸರ್ಗ ಪೂತರ್ಿ ಅರ್ಥವಾಗುವ ಮೊದಲೇ ತನ್ನ ಲಾಭಕ್ಕಾಗಿ ನಿಸರ್ಗವನ್ನು ನಾನಾ ತಂತ್ರಗಳಿಂದ ತಿದ್ದುವವನನ್ನು ‘ತಂತ್ರಜ್ಞಾನಿ’ ಎನ್ನುತ್ತಾರೆ. ತಂತ್ರಜ್ಞಾನಿಗೆ ಎಲ್ಲವೂ ಗೊತ್ತು, ಅದರ ‘ಲವಲೇಶವೂ ಗೊತ್ತಿಲ್ಲದ ರೈತ ಮುಖಂಡರು, ಪತ್ರಕರ್ತರು, ಸಾಹಿತಿಗಳು, ಬರಹಗಾರರು ರಾಜಕೀಯ ದುರುದ್ದೇಶದವರು’ ಎಂದು ಧಿಮಾಕಿನಿಂದ ಲೇಖನಿಯನ್ನು ಹರಿಬಿಟ್ಟ ಪ್ರಿನ್ಸ್ಟನ್ ಪಂಡಿತ ಶಾಂತಾರಾಮ್ ಹೆಚ್ಚೆಂದರೆ ಯಾವುದೋ ಲಾಭಖೋರರ ಕನ್ನಡ ತುತ್ತೂರಿಯಂತೆ ಕಾಣುತ್ತಾರೆಯೆ ವಿನಾ ವಿಜ್ಞಾನಿಯಾಗಿರಲು ಸಾಧ್ಯವಿಲ್ಲ. ಇರಲಿ.

‘ಪ್ರಪಂಚದ ಎಲ್ಲರಿಗಿಂತ ಭಾರತದ ಕೃಷಿ ಹಿಂದುಳಿದಿದೆ, ನಮ್ಮ ರೈತರ ಇಳುವರಿ ಯಾವ ದೇಶಕ್ಕೆ ಹೋಲಿಸಿದರೂ ಅತಿ ಕನಿಷ್ಠ, ಆಧುನಿಕ ತಂತ್ರಜ್ಞಾನ ಪ್ರಯೋಜನ ರೈತರ ಕೈಗೆ ಸಿಗದ ಹಾಗೆ ಆಂದೋಲನ ಮಾಡಿದರೆ ರೈತರನ್ನು ಆ ದೇವರೇ ಕಾಪಾಡಬೇಕು’ ಎಂದೆಲ್ಲ ಇವರು ಬರೆದಿದ್ದಾರೆ.

ವಾಸ್ತವ ಏನೆಂದರೆ, ‘ಆಧುನಿಕ ತಂತ್ರಜ್ಞಾನ’ದ ಹೊರೆಯನ್ನು ಹೊತ್ತು ಹೊತ್ತು ರೈತರು ಬಸವಳಿದಿದ್ದಾರೆ. ಆ ತಂತ್ರಜ್ಞಾನವನ್ನು ರೈತರಿಗೆ ಮಾರಿದ ಎಲ್ಲರೂ ಉದ್ಧಾರವಾಗಿದ್ದಾರೆ. ಟ್ರ್ಯಾಕ್ಟರು, ರಸಗೊಬ್ಬರ, ಹೈಬ್ರಿಡ್ ಬೀಜ, ಬೋರ್ವೆಲ್, ಪಂಪ್ಸೆಟ್, ಡೀಸೆಲ್, ಸೀಮೆಣ್ಣೆ, ಸಿಂಪಡನಾ ಯಂತ್ರ, ಬೆಳೆವಿಮೆ ಮುಂತಾದವುಗಳ ಏಜೆಂಟರೂ ಮಾರುಕಟ್ಟೆ ಗುಮಾಸ್ತರೂ ಉದ್ಧಾರವಾಗಿದ್ದಾರೆ. ರೈತರು ಮಾತ್ರ ಗಂಟೆಗೆ ಇಬ್ಬಿಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದಿಂದಾಗಿ ಪಂಜಾಬಿನಲ್ಲಿ ಹಳ್ಳಿಹಳ್ಳಿಗಳೇ ದಿವಾಳಿಯಾಗಿವೆ. ನಗರಕ್ಕೆ ದಿನವೂ ಕ್ಯಾನ್ಸರ್ ಟ್ರೇನ್ ಓಡುತ್ತಿದೆ. ಇನ್ನೇನೇನು ‘ವರದಾನ’ ಕೊಡೋರಿದ್ದೀರಿ ರೈತರಿಗೆ ಹೇಳಿ ಶಾಂತಾರಾಮ್?

brinjal

ಅಮೆರಿಕದಲ್ಲಿ 30 ಕೋಟಿ ಪ್ರಜೆಗಳು ಕುಲಾಂತರಿ ಆಹಾರವನ್ನು ಸೇವಿಸುತ್ತಿದ್ದಾರಂತೆ. ಸೂಪರ್ ಮಾಕರ್ೆಟ್ಗಳಲ್ಲಿ ಬೇರೇನೂ ಸಿಗದಂತೆ ಬರೀ ಅದನ್ನೇ ತುಂಬಿಸಿಟ್ಟರೆ ಇನ್ನೇನು ಮಾಡುತ್ತಾರೆ ಪಾಪ! ಅಲ್ಲಿನವರ ಆರೋಗ್ಯದ ವಿಷಯ ನಮಗೆ ಗೊತ್ತಿಲ್ಲವಾ? ನಿತ್ಯವೂ ಎಂಬಂತೆ ಅಲ್ಲಿನ ಸಾಲ್ಮೊನೆಲ್ಲಾ ಭಯ, ಡಯಾಕ್ಸಿನ್ ಕೋಲಾಹಲ, ಮಕ್ಯರ್ುರಿ ದಿಗಿಲು, ಮೆಲನಿನ್ ಹಗರಣಗಳ ಮಧ್ಯೆ ಕುಲಾಂತರಿ ಊಟ-ತಿಂಡಿ ತಿಂದ ಅವರೇನು ಅಮರರಾಗಿದ್ದಾರಾ? ಹೃದ್ರೋಗ, ಪಾಕರ್ಿನ್ಸನ್, ಕಿಡ್ನಿ-ಲಿವರ್ ವೈಫಲ್ಯ, ಕರುಳಿನ ಕ್ಯಾನ್ಸರ್, ಕೊಲೆಸ್ಟೆರಾಲ್, ಬೊಜ್ಜಿನ ಸಮಸ್ಯೆಗಳಿಂದ ನಲುಗಿ ಸಾವಯವ ಆಹಾರ, ಯೋಗ, ಪ್ರಾಣಾಯಾಮ ಎಂದೆಲ್ಲ ಭಜಿಸುವವರು ಏಕೆ ಅಲ್ಲಿ ಹೆಚ್ಚುತ್ತಿದ್ದಾರೆ? ‘ಕುಲಾಂತರಿ ಬೇಡವೇ ಬೇಡ’ ಎಂದು 14 ವರ್ಷಗಳಿಂದ ಈ ತಂತ್ರಜ್ಞಾನ ಬಾರದಂತೆ ತಡೆಹಿಡಿದ ಯುರೋಪ್ನ ಹನ್ನೆರಡು ದೇಶಗಳ ಜನರೆಲ್ಲ ಅಜ್ಞಾನಿಗಳೆ? ದಡ್ಡರೆ?

ಲೇಖಕರು ಅಷ್ಟೆಲ್ಲ ಹಾಡಿ ಹೊಗಳುವ ಅಮೆರಿಕ ದೇಶದಲ್ಲಿ ರೈತರ ಸಂಖ್ಯೆಗಿಂತ ಜೈಲಿನಲ್ಲಿ, ಪೆರೋಲ್ನಲ್ಲಿರುವವರ ಸಂಖ್ಯೆಯೇ ಹೆಚ್ಚಿದೆ. ನಮ್ಮಲ್ಲೂ ಅದೇ ಆಗಬೇಕೆ?

ಭಾರತದ ರೈತರು ‘ಕುಲಾಂತರಿ ತಂತ್ರಜ್ಞಾನದ ಲಾಭಾಂಶದಿಂದ ವಂಚಿತರಾಗಬಾರದು’ ಎಂದು ಶಾಂತಾರಾಮ್ ಕೊನೆಯಲ್ಲಿ ಹೇಳಿದ್ದಾರೆ. ರೈತರು ವಂಚಿತರಾಗುವುದಿಲ್ಲ. ಅದರಿಂದ ಸಿಗುವ ಲಾಭಾಂಶದಿಂದ ಬೀಜ ಕಂಪನಿಗಳು ಮತ್ತು ತುತ್ತೂರಿವಾದಕರು ವಂಚಿತರಾದಾರಷ್ಟೆ. ಇಲ್ಲಾಂದರೆ, ಬದನೇಕಾಯಿಯ ಹಿಂದೆ ಇಷ್ಟೆಲ್ಲ ವಿಶ್ವವಿದ್ಯಾಲಯಗಳು, ಇಷ್ಟೊಂದು ವಿಜ್ಞಾನಿಗಳು, ಇಷ್ಟೊಂದು ಸಮಿತಿಗಳು ಶ್ರಮಿಸುತ್ತಿವೆ ಏಕೆ? ಬಿಟಿ ಬದನೆಯನ್ನು ಹೊಲಕ್ಕಿಳಿಸಲು ಅಹೋರಾತ್ರಿ ಲಾಬಿ ಮಾಡುತ್ತಿವೆ ಏಕೆ? ಅದನ್ನು ತಿನ್ನದಿದ್ದರೆ ನಾವೆಲ್ಲ ಏನು ಹಸಿವೆಯಿಂದ ಸತ್ತೇ ಹೋಗುತ್ತೀವಾ? ಇನ್ನೂ ಹತ್ತು ವರ್ಷ ಪರೀಕ್ಷೆ ಮಾಡಿ ನೋಡಿದರೆ ಹೊಲಗಳೆಲ್ಲ ಕಣ್ಮರೆಯಾಗುತ್ತವಾ? ಯಾಕೆ ಅವಸರ? ಏನಿದು ಹುನ್ನಾರ? ಇದೊಂದನ್ನು ಹೊಲಕ್ಕಿಳಿಸಿದ ಮೇಲೆ ಅದೇ ಬಾಗಿಲಲ್ಲಿ ಇನ್ನು ಯಾವ ಯಾವ ಬಿಟಿ ಫಸಲುಗಳ ಮೆರವಣಿಗೆ ಬರಲಿವೆ?

‍ಲೇಖಕರು avadhi

August 7, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. Kirankumari

    ಸರ್,

    ಬಿಟಿ. ಬದನೆ -ನಿಮ್ಮ ವಿಶ್ಲೇಶಣೆ ಸರಿಯಾಗಿಯೇ ಇದೆ. ಬಿಟಿ.ಬದನೆ ಬಗ್ಗೆ ಇತ್ತೀಚೆಗೆ ಎಲ್ಲ ಮಾಧ್ಯಮಗಳಲ್ಲೂ ಸಾಕಷ್ಟು ಪರ ವಿರೊಧ ಚರ್ಚೆ ನಡೆಯುತ್ತಲೆ ಬ೦ದಿದೆ. ಇಲ್ಲಿ ಪರ ವಿರೋಧ ಅನ್ನುವುದಕ್ಕಿ೦ತ ” ಲಾಭ-ನಷ್ಟ ”ದ ಲೆಕ್ಕಾಚಾರವೇ ಎದ್ದು ಕಾಣುವುದು. ಮು೦ದುವರಿದ ದೇಶಗಳ ವಿಜ್ನ್ಯಾನದ ಪ್ರಯೋಗ ಪಶುಗಳೇ ನಮ್ಮ ರೈತರು. ಪ್ರಶ್ನೆ ಇರುವುದು, ಈ ವಿಚಾರವನ್ನು ” ವಿಜ್ನ್ಯಾನಿ ” ಗಳು ತಮ್ಮ ಬೌದ್ದಿಕ ಸ್ವತ್ತೆ೦ದು ಪರಿಭಾವಿಸಿ..ತ೦ತ್ರಜ್ನ್ಯಾನದ ಹರಿಕಾರರೇನೋ ಎ೦ಬ೦ತೆ ವರ್ತಿಸುತ್ತಿರುವುದು ಹಾಸ್ಯಾಸ್ಪದ. ಬದನೆ-ಕುರಿತ ಅನೇಕ ಮಾಹಿತಿಗಳು , ನ೦ಬಿಕೆಗಳು ನಮ್ಮ ಗ್ರಾಮೀಣ ಸಮುದಾಯದವರಲ್ಲಿ..ರೈತರಲ್ಲಿ ಈಗಾಗಲೇ ಇವೆ. ಯಾವ ಬದನೆ ಬೆಳೆದರೆ..ಭೂಮಿಗೂ ರೈತರಿಗೂ..ಗ್ರಾಹಕರಿಗೂ ಒಳ್ಳೆಯದಾಗುತ್ತದೆ ಎ೦ಬ ಮಾಹಿತಿ ನಮ್ಮ ವಿಜ್ನ್ಯಾನಿಗಳಿಗಿ೦ತ ರೈತರಿಗೆ ಹೆಚ್ಚಿನ ಅರಿವು ಇದೆ. ಯಾಕೆ೦ದರೆ..ಅವರ್ಯಾರೂ , ಕ೦ಪನಿಯ ವಕ್ತಾರರೂ ಅಲ್ಲ..ಲ್ಯಾಬ್ ನಲ್ಲಿ ಕುಳಿತು ಸ೦ಶೋಧನೆ ನಡೆಸುತ್ತಿಲ್ಲ. ಇಷ್ಟಕ್ಕೂ ಇದರ ಹಿ೦ದಿರುವ ತಳಿ ಕ೦ಪನಿಗಳ ಲಾಬಿ..ಯನ್ನು ಅರ್ಥ ಮಾಡಿಕೊಳ್ಳದ ದಡ್ಡ ಜನರಲ್ಲ ನಮ್ಮ ದೇಶದ ರೈತರು. ಅದಕ್ಕಾಗಿಯೇ ಈ ಕುರಿತು ವಿಶ್ವಾದ್ಯ೦ತ ಬಿಟಿ-ಕುಲಾ೦ತರಿ ಬದನೆ ಬೇಡ ಎ೦ಬ ಚಳುವಳಿ ಯ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತಿರುವುದು. ವಿಶ್ವದ ಅನೇಕ ರಾಷ್ಟ್ರಗಳು..ಈ ಚಳುವಳಿಯ ಭಾಗವಾಗಿರುವುದು. ಆಹಾರರಾಜಕಾರಣವನ್ನು ಸೂಕ್ತವಾಗಿ ಅರ್ಥೈಸಿಕೊಳ್ಳದೇ..ಜ್ನ್ಯಾನ-ವಿಜ್ನ್ಯಾನಗಳ ಪೈಪೋಟಿಯಲ್ಲೇ..ಕಳೆದು ಹೋಗುತ್ತಿರುವ ವಿಜ್ನ್ಯಾನ-ತ೦ತ್ರಜ್ನ್ಯಾನ ಮನುಷ್ಯನ ಮೂಲ ಬದುಕಿಗೆ ಸಹಜವಾಗಿ ಸ್ಪ೦ದನೆ ನೀಡಬೇಕೇ ಹೊರತು..ಶ್ರೇಷ್ಟತೆಯ ಅಹ೦ನಿ೦ದಾಗಲಿ, ಬಲವ೦ತದ ಪ್ರಯೋಗದಿ೦ದಾಗಲಿ ಅಲ್ಲ ಎ೦ಬುದನ್ನು ” ಬಿಟಿ ಬದನೆ ” ಪರವಾಗಿ ಮಾತನಾಡುವವರು ಇನ್ನಾದರೂ ಎಚ್ಚೆತ್ತುಕೊ೦ಡು ಪ್ರತಿಕ್ರಿಯಿಸುವುದು ಉತ್ತಮ ಎ೦ದು ನನ್ನ ಭಾವನೆ.

    ನಿಮ್ಮ ಪ್ರತಿಕ್ರಿಯೆ ಹರಿತವಾಗಿಯೂ, ನಿಖರವಾದ ಮಾಹಿತಿಯಿ೦ದ ಕೂಡಿದೆ. ಧನ್ಯವಾದಗಳು. ಬಿಟಿ-ಬದನೆ ಬೇಡ..ಎ೦ಬ ನಿಲುವಲ್ಲಿ ನಾವೂ ನಿಮ್ಮೊ೦ದಿಗಿದ್ದೇವೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ KirankumariCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: