’ಒ೦ಟಿತನ ಅ೦ದರೆ….’ – ಸುನಿಲ್ ರಾವ್

ಒಂಟಿತನ ಅಂದರೇನು??

– ಸುನಿಲ್ ರಾವ್

ನಾನು ಹಲವಾರು ಬಾರಿ ನನ್ನೊಳಗೆ ಆಗುವ ಪ್ರಕ್ರಿಯೆ ಹಾಗು ಬೇರೆಯವರಲ್ಲಿ ಮೂಡಿಬರುವ ಆಲೋಚನೆಗಳನ್ನು ಗಮನಿಸುತ್ತಾ ಹೋದಂತೆ,ತೀರಾ ನನಗೆ ಅನ್ನಿಸೋದು ನಿಜವಾಗಿಯೂ ಒಬ್ಬನನ್ನು ಅಥವಾ ಒಬ್ಬಳನ್ನು ಒಬ್ಬೊಂಟಿತನ ಕಾಡುತ್ತದೆಯ??ಅಸಲು ಒಬ್ಬೊಂಟಿತನ ಅಂದರೆ ಏನು??ಅದರ ಸ್ವರೂಪ ಏನು??ಪ್ರತಿಯೊಬ್ಬನಿಗೂ ಇಂತಹ ಭಾವ ಕಾಡಿದಾಗ ಆತ ಮೊರೆ ಹೋಗುವ ಪುಸ್ತಕ,ಸಂಗೀತ,ಇನ್ನೊಬ್ಬರಲ್ಲಿ ಹಂಚಿಕೊಳ್ಳುವಿಕೆ ಏನು ಮಾಡಿದರು ನೀಗದ,ಆರದ….ಇವಿಷ್ಟೇಲ್ಲವನ್ನು ಮೀರಿದ ಆ ಒಬ್ಬೊಂಟಿತನ ಏನು? ನಾವು ಆ ಒಬ್ಬೊಂಟಿತನಕ್ಕೆ ಒಂದು frame ಹಾಕಿದ್ದೇವೆ…ನಮ್ಮ ಪ್ರಕಾರ ಒಬ್ಬೊಂಟಿತನ ಅಂದರೆ ಶೂನ್ಯಭಾವ,ದುಖ,ನೋವು,ಹಿಂಸೆ,ಯಾತನೆ,ಕೊರಗು…ಇವೆಲ್ಲವೂ ನಮ್ಮಲ್ಲಿ ಕಂಡಾಗ ಅದಕ್ಕೆ ಸ್ಪಂದಿಸುವಂತಹ ಇನ್ನೊಂದು ‘ಜೀವಿ’ ಬೇಕು…ಆ ಜೀವಿ ಕಾಣದೆ ಇದ್ದಾಗ ಅದು ಹೌದೆಂದು ನಾವು ಒಬ್ಬೊಂಟಿತನದಲ್ಲಿ ಇರುವೆವೆವು ಎಂದು ಭಾವಿಸುತ್ತೇವೆ…ಮತ್ತು ನಮ್ಮಲ್ಲಿ ಇರುವ ನೋವುಗಳನ್ನು cover ಮಾಡಿಕೊಳ್ಳದೆ ಇದ್ದ ಸಂದರ್ಭದಲ್ಲಿ ನಾವು ಒಂಟಿ ಅನಿಸಲು ಶುರುವಾಗುತ್ತದೆ.ಆಗ ನಾವು ಆ ನೋವುಗಳನ್ನು cover ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ…ಇನ್ನೂ ಕೆಲವು ವ್ಯಕ್ತಿಗಳು ಜನರ ಮಧ್ಯೆಯೇ ಇದ್ದೂ ಕೂಡ ತಾನು ಏಕಾಂಗಿ ಎಂದು ಭಾವಿಸುತ್ತಾರೆ…ಒಂಥರಾ ಇದ್ದೂ ಇಲ್ಲದ ಭಾವ. ಇಲ್ಲೇ ನಾವು ಒಂಚೂರು ಜಾಗರೂಕರಾಗ ಬೇಕಾಗಿರೋದು,ಒಂದು ಸವಾಲನ್ನು ನಾವು ನಿರ್ದಾಕ್ಷಿಣ್ಯವಾಗಿ ಎದುರಿಸಬೇಕಾಗುತ್ತದೆ,ಆ ಸವಾಲು ಏನು ಎಂಬುದರ ಜಾಗೃತ ಅವಸ್ಥೆ ಬೇಕಾಗುತ್ತದೆ,ಅದರ ವಿಶ್ಲೇಷಣೆ ಮಾಡಬೇಕಾಗುತ್ತದೆ,ಅದರ ಮೂಲವನ್ನು ಹುಡುಕಬೇಕಾಗುತ್ತದೆ ಇವೆಲ್ಲಕ್ಕಿನ್ನ ಮುಖ್ಯವಾಗಿ ನಾವು ಎಡವುದು ಎಲ್ಲಿ ಅಂದರೆ,ನಮ್ಮಲಿ ಮೂಡಿದ ಸಮಸ್ಯೆಗಳಿಂದ escape ಆಗಲು ಪ್ರಯತ್ನಪಟ್ಟಾಗ…ಹಾಗೆ ಪ್ರಯತ್ನಿಸಿದಷ್ಟು ಇದು ಇಮ್ಮಡಿಯಾಗಿಯೇ ಹೋಗುತ್ತವೆ ಹೊರತು ಕಮ್ಮಿಯಾಗೋಲ್ಲ,ಅಂತಹ ಸಮಸ್ಯೆ ಬಂದಾಗ ಹಾಡು ಕೇಳಿಸಿಕೊಂಡರೆ ನೀವಾರಿಸಬಹುದು ಎಂಬ ಭಾವ ಬರುತ್ತದೆ,ರೇಡಿಯೋ ಕೇಳಿ ಮರೆಯಬಹುದು ಎನಿಸುತ್ತದೆ,ಹಾಗು ಆ ಸಮಸ್ಯೆಗಳಿಂದ ಆಗುವ ದುಷ್ಪರಿಣಾಮಗಳನ್ನು ನಾವು ಮೊದಲೇ ಎಣಿಸಿಬಿಡುತ್ತೇವೆ…ಅಯ್ಯೋ ಹೀಗಾಗಿಬಿಡುತ್ತದೆ,ಹಾಗಾಗಿ ಬಿಡುತ್ತದೆ ನನ್ನನು ಯಾರೂ ಕೇರ್ ಮಾಡೋಲ್ಲ,ನಾನು ಹೀನಾಯನಾಗುತ್ತೇನೆ ಎಂಬ ಭಯ ಕೂಡ ಆವರಿಸಿಬಿಡುತ್ತದೆ,ಆ ದುಷ್ಪರಿಣಾಮದ ಪರಿಕಲ್ಪನೆಯೊಂದಿಗೆ…ಒಬ್ಬೊಂಟಿತನದ ಭ್ರಮೆ ಎರಡೂ ಸೇರಿ ನಮ್ಮನ್ನು ಇನ್ನೂ ಮುಳುಗಿಸಿಬಿಡುತ್ತದೆ…ಒಂದೊಮ್ಮೆ ಅಂತಹ escape ಆಗುವ ಭಾವನೆಗಳು…ಸಾಂಸಾರಿಕ ಬದುಕಿಗೂ affect ಆಗ್ತವೆ… ಇಂತಹ ಸಂದರ್ಭಗಳಲ್ಲಿ ನಮ್ಮ ಮನಸ್ಸು ವರ್ಕ್ ಔಟ್ ಮಾಡಲು ಶುರು ಮಾಡುತ್ತದೆ,ಒದಗಿರುವ ಒಬ್ಬೊಂಟಿತನಕ್ಕೆ ನಾನು ಹೇಗೆ ತಯಾರಾಗಬೇಕು ಅಂತ ಪ್ರಯತ್ನಿಸುತ್ತದೆ,ಮನಸ್ಸು ತಾನೇ ಭಿನ್ನ ಭಿನ್ನ ಐಡಿಯಾ ಕೊಟ್ಟುಕೊಳ್ಳುತ್ತಾ ಹೋಗುತ್ತದೆ,ನಾವು ನಮ್ಮ ಬುದ್ಧಿವಂತಿಕೆಯ ಬಗ್ಗೆ ಖುಷಿ ಪಡುತ್ತೇವೆ,ಈ ಸಲ ಇದನ್ನು ನೀಗಿಸಿಬಿಟ್ಟೆವು ಎಂಬ ಹರ ಸಾಹಸದ ಉತ್ತುಂಗವಾಗುತ್ತೇವೆ…. ಆದರೆ ಕೊನೆಗೆ practical ಆಗಿ ಕಂಡಾಗ ಯಾವ ಧ್ಯಾನ,ಯಾವ ದೇವರೂ ಕೂಡ ಅಂತಹ ಒಂದು escaped spaceನ ಮುಚ್ಚೋಕೆ ಆಗೇ ಇರೋದಿಲ್ಲ ಅಲ್ಲವ??ಅಸಲು ಕೂತು ಗಮನಿಸಿದಾಗ ನಾವು ಇದ್ದಲ್ಲೇ ಇರುತ್ತೇವೆ,ನಿಜವಾಗಿಯೂ ನಮ್ಮ ಅನುಭವಕ್ಕೆ ನಾವು ಸಮಸ್ಯೆಗಳಿಂದ ಬಗೆಹರಿಸಿಕೊಂಡು ಬಂದು ಬಿಟ್ಟೆವು ಅನ್ನೋ ಸಮಾಧಾನ ಸಿಗುತ್ತದೆಯಾ ??ಸಿಕ್ಕರೂ ಅದು ನಿಜವಾದದ್ದ?? ಮಾಡಬೇಕಾಗಿರೋದಾದ್ರು ಏನು?!! escape ಆಗೋದನ್ನು ಮೊದಲು ನಿಲ್ಲಿಸಬೇಕು ಎಂಬುದು ನನ್ನ ಅಭಿಪ್ರಾಯ ,ಎರಡನೆಯದು escape ಆಗುವ ಬದಲು ನಾವೇನು ಮಾಡಬಹುದು ಎಂಬುದು ಯೋಚನೆ ಮಾಡುವುದು ಮುಖ್ಯವಾದದ್ದು,ಹೌದಲ್ಲವಾ??ಒಬ್ಬೊಂಟಿತನ ಕಾಡಿದಾಗ ನಾವು ಆನ್ ಮಾಡುವ TV ,ಹಾಡು ಕೇಳುವ ರೇಡಿಯೋ ಇವೆಲ್ಲವನ್ನೂ ನಿಲ್ಲಿಸಿ ಇನ್ನೇನು ಮಾಡಬಹುದು?ಅಥವಾ ಈಗಾಗಲೇ ನಮ್ಮ ಮೆದುಳಿನಲ್ಲಿ ರೆಕಾರ್ಡ್ ಆಗಿರುವ ಎಷ್ಟೆಷ್ಟೋ techniqueಗಳನ್ನೂ ಕೂಡ ಬಳಸಬಾರದು…ನಾವು ತುಂಬಾ ಬುದ್ಧಿವಂತರೆಂದು ಭಾವಿಸುತ್ತೇವೆ…ನಮಗೆ ಒಂದೊಂದು ಸಮಸ್ಯೆಗೂ ಒಂದೊಂದು ಪರಿಹಾರವೆಂಬ ಪ್ರಿ ರೆಕಾರ್ಡೆಡ್ ಸತ್ಯಗಳು ಇದ್ದುಬಿಡುತ್ತವೆ….ನಾವು ಅದನ್ನೇ ಬಳಸುತ್ತಾ ಹೋಗುತ್ತೇವೆ…ಕೊನೆಗೊಮ್ಮೆ ಯಾವುದು ಫಲಿಸದೇ ಮತ್ತೆ ಅದೇ ಸ್ಥಾನಕ್ಕೆ ಮರಳಿ ಬಳಲಿ ಕೂತುಬಿಡುತ್ತೇವೆ…ಅಲ್ಲವಾ?? ಒಬ್ಬೊಬ್ಬರದು ಒಂದೊಂದು ಮಾರ್ಗ ಇರುತ್ತವೆ …ಈಗ ನನ್ನದೇ ಆದ ದೃಷ್ಟಿಕೋನದಲ್ಲಿ ನಾನು ನನ್ನ ಸಮಸ್ಯೆಯ ಪರಿಹಾರ ಕಂಡುಕೊಲ್ಲಬಲ್ಲೆ..ಆದರೆ ನೀವು ನನ್ನ ಹಿಂಬಾಲಿಸಲಾರಿರಿ…ಅದು ಬೇಡವೂ ಬೇಡ..ನಿಮ್ಮ ಹಾಗು ನನ್ನ ಸಮಸ್ಯೆಗಳು ಒಂದೇ ಆಗಿರೋದಿಲ್ಲ ಅಲ್ಲವಾ? ಅಥವಾ ನನ್ನ ಹಾಗು ನಿಮ್ಮ ಸಮಸ್ಯೆಯ ಸ್ವರೂಪವೇ ಬೇರೆ ಬೇರೆ ಆಗಿರುತ್ತವೆ…ಆದರಿಂದ ಒಂದೇ ಉತ್ತರವನ್ನು frame ಮಾಡಿ ಚೌಕಟ್ಟಿನೊಳಗೆ ಇಟ್ಟುಕೊಳ್ಳಲು ಸಾದ್ಯವಿಲ್ಲ…ಆದರೆ ಒಂದು clue ಕೊಡಬಲ್ಲೆ…. ನೀವು observationನ ಮೂರೆ ಹೋಗಬಹುದು…”observation ” ನನ್ನ ಪ್ರತಿ ಸಮಸ್ಯೆಗೂ ಇದೊಂದೇ ನಂಗೆ ಮದ್ದು…ಗಮನಿಸುತ್ತ ಹೋದಂತೆ ಕಮ್ಮಿಯಾಗುತ್ತೆ ಹಾಗು ಪರಿಹಾರವೂ ಸಿಗುತ್ತದೆ….ಸಿಕ್ಕಿದೆ ಕೂಡ ಕೆಲವರ ಅಸಹಾಯಕತೆ,ಯಾತನಾದಾಯಕ ಜೀವನ,ತಮ್ಮಲ್ಲೇ ಇದ್ದ ಖುಷಿಯನ್ನು ಬಿಟ್ಟು ಇನ್ನೇನನ್ನೋ ಅರಸುತ್ತ ಹೋದಂತೆ ಪಡೆಯುವ ಶೂನ್ಯದ ಉತ್ತರಗಳು,ಇನ್ನೊಬ್ಬರ ಪ್ರೀತಿಗೆ ಜಿಹ್ವೆ ಚಾಚಿ ಕಾಯುವ ಹಪಹಪಿ,ನೊಂದಾಗ ಸಿಕ್ಕ ಮಡಿಲಲ್ಲಿ ತಲೆಯನ್ನು ಆತು ಮಲಗಿ ಕ್ಷಣಕ್ಕೆ ನಿದ್ದ್ರಿಸಿ,ಮತ್ತೆ ಎದ್ದು ಮನೆಗೆ ಹೋದಾಗ ಕಾಡುವ ಅದದೇ ಭಾವನೆಗಳ ಮಧ್ಯೆ ಜಂಜಡಗಳ ಮಧ್ಯೆ ನೋಯುವ ಎಷ್ಟೋ ಸುತ್ತಲಿನ ವ್ಯಕ್ತಿಗಳನ್ನು ಕಂಡಾಗ ಹೀಗೆ ಬರೆಯಬೇಕು ಅನ್ನಿಸಿತು… ನಾವು ಈಗಾಗಲೇ ಕಟ್ಟಿಕೊಂಡ ಮನೆ,ಕೋಟ್ಯಾಂತರ…ಲಕ್ಶಾಂತರವೋ ಇಟ್ಟುಕೊಂಡ ಬ್ಯಾಂಕ್ ಬ್ಯಾಲೆನ್ಸ್ ಗಳು,ಮಕ್ಕಳ ಭವಿಷ್ಯಗಳು,ನೆಂಟರ ಮಾತುಗಳು……ಎಂಬ secured ಭಾವಕ್ಕೋ ಮೀರಿ…ಒಬ್ಬೊಂಟಿತನ ಅಥವಾ ಇನ್ಯಾವುದೇ ಸಮಸ್ಯೆ ಕಾಡಿದಾಗ ಗಮನಿಸಿಕೊಳ್ಳುವ ಒಂದು ಶಕ್ತಿ ಅಥವಾ ಮನಸ್ಸಿನ ಸ್ಥಿತಿ ಬೇಕಾಗುತ್ತದೆ..ಆಗ ಯಾವ ಸಮಸ್ಯೆಯೂ ಸಮಸ್ಯೆ ಆಗಲು ಸಾಧ್ಯವಿಲ್ಲ…ಒಂಚೂರು ನಿಮ್ಮ ಬಗ್ಗೆ ನೀವೇ ಗಮನ ಕೊಡಿ ಪ್ಲೀಸ್……..ಎಲ್ಲವೂ ಸಾಧ್ಯವಿದೆ… ಕೊನೆಗೆ ಒಂದಂತು ನಿಜ ನಮ್ಮ ಸಮಸ್ಯೆ ನಮ್ಮಿಂದಲೇ ಆದ್ದರಿಂದ ಪರಿಹಾರವು ನಮ್ಮದೇ,ಯಾರೂ ಕಂಡುಕೊಡಲು ಸಾಧ್ಯವಿಲ್ಲ… truth is always pathless..find it ….]]>

‍ಲೇಖಕರು G

May 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

14 ಪ್ರತಿಕ್ರಿಯೆಗಳು

 1. Deepti

  Hy Sunil its good Article aadru estondu onti anta bhavisbedi nam prblm ge nammalle solution eutter nija adre namage close eddora hatra charche madbeku avrinda anadru help agutte………
  SunnyS (hubli)

  ಪ್ರತಿಕ್ರಿಯೆ
 2. Kala Anand

  Wah! Sunil great kano…ivattina ee ninna lekhanadalli ninna manasina proudime eddu kaanutte…idu neenena anstaide..samasye eduraagi manasu ontitana bayasidaaga..haadu, harate ge manasu kottu taatkaalika phalitaamsha kandukolluva badalige..namma aathma vimarshe maadikondare..aa samasyege parihaarvu nammalliye iruttate…idu khandita satya sunil…Thank you very much for giving such useful article

  ಪ್ರತಿಕ್ರಿಯೆ
 3. PrakashSrinivas

  ತುಂಬಾ ಚೆನ್ನಾಗಿದೆ ಸುನಿಲ್ …
  ನಿನ್ನ ಲೇಖನಗಳು ಒಳ್ಳೆಯ ಭಾವನೆಗಳನ್ನು ಕೊಡುತ್ತೆ!

  ಪ್ರತಿಕ್ರಿಯೆ
 4. Ajeet Joshi

  ನೀನು ಹೇಳಿದ ಮಾತುಗಳು ನಿಜ ಅಣ್ಣಾ, ಒಬ್ಬಂಟಿತನ ಕಾಡುವುದು ಸಹಜ ಅದನ್ನು ಹೋಗಲಾಡಿಸುವುದು ನಮ್ಮ ಕೈಯಲ್ಲಿ ಇದೇ ಎನ್ನುವ ನಿನ್ನ ಮಾತು ನೂರಕ್ಕೆ ನೂರರಷ್ಟು ಸತ್ಯ.

  ಪ್ರತಿಕ್ರಿಯೆ
 5. ವಿನಯ್ ಭರದ್ವಾಜ

  ಪ್ರಾಬ್ಲಮ್ಮು ಹೇಳಿ ಅದಕ್ಕೆ ಸಲ್ಲ್ಯುಷನ್ನು ಕೊಟ್ಟಿದ್ಯ. ಆದ್ರೂ ಒಂಟೀತನವನ್ನ ಪ್ರಾಬ್ಲಂ ಅಂತ ಯಾಕೆ ಪರಿಗಣಿಸಬೇಕು…? ಏನಂತೀಯ..?

  ಪ್ರತಿಕ್ರಿಯೆ
 6. badarinath palavalli

  ಇದನ್ನು ಹೀಗೇ ಮತ್ತು ನನ್ನ ವಾದವೇ ಸರಿ, ಎಂದು ಹೇಳುವಷ್ಟು ಪ್ರಾಙ್ಞನು ನಾನಲ್ಲ. ಆದರೆ ಪಲಾಯನ ಗೈಯದ ಮತ್ತು ಸರ್ವರಿಗೂ ನಗೆ ಹಂಚಲು ಉತ್ಸುಕನಾದ ಸ್ವಯಂ ನಾನೇ ಬಕ್ಕಾ ಬಾರಲು ಬಿದ್ದಾಗ, ಈ ‘ಒಬ್ಬಂಟಿತನ’ದ ನೈಜ ಚಿತ್ರಣ ಸಿಕ್ಕಿದ್ದು!

  ಪ್ರತಿಕ್ರಿಯೆ
 7. umaprakashkv

  ‘ನಿಜ ನಮ್ಮ ಸಮಸ್ಯೆ ನಮ್ಮಿಂದಲೇ ಆದ್ದರಿಂದ ಪರಿಹಾರವು ನಮ್ಮದೇ,ಯಾರೂ ಕಂಡುಕೊಡಲು ಸಾಧ್ಯವಿಲ್ಲ’ wah awesome kano; prathee bari ninna article odidaaga nanage hosadondu anubhava sigutte, yakendre ninna yochanalahari arisikolluva subject damm good irutte. Ninna lekhanagala abhimaani agibittideeni sunil .…

  ಪ್ರತಿಕ್ರಿಯೆ
 8. D.RAVI VARMA

  ಪ್ರಿಯರೆ ನಿಮ್ಮ ಲೇಖನ ಅರ್ಥಪುರ್ನವಾಗಿದೆ
  ಒಂಟಿತನ ಹಲವೊಮ್ಮೆ ಅದುದುಖವನ್ನು ತಂದರೂ ಇನ್ನು ಹಲವೊಮ್ಮೆ ಆನಂದವನ್ನು ತರುತ್ತದೆ, ದಾಸರು ಹೇಳಿದ ಹಾಗೆ “ಯಾರಿಗೆ ಯಾರುಂಟು ಯರವಿನ ಸಂಸಾರ, ನೀರ ಮೇಲಿನ ಗುಳ್ಳೆ ನಿಜವಲ್ಲ್ವೋ ಹರಿಯೇ,ನಿಜವಲ್ಲವೋ ” ಇತ್ತೇಚೆಗೆ ಒಂದು ಜನಪದ ಹಾಡು ಕೇಳಿದ್ದೆ “ಯಾಕೆ ಬಡೆದಾಡ್ತಿ ತಮ್ಮ ಮಾಯ ಮೆಚ್ಚಿ ಸಂಸಾರ ಮೆಚ್ಚಿ ,ನೀನೋಗೊದರಿಯೇ ತಮ್ಮ ಮಣ್ಣ ಮುಚ್ಹಿ, ಕಣ್ಣ ಮುಚ್ಚಿ, ಹೆದತಿ ಮಕ್ಕಳು ಬರುವರು ಎಲ್ಲಿತನಕ ಮಣ್ಣು ಮುಚ್ಹೊತನಕ, …………. ಹೀಗೆಯೇ ನಾವು ನಮ್ಮದೆಂದು ಬಯಸಿದ ಎಲ್ಲವನ್ನು ಕಾಲಘಟ್ಟದಲ್ಲಿ ಕಳೆದುಕೊಳ್ಳುತ್ತೇವೆ, ನಿನ್ನೆ ಮೊನೆಯವರೆಗೂ ಜೊತೆಗೆ ಬೀರು ಹೀರುತ್ತಿದ್ದ ಗೆಳೆಯ, ಮುಸ್ಸಂಜೆಯಲಿ ಯಾರು ನೋದುವರೆನೋ ಎನ್ನುವ ಬಯದೊಡನೆ ಹಣೆಗೆ ಮುತ್ತು ಕೊಟ್ಟ ಗೆಳತಿ , ಹತ್ತಾರು ವರ್ಷ ಜೋತೆಕಳೆದರು ಅರ್ಥಿಸಿಕೊಲ್ಲಲಾರದ ಹೆಂಡತಿ,ಮಕ್ಕಳು, ಸ್ನೇಹಿತರು,………ಹೀಗೆ ಕೆಲವ್ವೊಮ್ಮೆ ಮನುಸ್ಯ ಒಂಟಿತನವನ್ನು ಹುಡುಕಿಕೊಂಡು ಹೋಗುತ್ತಿದ್ದಾನೆ, ಇಲ್ಲಿ ಈ ಗದ್ದಲ,ನೋವು, ಹತಾಶೆ ,ಅಸಹನೆ, ಮೋಸ ಎಲ್ಲಕ್ಕೂ ಬೇಸತ್ತು ಒಂಟಿಯಾಗಿರಬೆಂದು ಮನೆ ಮಟ ಬಿಟ್ಟು ಶ್ರೀಮಂತಿಕೆಗೆ ಒದ್ದು ಎಲ್ಲೋ ದೂರದ ಅಶ್ರಮವನ್ನೋ, ನದಿ ಬಯಲನ್ನೋ, ಗುಡಿಗುಂದಾರವನ್ನೋ ಸೇರಿದ್ದನ್ನು ನಾನು ನೋಡಿದ್ದೇನೆ. ಅವರ್ಯಾರು ಪಲಾಯನವಾದಿಗಳಲ್ಲ, ಅದು ಅವರು ಹುಡಿಕಿಕೊಂಡ ಹಾದಿ,ನೆಮ್ಮದಿಯ ಬದುಕು, ಕೆಲವೊಮ್ಮೆ ಇಲ್ಲಿ ಎಲ್ಲವು ಇದ್ದು ಏನು ಇಲ್ಲವೆನಿಸಿಬಿದುತ್ತದೆ, ಹಾಗೆ ನನ್ನ ಮುಂದೆ ಅವಳತ್ತುಕೊಳ್ಳುವ,ಅಳುವ ಗೆಳೆಯರನ್ನು ನಾನು ನೋಡಿದ್ದೇನೆ, ಅವರು ಇವರೇಕೆ ನನಗು ಹತ್ತಾರು ಬರಿ ಹಾಗನ್ನಿಸಿದ್ದು ಉಂಟು, ಬುದ್ಧನನ್ನೇ ತಗೆದುಕೊಳ್ಳಿ,ಅರಮನೆಯನ್ನೇ ತ್ಯಜಿಸಿ ಒಂಟಿಯಾಗಿ ಕಾಡು ಸೇರಿದ್ದು ಅದು ಯಾಕೆ, ಒಂದು ಹೊಸ ನೆಮ್ಮದಿಯ ಹುಡುಕಾಟದಲ್ಲಿ ಅಲ್ಲವೇ, ಬುದ್ಧ ನೊಂದೆ ಅಲ್ಲ ಹಾಗೆ ಸಾವಿರಾರು drustantagalive , ಯಾಕೋ ರಾಜಣ್ಣ ಅವರ ಹಾಡು ನೆನಪು ಬರ್ತಿದೆ ,
  “ಎಲ್ಲಿಗೆ ಪಯಣಾ ,ಯಾವೊದೋ ದಾರಿ, ಏಕಾಂಗೀ ಸಂಚಾರಿ ”
  ಬಹುಷಃ ನನಗನ್ನಿಸೋ ಹಾಗೆ ಆ ಒಂಟಿತನ kaledukollale ಈ ಅವಧಿಗೆ ಇಸ್ಟೊಂದು ಬರಹಗಾರರು srustiyaaguttiddareno …………. ತಮ್ಮ,ನಗು,ಅಳು,ಹಳಹಳಿಕೆ, ಒಂಟಿತನ ಎಲ್ಲವನ್ನು ಇಲ್ಲಿ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆನೋ ಅಂತಾ ಅನಿಸುತ್ತೆ.
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 9. pravara

  ಒಂಟಿತನ ಅನ್ನೋದು ಧ್ಯಾನದ ಹೊರತು ಮತ್ತೇನು ಅಲ್ಲ….. ನಿನ್ನ ಲೇಖನ ಒಂಟಿತನದ ಬಲವನ್ನ ಇನ್ನಷ್ಟು ಹೆಚ್ಚಿಸ್ತು….. ಚೆನ್ನಾಗಿದೆ

  ಪ್ರತಿಕ್ರಿಯೆ
 10. ರವಿ ಮುರ್ನಾಡು, ಕ್ಯಾಮರೂನ್

  ಈ ಲೇಖನ ಪಕ್ಕಾ ಅನುಭವದಿಂದ ಅತೀ ಸೂಕ್ಷ್ಮಗಳನ್ನು ತೆರೆದಿಟ್ಟಿದೆ. ಮನುಷ್ಯ ಒಂಟಿ ಅನ್ನಿಸಿಕೊಳ್ಳುವುದು ತ೦ಟೆಗಳು ಬೇಡವೆಂದಾಗ ಅನ್ನುವ ವಾದ ಒಂದು ಕಡೆಯಾದರೆ ,ಇನ್ನೊಂದು ತನ್ನನ್ನೇ ತಾನು ಜಗತ್ತಿಗೆ ಹೋಲಿಸಿಕೊಂಡು ಆಲೋಚಿಸುವಾಗ ಮಾತ್ರ ಸಾಧ್ಯ.ಅದು ಸದ್ದು ಗದ್ದಲವನ್ನು ಸಾರ ಸಗಟಾಗಿ ತಿರಸ್ಕರಿಸುವ ಪ್ರಲೋಭ ಭಾವ. ಮಾನ್ಯ ಸುನಿಲ್ ಅವರ ಈ ಲೇಖನ ಮನಸ್ಸಿನ ಶೂನ್ಯಕ್ಕೊಂದು ಭಾಷ್ಯ ಬರೆದಂತಿದೆ. ಚೆನ್ನಾಗಿದೆ ಲೇಖನ.
  ಇದಕ್ಕೆ ಇನ್ನೊಂದು ಮುಖವಾಗಿ ಕಾಣುವುದು ಗದ್ದಲವನ್ನು ಬಯಸುವ ಮನಸ್ಸು. ಈ ಅಂತರ್ಜಾಲ ಸಂಪರ್ಕ ಬರುವ ಮೊದಲು ಬೀದಿಯಲ್ಲಿ ಇವುಗಳನ್ನು ನೋಡುತ್ತಿದ್ದೆವು. ಅಲ್ಲಿ ಮುಖ ಮುಖಗಳು ಕಾಣುತ್ತಿದ್ದವು. ಈ ಅಂತರ್ಜಾಲದಲ್ಲಿ ಯಾರು ಯಾರು ಎಂದು ಗೊತ್ತಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಚರ್ಚೆಗಳು ತಲೆಗೆ ತುಂಬಿ ಒಬ್ಬೊಂಟಿತನವನ್ನು ಮುಚ್ಚಿಬಿಟ್ಟಿದೆ. ವಾದಕ್ಕೊಂದು ವಿತಂಡ ವಾದ, ಅಲ್ಲಿ ಪ್ರತಿಕ್ರಿಯೆ , ಪ್ರತಿಕ್ರಿಯೆ ನಂತರ ಪ್ರತಿಕ್ರಿಯೆಯೇ ಒಂದು ಪ್ರಕಟಣೆ. ಪ್ರಕಟಣೆಗೆ ಒಂದಷ್ಟು ಪ್ರತಿಕ್ರಿಯೆ. ಅಲ್ಲಿಂದ ಇನ್ನಷ್ಟು ಪ್ರಕಟಣೆ. ಅಂತಿಮವಾಗಿ ಪರಿಹಾರ ಶೂನ್ಯ. ಒಂದಷ್ಟು ಮಾರ್ಯಾದಸ್ತರು ಏನನ್ನೋ ಕಳೆದುಕೊಂಡರು.ಕಳೆಯದಿದ್ದರು ಕೆಲವರು ಕಳೆದರು. ಕಳೆದುಕೊಂಡವರನ್ನು ನೋಡಿ ಒಂದಷ್ಟು ಜನರು ನಕ್ಕರು. ನೋವಾಯಿತೇನೋ ಎಂದು ಕೆಲವರು ಇಲ್ಲಿ ಹಾಲು ಕೊಟ್ಟು , ಅಲ್ಲಿ ಚಿವುಟಿದರು. ಕೆಲವರು ಅಳುತ್ತಿದ್ದರು. ಕೆಲವರು ನಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಕನ್ನಡದ ಅಕ್ಷರಗಳು ಕೆಲವೊಮ್ಮೆ ನವಿರಾಗಿ, ಗಂಭೀರವಾಗಿ, ತೂರಾಡುವ ಜಲ್ಲಿ ಕಲ್ಲುಗಳಾಗಿ, ಕೆಲವೊಮ್ಮೆ ಸಗಣಿಯಾಗಿ, ಕೊಳೆತ ಮೊಟ್ಟೆಗಳಾಗಿ,ನಾರುವ ಟೊಮೇಟೊಗಳಾಗಿ ಹಿಗ್ಗಾಮುಗ್ಗ ಕನ್ನಡತನವನ್ನು ಜಗತ್ತಿನ ಹೊರನಾಡುಗಳಿಗೆ ಪರಿಚಯಿಸುತ್ತವೆ. ಅದು ಇತರ ಭಾಷೆಗಳಿಗೆ ಭಾಷಾ೦ತರವಾಗುತ್ತವೆ.
  ಗೂಳಿ ಗುಳಿಗೆ ಬಿದ್ದಾಗ ಆಳಿಗೊಂದು ಕಲ್ಲು. ಎಷ್ಟು ಜನರು ನೋವುಂಡರೋ, ಎಷ್ಟು ಜನರು ಶರ್ಟಿನ ಕಾಲರು ಕೊಡವಿ ಮೆರೆದರೋ?
  ಹಾಗಾಗಿ ಮಾನ್ಯ ಸುನಿಲ್ ಅವರ ಈ ಲೇಖನ ಸಂದರ್ಭೋಚಿತವಾಗಿ ಸೆರೆ ಹಿಡಿಯಲ್ಪಟ್ಟಿದೆ.ನನ್ನಲ್ಲಿ ಈ ಲೇಖನಕ್ಕೆ ಸಾವಿರ ಚಪ್ಪಾಳೆಯ ಧ್ವನಿ ಇದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: