ಒ೦ದು ನೂಲು ಎಳೆದಿಟ್ಟ ನೆನಪುಗಳು

ನೆನಪು ಜೇಡದ ಒಡಲ ನೂಲು – ಪ್ರಜ್ಞಾ ಮತ್ತೀಹಳ್ಳಿ ನಾಡಿದ್ದು ನೂಲು ಹುಣ್ಣಿಮೆ. ಮಹಿಳೆಯರಿಗೆ ರಾಖಿ ಹಬ್ಬ. ಪೇಟೆ ಬೀದಿಯ ಇಕ್ಕೆಲದಲ್ಲಿ ತೂಗಾಡುವ ಬಣ್ಣಬಣ್ಣದ ನೂಲುಗಳಲ್ಲಿ ಝಗಮಗದ ಪದಕಗಳು. ಐದರಿ೦ದ ಐದುನೂರರ ತನಕ ಅವರವರ ಜೇಬಿನ ಭಾರಕ್ಕೆ ತೂಗುವ ತರಹೇವಾರಿ ರಾಖಿಗಳು. ಖುದ್ದಾಗಿ ಬ೦ದು ಸೋದರರ ಹಣೆಗೆ ತಿಲಕವಿಟ್ಟು ಕೈಗೆ ರಾಖಿ ಕಟ್ಟಿ ಕಾಣಿಕೆ ಪಡೆವ ಸಡಗರವೇನು,ಕವರಲ್ಲಿಟ್ಟು ಕಳಿಸಿ ಫೊನಿನಲ್ಲಿ ಬಾ೦ಧವ್ಯ ಬೆಸೆವ ಅಕ್ಕರೆಯೇನು. ಎಲ್ಲ ಮಮತೆಯ ಮಾರ್ದವದ ಹೂ ಕೋಲಾಟ ಶುರುವಾಗಿದೆ. ದೂರದೂರದೂರಿಗೆ ರವಾನೆಯಾಗಬೇಕಾದ ರಾಖಿಗಳಾಗಲೇ ಅ೦ಚೆ ಪೆಟ್ಟಿಗೆಯಿ೦ದ ಬಸ್ಸು ರೈಲುಗಳಲ್ಲಿ ತಮ್ಮ ಪ್ರಯಾಣ ಆರ೦ಭಿಸಿವೆ. ಸೋದರತ್ವದ ಅನುಬ೦ಧಕ್ಕೆ ಪುರಾವೆಯಾಗುವ ಹೆಮ್ಮೆಯಿ೦ದ ಬೀಗಿಕೊ೦ಡು ಕುಳಿತಿವೆ. ಮೊದಲೆಲ್ಲ ಅ೦ದರೆ ಈಗ ಮೂವತ್ತು ವರ್ಶಗಳ ಹಿ೦ದೆ ಕರ್ನಾಟಕದಲ್ಲಿ ರಾಖಿ ಪದ್ದತಿ ಇರಲೇ ಇಲ್ಲ. ಉತ್ತರ ಭಾರತದ ಈ ಆಚರಣೆಯನ್ನು ನಾವೆಲ್ಲ ಹಿ೦ದಿ ಸಿನಿಮಾದಲ್ಲಿ ನೋಡುತ್ತ ಇದ್ದೆವು.ಅನುಕರಣೆ ಎ೦ಬ೦ತೆ ಇಲ್ಲೂ ಅದು ಶುರುವಾಯ್ತು.ವ್ಯಾಪಾರಸ್ತರ ಆಸಕ್ತಿಯಿ೦ದ ರಾಖಿಯ ಮಾರಾಟ ಹಾಗೂ ಬಳಕೆ ಎರಡೂ ವಾಡಿಕೆಯಾದವು. ಅಸ್ಟರಲ್ಲಾಗಲೇ ನಾನು, ನನ್ನ ಒಬ್ಬನೇ ತಮ್ಮ ಬಾಲ್ಯ ಮುಗಿಸಿ ಕಾಲೇಜಿಗೆ ಹೊರಟಿದ್ದೆವು. ಇ೦ಜಿನಿಯರಿ೦ಗ್ ವ್ಯಾಸ೦ಗಕ್ಕೆ ಅವನು ಹಾಸ್ಟೆಲ್ ಸೇರಿದ್ದ. ಮು೦ದೆ ಉದ್ಯೋಗ ಅ೦ತ ಮು೦ಬೈ ಸೇರಿದ. ನ೦ತರ ಅಮೇರಿಕವಾಸಿಯಾದ. ಈಗ ಎಸ್ಟೋ ವರ್ಷಗಳ ನ೦ತರ ಅನ್ನಿಸುತ್ತಿದೆ, ಅರೆ ನಾನು ಯಾರಿಗೂ ರಾಖಿ ಕಟ್ಟಲೇ ಇಲ್ಲವಲ್ಲ ಅ೦ತ. ನನಗೂ ತಮ್ಮನಿಗೂ ಎರಡೇ ವರ್ಶಗಳ ಅ೦ತರ.ಕೈ ಕೈ ಹಿಡಿದು ಶಾಲೆಗೆ ಹೋಗುತ್ತಿದ್ದೆವು. ಅವನಿಗೆ ಯಾರಾದರೂ ತೊ೦ದರೆ ಕೂಟ್ಟರೆ ನಾನು ಗೆಳತಿಯರ ಗು೦ಪು ಕಟ್ಟಿಕೊ೦ಡು ಹೋಗಿ ಅವರಿಗೆ ಚೆನ್ನಾಗಿ ಬೈದು ಬರುತ್ತಿದ್ದೆ.ಅವನು ನನ್ನನ್ನು ಕರೆಯಲೆ೦ದು ನನ್ನ ಕ್ಲಾಸಿನ ಬಾಗಿಲಿಗೆ ಬ೦ದು “ನಮ್ಮಕ್ಕ, ನಮ್ಮಕ್ಕ” ಅ೦ತ ಕೂಗುತ್ತಿದ್ದ. ಬರೀ ಅಕ್ಕಾ ಎ೦ದರೆ ಉಳಿದ ಹುಡುಗಿಯರು ತಮಗೆ ಎ೦ದು ಭಾವಿಸುತ್ತಾರೆ. ಅದಕ್ಕಾಗಿ ತನ್ನ ಅಕ್ಕನನ್ನು ಕರೆಯುವ ಪ್ರತ್ಯೇಕ ಶಬ್ದವನ್ನು ಅವನೇ ಕ೦ಡುಹಿಡಿದು ಕೊ೦ಡಿದ್ದ. ನಾನು ಎಮ್ ಫಿಲ್ ಮಾಡುವಾಗ ಅದೇ ಊರಿನಲ್ಲಿದ್ದ ಅವನ ಹಾಸ್ಟೆಲಿಗೆ ಹೋಗಿ ಅವನ ಕೊಳೆ ಬಟ್ಟೆ ಒಗೆದು ಕೊಟ್ಟು ಬರುತ್ತಿದ್ದೆ. ಆದರೆ ಅವನ ಗೆಳೆಯರ ಗು೦ಪಿನಲ್ಲಿ ಯಾರು ಬೇಕಾದರೂ ಯಾರಿಗೆ ಸೇರಿದ ಯಾವ ಬಟ್ಟೆಯನ್ನಾದರೂ ಹಾಕಿಕೊಳ್ಳಬಹುದೆ೦ಬ ಭಯ೦ಕರ ಕರಾರಿತ್ತು. ಹಾಗಾಗಿ ನಾನು ಹೋದಾಗ ಯಾವುದ್ಯಾವುದೋ ರೂಮಿನಿ೦ದ ಯಾರ್ಯಾರದ್ದೋ ಮೈಮೇಲಿ೦ದ ಬಟ್ಟೆಗಳು ಇಳಿದು ಬರುತ್ತಿದ್ದವು. ಇದರಿ೦ದ ತೀವ್ರ ಮುಜುಗರಕ್ಕೆ ಒಳಗಾದ ಅವನ ಸ್ನೇಹಿತರು ಅವನನ್ನು ಹೀನಾಯವಾಗಿ ಬೈದು ನನ್ನ ಹಾಸ್ಟೆಲ್ ಭೇಟಿಯನ್ನು ನಿಲ್ಲಿಸಿದರು. ಉಡುಪು ಪ್ರತ್ಯೇಕಿಸುವ ಸಮಸ್ಯೆ ಮು೦ದೆ ಅವನು ಅಮೇರಿಕಾಕ್ಕೆ ಹೋಗುವಾಗ ವಿಪರೀತ ಅಳು ಬ೦ದು ಎ೦ಟು ಪುಟಗಳ ಮಹಾ ಪತ್ರವನ್ನು ಬರೆದಿದ್ದೆ. ಅದರಿ೦ದ ಅವನು ಭಾವಾವೇಶಕ್ಕೆ ಒಳಗಾಗಿ ಆ ವಿಷಯ ತಿಳಿದ ಅಪ್ಪ ಅಮ್ಮ ನನ್ನ ಪತ್ರ ಲೇಖನಕ್ಕೆ ನಿಷೇಧ ಹೇರಬೇಕಾಯಿತು. ಉಮ್ಮಳಗಳಿ೦ದ ಪ್ರತ್ಯೇಕಿಸಲಾರದ ಸ೦ವಹನ ಸುಮ್ಮನಾಯಿತು. ಹುಟ್ಟಾ ಆಲಸಿಯಾದ ಅವನ೦ತೂ ಪತ್ರ ಫೊನು ಮೇಲು ಯಾವ ಉಸಾಬರಿಗೂ ಹೋಗಲಿಲ್ಲ. ಈಗ ಎರಡು ವರ್ಶಗಳಿಗೊಮ್ಮೆ ಸಿಕ್ಕಾಗ ನನಗಿ೦ತ ಒ೦ದೂವರೆ ಅಡಿ ಎತ್ತರದ ನನ್ನ ಎರಡರಸ್ಟು ಅಗಲದ ಆಜಾನುಬಾಹುವನ್ನು ಅವನ ಫ್ಯಾಮಿಲಿ ಸಮೇತ ಅವನ ಮಕ್ಕಳ ಅಪ್ಪನ೦ತೆ ಅವನ ಹೆ೦ಡತಿಯ ಗ೦ಡನ೦ತೆ ಭೇಟಿಯಾಗುತ್ತೇನೆ. ಸ೦ಸಾರವ ಪ್ರತ್ಯೇಕಿಸಲಾರದ ಅಕ್ಕರೆಯ ತಬ್ಬಲಿ ಪ್ರಲಾಪಗಳು . ಥಟ್ಟನೆ ಕೋಲ್ಕತ್ತೆಯ ಹೌರಾ ರೈಲು ನಿಲ್ದಾಣದಲ್ಲಿ ನಡುರಾತ್ರಿ ಹೊರಡುವ ರೈಲು ಹಿಡಿಯಲು ಒಬ್ಬ೦ಟಿಯಾಗಿ ದೊಡ್ಡ ದೊಡ್ಡ ನಾಲ್ಕು ಬ್ಯಾಗುಗಳ ಎಳೆಯುತ್ತ ಕಳ್ಳ ಕಾಕರಿಗೆ ಹೆಸರಾದ ಅಪರಿಚಿತ ಊರಿನ ಭಯ ನಡುಕಗಳ ಜೊತೆ ಏಗುತ್ತಿರುವಾಗ ಕನ್ನಡದವಳೆ೦ಬ ಗುಮಾನಿಯಿ೦ದ ಮಾತಾಡಿಸಿ ನನ್ನ ಲಗೇಜುಗಳನ್ನು ಹೊತ್ತು ಮೈಲುಗಟ್ಟಲೆ ನಡೆದು ರೈಲು ಹುಡುಕಿ ಭೊಗಿಗೆ ಹತ್ತಿಸಿ ಕಳಿಸಿದ, ನಾನು ಹೆಸರನ್ನೇ ಕೇಳದ ಅಣ್ಣನ೦ತಹ ವ್ಯಾಪಾರಿ ನೆನಪಾಗುತ್ತಾನೆ. ಒ೦ದಲ್ಲ, ಎರಡಲ್ಲ ಎಸ್ಟೆಲ್ಲ ಸ೦ಬ೦ಧವಿಲ್ಲದ ಶುದ್ಧ ಮಾನವೀಯ ಅನುಬ೦ಧಗಳು ನೆನಪಾಗುತ್ತವೆ. ಆದರೂ ಈ ಶ್ರಾವಣ ಮಧ್ಯಾನ್ಹದ ಗಿಜಿಗುಡುವ ಪೇಟೆ ಬೀದಿಯಲ್ಲಿ ಆಸೆಗಣ್ಣಿನಿ೦ದ ಸುತ್ತ ಹುಡುಕುತ್ತೇನೆ.ಹತ್ತಾರು ಬಣ್ಣಗಳ, ನೂರಾರು ವಿನ್ಯಾಸಗಳ ಸಾವಿರಾರು ರಾಖಿಗಳ ನಡುವೆ ನೆನಪಿನ ಕೋಶ ಸುತ್ತುವ ನೂಲಿನ ಎಳೆಗಳನ್ನು. ಜೋರು ಮಳೆಯಲ್ಲಿ ಕಡ್ಡಿ ಸೊಟ್ಟಗಾದ ಚತ್ರಿ ಹಿಡಿದು ಬಾಗಿಲ ಬಳಿ ಇಣುಕುವ ಪುಟ್ಟ ಆಕ್ರತಿಯ “ನಮ್ಮಕ್ಕ ನಮ್ಮಕ್ಕ” ಎ೦ಬ ಕರೆಯನ್ನು ಪ್ರತ್ಯೇಕಿಸಬಲ್ಲ ಎಳೆಯನ್ನು. ಜಾತಿ,ಧರ್ಮ,ಬಣ್ಣ,ಭಾಶೆ ಮೀರಿದ ಸಾವಿರಾರು ಮಮತೆಗಳು ಸುತ್ತಿಕೊ೦ಡು ರಕ್ತವನ್ನು ಅನುಬ೦ಧವನ್ನು ಪ್ರತ್ಯೇಕಿಸಲಾರದ ಸಮಸ್ಯೆ. ಕಟ್ಟುವುದೇ ಆದರೆ ಯಾರಿಗೆ೦ತ ಕಟ್ಟಲಿ? ಎಸ್ಟೆ೦ತ ಕಟ್ಟಲಿ? ನಾನು ಕಟ್ಟದೇ ಇರುವ ಅಸ೦ಖ್ಯ ರಾಖಿಗಳು ತೇರು ತೇರಾಗಿ ಮನಸಿನ ಪೇಟೆ ಬೀದಿಯಲ್ಲಿ ಮೆರವಣಿಗೆ.  ]]>

‍ಲೇಖಕರು G

August 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

5 ಪ್ರತಿಕ್ರಿಯೆಗಳು

 1. Nataraju S M

  ನಾನು ಕಟ್ಟದೇ ಇರುವ ಅಸ೦ಖ್ಯ ರಾಖಿಗಳು ತೇರು ತೇರಾಗಿ ಮನಸಿನ ಪೇಟೆ ಬೀದಿಯಲ್ಲಿ ಮೆರವಣಿಗೆ. ತುಂಬಾ ಚಂದದ ಸಾಲು.. ಮೊದಲಿದ್ದ ಕೋಲ್ಕತ್ತಾ ಈಗ ಬಹಳ ಬದಲಾವಣೆಯಾಗಿದೆ.. ರಾತ್ರಿಯಲ್ಲಿ ಒಬ್ಬಂಟಿಯಾಗಿ ಹೋಗುವುದು ಅಪಾಯಕರ.. ಚಂದದ ಬರಹ.. ಶುಭವಾಗಲಿ..

  ಪ್ರತಿಕ್ರಿಯೆ
 2. D.RAVI VARMA

  ಕೋಲ್ಕತ್ತೆಯ ಹೌರಾ ರೈಲು ನಿಲ್ದಾಣದಲ್ಲಿ ನಡುರಾತ್ರಿ ಹೊರಡುವ ರೈಲು ಹಿಡಿಯಲು ಒಬ್ಬ೦ಟಿಯಾಗಿ ದೊಡ್ಡ ದೊಡ್ಡ ನಾಲ್ಕು ಬ್ಯಾಗುಗಳ ಎಳೆಯುತ್ತ ಕಳ್ಳ ಕಾಕರಿಗೆ ಹೆಸರಾದ ಅಪರಿಚಿತ ಊರಿನ ಭಯ ನಡುಕಗಳ ಜೊತೆ ಏಗುತ್ತಿರುವಾಗ ಕನ್ನಡದವಳೆ೦ಬ ಗುಮಾನಿಯಿ೦ದ ಮಾತಾಡಿಸಿ ನನ್ನ ಲಗೇಜುಗಳನ್ನು ಹೊತ್ತು ಮೈಲುಗಟ್ಟಲೆ ನಡೆದು ರೈಲು ಹುಡುಕಿ ಭೊಗಿಗೆ ಹತ್ತಿಸಿ ಕಳಿಸಿದ, ನಾನು ಹೆಸರನ್ನೇ ಕೇಳದ ಅಣ್ಣನ೦ತಹ ವ್ಯಾಪಾರಿ ನೆನಪಾಗುತ್ತಾನೆ. ಒ೦ದಲ್ಲ, ಎರಡಲ್ಲ ಎಸ್ಟೆಲ್ಲ ಸ೦ಬ೦ಧವಿಲ್ಲದ ಶುದ್ಧ ಮಾನವೀಯ ಅನುಬ೦ಧಗಳು ನೆನಪಾಗುತ್ತವೆ.
  ಇದೆ ಬದುಕಿನ ಸತ್ಯ. ನಮ್ಮವರು ಎನ್ನುವ ಜನ,ನಮ್ಮ ನೋವು, ನಲಿವಿಗೆ ಸ್ಪಂದಿಸದೇ, ನಾವು ಯಾರನ್ನು ಅನ್ಯರು ಎಂದು ಭಾವಿಸಿರುತ್ತೆವೆಯೂ ಅವರೇ ನಮ್ಮವರಾಗಿಬಿಡುವ ,ನಮ್ಮ ಅಳಲು ,ಬದುಕಿನೊಂದಿಗೆ ಬೆರೆತು ಹಲವೊಮ್ಮೆ ಆಶ್ಚರ್ಯ ಉಂಟುಮಾಡುತ್ತಾರೆ …. ನಮ್ಮ ಅಳುವಿಗೆ ಹೆಗಲಾಗುತ್ತಾರೆ .. ಸಂಭಂದಿಕರಲ್ಲದ ಸಂಬಧಿಗಳಾಗಿ ನಮ್ಮೊಂದಿಗೆ ಇರುತ್ತಾರೆ.
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 3. Sandhya Vasanth, Secunderabad

  Pragna Mattihalli’yavare,
  “ಈಗ ಎರಡು ವರ್ಶಗಳಿಗೊಮ್ಮೆ ಸಿಕ್ಕಾಗ ನನಗಿ೦ತ ಒ೦ದೂವರೆ ಅಡಿ ಎತ್ತರದ ನನ್ನ ಎರಡರಸ್ಟು ಅಗಲದ ಆಜಾನುಬಾಹುವನ್ನು ಅವನ ಫ್ಯಾಮಿಲಿ ಸಮೇತ ಅವನ ಮಕ್ಕಳ ಅಪ್ಪನ೦ತೆ ಅವನ ಹೆ೦ಡತಿಯ ಗ೦ಡನ೦ತೆ ಭೇಟಿಯಾಗುತ್ತೇನೆ. ಸ೦ಸಾರವ ಪ್ರತ್ಯೇಕಿಸಲಾರದ ಅಕ್ಕರೆಯ ತಬ್ಬಲಿ ಪ್ರಲಾಪಗಳು .” – Ee sentece tumba mana kalakitu. Enella nenapaagi, I could not hold bacak my tears. Thanks for sharing your experience.

  ಪ್ರತಿಕ್ರಿಯೆ
 4. veda

  “ಆದರೂ ಈ ಶ್ರಾವಣ ಮಧ್ಯಾನ್ಹದ ಗಿಜಿಗುಡುವ ಪೇಟೆ ಬೀದಿಯಲ್ಲಿ ಆಸೆಗಣ್ಣಿನಿ೦ದ ಸುತ್ತ ಹುಡುಕುತ್ತೇನೆ.ಹತ್ತಾರು ಬಣ್ಣಗಳ, ನೂರಾರು ವಿನ್ಯಾಸಗಳ ಸಾವಿರಾರು ರಾಖಿಗಳ ನಡುವೆ ನೆನಪಿನ ಕೋಶ ಸುತ್ತುವ ನೂಲಿನ ಎಳೆಗಳನ್ನು. ಜೋರು ಮಳೆಯಲ್ಲಿ ಕಡ್ಡಿ ಸೊಟ್ಟಗಾದ ಚತ್ರಿ ಹಿಡಿದು ಬಾಗಿಲ ಬಳಿ ಇಣುಕುವ ಪುಟ್ಟ ಆಕ್ರತಿಯ “ನಮ್ಮಕ್ಕ ನಮ್ಮಕ್ಕ” ಎ೦ಬ ಕರೆಯನ್ನು ಪ್ರತ್ಯೇಕಿಸಬಲ್ಲ ಎಳೆಯನ್ನು”.
  Nenapugala noolugalinda bidiskollodu eshtu kashta alve.
  Sundara lekhana Pragnaravre

  ಪ್ರತಿಕ್ರಿಯೆ
 5. malathi S

  I was once travelling on the train with my family to Bihar, all the way from Mangalore.It was a three day journey. In Mughalsarai an army Jawan got into our compartment. I was a very silent child, would not talk or mix with strangers freely. to attract my attention he started magic shows, shared silly jokes till i felt free to talk with him. he also taught me a bit of chess, some card tricks. But this irked my mother. She scolded me in my mother tongue (konkani) to stop talking with the man. I did so. I could sense the hurt and pain on his face though i was just an 8 year old girl. the next day was Rakhshabandhan…he slowly got a rakhi from his pocket and said to my mom ‘maaph karna behanji..shaayad aapko bura lagaa hoga…lekin aap ki beti mein mujhe apni choti si behan yaad gayi thi. o hai door gaon mein, lekin chiTThi mein har saal mujhe raakhi bhejna nahin bhoolti’ is rakhi ko main apki beTi se bandhwana chahta hoon’…
  my mom permitted me to tie him the rakhi..he forcibly gave me some money as present..though my mom said ‘no’
  i dont send Rakhi to my brothers but every rakhsabandhan i am reminded of that jawan..the person who made me smile/laugh…
  ತುಂಬ ನವಿರಾದ ಬರಹ ಪ್ರಜ್ಜಾ…..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: